ಮಂಗಳವಾರ ಹುಟ್ಟಿದ್ದಾ? ನಿಮ್ಮ ಭವಿಷ್ಯದ ಬಗ್ಗೆ ಗ್ರಹಗತಿಗಳೇನಂತಾವೆ?

By Suvarna NewsFirst Published Jun 21, 2022, 11:57 AM IST
Highlights

ಮಂಗಳವಾರ ಅಂಗಾರಕನ ದಿನ. ಈ ದಿನ ಜನಿಸಿದವರ ಸ್ವಭಾವ ಹೇಗಿರುತ್ತದೆ, ಅವರ ವೃತ್ತಿಜೀವನ, ವೈವಾಹಿಕ ಜೀವನ ಹೇಗಿರುತ್ತದೆ ನೋಡೋಣ. 

ಮಂಗಳವಾರ(Tuesday), ವಾರದ ಮೂರನೇ ದಿನ, ಯೋಧ ಗ್ರಹವಾದ ಮಂಗಳದಿಂದ ಆಳಲ್ಪಡುತ್ತದೆ. ಗ್ರಹವು ನಿಜವಾಗಿಯೂ ಹೋರಾಟದ ಮನೋಭಾವವನ್ನು ಸಂಕೇತಿಸುತ್ತದೆ. ಮಂಗಳ ಗ್ರಹವು ಜೀವನವನ್ನು ಮುನ್ನಡೆಸುವ ಉತ್ಸಾಹವನ್ನು ತುಂಬುತ್ತದೆ ಮತ್ತು ಎಲ್ಲ ವೈಪರೀತ್ಯಗಳ ವಿರುದ್ಧ ಜಯಿಸಲು ಶಕ್ತಿ ನೀಡುತ್ತದೆ. ಮಂಗಳವಾರ ಜನಿಸಿದವರ ವ್ಯಕ್ತಿತ್ವ, ವೃತ್ತಿ ಭವಿಷ್ಯ, ವೈವಾಹಿಕ ಜೀವನ ಇತ್ಯಾದಿಗಳ ಬಗ್ಗೆ ನೋಡೋಣ. 

ವ್ಯಕ್ತಿಯ ವ್ಯಕ್ತಿತ್ವ(personality) ಮತ್ತು ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ಎಂದಿಗೂ ಸುಲಭದ ಕೆಲಸವಲ್ಲ. ಆದರೆ ಜ್ಯೋತಿಷ್ಯವು ಗ್ರಹಗಳ ಸಂಪೂರ್ಣ ಅಧ್ಯಯನ ಮತ್ತು ಒಬ್ಬರ ಜೀವನದ ಮೇಲೆ ಅದರ ಪರಿಣಾಮ ತಿಳಿಯುವುದರೊಂದಿಗೆ ವ್ಯಕ್ತಿಯ ವ್ಯಕ್ತಿತ್ವ ಅರ್ಥ ಮಾಡಿಸುತ್ತದೆ. ಮಂಗಳವಾರ ಜನಿಸಿದವರ ಜ್ಯೋತಿಷ್ಯ(astrology) ಭವಿಷ್ಯವಾಣಿಯ ಸಾರಾಂಶ ಇಲ್ಲಿದೆ. ಆದ್ದರಿಂದ, ನೀವು ಮಂಗಳವಾರ ಜನಿಸಿದವರಾಗಿದ್ದರೆ ಅಥವಾ ನಿಮ್ಮ ಪ್ರೀತಿಪಾತ್ರರು ಜನಿಸಿದ ದಿನ ಇದಾಗಿದ್ದರೆ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮುಂದೆ ಓದಿ. 

ಮಂಗಳವಾರ ಜನಿಸಿದವರ ವ್ಯಕ್ತಿತ್ವ
ಮಂಗಳವಾರ ಜನಿಸಿದವರು ಶಕ್ತಿಯ ಕೇಂದ್ರವಾಗಿರುತ್ತಾರೆ. ಇದಕ್ಕೆ ಕಾರಣ ಮಂಗಳವಾರದ ಅಧಿಪತಿ ಕೆಂಪು ಗ್ರಹವಾದ ಮಂಗಳ ಗ್ರಹ(Mars)ದ ಅಪಾರ ಶಕ್ತಿ. ಸವಾಲುಗಳು ಮತ್ತು ಅಡೆತಡೆಗಳು ಮಂಗಳವಾರ ಜನಿಸಿದವರನ್ನು ಎಂದಿಗೂ ವಿಚಲಿತಗೊಳಿಸುವುದಿಲ್ಲ. ಬದಲಿಗೆ ಇವೇ ಅವರನ್ನು ಪ್ರೇರೇಪಿಸುವ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತವೆ. ಅವರು ಹೆಚ್ಚಿನ ಗಮನವನ್ನು ವಿವಿಧ ಚಿಂತನೆ-ಪ್ರಚೋದಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಹೇರಳವಾದ ಶಕ್ತಿಯ ಕಾರಣದಿಂದಲೇ ಅವರು ಹಠಾತ್ ಪ್ರವೃತ್ತಿಯವರಾಗಿರುತ್ತಾರೆ. ಫಟಾಫಟ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೋಪ ಬರುವುದೂ ಬೇಗ, ಉತ್ಸಾಹದಿಂದ ಮುನ್ನುಗ್ಗುವುದೂ ಬೇಗ. ಕೆಲವೊಮ್ಮೆ ಈ ಹಠಾತ್ ಪ್ರವೃತ್ತಿಯೇ ಅವರ ವೈಫಲ್ಯಕ್ಕೆ ಕಾರಣವಾಗಬಹುದು. 

