ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!?

By Suvarna News  |  First Published Oct 6, 2020, 7:12 PM IST

ಮನೆಯ ವಾಸ್ತುವಿನಲ್ಲಿ ಪ್ರಮುಖವಾಗಿ ಮನೆಯ ಮುಖ್ಯ ದ್ವಾರವು ಇಂಥದ್ದೆ ದಿಕ್ಕಿನಲ್ಲಿ ಇದ್ದರೆ ಶುಭ, ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿದ್ದರೆ ಅದು ಶುಭವಲ್ಲ ಎಂದು ಕೆಲವರು ಹೇಳುವುದುಂಟು. ರಾಶಿಯನುಸಾರ ನೋಡಿದರೆ ಕೆಲವು ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿ ಮುಖ್ಯ ದ್ವಾರವಿರುವ ಮನೆ ಚೆನ್ನಾಗಿ ಆಗಿ ಬರುತ್ತದೆ. ಹಾಗಾದರೆ ಯಾವ ರಾಶಿಗೆ ಉತ್ತಮ ಎಂದು  ನೋಡೋಣ...


ಮನೆಯು ವಾಸ್ತು ಪ್ರಕಾರ ಇದ್ದರೆ ಅಲ್ಲಿ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಲಾಭಗಳನ್ನು ಪಡೆಯಬಹುದು. ಅದೇ ಹಾಗಿಲ್ಲದಿದ್ದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 
 
ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿದ್ದರೆ ಅದು ಶುಭವಲ್ಲ ಎಂದು ಕೆಲವರು ಹೇಳುವುದುಂಟು. ಆದರೆ ರಾಶಿಗೂ, ದಿಕ್ಕಿಗೂ ಸಂಬಂಧವಿರುವ ಕಾರಣ ರಾಶಿಯ ಅನುಸಾರ ಕೆಲವರಿಗೆ ಕೆಲವು ದಿಕ್ಕಿನ ಮನೆಗಳು ಚೆನ್ನಾಗಿ ಆಗಿ ಬರುತ್ತವೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿರುವ ಮನೆಯು ಯಾವ ರಾಶಿಯವರಿಗೆ ಶುಭವನ್ನು ನೀಡುತ್ತದೆ ನೋಡೋಣ...

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ದಕ್ಷಿಣ ದಿಕ್ಕಿನಲ್ಲಿರುವ ಮನೆಯು ಈ ರಾಶಿಯವರಿಗೆ ಶುಭವನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿರುವುದರಿಂದ ಈ ರಾಶಿಯವರ ಸಮಗ್ರ ವಿಕಾಸವಾಗುವುದಲ್ಲದೇ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.

ಇದನ್ನು ಓದಿ: ರಾಶಿಯನುಸಾರ ಈ ಪ್ರಾಣಿಗಳನ್ನು ಸಾಕಿದರೆ ಶುಭ ಫಲ... 

ವೃಷಭ ರಾಶಿ
ವೃಷಭ ರಾಶಿಯವರಿಗೆ ಮನೆಯ ಮುಖ್ಯದ್ವಾರ ದಕ್ಷಿಣ ದಿಕ್ಕಿಗಿದ್ದರೆ ಅಶುಭವೆಂದು ಹೇಳಲಾಗುತ್ತದೆ. ಹೀಗಿದ್ದಾಗ ಯಾವುದೇ ಕೆಲಸಗಳು ಸುಗಮವಾಗಿ ಪೂರ್ತಿಯಾಗುವುದಿಲ್ಲ, ಪ್ರತಿಯೊಂದಕ್ಕೂ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.



ಮಿಥುನ ರಾಶಿ
ಮಿಥುನ ರಾಶಿಯವರಿಗೂ ಸಹ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಆಗಿ ಬರುವುದಿಲ್ಲ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರು ದಕ್ಷಿಣ ದಿಕ್ಕಿಗಿರುವ ಮನೆಯಲ್ಲಿ ವಾಸಿಸಿದರೆ ಅವರಿಗೆ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳನ್ನು ಎದುರಾಗುತ್ತವೆ.

ಕರ್ಕಾಟಕ ರಾಶಿ
ವೈದಿಕ ಜ್ಯೋತಿಷ್ಯದ ಪ್ರಕಾರ ಕರ್ಕ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಶುಭವನ್ನುಂಟು ಮಾಡುತ್ತದೆ. ಅತ್ಯಂತ ಶುಭವನ್ನು ನೀಡುವ ದಕ್ಷಿಣ ಬಾಗಿಲ ಮನೆಯಲ್ಲಿ ಈ ರಾಶಿಯವರು ವಾಸ ಮಾಡುವುದರಿಂದ ಸಮಾಜದಲ್ಲಿ ಗೌರವವು ಹೆಚ್ಚುವುದಲ್ಲದೆ, ಸ್ವಾಸ್ಥ್ಯದಲ್ಲಿ ಲಾಭ, ಆರ್ಥಿಕ ಸಮೃದ್ಧಿ ಮತ್ತು ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದಾಗಿದೆ.     

