ನಮ್ಮ ಭಾವನೆಗಳನ್ನು ಮೀರಿ ಹೋಗುವುದರಿಂದ, ನಾವು ಶಕ್ತಿಶಾಲಿಗಳಾಗುತ್ತೇವೆ ಎಂದ ಶ್ರೀ ಶ್ರೀ ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಗುರುದೇವ ಶ್ರೀ ಶ್ರೀ ರವಿ ಶಂಕರರವರ ಗುರೂಜಿ
ಬೆಂಗಳೂರು(ಜ.30): ಕಲಾವಿದರು ಸ್ವಭಾವತಃ ಭಾವುಕರಾಗಿರುತ್ತಾರೆ. ಪ್ರೇಕ್ಷಕರನ್ನು ಸಂತೋಷಪಡಿಸುವ ಪ್ರಯತ್ನದಲ್ಲಿ, ಕಲಾವಿದರು ಹೆಚ್ಚಾಗಿ ತಮ್ಮನ್ನು ಮರೆತುಬಿಡುತ್ತಾರೆ. ತಮ್ಮೊಳಗೆ ನೋಡುವುದನ್ನು ಮರೆತುಬಿಡುತ್ತಾರೆ. ಮತ್ತು ನಾವು ಕೇವಲ ಒಂದು ರೀತಿಯ ಭಾವನಾತ್ಮಕ ಅಭಿವ್ಯಕ್ತಿಯನ್ನು ಹೊಂದಿಲ್ಲ. ಭಾವನೆಗಳ ನವರಸಗಳು ಇವೆ. ಕೋಪ, ಧೈರ್ಯ, ದುಃಖ, ವಿರಹ ಮತ್ತು ಇತರವು. ಜೀವನದಲ್ಲಿ ಸ್ಥಿರತೆಯನ್ನು ಹೊಂದಲು ನಾವು ಭಾವವನ್ನು ಮೀರಿ ಹೋಗಬೇಕು. ನಮ್ಮ ಭಾವನೆಗಳನ್ನು ಮೀರಿ ಹೋಗುವುದರಿಂದ, ನಾವು ಶಕ್ತಿಶಾಲಿಗಳಾಗುತ್ತೇವೆ ಎಂದು ಶ್ರೀ ಶ್ರೀ ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಗುರುದೇವ ಶ್ರೀ ಶ್ರೀ ರವಿ ಶಂಕರರವರ ಗುರೂಜಿ ಅವರು ತಿಳಿಸಿದ್ದಾರೆ.
ಶ್ರೀ ಶ್ರೀ ರವಿಶಂಕರರವರ ಮಾರ್ಗದರ್ಶನ ಮತ್ತು ಪ್ರೇರಣೆಯೊಂದಿಗೆ, ಜ.25 ರಿಂದ 28 ರವರೆಗೆ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಭಾವ್ - ಅಭಿವ್ಯಕ್ತಿ ಶೃಂಗಸಭೆಯ ಎರಡನೇ ಆವೃತ್ತಿ ನಡೆದಿದೆ.
ಸಭೆಯಲ್ಲಿ ಮಾತನಾಡಿದ ಶ್ರೀ ಶ್ರೀ ರವಿ ಶಂಕರರವರ ಗುರೂಜಿ ಅವರು ‘ಭಾವ್’ ನಲ್ಲಿ ನಾವು ಕರ್ನಾಟಕ ಸಂಗೀತದ ದಿಗ್ಗಜರಿಂದ ವಾರ್ಕರಿ ಯಾತ್ರೆ ಅಥವಾ ತ್ಯಾಗರಾಜ ಆರಾಧನೆಯ ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ವೀಕ್ಷಿಸಿದೆವು; ಪೌಲೋಮಿ ಮುಖರ್ಜಿ ಅವರು ಬಹಳ ವರ್ಷಗಳ ನಂತರ ಮೊದಲ ಬಾರಿಗೆ, ರಮಾನಂದ್ ಸಾಗರ್‌ರಿಂದ ಅಮರವಾದ ತಮ್ಮ ಪರದೆ ಮೇಲಿನ ಪಾತ್ರಕ್ಕೆ ಮರಳಿ, ತಮ್ಮ ಮನೋಹರವಾದ ಅಭಿನಯದಲ್ಲಿ ದೇವಕಿ ಮಾತೆಯ ವ್ಯಕ್ತಿತ್ವವನ್ನು ಜೀವಂತಗೊಳಿಸಿದಾಗ ವಿಸ್ಮಯದಿಂದ ವೀಕ್ಷಿಸಿದೆವು; ಅಸಾಮಾನ್ಯರಾದ ಪಂಡಿತ್ ಬ್ರಿಜ್ ಭೂಷಣ್ ಗೋಸ್ವಾಮಿ ಮತ್ತು ಪಂಡಿತ್ ರತನ್ ಮೋಹನ್ ಶರ್ಮಾರೊಂದಿಗೆ ನಾಥದ್ವಾರ ಹವೇಲಿ ಸಂಗೀತ ಸಂಪ್ರದಾಯಗಳೊಳಕ್ಕೆ ಧುಮುಕಿದೆವು ಎಂದು ಹೇಳಿದ್ದಾರೆ.
