
ದೇವಸ್ಥಾನಕ್ಕೆ(Temple) ಹೋದಾಗ ಎಲ್ಲರೂ ಮೊದಲು ಕೈ ಕಾಲು ತೊಳೆದು, ಗಂಟೆಗೆ(Bell) ಒಮ್ಮೆ ಠಣ್ ಎಂದು ಭಾರಿಸಿದರೆ ನಮ್ಮ ಮೈ ಎಲ್ಲಾ ಒಮ್ಮೆ ಜುಮ್ ಎನ್ನುತ್ತದೆ. ಯಾರೋ ಬಂದು ಬಡಿದು ಎಬ್ಬಿಸಿದಂತೆ. ಠಣ್ ಎಂದು ಮುಂದೆ ಹೋಗಿ ದೇವರ (God) ದರ್ಶನ ಪಡೆದರೆ ಧನ್ಯೋಸ್ಮಿ ಎಂಬ ಭಾವನೆ ಮೂಡುತ್ತದೆ. ಈ ಘಂಟೆಯ ಸಪ್ಪಳ ಅಷ್ಟರ ಮಟ್ಟಿಗೆ ನಮ್ಮನ್ನು ಆವರಿಸುತ್ತದೆ. ಮನೆಯ ಮುಂದೆ ಶೋಗೆಂದು(Show) ಘಂಟೆ ನೇತು ಹಾಕುವುದು ಈಗಿನ ಟ್ರೆಂಡ್(Trend) ಸಹ ಹೌದು. ಹಾಗಾದರೆ ಘಂಟೆ ನೇತು ಹಾಕಲು ಕಾರಣ ಏನು? ನಮ್ಮ ಶಾಸ್ತçದಲ್ಲಿ ಘಂಟೆಯ ಬಗ್ಗೆ ಏನು ಹೇಳಿದ್ದಾರೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಸಂಸ್ಕೃತದಲ್ಲಿ(Sanskrit) ಘಂಟೆ ಎಂದು ಕರೆಯಲಾಗುತ್ತದೆ. ಇದನ್ನು ಕಂಚು, ಕಾಪರ್(Copper), ಕ್ಯಾಮಿಯಂ ಹೀಗೆ ಹಲವು ಲೋಹಗಳಿಂದ(Metals) ಮಾಡಲಾಗುತ್ತದೆ. ಘಂಟೆಯ ಆಕಾರ(Shape), ಗಾತ್ರ(Size), ಲೋಹ(Metals) ಹೀಗೆ ಆಧರಿಸಿ ಒಂದೊಂದು ರೀತಿ ಲೋಹದಿಂದ ಒಂದೊಂದು ರೀತಿಯ ಶಬ್ದ(Sounds) ಹೊರಹೊಮ್ಮುತ್ತದೆ. ಇದನ್ನು ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್ (Musical Instrument) ಅಂತಲೂ ಕರೆಯಲಾಗುತ್ತದೆ.
ಕನಸಲ್ಲಿ ಪೂರ್ವಜರು ಕಂಡರೆ ಅದಕ್ಕೇನು ಅರ್ಥ ಗೊತ್ತಾ..?
ಪ್ರತೀ ದೇವಸ್ಥಾನದ ಮುಂಭಾಗದಲ್ಲಿ ಘಂಟೆಯನ್ನು ಅಳವಡಿಸಲಾಗಿರುತ್ತೆ. ದೇವಸ್ಥಾನದ ಒಳಗೆ ಪ್ರವೇಶಿಸಲು ದೇವರ ಬಳಿ ಅನುಮತಿ(Permission) ಕೇಳಲು ಈ ಘಂಟೆಯನ್ನು ಅಳವಡಿಸಲಾಗುತ್ತೆ, ಹಾಗೂ ಅದನ್ನು ಹೊಡೆದು ಮುಂದೆ ದರ್ಶನ ಪಡೆಯಬೇಕು ಎಂಬ ನಂಬಿಕೆ ಇದೆ.
