Astro Planet: ಸಾಲ, ಉದ್ಯೋಗ ಹಿನ್ನಡೆ, ಚರ್ಮರೋಗಕ್ಕೆ ಕಾರಣ ಈ ಗ್ರಹ!

By Suvarna NewsFirst Published Feb 14, 2022, 9:35 AM IST
Highlights

ಜಾತಕದಲ್ಲಿ ಎಲ್ಲ ಗ್ರಹಗಳ ಸ್ಥಿತಿಯು ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಗ್ರಹಗಳ ಸ್ಥಿತಿ ಉಚ್ಛ ನೀಚ ಸ್ಥಾನದ ಪ್ರಕಾರ ಜೀವನದಲ್ಲಿ ಸಮಸ್ಯೆಗಳು ಸುಖ, ಸಂತೋಷಗಳು ಬಂದು ಹೋಗುತ್ತಿರುತ್ತವೆ. ಹಾಗಾಗಿ ಯಾವ ಗ್ರಹದ ಸ್ಥಿತಿ ನೀಚವಾಗಿದೆ ಎಂಬುದನ್ನು ತಿಳಿದು ಅದನ್ನು ಸರಿಪಡಿಸಿಕೊಂಡಲ್ಲಿ ಸಮಸ್ಯೆಗಳ ಪ್ರಮಾಣ ಕಡಿಮೆಯಾಗುತ್ತದೆ. ಬುಧ ಗ್ರಹದ ಸ್ಥಿತಿ ನೀಚವಾದಾಗ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿಯೋಣ ...

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಒಂಬತ್ತು ಗ್ರಹಗಳಿವೆ. ಪ್ರತಿ ಗ್ರಹಗಳಿಗೂ (Planet) ಅನೇಕ ವಿಶೇಷತೆಗಳಿವೆ. ಗ್ರಹಗಳ ಸ್ಥಾನ ಸ್ಥಿತಿ (Position) ಬದಲಾವಣೆಯಾಗುವುದರಿಂದ ಜೀವನದಲ್ಲಿ (Life) ಅನೇಕ ಏರುಪೇರುಗಳು ಉಂಟಾಗುತ್ತವೆ. ಹಾಗಾಗಿ ಜಾತಕದಲ್ಲಿ (Horoscope) ಆಗಾಗ ಗ್ರಹ ಗತಿಗಳ ಸ್ಥಿತಿಯನ್ನು ತಿಳಿದುಕೊಳ್ಳುವುದು ಉತ್ತಮ.

ಯಾವ ಗ್ರಹದ ಸ್ಥಿತಿಯು ಬಲವಾಗಿದೆಯೋ ಅಂತಹ ಗ್ರಹಗಳಿಂದ ಶುಭ ಫಲಗಳು (Good effect ) ಪ್ರಾಪ್ತವಾಗುತ್ತವೆ. ಅದೇ ಶುಭ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಅವು ಸಾಮಾನ್ಯವಾಗಿ ಯಾವುದೇ ಪ್ರಭಾವವನ್ನು ಬೀರುವುದಿಲ್ಲ ಅಥವಾ ಕೆಲವೊಮ್ಮೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಹಾಗಾದರೆ ಬುಧ (Mercury) ಗ್ರಹ ನೀಚ ಸ್ಥಿತಿಯಲ್ಲಿ ಇದ್ದರೆ ಯಾವೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ. ಅದರಿಂದ ಮುಕ್ತರಾಗಲು ಏನೇನು ಮಾಡಬೇಕು ಎಂಬುದನ್ನು ತಿಳಿಯೋಣ.

ಬುಧ ಗ್ರಹವು ವಾಣಿ, ಬುದ್ಧಿ, ಗಣಿತ ಮತ್ತು ಸಂವಾದಗಳ ಕಾರಕ ಗ್ರಹವೆಂದು ಹೇಳಲಾಗುತ್ತದೆ. ಜಾತಕದಲ್ಲಿ ಬುಧ ಗ್ರಹವು ಉಚ್ಚ ಸ್ಥಿತಿಯಲ್ಲಿದ್ದರೆ ಅಂಥವರಿಗೆ ವ್ಯಾಪಾರ (Business), ಶಿಕ್ಷಣ (Education) ಮತ್ತು ಉದ್ಯೋಗದಲ್ಲಿ (Job) ಯಶಸ್ಸು (Success) ದೊರೆಯುತ್ತದೆ. ಅದೇ ನೀಚ ಸ್ಥಿತಿಯಲ್ಲಿದ್ದರೆ ಅನೇಕ ತೊಂದರೆಗಳು (Difficulties) ಉಂಟಾಗುತ್ತವೆ.

ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

ಬುಧ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಉಂಟಾಗುವ ಸಮಸ್ಯೆಗಳು:

