Feng Shui: ಈ ಸಸ್ಯಗಳು ಮನೆಯೊಳಗಿದ್ದರೆ ದುಃಖ, ದುರದೃಷ್ಟ ಹೊರಗೋಡುತ್ತವೆ!

By Suvarna NewsFirst Published Feb 13, 2022, 3:53 PM IST
Highlights

ಫೆಂಗ್‌ಶುಯ್ ಎಂದರೆ ಗಾಳಿ ಹಾಗೂ ನೀರು ಎಂದು. ಒಳಾಂಗಣ ಸಸ್ಯಗಳ ಕುರಿತು ಫೆಂಗ್ ಶುಯ್ ಹೇಳಿದ ಈ ವಿಷ್ಯ ತಿಳಿದ್ರೆ ಯಶಸ್ಸಿನ ಕೀಲಿಕೈ ಸಿಕ್ಕಂತೆ.

ಗಿಡಮರಗಳು ಮನೆಯೊಳಗೇ ಇರ್ಲಿ, ಹೊರಗೇ ಇರ್ಲಿ, ಖುಷಿ ಕೊಡೋದೊಂತೂ ಎಲ್ಲರಿಗೂ ಗೊತ್ತಿರೋದೇ. ಆದರೆ, ಈಗಿನ ನಗರದ ಮನೆಗಳಲ್ಲಿ ಬಾಲ್ಕನಿಯಲ್ಲಿ ನಾಲ್ಕು ಗಿಡವಿಟ್ಟು ಸಂತೋಷ ಪಡುವಂಥ ಸ್ಥಿತಿಯಿದೆ. ಹಸಿರನ್ನು ಹುಡುಕಿಕೊಂಡು ಪಾರ್ಕು, ರೆಸಾರ್ಟ್ ಅಂತ ಅಲೆದಾಟ ಜಾಸ್ತಿಯಾಗಿದೆ. ಮನೆಯಲ್ಲೂ ಹಸಿರಿಗೆ ಕೊರತೆ ಬರದಂತೆ ನೋಡಿಕೊಳ್ಳೋಕೆ ಸುಲಭ ವಿಧಾನ ಅಂದ್ರೆ ಒಳಾಂಗಣ ಸಸ್ಯಗಳು. ಚೀನೀಸ್ ವಾಸ್ತು ಶಾಸ್ತ್ರ ಫೆಂಗ್ ಶುಯ್, ಒಳಾಂಗಣ ಸಸ್ಯಗಳಿಂದ ಏನೆಲ್ಲ ಲಾಭವಿದೆ. ಯಾವೆಲ್ಲ ಸಸ್ಯಗಳನ್ನು ಬೆಳೆಸ್ಬೇಕು ಎಂಬ ಕುರಿತು ಹೇಳಿದೆ. ಅದರ ಪ್ರಕಾರ, ಸುಖ, ಸಮೃದ್ಧಿಗಾಗಿ ಮನೆಯೊಳಗೆ ಈ ಸಸ್ಯಗಳನ್ನು ಹೆಚ್ಚಾಗಿ ಬೆಳೆಸಬೇಕಿದೆ. 

ಮನಿ ಪ್ಲ್ಯಾಂಟ್(Money plant)

Latest Videos


ಇದೊಂತೂ ನಗರದ ಮನೆಗಳಲ್ಲಿ ಹೆಚ್ಚು ಜನಪ್ರಿಯ ಸಸ್ಯ. ಬೆಳೆಸುವವರಿಗೆ ಅದೃಷ್ಟ ತರುವ ಸಸ್ಯ ಮನಿ ಪ್ಲ್ಯಾಂಟ್. ಸಾಮಾನ್ಯವಾಗಿ ಇವನ್ನು ಹೆಣೆಯಲಾಗಿರುತ್ತದೆ. ಅದೃಷ್ಟ ಕೆಲಸ ಮಾಡಬೇಕೆಂದರೆ ನೀವು 3ರಿಂದ 5 ಎಳೆಗಳನ್ನು ಹೆಣೆದಂಥ ಸಸ್ಯಗಳನ್ನು ಇಟ್ಟುಕೊಳ್ಳಬೇಕು. ನಾಲ್ಕು ದುರದೃಷ್ಟದ ಸಂಖ್ಯೆ ಎಚ್ಚರವಿರಲಿ. ಇದರೊಂದಿಗೆ ಅದೃಷ್ಟಕ್ಕಾಗಿ ಈ ಸಸ್ಯದ ಎಲೆಗಳು ಐದು ಅಥವಾ ಅದಕ್ಕಿಂತ ಹೆಚ್ಚಿನ ಬೆರಳುಗಳನ್ನು ಹೊಂದಿರಬೇಕು. ಮಲೇಶಿಯಾ(Malasia) ಮತ್ತು ಇಂಡೋನೇಶಿಯಾ(Indonasia)ದಲ್ಲಿ ಈ ಸಸ್ಯಗಳು ಹೆಚ್ಚಾಗಿ ಲಭ್ಯವಿವೆ. ಇವು ಮನೆಯೊಳಗೆ ಚೆನ್ನಾಗಿ ಬೆಳೆಯುತ್ತದೆ. ಹೂಕುಂಡದಲ್ಲಿ ಇದನ್ನು ಬೆಳೆಸಬಹುದು. ಬಳ್ಳಿಯಂತೆ ಹಬ್ಬುವ ಇದನ್ನು ಅಲಂಕಾರಿಕವಾಗಿ ಹಬ್ಬಿಸಿ ಮನೆಯನ್ನು ಹೆಚ್ಚು ಹಸಿರಾಗಿಸಿ. ಇದು ವಿಕಿರಣ ಹೀರಿ ಎನರ್ಜಿ ತುಂಬುವುದು. ಮನೆಯಲ್ಲಿ ಒತ್ತಡ(Stress) ಕಡಿಮೆ ಮಾಡಿ ಸಮೃದ್ಧಿ ತರುವುದು.

