Chikkamagaluru ಭಕ್ತಿಯಲ್ಲಿ ಭಾವಪರವಶರಾದ ಸಿಎಂ ಬೊಮ್ಮಾಯಿ

By Suvarna News  |  First Published Apr 19, 2022, 9:23 PM IST
  • ಹರಿಹರಪುರ ಶ್ರೀ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ 
  • ಇದೇ 10ರಿಂದ ಆರಂಭವಾದ ಮಹಾಕುಂಭಾಭೀಷೇಕದ ಕಾರ್ಯಕ್ರಮ 
  • 15 ದಿನಗಳ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಏ.19): ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಕಳೆದ 9 ದಿನಗಳಿಂದ ಸಂಭ್ರದ ವಾತಾವರಣ ನಿರ್ಮಾಣವಾಗಿದೆ. ಹರಿಹರಪುರ ಶ್ರೀ ಮಠದಲ್ಲಿ (Hariharapura mutt) ಅದ್ದೂರಿಯಾಗಿ  ಮಹಾಕುಂಭಾಭಿಷೇಕದ ಅಂಗವಾಗಿ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಏಪ್ರೀಲ್ 10ರಿಂದ 24ರ ವರೆಗೂ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುಲಿದೆ. ಲೋಕಕಲ್ಯಾಣ ಕಾರ್ಯಕ್ರಮದಲ್ಲಿ  ಭಕ್ತರ ಶದ್ಧಾ ಭಕ್ತಿ, ಸಡಗರ,ಸಂಭ್ರಮ ಎಲ್ಲೆ ಮೀರಿದೆ. ಹರಿಹರಪುರ ಮಠದ ಶ್ರೀ  ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ  ಕುಂಭಾಭಿಷೇಕದ ಅಂಗವಾಗಿ  ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇಂದು ನಡೆದ ಧಾರ್ಮಿಕ ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಯಿ  ಭಾಗಿಯಾಗಿ ಧಾರ್ಮಿಕ ಸಂದೇಶವನ್ನು ಸಾರಿದರು.

Tap to resize

Latest Videos

ಹರಿಹರಪುರದ ನೂತನ ದೇವಸ್ಥಾನದಲ್ಲಿ  ಭಕ್ತಿಯಲ್ಲಿ ಭಾವಪರವಶರಾದ ಸಿಎಂ: ಶೃಂಗೇರಿಯಿಂದ ನೇರವಾಗಿ ಹರಿಹರಪುರದಲ್ಲಿ ನಡೆಯುತ್ತಿರುವ ಮಹಾಕುಂಭಾಭೀಷೇಕದ ಕಾರ್ಯಕ್ರಮಕ್ಕೆ ಆಗಮಿಸಿ ಮಠಕ್ಕೆ ಭೇಟಿ ನೀಡಿದ್ರು. ಲಕ್ಷ್ಮಿ ನರಸಿಂಹಸ್ವಾಮಿ, ಶಾರದೆ ದೇವಿ,ಆದಿ ಶಂಕರಚಾರ್ಯರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ದೇವರಿಗೆ ಕೈ ಮುಗಿದು ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದಲ್ಲಿ  ದೇವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ರಾಜ್ಯದ ಜನತೆ ನೆಮ್ಮದಿ, ಸುಭೀಕ್ಷೆ ಗಾಗಿ ಪ್ರಾರ್ಥನೆ ಸಲ್ಲಿಸಿದರು. ನೂತನ ದೇವಸ್ಥಾನ ನಿರ್ಮಾಣದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ದೇವಾಲಯದಲ್ಲಿ ಕೆಲ ಹೊತ್ತು ಭಕ್ತಿಯಲ್ಲಿ ಬಾವ ಪರವಶರಾದರು. ತದನಂತರ ಶ್ರೀ ಮಠದಲ್ಲಿ ನಡೆಯುತ್ತಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

 

ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶ್ರೀಮಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್ ಇವರ ವತಿಯಿಂದ ಆಯೋಜಿಸಿರುವ ಮಹಾಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆನು. pic.twitter.com/8YIEluZ628

— Basavaraj S Bommai (@BSBommai)

