ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಪಾದಾಂಕವನ್ನು ಕಂಡುಹಿಡಿಯಲಾಗುತ್ತದೆ. ಪಾದಾಂಕದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ, ಸ್ವಭಾವ, ವ್ಯಕ್ತಿತ್ವವನ್ನು ತಿಳಿಯಲಾಗುತ್ತದೆ. ಆತಂಕ 6ರಲ್ಲಿ ಜನಿಸಿದವರ ಆರ್ಥಿಕ ಸ್ಥಿತಿ, ಆರೋಗ್ಯ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ತಿಳಿಯೋಣ....
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಜಾತಕವನ್ನು ನೋಡಿ, ಇಲ್ಲವೇ ರಾಶಿ (Zodiac), ನಕ್ಷತ್ರ (Star), ಹುಟ್ಟಿದ ಘಳಿಗೆ ಇವುಗಳನ್ನು ಆಧರಿಸಿ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಸಲಾಗುತ್ತದೆ. ಹಾಗೆಯೇ ಜ್ಯೋತಿಷ ಶಾಸ್ತ್ರದ ಭಾಗವಾದ ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕದ (Birth date) ಆಧಾರದ ಮೇಲೆ ಭವಿಷ್ಯದ ವಿಚಾರಗಳನ್ನು ತಿಳಿಸಲಾಗುತ್ತದೆ. ಅಷ್ಟೇ ಅಲ್ಲದೆ ಹುಟ್ಟಿದ ದಿನಾಂಕಕ್ಕೆ ಬರುವ ಪಾದಾಂಕವನ್ನು ತಿಳಿದು ಆ ಪಾದಾಂಕದ ಆಧಾರದ ಮೇಲೆ ಭವಿಷ್ಯದ ವಿಚಾರಗಳನ್ನು (Future prediction) ನಿಖರವಾಗಿ ತಿಳಿಸಲಾಗುತ್ತದೆ. ಅಂದರೆ ಆ ವ್ಯಕ್ತಿಯ ಶೈಕ್ಷಣಿಕ ವಿಚಾರ, ವೃತ್ತಿಕ್ಷೇತ್ರ, ಆರೋಗ್ಯ, ಆರ್ಥಿಕ ಸ್ಥಿತಿ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆಯೂ ತಿಳಿಯಬಹುದಾಗಿದೆ. ಪಾದಾಂಕ 6ರಲ್ಲಿ ಜನಿಸಿದ ವ್ಯಕ್ತಿಗಳ 2022ರ ವಾರ್ಷಿಕ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿಯೋಣ...
ಪಾದಾಂಕವನ್ನು ತಿಳಿಯುವುದು ಹೇಗೆ?
ಹುಟ್ಟಿದ ದಿನಾಂಕವನ್ನು ಕೂಡಿದಾಗ ಬಂದ ಸಂಖ್ಯೆಯನ್ನು ಪಾದಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 4 ಎಂದಾದರೆ ಪಾದಾಂಕ 4 ಆಗುತ್ತದೆ. ಅದೇ ಜನಿಸಿದ ದಿನಾಂಕವು 14 ಆಗಿದ್ದರೆ ಒಂದು ಮತ್ತು ನಾಲ್ಕನ್ನು ಕೂಡಿದಾಗ ಬರುವ ಸಂಖ್ಯೆ ಐದು (Five) (1 + 4= 5) ಇದು ಪಾದಾಂಕವಾಗಿರುತ್ತದೆ. ಪಾದಾಂಕದಿಂದ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ (Numerology) ಹೇಳುತ್ತದೆ.
ಇದನ್ನು ಓದಿ: Marriage Horoscope: ನಿಮ್ಮದು ಲವ್ ಮ್ಯಾರೇಜಾ, ಆರೇಂಜ್ಡ್ ಮ್ಯಾರೇಜಾ? ಜಾತಕ ಏನ್ ಹೇಳತ್ತೆ?
ಪಾದಾಂಕ 6ರ (Six) ತಾರೀಖುಗಳು ಯಾವುವು?
ಪಾದಾಂಕ 6ರ ದಿನಾಂಕದ ಬಗ್ಗೆ ಗಮನಿಸುವುದಾದರೆ, ಯಾವುದೇ ತಿಂಗಳ 6, 15 ಮತ್ತು 24ನೇ ತಾರೀಖಿನಂದು ಜನಿಸಿದವರು ಈ ಪಾದಾಂಕಕ್ಕೆ ಸೇರುತ್ತಾರೆ. ಹೀಗಾಗಿ ಈ ತಾರೀಖುಗಳಲ್ಲಿ ಹುಟ್ಟಿದವರ ಬಗ್ಗೆ ಪಾದಾಂಕ 6ರ ಭವಿಷ್ಯವನ್ನು ಗಮನಿಸಿದರೆ ತಿಳಿದುಕೊಳ್ಳಬಹುದಾಗಿದೆ.