ಘಂಟೆಯಲ್ಲೆರಡು ವಿಧ
1.ನೇತು ಹಾಕುವ ಘಂಟೆಗಳು(Hanging Bell): ಇವು ವಿಭಿನ್ನ ರೀತಿಯ ಆಕಾರ(Shape) ಹಾಗೂ ಗಾತ್ರದಲ್ಲಿ(Size) ಇರುತ್ತವೆ. ಸಾಮಾನ್ಯವಾಗಿ ಇವು ಮೀಡಿಯಂ(Medium) ಮತ್ತು ದೊಡ್ಡ ಗಾತ್ರದಲ್ಲಿ(Large) ಇರುತ್ತವೆ. ತುಂಬಾ ಭಾರ(Weight) ಇರುವ ಈ ಘಂಟೆಗಳು ದೊಡ್ಡದಾಗಿರುತ್ತವೆ ಹಾಗೂ ಬಾಳಿಕೆ ಬರುತ್ತವೆ.
2. ಕೈಯಲ್ಲಿ ಹಿಡಿಯಬಹುದಾದ ಘಂಟೆಗಳು(Hand Bell): ಇವು ಮನೆಯಲ್ಲಿ ಹಾಗೂ ಪೂಜೆಯಲ್ಲಿ(Pooja) ಬಳಸಲಾಗುತ್ತದೆ. ಕೈನಲ್ಲಿ ಹಿಡಿದು ಅಲುಗಾಡಿಸಿದರೆ ಮಾತ್ರ ಅದು ಶಬ್ಧ ಮಾಡುತ್ತವೆ.
ಆಗಮ ಶಾಸ್ತ್ರದಲ್ಲಿ(Aagama Shasthra) ಹೇಳಿರುವಂತೆ ಘಂಟೆಯ ಶಬ್ಧಕ್ಕೆ ಕೆಟ್ಟ ಶಕ್ತಿಗಳು(Evil Energy) ದೂರವಾಗುತ್ತವೆ ಹಾಗೂ ಇದರ ಶಬ್ಧ ದೇವರಿಗೆ(God) ತುಂಬಾ ಪ್ರಿಯವಾದುದು ಎಂದು. ಪಿಶಾಚಿ(Paisacha), ಯಕ್ಷ(Yaksha), ರಾಕ್ಷಸ(Rakshasa) ಹಾಗೂ ಬ್ರಹ್ಮರಾಕ್ಷಸರನ್ನು(Brahmarakshasa) ಮನೆಯಿಂದ ದೂರ ಇರಿಸುತ್ತದೆ ಎಂಬ ನಂಬಿಕೆ ಇದೆ.
ಗಂಟೆಗಳಿಂದ Negative Energy ತೆಗೀಬಹುದು.. ಆದರೆ ಈ ವಿಷಯಗಳ ಬಗ್ಗೆ ಇರಲಿ ಗಮನ!
ಸತ್ಯ ಮಿಥ್ಯ
ಘಂಟೆಯನ್ನು ಬಾರಿಸಿ ದೇವರನ್ನು ನಿದ್ರೆಯಿಂದ(Sleep) ಎದ್ದೇಳಿಸಲಾಗುತ್ತದೆ ಎಂಬ ಮಾತಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಅಷ್ಟಕ್ಕೂ ದೇವರು ನಿದ್ರಿಸುವನು ಎಂಬುದೇ ಸುಳ್ಳು(Mith). ಏಕೆಂದರೆ ಸರ್ವಾಂತರ್ಯಾಮಿ ಆದ ದೇವರನ್ನು ಎದ್ದೇಳಿಸಲಾಗದು, ಹಾಗೂ ಎಲ್ಲವನ್ನೂ ನೋಡುತ್ತಿರುತ್ತಾನೆ ಅಲ್ಲದೆ ನಮ್ಮ ನಡವಳಿಯನ್ನೂ(Behaviour) ಗಮನಿಸುತ್ತಾನೆ. ದೇವಸ್ಥಾನಕ್ಕೆ ಹೋದಾಗ ನಾನು ಪ್ರೆಸೆಂಟ್(Present) ಎಂದು ಆತನಿಗೆ ಹೇಳುವ ಅಗತ್ಯವಿಲ್ಲ, ಆತನಿಗೆ ನಮ್ಮ ಇರುವಿಕೆ ತಿಳಿಯುತ್ತದೆ. ಅಷ್ಟಕ್ಕೂ ಈಗಿನ ಎಲ್ಲಾ ದೇವಸ್ಥಾನಗಳಿಗೂ ಮಾನವನ ಪ್ರವೇಶಕ್ಕೆ(Entry) ಮುಕ್ತವಾಗಿದೆ.
