ವೃಶ್ಚಿಕ ರಾಶಿಯ ಮಕ್ಕಳು ಆತ್ಮವಿಶ್ವಾಸಿಗಳು, ನಿರ್ಭೀತರು, ಶತ್ರುಗಳಿಗೆ ಸಿಂಹಸ್ವಪ್ನ!

By Suvarna NewsFirst Published Jun 21, 2022, 2:22 PM IST
Highlights

ವೃಶ್ಚಿಕ ರಾಶಿಯ ಮಕ್ಕಳ ಗುಣ ಸ್ವಭಾವಗಳು ಇತರರಿಗಿಂತ ಭಿನ್ನವಾಗಿರುತ್ತದೆ. ಅದಕ್ಕೆ ಹಲವಾರು ಕಾರಣಗಳೂ ಇವೆ. ಇವರ ರಾಶಿಯ ತತ್ವಗಳಿಗೆ ಅನುಸಾರವಾಗಿ ಆತ್ಮವಿಶ್ವಾಸಿಗಳಾಗಿದ್ದು, ಯಾವುದಕ್ಕೂ ಭಯ ಪಡುವವರಲ್ಲ. ಇವರ ಇನ್ನಷ್ಟು ಗುಣ – ಸ್ವಭಾವಗಳ ಬಗ್ಗೆ ತಿಳಿಯೋಣ...

ರಾಶಿಗಳಿಗೆ (Zodiac sign) ಅನುಗುಣವಾಗಿ ಮಕ್ಕಳ ಭವಿಷ್ಯವನ್ನು, ಗುಣ – ಸ್ವಭಾವಗಳನ್ನು ನಾವು ತಿಳಿದುಕೊಳ್ಳಬಹುದಾಗಿದ್ದು, ಅವರು ಭಯಗ್ರಸ್ಥರೇ..? ಆತ್ವವಿಶ್ವಾಸಿಗಳೇ (Self believer) ಎಂಬುದನ್ನೂ ತಿಳಿದುಕೊಳ್ಳಬಹುದು. ರಾಶಿಚಕ್ರದ ಮೂಲಕ ಮಕ್ಕಳ (Children) ಅಭ್ಯಾಸಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಮುಂಚಿತವಾಗಿಯೇ ತಿಳಿಯುವುದರಿಂದ ಅವರ ನ್ಯೂನತೆಗಳನ್ನು (Deficiency) ನಿವಾರಿಸಬಹುದಾಗಿದೆ. ಹೀಗಾಗಿ ವೃಶ್ಚಿಕ ರಾಶಿಯ ಮಕ್ಕಳ ಯಾವ ಪ್ರತಿಭೆಯನ್ನು ಹೊಂದಿದ್ದಾರೆಂಬುದನ್ನು ತಿಳಿಯೋಣ...

ವ್ಯಕ್ತಿತ್ವ ಹೇಗೆ? (Personality)
ವೃಶ್ಚಿಕ ರಾಶಿಯ ಮಕ್ಕಳು ತೀಕ್ಷ್ಣಮತಿಗಳಾಗಿದ್ದು, ಪ್ರತಿ ಕೆಲಸದಲ್ಲಿಯೂ (Work) ಪರಿಪೂರ್ಣರಾಗಿರುತ್ತಾರೆ. ಹೀಗಾಗಿ ಇವರು ಇತರ ಮಕ್ಕಳಿಗಿಂತ ಭಿನ್ನರಾಗಿರುತ್ತಾರೆ. ಅವರು ತಮ್ಮ ವಯಸ್ಸಿಗೆ (Age) ಮೀರಿದ ಬುದ್ಧಿವಂತಿಗೆಯನ್ನು ಹೊಂದಿದ್ದು, ನಿಷ್ಠಾವಂತರಾಗಿರುತ್ತಾರೆ. ಆದರೆ, ಇವರಿಗೆ ಸ್ವಲ್ಪ ಕೋಪ (Angry) ಜಾಸ್ತಿ ಇದ್ದು, ಯಾರಾದರೂ ತಮ್ಮ ವಿರುದ್ಧ ಸಂಚು ಮಾಡಿದರೆ ಅವರ ಮೇಲೆ ಪ್ರತೀಕಾರದ (Revenge) ಮನೋಭಾವವನ್ನು ಹೊಂದಿರುತ್ತಾರೆ. ಹೀಗಾಗಿ ಇವರ ಈ ಗುಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಅಗತ್ಯ ಇದೆ. ಇವರು ವಿಶೇಷವಾಗಿ ವಿರುದ್ಧ ಲಿಂಗಿಗಳ (Opposite sex) ಮೇಲೆ ಬಹುಬೇಗ ಆಕರ್ಷಿತರಾಗುತ್ತಾರೆ. ಆದರೆ, ನಿರ್ಭೀತ ಸ್ವಭಾವವನ್ನು (Fearless nature) ಹೊಂದಿದವರಾಗಿರುತ್ತಾರೆ. 

