ರಾಶಿಯನುಸಾರ ಈ ಪ್ರಾಣಿಗಳನ್ನು ಸಾಕಿದರೆ ಶುಭ ಫಲ

By Suvarna NewsFirst Published Oct 5, 2020, 5:59 PM IST
Highlights

ಪ್ರಾಣಿಗಳನ್ನು ಸಾಕುವುದು, ಮುದ್ದಿಸುವುದು ಹಲವರಿಗೆ ಇಷ್ಟ. ಸಾಮಾನ್ಯವಾಗಿ ಮನೆಗಳಲ್ಲಿ ಶ್ವಾನ, ಹಸು, ಬೆಕ್ಕು ಹೀಗೆ ಅನೇಕ ಪ್ರಾಣಿ ಮತ್ತು ಪಕ್ಷಿಗಳನ್ನು ಅವರಿಷ್ಟದಂತೆ ಸಾಕಿಕೊಂಡಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳಿಗೆ ಅನುಗುಣವಾಗಿ ಇಂಥದ್ದೇ ಪ್ರಾಣಿ ಅಥವಾ ಪಕ್ಷಿಯನ್ನು ಸಾಕುವುದರಿಂದ ಒಳಿತಾಗುತ್ತದೆ ಎಂಬುದನ್ನು ಹೇಳಲಾಗಿದೆ. ಹಾಗದರೆ ಪ್ರತ್ಯೇಕ ರಾಶಿಯವರು ಯಾವ ಪ್ರಾಣಿ ಅಥವಾ ಪಕ್ಷಿಯನ್ನು ಸಾಕಬಹುದೆಂದು ತಿಳಿಯೋಣ..

ಪ್ರಾಣಿಗಳೆಂದರೆ ಹಲವರಿಗೆ ಪ್ರೀತಿ ಮತ್ತು ಕರುಣೆ. ಸಾಕು ಪ್ರಾಣಿಗಳಷ್ಟು ಪ್ರಾಮಾಣಿಕ ಮತ್ತು ಸಾಕಿದವರ ಜೊತೆ ಕೊನೆಯವರೆಗೂ ನಿಷ್ಠೆಯಿಂದ ಇರುವ ಜೊತೆಗಾರರು. ಪ್ರಾಣಿಗಳ ಪಾಲನೆ ಹಲವರ ಹವ್ಯಾಸ. ಜ್ಯೋತಿಷ್ಯದಲ್ಲೂ ಸಹ ಇದರ ಬಗ್ಗೆ ಉಲ್ಲೇಖವಿದೆ. ಪ್ರಾಣಿ ಮತ್ತು ಪಕ್ಷಿಗಳಲ್ಲಿ ನಕಾರಾತ್ಮಕ ಶಕ್ತಿಯನ್ನು ತಡೆಯುವ ಅದ್ಭುತವಾದ ಶಕ್ತಿ ಇರುತ್ತದೆ. 

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಸಾಕು ಪ್ರಾಣಿಗಳಲ್ಲಿ ಅನೇಕ ಧನಾತ್ಮಕ ಅಂಶಗಳಿದ್ದು, ಮನೆಗೆ ಪ್ರವೇಶಿಸುವ ದುಷ್ಟ ಶಕ್ತಿಯನ್ನು ಗುರುತಿಸಿ, ಅದನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಅವುಗಳಲ್ಲಿರುತ್ತವೆ. ಅಷ್ಟೇ ಅಲ್ಲದೆ ಪ್ರತ್ಯೇಕ ರಾಶಿಯವರಿಗೆ ಬೇರೆ ಬೇರೆ ಪ್ರಾಣಿಗಳನ್ನು ಸಾಕಿದರೆ ಉತ್ತಮ ಎಂಬುದನ್ನು ತಿಳಿಸಿದ್ದಾರೆ. ರಾಶಿಯನುಸಾರ ಯಾವ್ಯಾವ ಪ್ರಾಣಿಗಳನ್ನು ಸಾಕಿದರೆ ಶುಭವಾಗುವುದು ಎಂಬುದನ್ನು ತಿಳಿಯೋಣ..    