ಘಂಟೆಯ ಅಸಲಿ ಸತ್ಯ
ಹಲವು ರೀತಿಯ ಘಂಟೆಗಳಿವೆ. ಇದನ್ನು ವಿವಿಧ ವ್ಯಕ್ತಿಗಳು ಅಲಂಕರಿಸಲಾಗುತ್ತದೆ. ವಿಭಿನ್ನ ರೀತಿಯ ಘಂಟೆಗಳು ಜನರ ವಿಪತ್ತುಗಳನ್ನು(Different Calamities) ತಪ್ಪಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಹದ್ದಿನ ಚಿತ್ರವಿರುವ(Eagle Figure) ಘಂಟೆಯು ಹಾವು(Snake), ಮಿಂಚು(Lightning), ಅಗ್ನಿಯ(Fire) ಅವಘಡಗಳಿಂದ ತಪ್ಪಿಸಲು ಸಹಕರಿಸುತ್ತದೆ.
ವ್ಯಕ್ತಿಯಲ್ಲಿನ ಮೌಢ್ಯ, ಅಜ್ಞಾನದಿಂದ ಎದ್ದೇಳಿಸುತ್ತದೆ. ಕೆಲ ಘಂಟೆಗಳು ಬಾರಿಸಿದಾಗ ಓಂ(OM) ಎಂಬ ಶಬ್ಧ ಕೇಳಿಸುತ್ತದೆ. ಓಂ ಎಂಬುದು ಹಿಂದೂ ಸಂಸ್ಕಕೃತಿಯ ಪ್ರಕಾರ ದೈವತ್ವದ(Devine) ಸಂಕೇತ. ಹಾಗಾಗಿ ಘಂಟೆ ಬಾರಿಸಿದಾಗ ದೈವಿ ಶಕ್ತಿಯ(Devine Energy) ಜೊತೆ ಸಂಪರ್ಕಿಸಲು ಕೊಂಡಿಯಾಗಿ ಕೆಲಸಮಾಡುತ್ತದೆ. ಅಂದರೆ ಆತ್ಮ(Soul), ಪರಮಾತ್ಮನ ಜೊತೆ ಸಂಪರ್ಕಿಸಲು ಘಂಟೆ ಸಹಕರಿಸುತ್ತದೆ. ಹಾಗಾಗಿ ಮನೆಯಲ್ಲಿ ಪೂಜಿಸುವಾಗ ಘಂಟೆಯನ್ನು ಬಾರಿಸಲಾಗುತ್ತದೆ.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಒಳ್ಳೆಯದು, ಆದ್ರೆ ಈ ಮಿಸ್ಟೇಕ್ಸ್ ಮಾಡ್ಬೇಡಿ!
ದೇವಸ್ಥಾನದಲ್ಲಿ ಘಂಟೆ ನೇತು ಹಾಕುವುದೇಕೆ?