  • ದಿನೇ ದಿನೇ ಸಾಲದ (Loan) ಹೊರೆ ಹೆಚ್ಚುತ್ತಿದೆ ಎಂಬ ಭಾವನೆ ಉಂಟಾದರೆ. ಸಾಲ ಹೆಚ್ಚುತ್ತಿದ್ದರೆ ಅದಕ್ಕೆ ಬುಧಗ್ರಹದ ನೀಚ ಸ್ಥಿತಿಯೇ ಕಾರಣವಾಗಿರುತ್ತದೆ. 
  • ಜಾತಕದಲ್ಲಿ ಬುಧ ಗ್ರಹ ನೀಚ ಸ್ಥಿತಿಯಲ್ಲಿದ್ದರೆ ಅಂತಹ ವ್ಯಕ್ತಿಗಳು ಜೂಜಾಟ ಮತ್ತು ಮದ್ಯಪಾನಗಳಂತ (Alcoholic) ಕೆಟ್ಟ ಚಟಗಳ (Bad Activities) ದಾಸರಾಗುತ್ತಾರೆಂದು ಹೇಳಲಾಗುತ್ತದೆ
  • ವ್ಯಕ್ತಿಯ ಮರ್ಯಾದೆ ಪ್ರತಿಷ್ಠೆಗಳಿಗೆ ಧಕ್ಕೆಯುಂಟಾದರೆ. ಸಿಗಬೇಕಾದ ಗೌರವ (Respect) ಸಿಗದೆ ಹೋದರೆ ಅದಕ್ಕೆ ಬುಧಗ್ರಹದ ನಿಜಸ್ಥಿತಿಯು ಸಹ ಕಾರಣವಾಗಿರಬಹುದು.
  • ಚರ್ಮಕ್ಕೆ (Skin) ಸಂಬಂಧಿಸಿದ ಸಮಸ್ಯೆಗಳು ಆರಂಭವಾದರೆ, ಮುಖದಿಂದ ತೇಜಸ್ಸು ಮಾಯವಾದರೆ ಅದರಿಂದ ಬುಧ ಗ್ರಹದ ಸ್ಥಿತಿ ನೀಚವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. 
  • ಚೆನ್ನಾಗಿ ಮಾತನಾಡುವ (Talkative) ಮತ್ತು ಓದುವ  ಸಾಮರ್ಥ್ಯವಿದ್ದರೂ, ಮಾತನಾಡಲು, ಓದಲು ಅಡೆತಡೆ ಉಂಟಾಗುವುದು ಬುಧಗ್ರಹದ ಸ್ಥಿತಿಯನ್ನು ತಿಳಿಸುತ್ತದೆ. 
  • ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಂದುಕೊಂಡ ಯಶಸ್ಸು ಸಿಗದೇ ಇರುವುದು ಜಾತಕದ ದೋಷ ವಾಗಿರಬಹುದು. ಜಾತಕದಲ್ಲಿ ಬುಧನ ಸ್ಥಾನ ಮತ್ತು ಸ್ಥಿತಿ ಸರಿ ಇಲ್ಲದಿದ್ದಾಗ ಈ ರೀತಿಯ ಸಮಸ್ಯೆಗಳು ಕಾಡುತ್ತವೆ.


ಇದನ್ನು ಓದಿ: Vastu Tips: ಬೆಳಗ್ಗೆ ಈ 3 ಕೆಲಸ ಮಾಡಿದರೆ ಬ್ಯಾಡ್ ಲಕ್ ಬೆನ್ಹತ್ತುವುದು!

ಪರಿಹಾರವನ್ನು ತಿಳಿಯೋಣ (Solution)

  • ಜಾತಕದಲ್ಲಿ ಬುಧ ಗ್ರಹ ಸ್ಥಿತಿ ನೀಚವಾಗಿದ್ದರೆ ಅದನ್ನು ಬಲಪಡಿಸಿಕೊಳ್ಳಲು ಪಚ್ಚೆಯನ್ನು (Emerald) ಧರಿಸಬೇಕೆಂದು ಹೇಳಲಾಗುತ್ತದೆ. ಆದರೆ ಪಚ್ಚೆಯನ್ನು ಧರಿಸುವ ಮುನ್ನ ರತ್ನಗಳ ಬಗ್ಗೆ ಉತ್ತಮ ಜ್ಞಾನವುಳ್ಳ (Knowledgeable) ವ್ಯಕ್ತಿಗಳ ಬಳಿ ಸಲಹೆಯನ್ನು ಪಡೆಯುವುದು ಒಳ್ಳೆಯದು. 
  • ಶ್ರೀ ಗಣೇಶನ (Lord ganesha) ಆರಾಧನೆಯಿಂದ, ಭಕ್ತಿ ಶ್ರದ್ಧೆಗಳಿಂದ ಪೂಜಿಸುವುದರಿಂದ ಬುಧ ಗ್ರಹದ ಸ್ಥಿತಿಯನ್ನು ಬಲಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಗಣೇಶನಿಗೆ ಸಂಬಂಧಿಸಿದ ಪೂಜೆಯನ್ನು ವಿಧಿವಿಧಾನಗಳಿಂದ ನಡೆಸುವುದರಿಂದ ಬುಧ ಗ್ರಹದ ಸ್ಥಿತಿ ಉತ್ತಮವಾಗುತ್ತದೆ.
  • ಜಾತಕದಲ್ಲಿ ಬುಧ ಗ್ರಹದ ಸ್ಥಿತಿ ನೀಚವಾಗಿದ್ದರೆ ಅಂತಹ ವ್ಯಕ್ತಿಗಳು 'ಓಂ ಬುಧಾಯ ನಮಃ' ಎಂಬ ಮಂತ್ರವನ್ನು ಹೇಳುವುದರಿಂದ  ಶುಭ ಫಲ ಪ್ರಾಪ್ತವಾಗುತ್ತದೆ.
  • ಬುಧ ಗ್ರಹದ ಶಕ್ತಿಯನ್ನು ಬಲಪಡಿಸಲು ಬುಧವಾರದಂದು ಹೆಸರು ಬೇಳೆಯನ್ನು (Moong dal ) ದಾನವಾಗಿ ನೀಡಬೇಕು. 
  • ಬುಧ ಗ್ರಹದ ಅಶುಭ ಪ್ರಭಾವಗಳಿಂದ ಪಾರಾಗಲು ಜ್ಯೋತಿಷ್ಯರ ಸಲಹೆ ಪಡೆದು ಚತುರ್ಮುಖಿ ರುದ್ರಾಕ್ಷಿಯನ್ನು (Rudraksh) ಧರಿಸಬೇಕು.

Latest Videos

click me!