ಮೇಷ ರಾಶಿ
ಮೇಷ ರಾಶಿಯವರು ಸ್ವತಂತ್ರರಾಗಿರಲು ಇಚ್ಛಿಸುವವರು. ಇವರ ರಾಶಿಯನುಸಾರ ಶ್ವಾನ ಪಾಲನೆ ಇವರಿಗೆ ಶುಭವನ್ನುಂಟು ಮಾಡುತ್ತದೆ.


ವೃಷಭ ರಾಶಿ
ಈ ರಾಶಿಯವರು ಆಡಿದ ಮಾತಿಗೆ ಬದ್ಧರಾಗಿರುವವರು. ಯಾವುದಾದರು ಗುರಿ ಹಾಕಿಕೊಂಡರೆ ಅದನ್ನು ಸಾಧಿಸುವವರೆಗೂ ಛಲ ಬಿಡುವುದಿಲ್ಲ. ವೃಷಭ ರಾಶಿಯವರು ಬೆಕ್ಕು ಅಥವಾ ಮೊಲವನ್ನು ಸಾಕುವುದರಿಂದ ಶುಭವಾಗುತ್ತದೆ.



ಇದನ್ನು ಓದಿ: ಅಕ್ಟೋಬರ್‌ನಲ್ಲಿ ಜನಿಸಿದವರು ಹೀಗಿರ್ತಾರಂತೆ..‍! 

ಮಿಥುನ ರಾಶಿ
ಮಿಥುನ ರಾಶಿಯವರು ಉತ್ತಮ ವಾಗ್ಮಿಗಳು. ಈ ರಾಶಿಯವರಿಗೆ ಯಾವುದಾದರು ಪಕ್ಷಿಗಳನ್ನು ಸಾಕುವುದರಿಂದ ಉತ್ತಮ ಫಲ ಲಭಿಸುತ್ತದೆ. ಅದರಲ್ಲೂ ಗಿಣಿಯನ್ನು ಸಾಕುವುದು ಇನ್ನೂ ಉತ್ತಮ.


ಕರ್ಕಾಟಕ ರಾಶಿ 
ಕರ್ಕಾಟಕ ರಾಶಿಯವರು ಸೂಕ್ಷ್ಮ ಸ್ವಭಾವದವರು ಮತ್ತು ಭಾವನಾಜೀವಿಗಳು. ಇವರ ಸಂವೇದನೆಗೆ ಹೊಂದುವ ಗೋಮಾತೆಯನ್ನು ಸಾಕುವುದರಿಂದ ಇವರಿಗೆ ಒಳಿತಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಸರ್ವರಿಗೂ ಶುಭವನ್ನುಂಟುಮಾಡುವ ಗೋಮಾತೆಯ ಸೇವೆ ಮಾಡುವುದರಿಂದ ಜೀವನದಲ್ಲಿ ಒಳಿತನ್ನು ಕಾಣಬಹುದಾಗಿದೆ.


ಸಿಂಹ ರಾಶಿ
ಸಿಂಹ ರಾಶಿಯವರು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ರಾಶಿಯವರು ಪರಾಕ್ರಮಿಗಳಾಗಿರುವ ಕಾರಣ ಕುದುರೆಯು ಇವರಿಗೆ ಆಗಿ ಬರುತ್ತದೆ. ಅಲ್ಲದೆ ಬೆಕ್ಕನ್ನು ಸಾಕುವುದರಿಂದಲೂ ಒಳಿತಾಗುತ್ತದೆ. ಬೆಕ್ಕು ಮತ್ತು ಸಿಂಹಕ್ಕೆ ಅನುವಂಶೀಯ ಸಂಬಂಧವಿರುವ ಕಾರಣ ಸಿಂಹರಾಶಿಯವರಿಗೆ ಶುಭಫಲವನ್ನು ನೀಡುತ್ತದೆ.
 



ಕನ್ಯಾ ರಾಶಿ
ಕನ್ಯಾ ರಾಶಿಯ ವ್ಯಕ್ತಿಗಳಿಗೆ ಮೀನು ಸಾಕಣೆ ಚೆನ್ನಾಗಿ ಆಗಿ ಬರುತ್ತದೆ. ಇದರಿಂದ ಹೆಚ್ಚಿನ ಲಾಭವನ್ನು ಸಹ ಪಡೆಯಬಹುದಾಗಿದೆ. ಅಲ್ಲದೆ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುವುದರಿಂದ ಸಹ ಶುಭಫಲವನ್ನು ಪಡೆಯಬಹುದಾಗಿದೆ.
 