ಸಮಾಜದ ನೈಜ ಪರಿವರ್ತನೆಗೆ ನಾಂದಿ ಹಾಡುತ್ತಿರುವ ಶಿಕ್ಷಕರಿಗೆ ಎಜುಕೇಶನ್ ಅವಾರ್ಡ್!
ವರ್ಲ್ಡ್ ಫೋರಂ ಫಾರ್ ಆರ್ಟ್ ಆಂಡ್ ಕಲ್ಚರ್ ನ ನಿರ್ದೇಶಕಿ ಶ್ರೀವಿದ್ಯಾ ವರ್ಚಸ್ವಿ ಅವರು ಮಾತನಾಡಿ, "ಈ ಸಮಾವೇಶದ ಆಧ್ಯಾತ್ಮಿಕ ಅಂಶದ ಬಗ್ಗೆ ಹೇಳಬೇಕೆಂದರೆ, ಪ್ರಾಚೀನ ಕಾಲಕ್ಕೆ ಹಿಂದಿರುಗಬೇಕು. ಆಗಿನ ಸಮಯಗಳಲ್ಲಿ ಕಲಾವಿದರು ದೈವಕ್ಕಾಗಿ ತಮ್ಮ ಪ್ರದರ್ಶನವನ್ನು ಮುಡಿಪಾಗಿ ಇಡುತ್ತಿದ್ದರು ಮತ್ತು ವೀಕ್ಷಕರು ಈ ಅನುಭವವನ್ನು ಕೇವಲ ವೀಕ್ಷಿಸುತ್ತಿದ್ದರಷ್ಟೆ. ಆದ್ದರಿಂದ ಈ ಸಮಾವೇಶಕ್ಕೆ ನಾವು ಅಯೋಧ್ಯೆಯಿಂದ ಹಾಡುಗಾರರನ್ನು ಕರೆಸಿದ್ದೆವು ಮತ್ತು ಅವರು ಈ ಪರಂಪರೆಯನ್ನು ಕಳೆದ 7000 ವರ್ಷಗಳಿಂದಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಸಮಾವೇಶದ ಎಲ್ಲಾ ಕಲಾಪ್ರದರ್ಶನಗಳಲ್ಲೂ ಈ ಸಾರವು ಒಳಗೊಂಡಿತ್ತು ಎಂದು ತಿಳಿಸಿದ್ದಾರೆ.
ನವಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು, ಅನ್ಯೋನ್ಯವಾದ ಕೂಟದಲ್ಲಿ ಭಾರತೀಯ ಮಹಾನ್ ಕಲಾವಿದರನ್ನು ಆಲಿಸಲು ಹಾಗೂ ಅವರಿಂದ ಅಮೂಲ್ಯವಾದ ಸಲಹೆಗಳನ್ನು ಪಡೆಯಲು ಒಂದು ವಿಶೇಷ ವೇದಿಕೆಯಾಗಿದ್ದ 'ಭಾವ್' ಶೃಂಗಸಭೆಯು, ಸುಮಾರು 75 ಅಭಿವ್ಯಕ್ತಿಯ ವಿಧಾನಗಳ ಸುತ್ತ ಹೆಣೆದ ಬೈಠಕ್‌ಗಳು, ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ತಜ್ಞರೊಂದಿಗಿನ ಚರ್ಚೆಗಳನ್ನು ಒಳಗೊಂಡಿತ್ತು.
ಭಾರತೀಯ ಕಲೆಯ ಹಿರಿಮೆ ಪಡೆದ ಮಾರ್ಗದರ್ಶಕರಾದ ಪದ್ಮವಿಭೂಷಣ ಸುದರ್ಶನ್ ಸಾಹೂ, ಈ ವರ್ಷ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಪದ್ಮಾ ಸುಬ್ರಹ್ಮಣ್ಯಂ, ಪದ್ಮಶ್ರೀ ಡಾ.ಶೋವನ ನಾರಾಯಣ್, ಪದ್ಮಶ್ರೀ ಡಾ. ಪುರು ದಧೀಚ್, ಪದ್ಮಶ್ರೀ ದರ್ಶನ ಝವೇರಿ, ಉಸ್ತಾದ್ ಫಜಲ್ ಖುರೇಷಿ, ಸುದರ್ಶನ್ ಪಟ್ನಾಯಕ್, ಉಮಾ ದೋಗ್ರಾ ಇನ್ನಿತರರು ಸೇರಿ 153 ಕಲಾವಿದರನ್ನು ಶೃಂಗ ಸಭೆಯು ಒಳಗೊಂಡಿತ್ತು.