
ರಾಶಿಚಕ್ರಗಳಿಂದಲೇ ಸ್ವಭಾವಗಳನ್ನು ಚೆನ್ನಾಗಿ ತಿಳಿದುಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹೇಳಿರುವ ಆಧಾರದ ಮೇಲೆ ಪ್ರತಿ ರಾಶಿಯವರಲ್ಲಿ ವಿಶಿಷ್ಟ ಗುಣ ಇರುತ್ತದೆ. ಆ ಗುಣಗಳು ಒಳ್ಳೆಯದ್ದೇ ಆಗಿರಬಹುದು ಅಥವಾ ಕೆಟ್ಟದ್ದೂ ಆಗಿರಬಹುದು. ರಾಶಿ ಚಕ್ರಗಳಿಂದ ಎಲ್ಲವನ್ನು ತಿಳಿಯಬಹುದಾಗಿದೆ. ಮೃದುವಾಗಿ ಮಾತನಾಡಿ ವ್ಯಕ್ತಿಯ ವಿಷಯಗಳನ್ನು ಬಾಯಿ ಬಿಡಿಸುವ ಸಾಕ್ಷಿಗಳೂ ಇವೆ. ಹಾಗಾದರೆ ಯಾವ್ಯಾವ ರಾಶಿಗಳು ಆ ಪಟ್ಟಿಯಲ್ಲಿ ಸೇರಿವೆ ಎಂಬುದನ್ನು ತಿಳಿಯೋಣ....
ಮಿಥುನ ರಾಶಿ (Gemini)
ಈ ರಾಶಿಯ ಅಧಿಪತಿ ದೇವರು ಬುಧ (Mercury) ಗ್ರಹವಾಗಿದೆ. ಹಾಗಾಗಿ ಈ ರಾಶಿಯವರು ಬುದ್ಧಿವಂತರು ಮತ್ತು ಶೀಘ್ರವಾಗಿ ನಿರ್ಣಯವನ್ನು ಕೈಗೊಳ್ಳುವವರು ಆಗಿರುತ್ತಾರೆ. ಮಿಥುನ ರಾಶಿಯ ವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದು ಬಲು ಕಷ್ಟ. ಯಾವ ಸಮಯದಲ್ಲಿ ಏನು ಯೋಚಿಸುತ್ತಾರೆ ಎಂಬುದನ್ನು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಈ ವ್ಯಕ್ತಿಗಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳ ವಿಶೇಷತೆಯೇನೆಂದರೆ ಹೇಗಾದರೂ ಮಾಡಿ ತಮ್ಮ ಮಾತನ್ನು ಕೇಳುವಂತೆ ಮಾಡುತ್ತಾರೆ. ಬೇರೆಯವರಿಂದ ಏನಾದ್ರೂ ಕೆಲಸ ಆಗಬೇಕಿದ್ದಲ್ಲಿ ಮಧುರವಾಗಿ ಮಾತನಾಡುತ್ತಾರೆ. ಈ ಗುಣದಿಂದಲೇ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು (Success) ಕಾಣುತ್ತಾರೆ.
ಕರ್ಕಾಟಕ ರಾಶಿ (Cancer)
ಈ ರಾಶಿಯ ವ್ಯಕ್ತಿಗಳು ಹೆಚ್ಚು ಪ್ರಾಮಾಣಿಕರು (Prompt) ಮತ್ತು ಸಹಾನುಭೂತಿಯುಳ್ಳವರು ಆಗಿರುತ್ತಾರೆ. ಇತರರ ನೋವು (Pain ) ಮತ್ತು ದುಃಖಗಳಿಗೆ ಸಾಂತ್ವನ ನೀಡುವಲ್ಲಿ ಮೊದಲಿಗರಾಗಿರುತ್ತಾರೆ. ಈ ರಾಶಿಯ ಅಧಿಪತಿ ದೇವರು ಚಂದ್ರ (Moon) ಗ್ರಹವಾಗಿದೆ (Planet). ಹಾಗಾಗಿ ಇವರು ಸೂಕ್ಷ್ಮಮತಿಗಳು ಆಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ತಮ್ಮ ಕಾರ್ಯ ಕುಶಲತೆಯಿಂದ ಪ್ರಶಂಸೆಗೆ ಒಳಗಾಗುತ್ತಾರೆ. ಇದೇ ಕುಶಲತೆಯಿಂದಲೇ (Skill) ಸಮಯ ಬಂದಾಗ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.
