ನರೇಂದ್ರ ಮೋದಿಗೆ ಇರೋ ಮಹಾಯೋಗಗಳನ್ನು ನೋಡಿ!

By Suvarna News  |  First Published Oct 6, 2020, 5:13 PM IST

ನರೇಂದ್ರ ಮೋದಿ ಅವರಿಗೆ ಈಗ ರಾಜಯೋಗ, ಗಜಕೇಸರಿ ಯೋಗ, ಚಂದ್ರ ಮಹಾದೆಶೆಗಳೆಲ್ಲ ನಡೆಯುತ್ತಿದೆ. ಇನ್ನೂ ಹಲವು ಉನ್ನತ ಯೋಗಗಳು ಅವರ ಜಾತಕದಲ್ಲಿವೆ ಅಂತಾರೆ ಜ್ಯೋತಿಶ್ಶಾಸ್ತ್ರಜ್ಞರು.


ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಐದು ವರ್ಷ ಯಶಸ್ವಿಯಾಗಿ ಮುಗಿಸಿ ಆರನೆಯ ವರ್ಷವನ್ನು ನಡೆಸುತ್ತಿದ್ದಾರೆ. ಉಲ್ವಾಮಾ ಅಟ್ಯಾಕ್, ಕೊರೊನಾ ದಾಳಿ, ಚೀನಾದ ದಾಳಿ- ಎಲ್ಲವನ್ನೂ ಯಶಸ್ವಿಯಾಗಿ ಎದುರಿಸಿದ್ದಾರೆ. ಪೂರ್ತಿ ಬಹುಮತ ಇರುವುದರಿಂದ ಸರಕಾರ ನಡೆಸಲು ಏನೂ ಕಷ್ಟವಿಲ್ಲ. ಇದಕ್ಕೆಲ್ಲ ಕಾರಣ ಅವರ ಜಾತಕದಲ್ಲಿ ಗಟ್ಟಿಯಾಗಿ ಕುಳಿತುಕೊಂಡಿರುವ ಗ್ರಹಗಳು ಹಾಗೂ ಅವರು ಅನುಭವಿಸುತ್ತಿರುವ ಉನ್ನತ ಯೋಗಗಳು. ಅವು ಏನು ಅಂತ ತಿಳಿಯೋಣ ಬನ್ನಿ.

ಆಶೀರ್ವದಿಸಿದ ಶನಿರಾಯ
ವೈದಿಕ ಜಾತಕಗಳ ಪ್ರಕಾರ ಮೋದಿಯವರ ಸೌರ ರಾಶಿ ವೃಶ್ಚಿಕ. ಅದೃಷ್ಟ ಸಂಖ್ಯೆ 8. ಅವರ ಲಗ್ನ ಹಾಗೂ ಚಾಂದ್ರಮಾನ ಚಿಹ್ನೆಗಳೂ ವೃಶ್ಚಿಕವೇ. ವೃಶ್ಚಿಕ ರಾಶಿಯವರ ಪ್ರಧಾನ ಲಕ್ಷಣವೆಂದರೆ ಜೀವನವಿಡೀ ಬದಲಾವಣೆಯನ್ನು ಕಾಣುತ್ತಿರುತ್ತಾರೆ ಮಾತ್ರವಲ್ಲ, ತಮ್ಮ ಸುತ್ತಮುತ್ತಲೂ ಬದಲಾವಣೆ ತರುತ್ತಿರುತ್ತಾರೆ. ಅದು ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗಿನ ಕಾಲದಿಂದಲೂ ನಮಗೆ ಕಾಣುತ್ತಿದೆ. ಮೊನ್ನೆ ಜನವರಿಯವರೆಗೂ ಅವರನ್ನು ಶನಿಯ ಸಾಡೇಸಾತ್‌ ಕಾಡುತ್ತಿತ್ತು. ಆದರೆ ಶನಿಯು ಕಾಟ ಕೊಟ್ಟಂತೆಯೇ ಆಶೀರ್ವಾದವನ್ನೂ ಮಾಡಿ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾನೆ. ಇಲ್ಲಿ ಆಂಜನೇಯನ ಬೆಂಬಲ, ಶ್ರೀರಾಮನ ಆಶೀರ್ವಾದ ಇರುವುದರಿಂದ ಶನಿಯು ಮೋದಿಯವರಿಗೆ ಏನೂ ಮಾಡಲಾಗಿಲ್ಲ, ಬದಲಾಗಿ ಒಳ್ಳೆಯದೇ ಆಗಿದೆ.

