ಇದೇನು ಪಿಕ್ನಿಕ್‌ ಸ್ಪಾಟ್ ಅಲ್ಲ: ತಮಿಳುನಾಡಿನಲ್ಲಿ ಹಿಂದೂಗಳಲ್ಲದವರ ದೇಗುಲ ಪ್ರವೇಶಕ್ಕೆ ಹೈಕೋರ್ಟ್ ನಿರ್ಬಂಧ

By Anusha Kb  |  First Published Jan 31, 2024, 10:01 AM IST

ತಮಿಳುನಾಡಿನ ಹಿಂದೂ ದೇಗುಲಗಳಿಗೆ ಹಿಂದೂಗಳಲ್ಲದವರು ಭೇಟಿ ನೀಡುತ್ತಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಕೆಗೆ ಛೀಮಾರಿ ಹಾಕಿದ್ದು, ಹಿಂದೂ ದೇಗುಲಗಳು ಪಿಕ್‌ನಿಕ್ ಸ್ಟಾಟ್‌ಗಳಲ್ಲ ಈ ಕೂಡಲೇ ಹಿಂದೂ ದೇಗುಲಗಳಿಗೆ ಅನ್ಯ ಧರ್ಮಿಯರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಅಳವಡಿಸಿ ಎಂದು ಹೇಳಿದೆ. 


ಚೆನ್ನೈ: ತಮಿಳುನಾಡು, ಹಿಂದೂ ದೇವಾಲಯಗಳು, ಮದ್ರಾಸ್ ಹೈಕೋರ್ಟ್,  ಹಿಂದೂಗಳ ಧಾರ್ಮಿಕ ಹಕ್ಕು, ಮೂಲಭೂತ ಹಕ್ಕು, ತಮಿಳುನಾಡು ದೇವಾಲಯಗಳು, ಹಿಂದೂಯೇತರರಿಗೆ ಪ್ರವೇಶ ನಿರಾಕರಣೆ, ಧಾರ್ಮಿಕ ಆಚರಣೆ, ಕೊಡಿಮಾರಂ, ಧ್ವಜಸ್ತಂಭ, ಹೈಕೋರ್ಟ್ ಮಧುರೈ ಪೀಠ, ಮದ್ರಾಸ್ ಹೈಕೋರ್ಟ್ ತೀರ್ಪು, ಮುರುಗನ್ ದೇವಸ್ಥಾನ ಪಳನಿ

ಮಧುರೈ: ತಮಿಳುನಾಡಿನ ಹಿಂದೂ ದೇಗುಲಗಳಿಗೆ ಹಿಂದೂಗಳಲ್ಲದವರು ಭೇಟಿ ನೀಡುತ್ತಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿದ್ದು, ಹಿಂದೂ ದೇಗುಲಗಳು ಪಿಕ್‌ನಿಕ್ ಸ್ಟಾಟ್‌ಗಳಲ್ಲ ಎಂದು ಹೇಳಿದೆ. ಅಲ್ಲದೇ ಈ ಬಗ್ಗೆ ಕಡ್ಡಾಯವಾಗಿ ಎಲ್ಲಾ ದೇಗುಲಗಳಲ್ಲಿ ಬೋರ್ಡ್‌ ಹಾಕುವಂತೆ ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಅಲ್ಲದೇ ಹಿಂದೂಗಳು ಕೂಡ ತಮ್ಮ ಧರ್ಮವನ್ನು ಪಾಲಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. 

Tap to resize

Latest Videos

ದೇವಸ್ಥಾನದ ಧ್ವಜಸ್ತಂಭಕ್ಕಿಂತ ಮುಂದೆ ಹೋಗುವುದಕ್ಕೆ ಯಾವುದೇ ಹಿಂದೂಯೇತರರಿಗೆ (ಹಿಂದೂಗಳಲ್ಲದವರಿಗೆ) ಅನುಮತಿ ಇಲ್ಲ ಎಂಬ ಬೋರ್ಡ್‌ನ್ನು ಕಡ್ಡಾಯವಾಗಿ ದೇಗುಲದ ಮುಂಭಾಗದಲ್ಲಿ ಹಾಕುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆಗೆ ಸೂಚಿಸಿದೆ.  ಅರುಲ್ಮಿಗು ಪಳನಿ ದಂಡಾಯುಧಪಾಣಿ ಸ್ವಾಮಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಗಳಿಗೆ ಮಾತ್ರ ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಡಿ ಸೆಂಥಿಲ್‌ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ತಮಿಳುನಾಡಿನಲ್ಲಿ ಇನ್ನು ಐಪಿಎಲ್ ಮಾದರಿ ಜಲ್ಲಿಕಟ್ಟು ಪಂದ್ಯಾವಳಿ!

