
ಬಹುತೇಕ ಎಲ್ಲರೂ ಹುಟ್ಟಿದ ದಿನಾಂಕ (Date Of Birth)ವನ್ನು ನೆನಪಿಟ್ಟುಕೊಂಡಿರ್ತಾರೆ. ಅದೇ ದಿನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ತಾರೆ. ಆದ್ರೆ ಹುಟ್ಟಿದ ತಿಥಿ ಅವರಿಗೆ ನೆನಪಿರೋದಿಲ್ಲ. ಅದ್ರ ಬಗ್ಗೆ ಮಹತ್ವ ನೀಡಲು ಹೋಗೋದಿಲ್ಲ. ಜ್ಯೋತಿಷ್ಯ (Astrology ) ಶಾಸ್ತ್ರದ ಪ್ರಕಾರ, ಹುಟ್ಟಿದ ತಿಥಿ ಕೂಡ ಮಹತ್ವ ಪಡೆಯುತ್ತದೆ. ನೀವು ಯಾವ ತಿಥಿಯಲ್ಲಿ ಹುಟ್ಟಿದ್ದಿರಿ ಎಂಬುದರ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು. ಹಿಂದೂ ಕ್ಯಾಲೆಂಡರ್‌ನಲ್ಲಿ ತಿಂಗಳ 30 ದಿನವನ್ನು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷವೆಂದು ವಿಂಗಡಿಸಲಾಗಿದೆ. ಇವು 15-15 ದಿನವಿರುತ್ತದೆ. ಕೃಷ್ಣ ಪಕ್ಷದ 15 ನೇ ತಿಥಿ ಮತ್ತು ಶುಕ್ಲ ಪಕ್ಷದ 15 ನೇ ತಿಥಿಯನ್ನು ಅಮವಾಸ್ಯೆ ಅಥವಾ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಇಂದು ನಾವು ಯಾವ ತಿಥಿಯಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ಹೇಳ್ತೇವೆ.
ಪಾಡ್ಯ : ಪಾಡ್ಯ ತಿಥಿಯಂದು ಜನಿಸಿದವರು ಕುಟುಂಬದ ಜೊತೆ ಸಾಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಅವರ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರುತ್ತದೆ.
ಬಿದಿಗೆ : ಬಿದಿಗೆ ತಿಥಿಯಂದು ಜನಿಸಿದವರು ಉದಾರ ಹೃದಯವನ್ನು ಹೊಂದಿರುತ್ತಾರೆ. ಜನರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಾಗಿರ್ತಾರೆ. ಸದ್ಗುಣ ಮತ್ತು ದಾನಶೀಲರು.
ತದಿಗೆ : ತದಿಗೆ ತಿಥಿಯಂದು ಜನಿಸಿದವರಲ್ಲಿ ದೈಹಿಕ ಶಕ್ತಿ ಹೆಚ್ಚಿರುತ್ತದೆ. ಬುದ್ದಿವಂತಿಗೆ ಜೊತೆ ಬಲಿಷ್ಠತೆ ಇರುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುತ್ತಾರೆ. ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾರೆ. ಐಷಾರಾಮಿ ಹೆಸರಿನಲ್ಲಿ ಅಮಲಿನ ಪದಾರ್ಥದ ಚಟಕ್ಕೆ ಬೀಳುವ ಸಾಧ್ಯತೆಯಿರುತ್ತದೆ.
ಕನಸಿನ ಉದ್ಯೋಗ ಆಕರ್ಷಿಸಲು FENG SHUI TIPS
ಚೌತಿ : ಚೌತಿ ತಿಥಿಯಂದು ಜನಿಸಿದವರು ಜಗಳವಾಡುವುದು ಹೆಚ್ಚು. ಹಾಗಾಗಿ ಯಾವುದೇ ವಿವಾದಕ್ಕೆ ಸಿಲುಕದಂತೆ ಎಚ್ಚರ ವಹಿಸಬೇಕು. ಸೈನ್ಯದಲ್ಲಿ ಸೇರಲು ಇವರು ಪ್ರಯತ್ನಿಸಬೇಕು.
ಪಂಚಮೀ : ಪಂಚಮಿಯಂದು ಜನಿಸಿದವರು ದೈಹಿಕವಾಗಿ ತುಂಬಾ ಸದೃಢರಾಗಿರುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿರುತ್ತಾರೆ. ಕುಟುಂಬದಲ್ಲಿ ಸುಖವಿರುತ್ತದೆ. ವೃತ್ತಿಜೀವನದಲ್ಲಿ ಕಠಿಣ ತಪಸ್ಸು ಅಗತ್ಯ.
ಷಷ್ಠಿ : ಈ ತಿಥಿಯಲ್ಲಿ ಜನಿಸಿದವರಿಗೆ ಸತ್ಯ ಹೆಚ್ಚು ಪ್ರಿಯವಾಗಿರುತ್ತದೆ. ಅವರು ಎಂದೂ ಸುಳ್ಳು ಹೇಳಲು ಬಯಸುವುದಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುವಲ್ಲಿ ಹಿಂದೆ ಸರಿಯುವುದಿಲ್ಲ. ಸತತ ಪ್ರಯತ್ನದಿಂದಾಗಿ ಅವರು ತಮ್ಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ.
ಸಪ್ತಮಿ: ಸಪ್ತಮಿಯಂದು ಜನಿಸಿದವರು ಬಹಳ ಬೇಗ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಇದು ಕೆಟ್ಟ ನಡವಳಿಕೆಯನ್ನು ಇಷ್ಟಪಡುವುದಿಲ್ಲ. ಅವರು ಧಾರ್ಮಿಕ ಸ್ವಭಾವದವರಾಗಿರುತ್ತಾರೆ. ಹಣಕಾಸು ಸಂಬಂಧಿತ ಕೆಲಸದಲ್ಲಿ ಪ್ರವೀಣರಾಗಿರುತ್ತಾರೆ.
ಅಷ್ಟಮಿ : ಅಷ್ಟಮಿಯಂದು ಜನಿಸಿದವರು ಸಂತೋಷವಾಗಿರುತ್ತಾರೆ. ಚಂಚಲ ಮನಸ್ಸಿನಿಂದಾಗಿ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲಕ್ಕೊಳಗಾಗುತ್ತಾರೆ.
ನವಮಿ : ನವಮಿಯಂದು ಜನಿಸಿದವರು ತಮ್ಮ ಮಾತಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೇಡವೆಂದರೂ ಬಾಯಿಂದ ಕಹಿ ಮಾತುಗಳು ಬರುತ್ತವೆ. ಆದ್ದರಿಂದ ಕಟುವಾದ ಸತ್ಯವನ್ನು ಮಾತನಾಡದಂತೆ ನೋಡಿಕೊಳ್ಳಿ.
ದಶಮಿ : ದಶಮಿ ತಿಥಿಯಂದು ಜನಿಸಿದ ವ್ಯಕ್ತಿ ದೇವರಲ್ಲಿ ಅಚಲ ನಂಬಿಕೆ ಹೊಂದಿರುತ್ತಾನೆ. ಕವನ ಕೇಳಲು ಮತ್ತು ಬರೆಯಲು ಆಸಕ್ತಿಯಿರುತ್ತದೆ. ಆಯುಧಗಳನ್ನು ಇಟ್ಟುಕೊಳ್ಳುವ ಬಯಕೆಯನ್ನು ಹೊಂದಿರುತ್ತಾರೆ.
ಏಕಾದಶಿ: ಏಕಾದಶಿ ತಿಥಿಯಂದು ಜನಿಸಿದವರು ಶುದ್ಧ ಹೃದಯವನ್ನು ಹೊಂದಿರುತ್ತಾರೆ. ಈ ಜನರು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸ್ವಲ್ಪವೂ ವಿಳಂಬ ಮಾಡುವುದಿಲ್ಲ.
ದ್ವಾದಶಿ : ದ್ವಾದಶಿ ತಿಥಿಯಂದು ಜನಿಸಿದವರು ಕೃಷಿಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಕೃಷಿಯನ್ನೇ ಆಶ್ರಯಿಸಬೇಕೆಂದೇನಿಲ್ಲ, ಆಗಾಗ್ಗೆ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಅವರು ಮಾಡ್ತಾರೆ. ಇವರ ಮನೆಯಲ್ಲಿ ಸದಾ ನೆಮ್ಮದಿಯಿರುತ್ತದೆ.
ತ್ರಯೋದಶಿ: ತ್ರಯೋದಶಿ ದಿನಾಂಕದಂದು ಜನಿಸಿದ ವ್ಯಕ್ತಿ ಅಲಂಕಾರವನ್ನು ಇಷ್ಟಪಡುವುದಿಲ್ಲ. ಸರಳ ಜೀವಿಯಾಗಿರ್ತಾರೆ. ತುಂಬಾ ಶ್ರೀಮಂತನಾಗಿದ್ದರೂ, ಸಾಮಾನ್ಯ ಮನುಷ್ಯನಂತೆ ಜೀವನ ನಡೆಸುತ್ತಾನೆ.
ಚತುರ್ದಶಿ : ಚತುರ್ದಶಿಯಂದು ಜನಿಸಿದವರು ಹೃದಯವಂತರು. ಕೆಲವೊಮ್ಮೆ ಕ್ರೂರ ರೀತಿಯಲ್ಲಿ ವರ್ತಿಸುತ್ತಾರೆ. ಹಾಗಾಗಿ ಚತುದರ್ಶಿಯಂದು ಜನಿಸಿದ ಜನರು ವಿನಮ್ರರಾಗಿರಲು ಪ್ರಯತ್ನಿಸಬೇಕು.
Yadgir; ಕಾರ ಹುಣ್ಣಿಮೆ ಸಡಗರವೋ ಸಡಗರ!
ಹುಣ್ಣಿಮೆ : ಹುಣ್ಣಿಮೆಯಂದು ಜನಿಸಿದವರು ಒಳ್ಳೆಯ ಸಹವಾಸವನ್ನು ಇಷ್ಟಪಡುತ್ತಾರೆ. ಹೃದಯ ಸಂತೋಷ ಮತ್ತು ಪ್ರೀತಿಯಿಂದ ತುಂಬಿದೆ. ಈ ಜನರು ಕೆಲವೊಮ್ಮೆ ಸೋಮಾರಿಯಾಗ್ತಾರೆ.
ಅಮವಾಸ್ಯೆ : ಅಮಾವಾಸ್ಯೆಯಂದು ಜನಿಸಿದವರು ತಮ್ಮ ತಂದೆ-ತಾಯಿ ಮತ್ತು ಹಿರಿಯರನ್ನು ಗೌರವಿಸುತ್ತಾರೆ. ಯಾವುದೇ ಗುರಿಯನ್ನು ಹೊಂದಿದ್ದರೂ ಅದನ್ನು ಸಾಧಿಸಲು ಶ್ರಮಿಸುತ್ತಾರೆ.