ಮಕರದಲ್ಲಿ ಶನಿ ವಕ್ರಿ: ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕಷ್ಟಕಾಲ

ವೃತ್ತಿ ಭವಿಷ್ಯ(Career life)
ಮಂಗಳವಾರ ಜನಿಸಿದ ಜನರು ಹೆಚ್ಚು ಧೈರ್ಯಶಾಲಿಗಳು ಮತ್ತು ಅದು ಅವರನ್ನು ಮಹಾನ್ ಯೋಧ ಮತ್ತು ವೀರರನ್ನಾಗಿ ಮಾಡುತ್ತದೆ. ಅವರು ಲೌಕಿಕ ಮತ್ತು ಭೌತಿಕ ವಸ್ತುಗಳ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ, ಆದ್ದರಿಂದ ಹಣಕ್ಕೆ ಸಂಬಂಧಿಸಿದ ವೃತ್ತಿಗಳಾದ ಬ್ಯಾಂಕಿಂಗ್ ಮತ್ತು ಹಣಕಾಸು ಸಹ ಅವರಿಗೆ ಸೂಕ್ತವಾಗಿದೆ.

ಮಂಗಳವಾರ ಜನಿಸಿದವರು ಅಪಾಯ ತೆಗೆದುಕೊಳ್ಳುವವರು ಮತ್ತು ಸವಾಲಿನ ಸಂದರ್ಭಗಳು ಅವರನ್ನು ಆಕರ್ಷಿಸುತ್ತವೆ. ಅವರು ಟೀಕೆಗಳನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ನಕಾರಾತ್ಮಕ ಕಾಮೆಂಟ್‌ಗಳಿಂದ ಬೇಗ ನೋಯುವುದಿಲ್ಲ. ಟೀಕೆಯು ಜೀವನದ ಭಾಗವಾಗಿರುವುದರಿಂದ, ವಿಶೇಷವಾಗಿ ಕೆಲಸದಲ್ಲಿ, ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಇದು ಅವರಿಗೆ ಗೆಲುವಿಗೆ ಸಾಕಷ್ಟು ಸಹಾಯ ಮಾಡುತ್ತದೆ.

ಪ್ರೀತಿ ಮತ್ತು ಮದುವೆ(love and marriage)
ಮಂಗಳನ ಪ್ರಭಾವದ ಅಡಿಯಲ್ಲಿ, ಅವರು ತಮ್ಮದೇ ಆದ ಜಗತ್ತಿನಲ್ಲಿ ಕಳೆದು ಹೋಗುತ್ತಾರೆ. ಹೀಗಾಗಿ ಮಂಗಳವಾರ ಜನಿಸಿದವರಿಗೆ ಇತರರೊಂದಿಗೆ ತೆರೆದುಕೊಳ್ಳಲು ಕಷ್ಟವಾಗುತ್ತದೆ. ಗ್ರಹದ ಅಪಾರ ಶಕ್ತಿಯು ಅವರನ್ನು ಆಗಾಗ್ಗೆ ವಿನಾಶಕಾರಿಯಾಗಿ ಪರಿವರ್ತಿಸುತ್ತದೆ. ಅವರು ಮಾತನಾಡುವ ಮೊದಲು ಯೋಚಿಸಲು ಹೆಚ್ಚು ಗಮನ ಕೊಡುವುದಿಲ್ಲ. ಅವರು ತಮ್ಮ ಸಂಗಾತಿಯನ್ನು ಚುಚ್ಚು ಮಾತುಗಳಿಂದ ನೋಯಿಸುವ ಸಾಧ್ಯತೆಯಿದೆ. ಅವರ ಈ ಕೋಪತಾಪ, ಹೊಂದಿಕೊಳ್ಳುವ ಕಷ್ಟದ ಪರಿಣಾಮವಾಗಿ ಅವರ ದಾಂಪತ್ಯದಲ್ಲಿ ಅಡಚಣೆ ಹೆಚ್ಚುತ್ತದೆ. 

Vastu Tips: ತಾಯಿ ಲಕ್ಷ್ಮಿ ಬರುವ ಮುನ್ನ ನೀಡೋ ಸೂಚನೆಗಳಿವು!

ಇವರ ಜೋರು-ಬಾಯಿ ಮತ್ತು ಹಠಾತ್ ಸ್ವಭಾವವು ಸಂಬಂಧದ ಶಾಂತಿ ಮತ್ತು ಸಾಮರಸ್ಯವನ್ನು ಕದಡುತ್ತದೆ. ಯಜಮಾನಿಕೆ ಮಾಡುವುದು, ತಮ್ಮ ನಿಯಂತ್ರಣದಲ್ಲಿ ಸಂಗಾತಿಯನ್ನು ಇಟ್ಟುಕೊಳ್ಳಲು ನೋಡುವುದು ಸಂಬಂಧದಲ್ಲಿ ಕೆಲಸ ಮಾಡುವುದಿಲ್ಲ. ಸಮತೋಲನ ಮತ್ತು ಸಾಮರಸ್ಯವನ್ನು ರಚಿಸುವುದು ಯಶಸ್ವಿ ಸಂಬಂಧದ ಕೀಲಿಯಾಗಿದೆ ಎಂಬುದನ್ನಿವರು ಅರಿಯಬೇಕು. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!