ಪ್ರೇಮಿಗಳಿಗೆ ಒಳ್ಳೇ ವರ್ಷ
2022ರಲ್ಲಿ ಪಾದಾಂಕ ಆರರಲ್ಲಿ ಜನಿಸಿದವರಿಗೆ ಉತ್ತಮ ಪರಿಣಾಮ ಕಾಣಸಿಗುತ್ತವೆ. ಈ ವರ್ಷ ಸಂತೋಷ (Happiness) ಮತ್ತು ಸಫಲತೆ (Success) ದೊರೆಯಲಿದೆ. ಈ ವರ್ಷ ಪ್ರೇಮಿಗಳಿಗೆ ಉತ್ತಮವಾದ ವರ್ಷವಾಗಿ ಪರಿಣಮಿಸಲಿದೆ. ವಿವಾಹಿತರಿಗೆ ಸಹ ಈ ವರ್ಷ ಅತ್ಯಂತ ಉತ್ತಮವಾಗಿರಲಿದೆ. ಈ ವರ್ಷ ಸಂಗಾತಿಯ (Partner) ಸಂಪೂರ್ಣ ಬೆಂಬಲ ಮತ್ತು ಪ್ರೀತಿ ದೊರೆಯಲಿದೆ.
ಆರ್ಥಿಕ ಸ್ಥಿತಿ ಉತ್ತಮ
ಈ ವರ್ಷದಲ್ಲಿ ಪಾದಾಂಕ 6ರಲ್ಲಿ ಜನಿಸಿದವರ ಆರ್ಥಿಕ ಸ್ಥಿತಿ (Economy) ಉತ್ತಮವಾಗಿರಲಿದೆ. ಈ ವರ್ಷ ಅನೇಕ ಮೂಲಗಳಿಂದ ಧನ ಲಾಭವಾಗುವ (Money) ಸಾಧ್ಯತೆಯು ಸಹ ಇದೆ. ಉದ್ಯೋಗಿಗಳಿಗೆ ಈ ವರ್ಷ ಹೊಸ ಹೊಸ ಅವಕಾಶಗಳು ದೊರಕುವ ಸಾಧ್ಯತೆ ಇದೆ. ವರ್ಷದ ಮೊದಲ ತ್ರೈಮಾಸಿಕ (Quarterly) ಅವಧಿಯು ಉದ್ಯೋಗವನ್ನು ಬದಲಾವಣೆ ಮಾಡುವುದಿದ್ದರೆ ಸಮಯ ಉತ್ತಮವಾಗಿರುತ್ತದೆ. ವರ್ಷದ ಮಧ್ಯಭಾಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಆದಾಯ (Income) ಸಹ ಹೆಚ್ಚುವ ಸಾಧ್ಯತೆ ಇದೆ. ವ್ಯಾಪಾರಸ್ಥರು (Business) ಈ ವರ್ಷ ಜಾಗ್ರತೆಯಿಂದ (Care) ಹೆಜ್ಜೆ ಹಾಕುವುದು ಉತ್ತಮ. ಈ ವರ್ಷ ಖರ್ಚು ಹೆಚ್ಚಾಗುವುದು ಮತ್ತು ವ್ಯಾಪಾರದಲ್ಲಿ ಅಂದುಕೊಂಡಷ್ಟು ಲಾಭ ಬರದೇ ಇರುವ ಕಾರಣ, ಖರ್ಚಿನಲ್ಲಿ ನಿಯಂತ್ರಣವಿಡುವುದು ಉತ್ತಮ. ವ್ಯಾಪಾರಸ್ಥರು ತಮ್ಮ ಬುದ್ಧಿವಂತಿಕೆಯಿಂದ (Brilliant) ಸ್ಥಿತಿಯನ್ನು ಸಂಭಾಳಿಸಿಕೊಳ್ಳುತ್ತಾರೆ.
ಇದನ್ನು ಓದಿ: Astrology Tips: ಮಾಘ ಮಾಸದಲ್ಲಿ ಹೀಗೆ ಮಾಡಿದರೆ ವರ್ಷವಿಡೀ ಅದೃಷ್ಟ
ವಿದೇಶಕ್ಕೆ ಹೋಗಲು ಸಕಾಲ
ವಿದ್ಯಾರ್ಥಿಗಳಿಗೆ (Students) ಈ ವರ್ಷ ಅತ್ಯಂತ ಉತ್ತಮವಾಗಿರಲಿದೆ. ಅಂದುಕೊಂಡ ಸಂಸ್ಥೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಒದಗಿ ಆಸೆಗಳು ಈಡೇರುತ್ತವೆ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ (Foreign) ಹೋಗುವವರಿಗೆ ಇದು ಸಕಾಲವಾಗಿದೆ. ಮಿಡಿಯಾ, ಕಲೆ, ಬರವಣಿಗೆ ಮತ್ತು ಡಿಸೈನಿಂಗ್ ಕ್ಷೇತ್ರದವರಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ. ಆರೋಗ್ಯದ (Health) ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ.