
ಎಲ್ಲರೂ ಮಾತಾಡ್ತಾರೆ. ಅದ್ರೆ ಎಲ್ಲರಿಗೂ ಎಲ್ಲರೊಂದಿಗೂ ಮಾತಾಡಲಾಗುವುದಿಲ್ಲ. ಕೆಲವರಿಗೆ ಹೊಸಬರ ಬಳಿ ಏನು ಮಾತಾಡಬೇಕೋ ತಿಳಿಯುವುದಿಲ್ಲ, ಮತ್ತೆ ಕೆಲವರಿಗೆ ನೆಂಟರಿಷ್ಟರ ಬಳಿ ಮಾತಾಡುವುದೇ ಕಷ್ಟವೆನಿಸುತ್ತದೆ. ಆದರೆ, ತುಂಬಾ ಕಡಿಮೆ ಜನಕ್ಕೆ ಮಾತಾಡುವ ಕಲೆ(communicationskill) ಇರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಬಿಟ್ಟರೂ ಮಾತಲ್ಲೇ ಮನ ಗೆದ್ದು, ಕೆಲಸ ಮುಗಿಸಬಲ್ಲವರಾಗಿರುತ್ತಾರೆ. ಯಾರ ಜೊತೆ ಬೇಕಾದರೂ ಎಷ್ಟು ಹೊತ್ತಾದರೂ ಹರಟೆ ಹಡೆಯುತ್ತಾರೆ. ಸುಮ್ಮನೆ ಕೊರೆಯುವುದಲ್ಲ, ಅವರ ಮಾತಿನಲ್ಲಿ ವಿವಿಧ ಭಾವಗಳು ತುಂಬಿರುತ್ತವೆ. ಹಾಸ್ಯ, ನಗು, ಕನಿಕರ, ಸಹಾನುಭೂತಿ ಇತ್ಯಾದಿ ವಿವಿಧ ಭಾವಗಳನ್ನು ತುಂಬಿ ಮಾತಾಡುವವರು ಸಾಮಾನ್ಯವಾಗಿ ಹೆಚ್ಚಿನವರಿಗೆ ಇಷ್ಟವಾಗುತ್ತಾರೆ. ಚಾಟರ್‌ಬಾಕ್ಸ್ ಎನಿಸಿಕೊಂಡಿರುತ್ತಾರೆ. ಅವರಿಲ್ಲದೆ ಗುಂಪು ಸೇರಿದಾಗ ಖಾಲಿ ಖಾಲಿ ಎನಿಸುತ್ತದೆ. ಕುಟುಂಬದ ಕಾರ್ಯಕ್ರಮಗಳಿಗೆ ಅವರು ಎಲ್ಲರನ್ನೂ ಮಾತಾಡಿಸಿಕೊಂಡು ಕಳೆ ತುಂಬುತ್ತಾರೆ. ಅವರಿಗೆ ಮಾತಾಡಲು ವಿಷಯಗಳು ಮುಗಿಯಿತೆಂದಾಗುವುದಿಲ್ಲ. ಯಾರ ಬಳಿ ಯಾವ ವಿಷಯ ಮಾತಾಡಬೇಕೆಂದು ಕೂಡಾ ಅರಿತಿರುತ್ತಾರೆ. ಮಾತು ಬೆಳೆಸಲು ಅರಿತಿರುತ್ತಾರೆ. ಹೀಗೆ ಹೆಚ್ಚು ಮಾತಾಡುವವರು ಸಾಮಾನ್ಯವಾಗಿ ಈ ಐದು ರಾಶಿ(zodiac signs)ಗಳಿಗೆ ಸೇರಿರುತ್ತಾರೆ.