ಹರಿಹರಪುರದಲ್ಲಿ ಕುಂಭಾಭಿಷೇಕದ ಅಂಗವಾಗಿ  ಧಾರ್ಮಿಕ ಕಾರ್ಯಕ್ರಮ: ಕಳೆದ 12 ವರ್ಷಗಳ ಹಿಂದೆ ಶಾರದಾ ಪರಮೇಶ್ವರಿ , ಲಕ್ಷ್ಮಿ ನರಸಿಂಹ, ಆಂಜನೇಯ ದೇವಾಲಯ ಪುನರ್ ನಿರ್ಮಾಣದ ಕಾರ್ಯ ಸಂಪನ್ನವಾಗಿತ್ತು. ದೇವಸ್ಥಾನಗಳ ಪುನರ್ ಪ್ರತಿಷ್ಠಾನದ ಅಂಗವಾಗಿ ಹರಿಹರಪುರ ಶ್ರೀ ಮಠದಲ್ಲಿ  ಮಹಾಕುಂಭಾಭಿಷೇಕವು ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠದಲ್ಲಿ ವೈಭವದಿಂದ ನಡೆದಿದೆ.ಇದೀಗ  ಹರಿಹರಪುರ ಮಠದ ಶ್ರೀ  ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ  ಕುಂಭಾಭಿಷೇಕದ ಅಂಗವಾಗಿ  ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ಹುಬ್ಬಳ್ಳಿ ಗಲಾಟೆ ಪ್ರಕರಣ, ಬಾಗಲಕೋಟೆಯಲ್ಲಿ ಸಚಿವ ಸುನೀಲಕುಮಾರ್ ವಾರ್ನಿಂಗ್

ಇದೇ ತಿಂಗಳು 10ರಿಂದ ನಿತ್ಯವೂ ಹೋಮ ಹವನಗಳು ನಡೆಯುತ್ತಿದ್ದು ಇದೇ ತಿಂಗಳು 24ರಂದು ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮವೂ ಸಂಪನ್ನವಾಗಲಿದೆ. ಇಂದು ಕೂಡ ಕೋಟಿ ಕುಂಕುಮಾರ್ಚನೆ ನಡೆಯಿತು. ಶಾರದಾ ಲಕ್ಷ್ಮಿನರಸಿಂಹ ದೇವರ ಸಮ್ಮುಖದಲ್ಲಿ 1000ಕ್ಕೂ ಹೆಚ್ಚು ಮಹಿಳೆಯರು ಪುರೋಹಿತರು,ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಕುಂಕುಮಾರ್ಚನೆ ಮಾಡಿದ್ರು.ತದನಂತರ ನಡೆದ ಧಾರ್ಮಿಕ ಕಾರ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಯಿ  ಭಾಗಿಯಾದ್ರು..

 ಮಠಕ್ಕೆ ನಾನು ಸಿಎಂ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ : ಶೃಂಗೇರಿ ಶಾರದಾಂಬೆ ಹಾಗೂ ಹರಿಹರಪುರ ಮಠದ ಶಾರದಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಂದ ರಾಜ್ಯವನ್ನ ಮುನ್ನೆಡೆಸುವ ಹೊಸ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹರಿಹರಪುರ ಮಠದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತಾಡಿ ಪೂಜ್ಯರು ಕೇವಲ ಮಠವನ್ನ ಮಾತ್ರ ಕಟ್ಟದೆ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜನರ ಮನಸ್ಸನ್ನ ಕಟ್ಟುತ್ತಿದ್ದಾರೆ ಎಂದರು.

Belagavi ಅಕ್ರಮ ಮರಳು ತೆರವಿಗೆ ಆಗ್ರಹಿಸಿದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡನ ಜೀವ ಬೇದರಿಕೆ!

ಸಮಾಜ ಆದರ್ಶವಾಗಿ ಇರಬೇಕಾದರೆ ದೈವ ಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಇರಬೇಕು, ಅದು ಬಹಳ ಮುಖ್ಯ. ಉತ್ಕ್ರಷ್ಟವಾದ ಪ್ರೀತಿಯೇ ಭಕ್ತಿ ಹಾಗೂ ಪವಿತ್ರ ಎಂದು ಹೇಳಿದರು. ನಾವು ದೇವರ ಬಳಿ ಅಂತಸ್ತು- ಐಶ್ವರ್ಯ ಕೇಳುತ್ತೇವೆ. ಸ್ವಾಮೀಜಿಗಳು ಲೋಕಕ್ಕಾಗಿ ಕೇಳಿ ಕೊಳ್ಳುತ್ತಾರೆ. ನಿಸ್ವಾರ್ಥ ಭಕ್ತಿಯ ಪ್ರಪಂಚದಲ್ಲಿ ನೀವು ಇದ್ದೀರಾ ಎಂದರು.  ಭಗವಂತನಿಗೆ ಯಾರಿಗೆ, ಯಾವಾಗ, ಏನು ಕೊಡಬೇಕು ಎಂಬುದು ಗೊತ್ತಿದೆ. ಭಗವಂತ ಜನ್ಮ ನೀಡಿದ್ದಾನೆ. ನಾವು ಏಕೆ ಹುಟ್ಟಿದ್ದೇವೆ. ಎಂಬುದಕ್ಕೆ ಉತ್ತರ ನಮ್ಮೊಳಗೆ ಇದೆ. ನಾವು ಅದನ್ನ ತಿಳಿದುಕೊಂಡರೆ ಜೀವನ ಸಾರ್ಥಕ ಎಂದರು. ಗುರುವಿನ ಬಳಿ ಭಕ್ತಿಯಲ್ಲಿ ಕರಗಿ ಲೀನವಾಗಬೇಕು ಎಂದರು. ನಾನು ಎಂಬ ಅಸ್ತಿತ್ವವನ್ನ ವಿಸೃಜನೆ ಮಾಡಬೇಕು. ನಾನು ಎಂಬುದು ನಿಸರ್ಗದ ಸಣ್ಣ ಕಣ. ಯಾರೂ ಕೂಡ ಸರ್ವ ಸ್ವತಂತ್ರರಾಗಿ ಹುಟ್ಟಲ್ಲ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗುರು ಎಲ್ಲರ ಸಹಾಯದಲ್ಲಿ ಬೆಳೆಯುತ್ತಿದ್ದೇವೆ. ಇದು ನಮ್ಮ ಅಕೌಂಟ್ ನಲ್ಲಿ ಕ್ರೆಡಿಟ್ ಆಗಿರುತ್ತೆ ಎಂದರು. 