ಸ್ನೇಕ್ ಪ್ಲ್ಯಾಂಟ್(Snake plant)


ಮದರ್ ಇನ್ ಲಾ(ಅತ್ತೆ) ಸಸ್ಯವೆಂದೂ ಕರೆಸಿಕೊಳ್ಳುವ ಸ್ನೇಕ್ ಪ್ಲ್ಯಾಂಟ್ ಬರೀ ಅತ್ತೆ ಸಸ್ಯವಲ್ಲ, ಲತ್ತೆ ಸಸ್ಯ ಕೂಡಾ! ಗಾಳಿಯಲ್ಲಿರುವ ವಿಷಾನಿಲ(toxins)ಗಳನ್ನು ಹೀರಿಕೊಳ್ಳುವ ಗುಣದಿಂದಾಗಿ ಇದು ಸಲಹಿದವರಿಗೆ ಕೇವಲ ಉತ್ತಮ ಗಾಳಿಯನ್ನಷ್ಟೇ ಉಳಿಸುತ್ತದೆ. ಗಾಳಿಯಲ್ಲಿರುವ ಫಾರ್ಮಾಲ್‌ಡಿಹೈಡ್, ಬೆಂಜೀನ್‌ನಂಥ ವಿಷವನ್ನು ಇದು ತೆಗೆದು ಹಾಕಬಲ್ಲದು. ಇದರೊಂದಿಗೆ ಪ್ರಾಕೃತಿಕವಾಗಿ ತೇವಾಂಶ ಉಳಿಸಲು ಕೂಡಾ ಈ ಸಸ್ಯ ನೆರವಾಗುತ್ತದೆ. ಎಲ್ಲೆಡೆ ಮಲಿನ ಗಾಳಿಯಿಂದ ಕಾಯಿಲೆಗಳು ಹರಡುತ್ತಿರುವ ಇಂದಿನ ಕಾಲದಲ್ಲಿ ಸ್ವಚ್ಛ ಗಾಳಿಯನ್ನು ಕೊಡುವ ಈ ಸಸ್ಯ ಆರೋಗ್ಯ ಹಾಗೂ ಸಂತೋಷ ತರುವುದರಲ್ಲಿ ಅನುಮಾನವೇ ಬೇಡ.

Faith And Reason: ಕಪ್ಪು ಬೆಕ್ಕು ನಿಮ್ಮ ದಾರಿಗೆ ಅಡ್ಡ ಹೋದರೆ ಅನಾಹುತದ ಸೂಚನೆಯೇ?

ಜೇಡ್ ಸಸ್ಯ(Jade plant)


ವೃತ್ತಾಕಾರದ ಎಲೆಗಳನ್ನು ಹೊಂದಿರುವ ಸಸ್ಯಗಳೆಲ್ಲವೂ ಮನೆಗೆ ಒಳಿತು ಮಾಡುತ್ತದೆ ಎನ್ನುತ್ತದೆ ಫೆಂಗ್ ಶುಯ್. ಇದಕ್ಕೆ ಹೊಂದುವುದು ಜೇಡ್ ಸಸ್ಯ. ಸಾಮಾನ್ಯವಾಗಿ ಇದನ್ನು ಹೊಸದಾಗಿ ಉದ್ಯೋಗ ಆರಂಭಿಸುವವರಿಗೆ ಉಡುಗೊರೆಯಾಗಿ ಕೊಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಇದನ್ನು ಉದ್ಯೋಗ ಸ್ಥಳದ ಪ್ರವೇಶ ದ್ವಾರ(Entrance)ದಲ್ಲಿಡುವುದರಿಂದ ಯಶಸ್ಸು(Success) ಹಾಗೂ ಸಮೃದ್ಧಿಯಾಗುವುದು ಖಚಿತ ಎನ್ನಲಾಗುತ್ತದೆ. ಮನೆಗೆ ಕೂಡಾ ಇದೇ ಲಾಜಿಕ್ ಹೊಂದಿಕೆಯಾಗುವಲ್ಲಿ ಅನುಮಾನವಿಲ್ಲ.

