ಮಕರದಲ್ಲಿ ಶನಿ ವಕ್ರಿ: ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕಷ್ಟಕಾಲ

By Suvarna NewsFirst Published Jun 21, 2022, 10:57 AM IST
Highlights

ಶನಿಯು ಜೂನ್ 5ರಿಂದ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. ಜುಲೈನಲ್ಲಿ ಶನಿಯು ಹಿಮ್ಮುಖ ಚಲನೆಯಲ್ಲೇ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರಲಿದ್ದಾನೆ. ಇದರಿಂದ ಮೂರು ರಾಶಿಗಳಿಗೆ ಕಷ್ಟಗಳು ಹೆಚ್ಚಲಿವೆ. 

ಜ್ಯೋತಿಷ್ಯ(Astrology)ದ ದೃಷ್ಟಿಕೋನದಿಂದ ಶನಿಯ ಹಿಮ್ಮುಖ ಚಲನೆ(Saturn retrograde motion)ಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಎಲ್ಲ ರಾಶಿಚಕ್ರ ಚಿಹ್ನೆ(zodiac signs)ಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಶನಿಯು ಜೂನ್ 5 ರಿಂದ ಅಕ್ಟೋಬರ್ 23ರವರೆಗೆ ಹಿಮ್ಮುಖವಾಗಿರುತ್ತದೆ. ಪ್ರಸ್ತುತ ಹಿಮ್ಮುಖ ಚಲನೆಯಲ್ಲೇ ಕುಂಭ ರಾಶಿಯಲ್ಲಿ ಇರುವ ಆತ ಜುಲೈ 12ರಂದು ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರಲಿದ್ದಾನೆ.  ಈ ಅವಧಿಯು ಕೆಲವು ರಾಶಿಚಕ್ರದ ಚಿಹ್ನೆಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಕೆಲವರ ಸಂಕಷ್ಟಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 

ಶನಿಯು 29ನೇ ಏಪ್ರಿಲ್ 2022ರಂದು ಕುಂಭ ರಾಶಿ(Aquarius)ಗೆ ಬಂದನು. ಶನಿಯು 5 ಜೂನ್ 2022ರಿಂದ ಹಿಮ್ಮುಖ ಸ್ಥಿತಿಯಲ್ಲಿದೆ. ಇದರ ನಂತರ, ಈಗ ಶನಿದೇವನು 12 ಜುಲೈ 2022 ರಿಂದ ಕುಂಭದಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿದೇವನು ಜನವರಿ 17, 2023ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ಆದರೆ, ಅಕ್ಟೋಬರ್ 23ರವರೆಗೆ ಹಿಮ್ಮುಖ ಚಲನೆಯಲ್ಲಿರುತ್ತಾನೆ. ಶನಿದೇವನ ರಾಶಿಯಲ್ಲಿನ ಬದಲಾವಣೆಯು ಈ 3 ರಾಶಿಚಕ್ರದ ಚಿಹ್ನೆಗಳಿಗೆ ಬಹಳ ಕಷ್ಟ ಕಾಲವಾಗಿರುತ್ತದೆ. ಈ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಬೇಕಾದ 3 ರಾಶಿಗಳು ಯಾವುವು ನೋಡೋಣ.

ಮೇಷ ರಾಶಿ(Aries) 
ಶನಿ ಹಿಮ್ಮುಖವಾಗಿರುವ ಈ ಸಂದರ್ಭದಲ್ಲಿ ಮೇಷ ರಾಶಿಯವರು ಹಣದ ವಿಷಯದಲ್ಲಿ(money matters) ವಿಶೇಷ ಕಾಳಜಿ ವಹಿಸಬೇಕು. ಹಣವನ್ನು ಉಳಿಸುವುದು ಕಷ್ಟವಾಗಬಹುದು. ಇದರೊಂದಿಗೆ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ಹಣ ಮತ್ತು ಆರೋಗ್ಯ ಎರಡರ ಬಗ್ಗೆಯೂ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಶನಿಯನ್ನು ಸಂತೋಷವಾಗಿಡಲು ಪ್ರಯತ್ನಿಸಿ. ಇದಕ್ಕಾಗಿ ಮಂಗಳವಾರ ಮತ್ತು ಶನಿವಾರದಂದು ಹನುಮಾನ್ ಮತ್ತು ಶನಿ ದೇವರನ್ನು ಪೂಜಿಸಿ. ಶನಿಯ ಅಶುಭ ಕಡಿಮೆ ಆಗಲಿದೆ.

