Daily Horoscope: ವೃಷಭಕ್ಕೆ ಸ್ಪರ್ಧಿಗಳಿಂದ ಸಮಸ್ಯೆ, ವೃಶ್ಚಿಕಕ್ಕೆ ಗೌರವಾದರ

Published : Jan 27, 2022, 07:13 AM IST
Daily Horoscope: ವೃಷಭಕ್ಕೆ ಸ್ಪರ್ಧಿಗಳಿಂದ ಸಮಸ್ಯೆ, ವೃಶ್ಚಿಕಕ್ಕೆ ಗೌರವಾದರ

ಸಾರಾಂಶ

27 ಜನವರಿ 2022, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷದ ಸಮಸ್ಯೆಗಳು ಈಡೇರಲಿವೆ, ಕುಂಭಕ್ಕೆ ಆಸ್ತಿ ಖರೀದಿ ಯೋಗ

ಮೇಷ(Aries): ನಿಮ್ಮ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದರೆ, ಕುಟುಂಬ ಸದಸ್ಯರ ಮೇಲೆ ವೃಥಾ ಅನುಮಾನ ಮಾಡಿ ಮತ್ತೊಂದು ಸಮಸ್ಯೆ ಮೈ ಮೇಲೆ ಎಳೆದುಕೊಳ್ಳಬೇಡಿ. ಕಚೇರಿಯಲ್ಲಿ ಮೆಚ್ಚುಗೆ ಇರಲಿದೆ. ಖರ್ಚು ವೆಚ್ಚ ಹೆಚ್ಚಬಹುದು. ದತ್ತಾತ್ರೇಯ ಸ್ಮರಣೆ ಮಾಡಿ. 

ವೃಷಭ(Taurus): ವ್ಯಾಪಾರಿಗಳಿಗೆ ಅಸೂಯಾಪರರಿಂದ, ಸ್ಪರ್ಧಿಗಳಿಂದ ತೊಂದರೆಗಳು ಎದುರಾಗಬಹುದು. ಆರೋಗ್ಯ ಚೆನ್ನಾಗಿರಲಿದೆ. ಬೇಗ ಹಣ ಸಂಪಾದಿಸಬೇಕೆಂಬ ಹಪಹಪಿಗೆ ಬಿದ್ದು ಅಡ್ಡ ದಾರಿ ಹಿಡಿಯುವ ಯೋಚನೆಯೂ ಮಾಡಬೇಡಿ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಮಿಥುನ(Gemini): ಕೆಲಸದ ಸ್ಥಳದಲ್ಲಿ ಸವಾಲುಗಳು ಎದುರಾಗಬಹುದು. ತಾಂತ್ರಿಕ ಅಡಚಣೆಗಳು ಉಂಟಾಗಬಹುದು. ಏಕಾಗ್ರತೆ ತಪ್ಪಬಹುದು. ಚಂಚಲತೆ ತಪ್ಪಿಸಿಕೊಳ್ಳಲು ಧ್ಯಾನದ ಮೊರೆ ಹೋಗಿ. ಸುಳ್ಳಾಡಿ ಆಪ್ತರ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ತಂದುಕೊಳ್ಳಬೇಡಿ. ಗುರು ರಾಯರ ಸ್ಮರಣೆ ಮಾಡಿ. 

ಕಟಕ(Cancer): ಆರ್ಥಿಕ ವಿಷಯಗಳ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎರಡೆರಡು ಬಾರಿ ಯೋಚಿಸಿ. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಸ್ನೇಹಿತರೊಂದಿಗೆ ಕಾಲ ಕಳೆಯಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ರಾಘವೇಂದ್ರ ಶತನಾಮಾವಳಿ ಹೇಳಿಕೊಳ್ಳಿ. 

ಸಿಂಹ(Leo): ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಇದ್ದರೂ ದೇಹಾಯಾಸ ಕಾಡಬಹುದು. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ವ್ಯಾಪಾರಿಗಳಿಗೆ ಮಿಶ್ರ ಫಲ ದೊರೆಯಲಿದೆ. ಸಂಗಾತಿಯೊಂದಿಗೆ ಜಗಳ ಆಡುವಾಗ ಪದ ಬಳಕೆ ಬಗ್ಗೆ ಎಚ್ಚರ ಇರಲಿ. ಮಾತು ಮಿತವಾಗಿದ್ದರೆ ಒಳಿತು. ರಾಮ ಸ್ಮರಣೆ ಮಾಡಿ. 

ಕನ್ಯಾ(Virgo): ಬಹಳ ಸಮಯದಿಂದ ನಿಂತಿದ್ದ ಕೆಲಸ ಚುರುಕು ಪಡೆಯಬಹುದು. ಪೋಷಕರ ಸಹಕಾರದಿಂದ ಗುರಿ ಸಾಧನೆಯತ್ತ ಸಾಗುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಎದುರಾಗಬಹುದು. ಸ್ವಂತ ಉದ್ಯಮ ಆರಂಭಿಸಲು ಶುಭದಿನ. ಬಡವರಿಗೆ ವಸ್ತ್ರ ದಾನ ಮಾಡಿ. 