ಪ್ರತೀ ಭಾರಿಯೂ ದೇವಸ್ಥಾನಕ್ಕೆ ಹೋದಾಗ ಘಂಟೆ ನೇತು ಹಾಕಿರುವುದನ್ನು ಕಾಣುತ್ತೇವೆ. ಈ ಬಗ್ಗೆ ಏಕೆ ಎಂಬ ಪ್ರಶ್ನೆ ನಮ್ಮಲ್ಲಿ ಕೆಲ ಬಾರಿ ಮೂಡಿರಬಹುದು. ಘಂಟೆಯ ಓಂ(OM) ಶಬ್ಧಕ್ಕೆ ಸಮನಾಗಿರುವುದು ಒಂದು ಕಾರಣವಾದರೆ. ಇನ್ನೊಂದು ಇದರಲ್ಲಿ ವಿಭಿನ್ನ ಲೋಹಗಳನ್ನು(Metals) ಬಳಸಲಾಗಿರುತ್ತದೆ. ಕಂಚು(Copper), ಜಿಂಕ್(Zinc), ಕ್ಯಾಡ್ಮಿಯಂ(Cadmium), ಮೆಗ್ನೀಶಿಯಂ(Manganese), ಕ್ರೋಮಿಯಮ್(Chromium) ಮತ್ತು ನಿಕಲ್(Nickel) ಲೋಹಗಳಿಂದ ತಯಾರಿಸಲಾಗುತ್ತದೆ. ಹೀಗೆ ಬಾರಿಸಿದ ಘಂಟೆಗಳಿAದ ಪ್ರತಿಧ್ವನಿ ಕೇಳಿಸುತ್ತದೆ. ಪ್ರತಿಧ್ವನಿಸಿದಾಗ(Echo) ಅದು 7 ಸೆಕೆಂಡ್‌ಗಳ(Second) ಕಾಲ ಆ ಶಬ್ಧ ಕೇಳಿಸಿದರೆ ಅದು ನಿಜವಾದ ಘಂಟೆ, ಕೇಳಿಸಲಿಲ್ಲವೆಂದಲ್ಲಿ ಅದನ್ನು ಉಪಯೋಗಿಸಬಾರದು.
ಘಂಟೆಯ ಪ್ರತಿಧ್ವನಿಯೂ ನಮ್ಮಲ್ಲಿನ ನಿರ್ದಿಷ್ಟವಾದ ಕೇಂದ್ರ ಅಂದರೆ ಚಕ್ರಗಳಿಗೆ(Chakra) ತಲುಪುತ್ತವೆ. ಇದರಿಂದ ಮಿದುಳಿನಲ್ಲಿನ(Brain) ಎಲ್ಲಾ ರೀತಿಯ ಆಲೋಚನೆಗಳಿಂದ ಮುಕ್ತವಾದ ಶಾಂತ ಸ್ಥಿತಿಗೆ ಕರೆದೊಯ್ಯುತ್ತದೆ. ಹಾಗಾಗಿ ದೇವರ ದರ್ಶನ ಪಡೆಯುವಾಗ ಘಂಟೆ ಬಾರಿಸಿ ಮುನ್ನಡೆದರೆ ಪರಮಾತ್ಮನ ಜೊತೆ ಸಂಪರ್ಕಿಸಲು ಸಾಧ್ಯವಾಗುತ್ತದೆ.
ಪ್ರಯೋಜನಗಳು
ಘಂಟೆ ಬಾರಿಸುವುದರಿಂದ ಹಲವು ಪ್ರಯೋಜನಗಳು ಕಾಣಬಹುದು. ಅದು ಕೇವಲ ದುಷ್ಟ ಶಕ್ತಿಗಳಿಂದ(Evil Energy) ದೂರ ಮಾಡುವುದಲ್ಲದೆ, ವ್ಯಕ್ತಿಯಲ್ಲಿನ ಋಣಾತ್ಮಕ ಶಕ್ತಿಯನ್ನೂ(Negetive Energy) ಹೊರ ಹಾಕುತ್ತದೆ. ಚಕ್ರಗಳು ಸಹ ನಮ್ಮ ದೇಹದಲ್ಲಿನ ಎನರ್ಜಿ ಪಾಯಿಂಟ್(Energy Point) ಆಗಿದ್ದು ಆಯಕ್ಟಿವ್(Active) ಆಗುತ್ತದೆ. ಹಾಗಾಗಿ ದೇವಸ್ಥಾನದಲ್ಲಿ ಘಂಟೆ ಬಾರಿಸುವುದರಿಂದ ನಮ್ಮೊಳಗೆ ಪರಿಶುದ್ಧರಾಗುವುದರ ಜೊತೆಗೆ ಇತರರನ್ನು ಶುದ್ಧಿಸಬಹುದು.
ಮನೆಯ ಡೋರ್ ಬೆಲ್ ವಾಸ್ತು ಹೇಗಿರಬೇಕು?