Latest Videos

undefined

ರಾಜಯೋಗ, ಗಜಕೇಸರಿ ಯೋಗ
ಮಂಗಳ ಮತ್ತು ಚಂದ್ರರ ಸಮ್ಮಿಲನದಿಂದ ವ್ಯಕ್ತಿಗೆ ರಾಜಯೋಗ ದತ್ತವಾಗುತ್ತದೆ. ಅವರಿಬ್ಬರೂ ಒಂದೇ ಮನೆಯಲ್ಲಿ ಇರುವುದಲ್ಲದೆ, ಯಾವ ಮನೆಯಲ್ಲಿ ಇದ್ದಾರೆ ಎಂಬುದು ಕೂಡ ಮುಖ್ಯವಾಗುತ್ತದೆ. ಮೋದಿ ಅವರ ಲಗ್ನಕೇಂದ್ರದಲ್ಲಿ ಇವರಿಬ್ಬರೂ ನೆಲೆಸಿ ಅವರಿಗೆ ಆಶೀರ್ವಾದಗಳ ಮಳೆಯನ್ನೇ ಕರೆಯುತ್ತಿದ್ದಾರೆ. ಹೀಗಾಗಿ ಅವರು ಸದಾಕಾಲ ಅಧಿಕಾರದಲ್ಲಿ ಉಳಿಯಲು ಹಾಗೂ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇವರಿಗೆ ಹಲವಾರು ರಾಜಯೋಗಗಳಿವೆ; ಒಂದರ ನಂತರ ಒಂದು ಬರುತ್ತಲೇ ಇವೆ. ಗಜಕೇಸರಿ ಯೋಗವೂ ಅವುಗಳಲ್ಲಿ ಒಂದು. ಮಂಗಳ ಹಾಗೂ ಗುರು ಗ್ರಹಗಳು ಕೇಂದ್ರದ ಜೊತೆಗೆ ಸಂಪರ್ಕ ಹೊಂದಿದ್ದರೆ ಈ ಯೋಗ ಸೃಷ್ಟಿಯಾಗುತ್ತದೆ. ಹೆಚ್ಚಿನ ಎಲ್ಲ ಯಶಸ್ವಿ ವ್ಯಕ್ತಿಗಳೂ ಈ ಯೋಗ ಹೊಂದಿದವರೇ ಆಗಿರುತ್ತಾರೆ.

ಮೋದಿ ಧರಿಸಿದ ಚಂದದ ಕುಲ್ಲು ಟೋಪಿ..! ಇದು ಹಿಮಾಚಲಪ್ರದೇಶದ ಸ್ಟೈಲ್ 

ನಿಗೂಢ ವ್ಯಕ್ತಿತ್ವ
ಅವರ ಲಗ್ನಕುಂಡಲಿಯ ಎರಡನೇ ಮನೆಯಲ್ಲಿ ಗುರು ಇದ್ದಾನೆ. ಆತ ಇರಬೇಕಾದ್ದೇ ಅಲ್ಲಿ. ಆತ ಮಾತಿನ ಅಧಿಪತಿ. ಮೋದಿ ಆಕರ್ಷಕ ಮಾತಿನ ಮಲ್ಲ ಆಗಿರುವುದು ಈ ಬಲದಿಂದ. ಕುಂಡಲಿಯ ಮೂರನೇ ಮನೆಯಲ್ಲಿ ಶನಿ ನೆಲೆಸಿದ್ದಾನೆ. ಶನಿ ಹಾನಿಕಾರಕನಲ್ಲ. ಆತ ದೈವಕೃಪೆ ಒದಗಿಸಿಕೊಡುವವನು. ಆತನೂ ದೃಢವಾಗಿರುವುದರಿಂದ ಮೋದಿ ಮುಕ್ತ ಮಾತಿನ ವ್ಯಕ್ತಿಯಾಗಿರುವಂತೆಯೇ ಸಾಕಷ್ಟು ಸಂವಹನ ಚತುರನೂ ಆಗಿದ್ದಾನೆ. ಇವರ ಕುಂಡಲಿಯ ಅಧಿದೇವತೆ ಮಂಗಳ, ಮೊದಲ ಮನೆಯಲ್ಲಿ ನೆಲೆಸಿರುವುದರಿಂದ ಮೋದಿಯ ವ್ಯಕ್ತಿತ್ವಕ್ಕೆ ಒಂದು ನಿಗೂಢತೆ ದತ್ತವಾಗಿದೆ, ಅವರು ತಮ್ಮ ಕಾರ್ಯವನ್ನು ಮಾಡಿ ಮುಗಿಸುವ ವರೆಗೂ ಅಥವಾ ಕಾರ್ಯಯೋಜನೆಯನ್ನು ಬಹಿರಂಗಪಡಿಸುವವರೆಗೂ ಯಾರಿಗೂ ಅದು ತಿಳಿಯುವುದಿಲ್ಲ. 