ಮಿಥುನ(Gemini)
ಮಿಥುನ ರಾಶಿಯವರಿಗೆ ಜನರ ಮಧ್ಯೆ ಇರುವುದಿಷ್ಟ. ಜನರ ಗುಂಪಿರುವಲ್ಲಿ ಚಿಟ್ಟೆಯಂತೆ ಅವರ ಮನಸ್ಸು ಹಾರುತ್ತಿರುತ್ತದೆ. ಬಹಳ ಚಟುವಟಿಕೆಯುಳ್ಳವರಾದ ಇವರಿಗೆ ಮಾತಾಡಲು ಸರಕು ಮುಗಿಯಿತೆಂದಾಗುವುದೇ ಇಲ್ಲ. ಏಕೆಂದರೆ ಎಲ್ಲ ರೀತಿಯ ಜನರೊಂದಿಗೆ ಬೆರೆವ ಗುಣ ಇವರಲ್ಲಿದೆ. ಅವರೊಂದಿಗಿದ್ದವರಿಗೆ ಒಂಟಿತನ ಕ್ಷಣಕ್ಕೂ ಫೀಲ್ ಆಗಬಾರದೆಂಬಂತೆ ಸಾಕಷ್ಟು ವಿಷಯಗಳ ಬಗ್ಗೆ ಮಾತಾಡುತ್ತಾರೆ. ಏಕೆಂದರೆ ಇವರ ಆಸಕ್ತಿಯ ಕ್ಷೇತ್ರಗಳು ಹಲವಿರುತ್ತವೆ. ಹವ್ಯಾಸ, ಗಾಸಿಪ್, ಮೂವೀಸ್, ಬುಕ್ಸ್- ಎಲ್ಲದರ ಬಗ್ಗೆ ಇವರು ಮಾತಾಡಬಲ್ಲರು.
ಸ್ವಭಾವ, ಭವಿಷ್ಯದ ಮೇಲೆ ಪ್ರಭಾವ ಬೀರುತ್ತೆ ಹುಟ್ಟಿದ ತಿಥಿ
ಮೇಷ(Aries)
ಇವರಿಗೆ ಎಲ್ಲದರಲ್ಲೂ ತಮ್ಮ ಅಭಿಪ್ರಾಯ ಹೇಳುವ ಚಾಳಿ. ತಮಗೆ ಹೇಳಬೇಕಾದುದನ್ನು ಹೇಳದೆ ಬಾಯಿ ಮುಚ್ಚಿಕೊಳ್ಳುವವರು ಇವರಲ್ಲ. ತಾವು ಹೇಳುವುದನ್ನು ಯಾರೆಲ್ಲ ಕೇಳಿಸಿಕೊಳ್ಳುತ್ತಿದ್ದಾರೆ, ಕೇಳಿಸಿಕೊಳ್ಳುತ್ತಿಲ್ಲ ಎಂಬುದನ್ನೂ ಗಮನಿಸದೆ ಮಾತಾಡುತ್ತಾರೆ. ಇರು ಬಹಳ ಹೊತ್ತು ಮಾತಾಡಬಲ್ಲರು. ಮಾತು ಮುಗಿಯಬಾರದೆಂದು ಗಾಸಿಪ್ ಮಾಡಬಲ್ಲರು. ಸ್ವಲ್ಪ ಹೊತ್ತು ಸುಮ್ಮನೆ ಕೂರುವುದೂ ಇವರಿಗೆ ಅಸಹನೀಯ ಎನಿಸುತ್ತದೆ.