ಗಾಜಿನ ಬಳೆ ಧರಿಸಿ ಜಾತಕದಲ್ಲಿ ಬುಧ ಗ್ರಹಕ್ಕೆ ಬಲ ತುಂಬಿ!

ಸಿಂಹ ರಾಶಿ(Leo) 
ಉದ್ಯೋಗ ಮತ್ತು ವೃತ್ತಿ(Job and career)ಯಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಮಾನಸಿಕ ಒತ್ತಡದ ಪರಿಸ್ಥಿತಿಯನ್ನು ರಚಿಸಬಹುದು. ವ್ಯವಹಾರದಲ್ಲಿ ಲಾಭದಾಯಕ ಸ್ಥಾನವನ್ನು ಪಡೆಯಲು, ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಸಾಲ ಪಡೆಯುವ ಮತ್ತು ನೀಡುವ ಪರಿಸ್ಥಿತಿಯನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಲು ಬಿಡಬೇಡಿ. ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ವಾಹನ ಬಳಸುವಾಗ ಜಾಗರೂಕರಾಗಿರಿ. ಶನಿಯ ಅಶುಭವನ್ನು ತಪ್ಪಿಸಲು ಅಗತ್ಯವಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ. ಬಡಬಗ್ಗರಿಗೆ ದಾನ ಮಾಡಿ. 

ಮನುಷ್ಯರ ಪಾಪಪುಣ್ಯಗಳ ರೆಕಾರ್ಡ್ ಇಡುವ ಚಿತ್ರಗುಪ್ತ ಯಾರು?

ಧನು ರಾಶಿ (Sagittarius)
ಮಾನಸಿಕ ಒತ್ತಡ(mental stress)ದ ಸ್ಥಿತಿಯನ್ನು ರಚಿಸಬಹುದು. ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಫಲಿತಾಂಶವನ್ನು ತಡವಾಗಿ ಪಡೆಯಬಹುದು. ಈ ಸಮಯದಲ್ಲಿ, ಗಂಭೀರತೆ ಮತ್ತು ತಾಳ್ಮೆಯನ್ನು ತೋರಿಸಬೇಕಾಗುತ್ತದೆ. ಆತುರದ ನಿರ್ಧಾರವು ಹಾನಿಯನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ, ಅನಗತ್ಯ ಪ್ರಯಾಣದ ಸಾಧ್ಯತೆಯೂ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಯಾವುದೇ ದೀರ್ಘ ಕಾಲದ ಕಾಯಿಲೆಯು ಹೊರ ಹೊಮ್ಮಬಹುದು ಮತ್ತು ನಿಮ್ಮನ್ನು ತೊಂದರೆಗೊಳಿಸಬಹುದು. ಹಾಗಾಗಿ ಈಗಿನಿಂದಲೇ ಈ ಬಗ್ಗೆ ಕಾಳಜಿ ವಹಿಸಬೇಕಿದೆ. ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವು ಒಳ್ಳೆಯದಲ್ಲ. ಮಾತಿನಲ್ಲಿ ಮಾಧುರ್ಯ ಮತ್ತು ಸ್ವಭಾವದಲ್ಲಿ ನಮ್ರತೆಯನ್ನು ಕಾಪಾಡಿಕೊಳ್ಳಿ. ಶನಿವಾರದಂದು ಶನಿ ದೇವಸ್ಥಾನಕ್ಕೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!