ಮೋದಿಗೆ ಈಗ 777 ಪ್ರೊಟೆಕ್ಷನ್; ಮಿಸೈಲ್ ದಾಳಿಯಾದ್ರೂ ಏನೂ ಆಗಲ್ಲ, ಹಾಗಿದೆ ವಿಮಾನದ ಫೀಚರ್ಸ್!

ಸೂರ್ಯನೇ ಅಧಿಪತಿ
ಕುಂಡಲಿಯ ಹತ್ತನೇ ಮನೆ ಯಾವಾಗಲೂ ಅಧಿಕಾರ, ಆಡಳಿತಕ್ಕೆ ಸಂಬಂಧಿಸಿದ್ದು. ಮೋದಿಯವರ ಜಾತಕದ ಹತ್ತನೇ ಮನೆಯಲ್ಲಿ ಸ್ವತಃ ಸೂರ್ಯನೇ ಇದ್ದಾನೆ. ಹೀಗಾಗಿ ಅವರಿಗೆ ಒಮ್ಮೆ ದತ್ತವಾದ ಅಧಿಕಾರ ಸುಲಭವಾಗಿ ತೊಲಗುವುದಿಲ್ಲ. ಇದೇ ಮನೆಯಲ್ಲಿ ಶನಿ ಮತ್ತು ಶುಕ್ರರೂ ತಮ್ಮ ಅಧಿತ್ಯವನ್ನು 1998ರಿಂದ 2001ರವರೆಗೆ ನಡೆಸಿ, ಮನೆಯನ್ನು ಸೂರ್ಯನಿಗೆ ಬಿಟ್ಟುಕೊಟ್ಟಿದ್ದಾರೆ. ಅದೇ ವೇಳೆಯಲ್ಲೇ ಅವರು ಗುಜರಾತ್‌ನ ಮುಖ್ಯಮಂತ್ರಿಯಾದುದು.

ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್‌ಬಿ, ಸುಧಾ ಮೂರ್ತಿ, ಕೊಹ್ಲಿ! 

ಚಂದ್ರ ಮಹಾದೆಶೆ
2011ರಲ್ಲಿ ಮೋದಿ ಅವರಿಗೆ ಚಂದ್ರ ಮಹಾದೆಶೆ ಆರಂಭವಾಯಿತು. ಇದು ಹತ್ತು ವರ್ಷಗಳ ಅವಧಿಯದ್ದು. ಇದು 2021ರವರೆಗೆ ಇರುತ್ತದೆ. ಅಂದರೆ 2021 ಮುಗಿವವರೆಗೂ ಅವರನ್ನು ಪ್ರಧಾನಿ ಪೀಠದಿಂದ ಇಳಿಸಲು ಯಾರಿಗೂ ಸಾಧ್ಯವೇ ಇಲ್ಲ. ಒಂದು ವೇಳೆ ಇವರ ವರ್ಚಸ್ಸನ್ನೂ ಮೀರಿಸುವಂತಹ ಜಾತಕ ಲಕ್ಷಣಗಳನ್ನು ಹಾಗೂ ದೆಶೆಗಳನ್ನು ಹೊಂದಿದ ಮಹಾನಾಯಕ ಬಂದರೆ, ಆಗ ಇಳಿಸಲು ಸಾಧ್ಯ. ಆದರೆ 2021ರ ಬಳಿಕ ಅವರಿಗೆ ಮಂಗಳ ಮಹಾದೆಶೆ ಆರಂಭವಾಗುತ್ತದೆ. ಆಗಲೂ ರಾಜಯೋಗ ನಡೆಯುತ್ತಿರುತ್ತದೆ. ಆದ್ದರಿಂದ ಅವರನ್ನು ಅಧಿಕಾರದಿಂದ ವಿಚಲಿತರನ್ನಾಗಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಕೆಲವು ಆರೋಗ್ಯ ಸಮಸ್ಯೆ ಕಾಡಬಹುದು. ಅಂದರೆ, 2028ರವರೆಗೂ ಮೋದಿಯವರೇ ದೇಶದ ಪ್ರಧಾನಿ ಎಂದಂತಾಯಿತು!

click me!