ಶಂಕರಾಚಾರ್ಯರ ಪರಂಪರೆ, ಶಾರದೆ, ಲಕ್ಷ್ಮಿನರಸಿಂಹರ ಆಶೀರ್ವಾದ ಇರಬೇಕು. ಸಮಾಜದಲ್ಲಿ ಶಾಂತಿ, ಸಹಬಾಳಿತ್ವ ಮುಡಿಸಲು ಮಠದ ಪಾತ್ರ ಬಹಳ ಮುಖ್ಯ. ಅವರು ಕರ್ತವ್ಯ ಮಾಡುತ್ತಿರುವುದರಿಂದ ನೈತಿಕತೆ ಉಳಿದಿದೆ. ಮಠದಿಂದ ಸಮಾಜದ ಪರಿವರ್ತನೆ, ಬದಲಾವಣೆ ಕಾರ್ಯ ನಡೆಯಲಿ. ಸ್ವರ್ಗ ಎಲ್ಲೂ ಇಲ್ಲ, ಇಲ್ಲೆ ಇದೆ. ನಮ್ಮೊಳಗೆ ಇದೆ. ಅನುಭವಿಸಬೇಕಷ್ಟೆ ಎಂದರು.ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ವರ್ಕ್ ಇಸ್ ವರ್ಶಿಪ್. ನ್ಯಾಯ-ನೀತಿಯ ಸಮಾಜ ಸ್ಥಾಪನೆ ಆಗಬೇಕು. ಶಂಕರಾಚಾರ್ಯರ ವಿಚಾರ, ಆಚಾರ-ತತ್ವಗಳನ್ನು ಅರ್ಥ ಮಾಡಿಕೊಂಡು, ಬದುಕಿನಲ್ಲಿ ಕಿಂಚಿತ್ತು ಅಳವಡಿಸಿಕೊಂಡಲ್ಲಿ ಸಮಾಜ ಸುಧಾರಣೆ ಆಗುತ್ತದೆ ಎಂದರು. 

ನಾನು ಸಿಎಂ ಆಗಿ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ಶ್ರದ್ಧಾಪೂರ್ವಕವಾಗಿ ತಲೆ ಭಾಗಿ ಶಾರದೆಗೆ ನಮಸ್ಕಾರ ಮಾಡುತ್ತೇನೆ. ಮಠದ ಮುಂದಿನ ಎಲ್ಲಾ ಕಾರ್ಯಕ್ರಮಕ್ಕೂ ನಮ್ಮ ಸರ್ಕಾರದ ಬೆಂಬಲ ಇರುತ್ತದೆ ಎಲ್ಲರಿಗೂ ಶುಭವಾಗಲಿ ಎಂದರು. ಒಟ್ಟಾರೆ ಮಲೆನಾಡಿನ ಭಾಗವಾದ ಹರಿಹರಪುರದಲ್ಲಿ ನಡೆಯುತ್ತಿರುವ ಮಹಾಕುಂಭಾಭೀಷೇಕದ ಕಾರ್ಯಕ್ರಮವೂ ಹಬ್ಬದ ವಾತಾವರಣವನ್ನೇ ಸೃಷ್ಠಿ ಮಾಡಿದೆ. ಕುಂಭಾಭೀಷೇಕದ ಕಾರ್ಯಕ್ರಮದ ನಿಮಿತ್ತ ನಾಡಿನ ಗಣ್ಯ ವ್ಯಕ್ತಿಗಳು , ರಾಜಕಾರಣಿಗಳು, ಶ್ರೀ ಸಾಮಾನ್ಯರು ಮಠಕ್ಕೆ ಆಗಮಿಸಿ ದೇರ ದರ್ಶನವನ್ನು ಪಡೆಯುತ್ತಿದ್ದಾರೆ.

click me!