ಅರ್ಜಿದಾರ ಡಿ. ಸೆಂಥಿಲ್‌ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಎಸ್ ಶ್ರೀಮತಿ ಈ ತೀರ್ಪು ನೀಡಿದ್ದು, ಎಲ್ಲಾ ಪ್ರವೇಶ ದ್ವಾರಗಳಲ್ಲಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸ್‌ಪ್ಲೇ ಬೋರ್ಡ್‌ಗಳನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದ್ದಾರೆ. ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿ ಪ್ರಸಿದ್ಧ ಮುರುಗನ್ ದೇವಾಲಯವಿದ್ದು, ತಮಿಳುನಾಡು ಸರ್ಕಾರ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಧಾರ್ಮಿಕ ದತ್ತಿ ಇಲಾಖೆ,  ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಆಯುಕ್ತರು ಮತ್ತು ಪಳನಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಈ ಅರ್ಜಿಗೆ ಪ್ರತಿವಾದಿಗಳಾಗಿದ್ದರು. 

ಪೆನ್ನಾರ್‌ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಸಮಿತಿ ರಚಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಸೆಂಥಿಲ್ ಕುಮಾರ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ದೇವಸ್ಥಾನಗಳ ಪ್ರವೇಶ ದ್ವಾರ, ಧ್ವಜಸ್ತಂಭದ ಬಳಿ ಮತ್ತು ದೇಗುಲದ ಪ್ರಮುಖ ಸ್ಥಳಗಳಲ್ಲಿ ಕೋಡಿಮಾರಂ (ಧ್ವಜಸ್ತಂಭದ) ನಂತರ ದೇವಸ್ಥಾನದೊಳಗೆ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂಬ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ. ಜೊತೆಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲದ ಹಿಂದೂಯೇತರರಿಗೆ ಅವಕಾಶ ನೀಡದಂತೆ ಪ್ರತಿವಾದಿಗಳಿಗೆ ಕೋರ್ಟ್‌ ನಿರ್ದೇಶಿಸಿದೆ.

ಯಾವುದೇ ಹಿಂದೂ ಅಲ್ಲದವರು ದೇವಸ್ಥಾನದಲ್ಲಿ ನಿರ್ದಿಷ್ಟ ದೇವರನ್ನು ಭೇಟಿ ಮಾಡಲು ಬಯಸುವುದಾಗಿ ಹೇಳಿಕೊಂಡರೆ, ಅವರು ಹಿಂದೂ ದೇವತೆಯಲ್ಲಿ ನಂಬಿಕೆ ಇರಿಸಿದರೆ ಮತ್ತು ಅವರು ಹಿಂದೂ ಧರ್ಮದ ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸಲು ಬಯಸಿ, ದೇವಾಲಯದ ಪದ್ಧತಿಗಳಿಗೆ ಬದ್ಧರಾಗುತ್ತಾರೆ ಎಂದಿದ್ದಲ್ಲಿ ಮಾತ್ರ  ಹಿಂದೂಯೇತರರು ದೇವಾಲಯಕ್ಕೆ ಭೇಟಿ ನೀಡಲು ಅನುಮತಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ದುರ್ಬಲ ವಾದ ಮುಂದಿಟ್ಟು ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿ ಮಾಡಬೇಡಿ: ತಮಿಳುನಾಡು ಸರ್ಕಾರಕ್ಕೆ 'ಸುಪ್ರೀಂ' ಸೂಚನೆ

ಅಲ್ಲದೇ ಹೀಗೆ ಪ್ರವೇಶ ಬಯಸುವ ಹಿಂದೂಯೇತರರ ಭೇಟಿ ವಿಚಾರವನ್ನು ದೇವಸ್ಥಾನದ ರಿಜಿಸ್ಟ್ರಾರ್‌ ಪುಸ್ತಕದಲ್ಲಿ ನೊಂದಾಯಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವವರು ದೇವಸ್ಥಾನದ ನಿಯಮಗಳು, ಸಂಪ್ರದಾಯಗಳು ಮತ್ತು ದೇವಾಲಯದ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ದೇವಾಲಯದ ಆವರಣವನ್ನು ನಿರ್ವಹಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದರೆ ಪ್ರತಿವಾದಿಗಳು ತಾವು ಸಲ್ಲಿಸಿದ ರಿಟ್ ಅರ್ಜಿಯನ್ನು ಪಳನಿ ದೇವಸ್ಥಾನಕ್ಕೆ ಮಾತ್ರ ಸಲ್ಲಿಸಲಾಗಿದೆ ಹಾಗಾಗಿ ಆದೇಶವನ್ನು ಆ ದೇವಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಕೇಳಿದ್ದರು.  ಆದರೆ ಇದು ಮಹತ್ವದ ವಿಚಾರವಾಗಿದ್ದು ಎಲ್ಲಾ ದೇಗುಲಗಳಿಗೆ ಅನ್ವಯವಾಗುತ್ತದೆ ಎಂದ ನ್ಯಾಯಾಲಯ ಪ್ರತಿವಾದಿಗಳ ಮನವಿಯನ್ನು ತಿರಸ್ಕರಿಸಿದೆ.

ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ, ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿಮಾಡದಂತೆ ಸುಪ್ರೀಂ ವಾರ್ನಿಂಗ್!

click me!