ತುಂಬಾ ಜಾಗರೂಕರು (Very careful)
ವೃಶ್ಚಿಕ ರಾಶಿಯ ಮಗುವಿಗೆ ಅತಿಯಾದ ಆತ್ಮವಿಶ್ವಾಸ ಇರುತ್ತದೆ. ಅಲ್ಲದೆ, ಜಾಗರೂಕ ಸ್ವಭಾವವನ್ನು ಹೊಂದಿರುವ ಇವರು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಲ್ಲಿ ನಿಪುಣರು. ಇವರು ಉತ್ತಮ ವಾಗ್ಮಿಗಳಾಗಿದ್ದು, ಚರ್ಚೆಯಲ್ಲಿ (Discussion) ಭಾಗವಹಿಸಿದರೆ ಪರ – ವಿರೋಧ ಎರಡರಲ್ಲೂ ಸೈ ಎನ್ನಿಸಿಕೊಳ್ಳುವವರು. 

ನೇರ ಮಾತಿನ ಬೇಸರ 
ವೃಶ್ಚಿಕ ಎಂದರೆ ಚೇಳಿನ ಪ್ರತೀಕ. ಚೇಳುಗಳ (Scorpion) ಗುಣಗಳಂತೆ ಈ ರಾಶಿಯವರ ಮಕ್ಕಳೂ ಕೆಲವು ಗುಣ ದೋಷಗಳನ್ನು ಪಡೆದುಕೊಂಡು ಬಂದಿರುತ್ತಾರೆ. ಚೇಳು ಹೇಗೆ ಯಾರಿಗೂ ಹೆದರುವುದಿಲ್ಲವೋ...  ಕೋಪಗೊಂಡಾಗ ಕುಟುಕುತ್ತದೆಯೋ ಹಾಗೇ ಇವರೂ ಸಹ ಅಂಜುವವರಲ್ಲ. ಹಿಂಜರಿಕೆ (Reluctance) ಎಂಬುದು ಇವರಿಗೆ ಗೊತ್ತೇ ಇಲ್ಲ. ಮಾತಿನಲ್ಲೂ ತೀಕ್ಷ್ಣತೆ ಇರಲಿದ್ದು, ನೇರವಾದ ಮಾತಿನಿಂದ ಇನ್ನೊಬ್ಬರಿಗೆ ಬೇಸರವನ್ನುಂಟು ಮಾಡುವ ಗುಣವನ್ನು ಹೊಂದಿರುತ್ತಾರೆ. ಆದರೆ, ಇದರ ಬಗ್ಗೆ ಪಶ್ಚಾತ್ತಾಪವನ್ನೂ (Repentance_ ಸಹ ಇವರು ಪಡಲಾರರು. ಇವರು ಸ್ನೇಹಬಳಗವನ್ನು (Friends) ಪ್ರೀತಿಯಿಂದ ಕಾಣುತ್ತಾರೆ. 

Best Partners: ಈ 4 ರಾಶಿಯವರು ನಿಮ್ಮ ಅತ್ಯುತ್ತಮ ಸಂಗಾತಿ ಆಗಬಲ್ಲರು!