ತುಲಾ(Libra): ದೂರ ಪ್ರಯಾಣ ಯೋಗ ಬರಲಿದೆ. ಮನೆ ಹಿರಿಯರ ಆರೋಗ್ಯದಲ್ಲಿ ಏರುಪೇರಾಗಬಹುದು. ಕೈಗೊಂಡ ಕಾರ್ಯಗಳಿಗೆ ಅಡೆ ತಡೆ ಉಂಟಾಗಬಹುದು. ಮನೆ ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸು ಖರ್ಚು ಹೆಚ್ಚಲಿದೆ. ತಾಯಿಯ ಕೈಯಿಂದ ಸಿಹಿ ತಿನ್ನಿಸಿಕೊಳ್ಳಿ. 

Energy Centers: ನಾವೇಕೆ ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು?

ವೃಶ್ಚಿಕ(Scorpio): ಮಾತೇ ಮುತ್ತು, ಮಾತೇ ಮೃತ್ಯು ಎಂಬುದನ್ನು ನೆನಪಲ್ಲಿಡಿ. ಸಾಮಾಜಿಕವಾಗಿ ಗೌರವಾದರಗಳು ಹೆಚ್ಚಲಿವೆ. ವಿವಿಧ ಮೂಲಗಳಿಂದ ಹಣಕಾಸು ಬರಲಿದೆ. ಮತ್ತೊಬ್ಬರ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗಿ ದ್ವೇಷ ಕಟ್ಟಿ ಕೊಳ್ಳಬೇಡಿ. ಗಣಪತಿ ಸ್ಮರಣೆ ಮಾಡಿ. 

ಧನುಸ್ಸು(Sagittarius): ಯಾವ ಯೋಚನೆಯಿಂದ ಕೆಲಸಕ್ಕೆ ಕೈ ಹಾಕಿದರೂ ಸರಿ ಹೋಗದೆ ಮಾನಸಿಕ ಒತ್ತಡ ಹೆಚ್ಚಬಹುದು. ದ್ವೇಷಿಸುವವರ ಕಾಟ ಹೆಚ್ಚಲಿದೆ. ವಿವಾಹಕ್ಕೆ ಸಂಬಂಧ ಕೂಡಿ ಬರುವುದು. ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಮಾತಿನ ಮೋಡಿಯಿಂದ ಜನರನ್ನು ಗೆಲ್ಲುತ್ತೀರಿ. ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಬುದ್ಧಿಕೌಶಲದಿಂದ ಉದ್ಯೋಗದಲ್ಲಿ ಭಡ್ತಿ ದೊರೆಯುವುದು. ಸರ್ಕಾರಿ ನೌಕರರ ತೊಂದರೆಗಳು ನಿವಾರಣೆಯಾಗುವುವು. ಉನ್ನತ ವ್ಯಾಸಂಗಕ್ಕೆ ವಿದೇಶ ಪ್ರಯಾಣ ಯೋಗವಿದೆ. ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡಿ. 

Diamond Astrology: ಕೊಳ್ಳುವ ಮೊದಲು ನಿಮಗೆ ವಜ್ರ ಆಗಿ ಬರುತ್ತದೆಯೇ ಇಲ್ಲವೇ ತಿಳಿಯಿರಿ..

ಕುಂಭ(Aquarius): ವಸ್ತು, ವಾಹನ, ಆಸ್ತಿ ಖರೀದಿ ಯೋಗವಿದೆ. ಆಸ್ತಿ ಖರೀದಿ ಇಲ್ಲವೇ ಮಾರಾಟದ ವ್ಯವಹಾರ ಕುದುರುವುದು. ವೃತ್ತಿ ಕೌಶಲ್ಯದಿಂದ ಅಸಾಧ್ಯವಾದುದನ್ನೂ ಸಾಧಿಸಿ ಸೈ ಎನಿಸಿಕೊಳ್ಳುವಿರಿ. ಪರೋಪಕಾರ ಬುದ್ಧಿಯಿಂದ ಜನ ಮೆಚ್ಚುಗೆ ಗಳಿಸುವಿರಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಮೀನ(Pisces): ವಾಹನಗಳ ವೇಗದ ಚಾಲನೆ ಬೇಡವೇ ಬೇಡ. ಅತಿಯಾದ ಆತ್ಮವಿಶ್ವಾಸ ಯಾವುದಕ್ಕೂ ಒಳ್ಳೆಯದಲ್ಲ. ಹಣ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಯೋಚಿಸಿ. ಪಾಲುದಾರಿಕೆ ಕೆಲಸಗಳ ಬಗ್ಗೆ ಎಚ್ಚರ ಅಗತ್ಯ. ಹಸುವಿಗೆ ಹುಲ್ಲು ತಿನ್ನಿಸಿ. 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!