ಇದನ್ನೂ ಓದಿ: ಮನಸ್ತಾಪಗಳ ಬೇಗ ಮರೆಯುವ ಮುದ್ದು ಮನಸಿನ ರಾಶಿಗಳಿವು
ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳು ಸೂಕ್ಷ್ಮ ಸ್ವಭಾವದವರು ಮತ್ತು ದೃಢ ನಿಶ್ಚಯ ಕೈಗೊಳ್ಳುವವರು ಆಗಿರುತ್ತಾರೆ. ಅಷ್ಟೆ ಅಲ್ಲದೆ ಯಾವುದೇ ವಿಷಯದಲ್ಲಾದರೂ ಸತ್ಯವನ್ನು ತಿಳಿದುಕೊಳ್ಳುವವರೆಗೂ ಸುಮ್ಮನೆ ಕೂರುವುದಿಲ್ಲ. ಈ ರಾಶಿಯ ಅಧಿಪತಿ ದೇವರು ಮಂಗಳ ಗ್ರಹವಾಗಿರುವ ಕಾರಣ ಈ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ (Confidence) ಹೆಚ್ಚಾಗಿರುತ್ತದೆ. ಈ ರಾಶಿಯ ವ್ಯಕ್ತಿಗಳು ಮಾತಿನಿಂದಲೇ ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಮಾತಿನಿಂದಲೇ ಇತರರಿಂದ ಕೆಲಸ ಮಾಡಿಸಿಕೊಳ್ಳುವ ಬುದ್ದಿವಂತಿಕೆಯನ್ನು (Intelligent) ಇವರು ಹೊಂದಿರುತ್ತಾರೆ. ಈ ವ್ಯಕ್ತಿಗಳ ಈ ಗುಣವೇ ಕಾರ್ಯ ಕ್ಷೇತ್ರದಲ್ಲಿ ಸಫಲತೆಯನ್ನು ಕಾಣಲು ಸಹಾಯಕವಾಗುತ್ತದೆ.
ಧನು ರಾಶಿ (Sagittarus)
ಈ ರಾಶಿಯ ವ್ಯಕ್ತಿಗಳು ತಮ್ಮ ಕೆಲಸವನ್ನು ಇತರರಿಂದ ಮಾಡಿಸಿಕೊಳ್ಳುವಲ್ಲಿ ನಿಸ್ಸೀಮರು. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ತಮ್ಮ ಗುರಿಯನ್ನು ಸಾಧಿಸಲು ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಈ ರಾಶಿಯ ಅಧಿಪತಿ ದೇವರು ಗುರು (Jupiter) ಗ್ರಹವಾಗಿದೆ. ಯಾವುದಾದರೂ ಕೆಲಸವನ್ನು ಮಾಡಬೇಕೆಂದು ನಿರ್ಣಯಿಸಿಕೊಂಡರೆ, ಆ ಕೆಲಸವನ್ನು ಮುಗಿಸುವವರೆಗೂ ಸುಮ್ಮನೆ ಕೂರುವುದಿಲ್ಲ. ಈ ವ್ಯಕ್ತಿಗಳ ತುಂಬಾ ಆಶಾವಾದಿಗಳಾಗಿರುತ್ತಾರೆ, ಯಾರಿಂದ ಬೇಕಾದರೂ ಸಹ ಕೆಲಸವನ್ನು ಮಾಡಿಸಿಕೊಳ್ಳುವ ಸಾಮರ್ಥ್ಯವನ್ನು (capacity) ಹೊಂದಿರುತ್ತಾರೆ.
ಇದನ್ನೂ ಓದಿ: ಗುಲಾಬಿ ಹೀಗೆ ಬಳಸಿದ್ರೆ ನಿಮ್ಮೆಡೆ ಹರಿಯುವುದು ದುಡ್ಡೋ ದುಡ್ಡು!
ಮೀನ ರಾಶಿ (Pisces)
ಈ ರಾಶಿಯ ಅಧಿಪತಿ ದೇವರು ಗುರು ಗ್ರಹವಾಗಿದೆ. ಈ ವ್ಯಕ್ತಿಗಳು ತುಂಬ ಪ್ರತಿಭಾವಂತರಾಗಿರುತ್ತಾರೆ. ಈ ವ್ಯಕ್ತಿಗಳು ತುಂಬ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ವ್ಯಕ್ತಿಗಳು ತುಂಬಾ ಸಿಹಿಯಾಗಿ ಮಾತನಾಡುತ್ತಾರೆ. ಈ ರಾಶಿಯ ವ್ಯಕ್ತಿಗಳ ಮಾತಿನಿಂದಲೇ ಎಲ್ಲರ ಹೃದಯವನ್ನು (Heart) ಗೆಲ್ಲುತ್ತಾರೆ.