ಸಿಂಹ ರಾಶಿ
ಈ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಹೆಚ್ಚು ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಸಿಂಹ ರಾಶಿಯವರಿಗೆ ಇಂಥ ಮನೆ ಭಾಗ್ಯವನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ. ,ಸುಖ-ಸಮೃದ್ಧಿ ಮತ್ತು ಸಾಮಾಜಿಕ ಘನತೆ ವೃದ್ಧಿಸುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಸಮಸ್ಯೆಗಳ ಆಗರವಾಗುತ್ತದೆ. ಹಾಗಾಗಿ ಈ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆಯು ವಾಸಕ್ಕೆ ಯೋಗ್ಯವಲ್ಲ. ಹಾಗೆ ವಾಸಿಸಿದಲ್ಲಿ ಸುಮ್ಮನೆ ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಂಡತ್ತಾಗುತ್ತದೆ. 

ಇದನ್ನು ಓದಿ: ಅಕ್ಟೋಬರ್‌ನಲ್ಲಿ ಜನಿಸಿದವರು ಹೀಗಿರ್ತಾರಂತೆ..‍! 

ತುಲಾ ರಾಶಿ
ಈ ರಾಶಿಯವರಿಗೆ ದಕ್ಷಿಣ ದ್ವಾರವಿರುವ ಮನೆ ಮಿಶ್ರ ಫಲವನ್ನು ನೀಡುತ್ತದೆ ಎಂದು ಹೇಳಬಹುದು. ದಕ್ಷಿಣಕ್ಕೆ ಬಾಗಿಲಿರುವ ಮನೆಯಲ್ಲಿ ಈ ರಾಶಿಯವರು ಸಾಧಾರಣ ಮಟ್ಟಿಗೆ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.

ವೃಶ್ಚಿಕ ರಾಶಿ
ದಕ್ಷಿಣ ದಿಕ್ಕಿನಲ್ಲಿರುವ ಮನೆಯು ಈ ರಾಶಿಯವರಿಗೆ ಶುಭವನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿರುವುದರಿಂದ ಈ ರಾಶಿಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದಾಗಿದ್ದು, ಆತ್ಮಬಲ ಹೆಚ್ಚುತ್ತದೆ.

ಧನು ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯು ಧನು ರಾಶಿಯವರ ಮಕ್ಕಳಿಗೆ ಉತ್ತಮವಾಗಿದೆ. ಶುಭ ಫಲವನ್ನು ನೀಡುತ್ತದೆ. ಧನು ರಾಶಿಯವರ ಮಕ್ಕಳು ಉತ್ತಮ ಅಭಿವೃದ್ಧಿಯನ್ನು ಹೊಂದುವುದಲ್ಲದೆ, ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುವಲ್ಲಿ ಸಫಲರಾಗುತ್ತಾರೆ. ಉನ್ನತ ಶಿಕ್ಷಣವನ್ನು, ಮನೆಯಲ್ಲಿ , ಸುಖ-ಸಮೃದ್ಧಿಯನ್ನು ಪಡೆಯುತ್ತಾರೆ.

ಮಕರ ರಾಶಿ
ಮಕರ ರಾಶಿಯವರಿಗೆ ಮನೆಯ ಮುಖ್ಯ ದ್ವಾರಕ ದಕ್ಷಿಣಕ್ಕಿದ್ದರೆ ಪೂರ್ಣವಾಗಿ ಏಳಿಗೆಯನ್ನು ಹೊಂದಾಲಾಗುವುದಿಲ್ಲ. ಹಣಕಾಸಿಗೆ ಸಂಬಂಧಪಟ್ಟಂತೆ ಉತ್ತಮವಾಗುವುದನ್ನು ಬಿಟ್ಟರೆ, ಇನ್ನಾವುದೇ ರೀತಿಯ ಅಭಿವೃದ್ಧಿಯು ಇಲ್ಲಿ ಸಾಧ್ಯವಿಲ್ಲ.

ಕುಂಭ ರಾಶಿ
ಈ ರಾಶಿಯವರಿಗೆ ದಕ್ಷಿಣಕ್ಕೆ ಮುಖ್ಯ ದ್ವಾರವಿರುವ ಮನೆಯು ಶುಭವಲ್ಲವೆಂದು ಹೇಳಲಾಗುತ್ತದೆ. ಕುಂಭ ರಾಶಿಯವರು ಇಂಥ ಮನೆಯಲ್ಲಿ ವಾಸ ಮಾಡಿದರೆ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದಕ್ಕೂ ಕಷ್ಟ ಪಡಬೇಕಾಗುತ್ತದೆ. ಎಷ್ಟೇ ಪರಿಶ್ರಮವನ್ನು ಹಾಕಿ ಕೆಲಸ ನಿರ್ವಹಿಸಿದರೂ ಸಹ ತಕ್ಕ ಫಲವನ್ನು ಪಡೆಯಲಾಗುವುದಿಲ್ಲ.

ಇದನ್ನು ಓದಿ: ಗ್ರಹದೋಷದಿಂದ ಸಂಬಂಧ ಹಾಳು, ಸರಿಮಾಡಿಕೊಳ್ಳಲು ಹೀಗೆ ಮಾಡಿ..! 

ಮೀನ ರಾಶಿ
ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯು ಮೀನ ರಾಶಿಯವರಿಗೆ ಶುಭವಾಗಿದೆ. ಇಂಥ ಮನೆಯಲ್ಲಿ ವಾಸಿಸಿದರೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದಲ್ಲದೇ, ಸಾಮಾಜಿಕ ಮತ್ತು ಆರ್ಥಿಕವಾಗಿ ಉತ್ತಮ ಮಟ್ಟ ತಲುಪಬಹುದಾಗಿದೆ. 

Tap to resize

Latest Videos

click me!