ಕುಂಭ(Aquarius)
ಇವರು ಹೆಚ್ಚಿನವರ ಪಾಲಿಗೆ ಮೌನಿಗಳೇ. ಆದರೆ, ತಮ್ಮಿಷ್ಟದ ವ್ಯಕ್ತಿಗಳೋ ಅಥವಾ ತಮಗಿಷ್ಟವಿರುವ ಹವ್ಯಾಸ, ಆಸಕ್ತಿಯನ್ನೇ ಹೊಂದಿರುವ ವ್ಯಕ್ತಿಗಳು ಸಿಕ್ಕಿದರೆ ಮಾತ್ರ ಆಸಕ್ತಿಕರ ವಿಷಯಗಳ ಬಗ್ಗೆ ಕೊನೆತುದಿಯಿಲ್ಲದೆ ಮಾತಾಡಬಲ್ಲರು. ಇವರು ಸಾಮಾನ್ಯವಾಗಿ ಬುದ್ಧಿವಂತಿಕೆ ಮಾತುಗಳನ್ನು, ಚಿಂತನೆ, ಯೋಚನೆಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮದೇ ಆಸಕ್ತಿಯ ಜನರೊಂದಿಗೆ ತಿರುಗಾಡಲು ಬಯಸುತ್ತಾರೆ. ಹೊಸಬರ ಪಾಲಿಗೆ ಎಷ್ಟು ಮೌನಿಯೋ, ತುಂಬಾ ಸಲುಗೆಯುಳ್ಳವರೊಡನೆ ಹಲ್ಲು ಬಿದ್ದು ಹೋಗುವವರೆಗೆ ಬೇಕಾದರೂ ಮಾತಾಡಿಕೊಂಡಿರಬಲ್ಲರು.
ಸಿಂಹ(Leo)
ಇವರಂತೂ ಅಕ್ಷರಶಃ ಮಾತಿನ ಮಲ್ಲರೇ. ಇವರು ಮಾತಾಡಲು ಆರಂಭಿಸಿದರೆ ಅದನ್ನು ಮುಗಿಸುವ ಇರಾದೆಯೇ ಇಲ್ಲವೇನೋ ಎಂಬಷ್ಟು ಮಾತಾಡಬಲ್ಲರು. ಇಡೀ ದಿನ ಲೈಮ್‌ಲೈಟಲ್ಲಿರುವ ಬಯಕೆ ಇವರದು. ಹಾಗಾಗಿ, ತಾವು ಮಾತಾಡುವಾಗ ಜನ ತಮ್ಮ ಮಾತನ್ನು ಕೇಳಲು ಉತ್ಸುಕರಾಗಿರುತ್ತಾರೆ ಎಂದಿವರು ಬಗೆದಿರುತ್ತಾರೆ. ಇವರು ಬುದ್ಧಿವಂತರಾಗಿರುವುದರಿಂದ ಸಾಕಷ್ಟು ವಿಷಯಗಳ ಬಗ್ಗೆ ಮಾತಾಡಬಲ್ಲರು. ಎದುರಿನವರ ಆಸಕ್ತಿ ಆಧರಿಸಿ ವಿಷಯ ಎತ್ತುವರು.
ಅತ್ಯಂತ ಅಪಾಯಕಾರಿ ರತ್ನಗಳಿವು! ಬೇಕಾಬಿಟ್ಟಿ ಧರಿಸಿದ್ರೆ ಜೀವನ ಬರ್ಬಾದ್
ಮೀನ(Pisces)
ಇವರ ತಲೆಯಲ್ಲಿ ವಿಚಾರಗಳು, ಅಸಂಬದ್ಧ ಯೋಚನೆಗಳು, ಕಲ್ಪನೆಗಳು ನಿರಂತರ ಓಡುತ್ತಲೇ ಇರುತ್ತವೆ. ಹಾಗಾಗಿ, ಅದರ ಬಗ್ಗೆಯೆಲ್ಲ ಮಾತಾಡುವುದು ಇವರಿಗಿಷ್ಟ. ಜನರೊಂದಿಗೆ ತಮಗನ್ನಿಸಿದ್ದೆಲ್ಲವನ್ನೂ ಹೇಳುತ್ತಾ ಕೂರಬಲ್ಲರು. ಕೆಲವೊಮ್ಮೆ ಇವರ ಮಾತು ಕೊರೆತ ಎನಿಸಿದರೂ ಸುಮ್ಮನಿರಲಾರರು.