ನಿಯಂತ್ರಣಕ್ಕೆ ಬಾರದ ಕೋಪ 
ಇವರು ಭೌತಿಕ ಸುಖಗಳನ್ನು ಪಡೆಯಲು ಬಯಸುವವರು. ಸದಾ ಸುಖವಾಗಿರಬೇಕೆಂದು ಆಶಿಸುತ್ತಾರೆ. ಇವರು ಜಗಳವನ್ನು (Quarrels) ಬಹುಬೇಗ ಮಾಡಿಕೊಳ್ಳುತ್ತಾರೆ. ಆದರೆ, ಇದರ ಮುಂದಿನ ಪರಿಣಾಮಗಳ ಬಗ್ಗೆ ಸಹ ಚಿಂತಿಸುವವರಲ್ಲ. ಆದರೆ, ಇವರ ಕೋಪ ನಿಯಂತ್ರಣಕ್ಕೆ ಬರುವುದು ಅಷ್ಟು ಸುಲಭವಲ್ಲ. ಹೀಗಾಗಿ ಸಣ್ಣವರಿದ್ದಾಗಲೇ ಕೋಪವನ್ನು ತಣಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. 

ಪ್ರತೀಕಾರಕ್ಕೆ ಸಿದ್ಧ 
ಇವರು ಕೆಲವು ಕೆಲಸಗಳಿಗೆ ಕೈ ಹಾಕುವ ಮುಂಚೆ ತೀರಾ ಯೋಚನೆಯನ್ನು ಮಾಡುವುದಿಲ್ಲ. ಆದರೆ, ವಿವಾದಗಳು ಮೈಮೇಲೆ ಬರಲಿದೆ ಎಂದಾದರೂ ಹೆದರದ ಇವರು ಆ ಕೆಲಸವನ್ನು ಮಾಡುತ್ತಾರೆ. ಇವರಿಗೆ ಪ್ರತೀಕಾರ ಸ್ವಭಾವ ಹೆಚ್ಚಿದ್ದು, ಹಗೆತನವನ್ನು ಸಾಧಿಸಲು ನಿಸ್ಸೀಮರು. ತಮ್ಮ ಪ್ರೀತಿಪಾತ್ರರು, ಸ್ನೇಹಿತರು, ಸಹೋದರರು (Brothers), ಕುಟುಂಬದವರ ಮೇಲೆ ಸಹ ಕೋಪಗೊಳ್ಳುವುದು ಹೆಚ್ಚು. ಅಲ್ಲದೆ, ಇವರು ಇತರರ ನ್ಯೂನತೆಗಳನ್ನು ಕಂಡುಹಿಡಿಯುವಲ್ಲಿ ನಿಪುಣರು.

ಕೋಪವೂ ಜಾಸ್ತಿ, ಪ್ರೀತಿಯೂ ಹೆಚ್ಚು.. ಕರ್ಕಾಟಕ ರಾಶಿಯ ಸ್ವಭಾವ ಹೀಗೆ..

ಪೋಷಕರ (Parents) ಶ್ರಮ ಬೇಕು
ಈ ರಾಶಿಯ ಮಕ್ಕಳ ಮನಸ್ಸು ಸದಾ ಉಲ್ಲಸಿತವಾಗಿರುವಂತೆ ನೋಡಿಕೊಳ್ಳಬೇಕು. ಚಿಂತನಶೀಲತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಕ್ರೀಡಾ ಮನೋಭಾವವನ್ನು ಈ ಮಕ್ಕಳಲ್ಲಿ ಬೆಳೆಸುವುದಲ್ಲದೆ, ಇತರರನ್ನು ಕ್ಷಮಿಸುವ ಗುಣವನ್ನು ಹೇಳಿಕೊಡಬೇಕು. ಅವರ ಗ್ರಹಾಧಿಪತಿ ಮಂಗಳ (Mars) ಗ್ರಹವಾಗಿದ್ದು, ಇದು ಇವರಿಗೆ ಶಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತದೆ. 

 

 

click me!