Astrology And Traits: ಪ್ರೀತಿ ಓಕೆ, ಕಮಿಟ್ ಆಗೋದ್ಯಾಕೆ ಎನ್ನೋ ರಾಶಿಯವರಿವರು!

ಅದೃಷ್ಟದ ಬಿದಿರು(Lucky bamboo)


ಅದೃಷ್ಟದಾಯಕ ಸಸ್ಯವಾದ್ದರಿಂದಲೇ ಇದು ಉಡುಗೊರೆಯಾಗಿ ಬಹಳಷ್ಟು ಸೇಲ್ ಆಗತ್ತದೆ. ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವನ್ನು ಪ್ರತಿನಿಧಿಸುವ ಕಾರಣದಿಂದಾಗಿ ಇದು ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುವುದು. ಇದು ಮನೆಯ ಒಳಗಡೆ ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುವುದು. ಇದರ ನಿರ್ವಹಣೆ(maintenance) ಮತ್ತು ಆರೈಕೆಯು ತುಂಬಾ ಸುಲಭ. ಫೆಂಗ್ ಶುಯ್ ಪ್ರಕಾರ, ಈ ಸಸ್ಯ ಎಷ್ಟು ಕಾಂಡ ಹೊಂದಿರುತ್ತದೆನ್ನುವುದನ್ನು ಪ್ರಮುಖವಾಗಿ ಗಮನಿಸಬೇಕು. ಏಕೆಂದರೆ 3 ಎಳೆಯ ಬಿದಿರು ಸಂತೋಷ, ಧೀರ್ಘಾಯಸ್ಸು ಹಾಗೂ ಸಮೃದ್ಧಿಯನ್ನು ಸೂಚಿಸುತ್ತದೆ. 5 ಎಳೆಗಳು ಹಣಕ್ಕಾಗಿ, 6 ಎಳೆಗಳು ಅದೃಷ್ಟಕ್ಕಾಗಿ, ಏಳು ಕಾಂಡದ್ದು ಆರೋಗ್ಯ, 8 ಎಳೆಗಳಿದ್ದರೆ ಬೆಳವಣಿಗೆ  ಹಾಗೂ 10 ಎಳೆಗಳಿದ್ದರೆ ಸಂಪೂರ್ಣತೆಯನ್ನು ಸೂಚಿಸುತ್ತದೆ. ನಿಮಗೇನಾದರೂ 21 ಕಾಂಡಗಳ ಬಿದಿರು ದೊರಕಿತೆಂದರೆ ಆರೋಗ್ಯ ಜೊತೆಗೆ ಅತ್ಯುತ್ತಮ ಸಂಪತ್ತು ಕೂಡಾ ನಿಮ್ಮದಾಗುವುದು.

ತುಳಸಿ(Tulsi)


ತುಳಸಿಯು ಆ್ಯಂಟಿಸೆಪ್ಟಿಕ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ ಎಂಬುದು ಎಲ್ಲ ಭಾರತೀಯರಿಗೂ ಗೊತ್ತು. ಇದರ ಜೊತೆಗೆ ಇದು ಆ್ಯಂಟಿ ಡಿಪ್ರೆಸೆಂಟ್(Anti depressant) ಕೂಡಾ ಹೌದು. ಎಂದರೆ, ಖಿನ್ನತೆ ವಿರುದ್ಧ ಕೂಡಾ ಹೋರಾಡುತ್ತದೆ. ಅದಕ್ಕಾಗಿಯೇ ಭಾರತೀಯರ ಮನೆಯಂಗಳದಲ್ಲಿ ತುಳಸಿ ಉತ್ತಮ ಸ್ಥಾನ ಪಡೆದಿದೆ. ವಾಸ್ತು ಪ್ರಕಾರ ಇದು ಮನೆಗೆ ಪ್ರೀತಿ, ಆಸ್ತಿ, ಅದೃಷ್ಟ ಹಾಗೂ ಆರೋಗ್ಯ ತರುತ್ತದೆ. ಜೊತೆಗೆ, ಕೆಲವೊಂದು ರೀತಿಯ ಕ್ರಿಮಿಕೀಟಗಳನ್ನು ಕೂಡಾ ಮನೆಯೊಳಗೆ ಬರದಂತೆ ನೋಡಿಕೊಳ್ಳುತ್ತದೆ. ಕಡಿಮೆ ಪ್ರಯತ್ನದಲ್ಲಿ ಆರ್ಥಿಕವಾಗಿ ಹೆಚ್ಚು ಯಶಸ್ಸು ಸಾಧಿಸಲು ತುಳಸಿ ನೆರವಾಗುತ್ತದೆ.
 

click me!