ತುಲಾ ರಾಶಿ
ಕಲೆಯನ್ನು ಆಸ್ವಾದಿಸುವ ಗುಣವುಳ್ಳ ತುಲಾ ರಾಶಿಯವರು ಪ್ರಕೃತಿ ಸೌಂದರ್ಯದ ನಡುವೆ ಇರುವುದನ್ನು ಇಷ್ಟಪಡುತ್ತಾರೆ. ಹಾಗಾಗಿ ಇವರು ಗಿಣಿಯನ್ನು ಸಾಕಿದರೆ ನೆಮ್ಮದಿಯೊಂದಿಗೆ ಉತ್ತಮ ಫಲವನ್ನೂ ಕಾಣಬಹುದಾಗಿದೆ.



ಇದನ್ನು ಓದಿ: ಗ್ರಹದೋಷದಿಂದ ಸಂಬಂಧ ಹಾಳು, ಸರಿಮಾಡಿಕೊಳ್ಳಲು ಹೀಗೆ ಮಾಡಿ..! 

ವೃಶ್ಚಿಕ ರಾಶಿ
ಚಂಚಲ ಸ್ವಭಾವದವರಾದ ವೃಶ್ಚಿಕ ರಾಶಿಯವರಿಗೆ ಸಾಕು ಪ್ರಾಣಿಗಳೆಂದರೆ ಇಷ್ಟ. ಇವರು ಶ್ವಾನವನ್ನು ಸಾಕುವುದರಿಂದ ಉತ್ತಮ ಫಲವನ್ನು ಪಡೆಯುತ್ತಾರೆ. ಶ್ವಾನ ಪಾಲನೆಯಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಕಡಿಮೆಯಾಗುತ್ತದೆ. 


ಧನು ರಾಶಿ
ಸ್ವತಂತ್ರರಾಗಿರಲು ಬಯಸುವ ಮತ್ತೊಂದು ರಾಶಿಯವರು ಧನು ರಾಶಿಯವರು. ಇವರು ಹೆಚ್ಚು ಸ್ವಾಭಿಮಾನಿಗಳು ಸಹ ಹೌದು. ಇವರು ಆಮೆಯನ್ನು ಅಥವಾ ಮೀನನ್ನು ಸಾಕಬಹುದಾಗಿದೆ.


ಮಕರ ರಾಶಿ
ಮಕರ ರಾಶಿಯವರು ಹೆಚ್ಚು ಪರಿಶ್ರಮಿಗಳು. ಯಾವುದಾದರು ಕೆಲಸವನ್ನು ಮಾಡಬೇಕೆಂದು ಕೊಂಡರೆ ಅದನ್ನು ಮುಗಿಸಿಯೇ ತೀರುತ್ತಾರೆ. ಈ ರಾಶಿಯವರು ಹಸುವನ್ನು ಅಥವಾ ಶ್ವಾನವನ್ನು ಸಾಕುವುದರಿಂದ ಒಳಿತಾಗುತ್ತದೆ.


ಕುಂಭ ರಾಶಿ
ಕುಂಭ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಇತರರು ಮಾತನಾಡಿದರೆ ಇವರು ಸಹಿಸುವುದಿಲ್ಲ. ಇವರು ಮೊಲ ಅಥವಾ ಶ್ವಾನವನ್ನು ಸಾಕಬಹುದಾಗಿದೆ.



ಇದನ್ನು ಓದಿ: ನೌಕರಿ ಪಡೆಯಬೇಕೇ…? ವಾಸ್ತು ಪ್ರಕಾರ ಹೀಗೆ ಮಾಡಿ…! 

ಮೀನ ರಾಶಿ
ಮೀನ ರಾಶಿಯವರು ಉತ್ತಮ ಗುರಿ ಹೊಂದಿದವರು ಮತ್ತು ತಮಗನ್ನಿಸ್ಸಿದ್ದನ್ನು ಮಾಡುವವರು. ಈ ರಾಶಿಯವರಿಗೆ ಬಿಳಿ ಇಲಿ ಆಗಿ ಬರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

 

click me!