ಈ ನಾಲ್ಕು ರಾಶಿಗಳಿಂದ Break up ನೋವನ್ನು ಸಹಿಸೋದು ಸಾಧ್ಯವೇ ಇಲ್ಲ..

By Suvarna NewsFirst Published Jan 27, 2022, 9:19 AM IST
Highlights

ಪ್ರೀತಿಯ ವಿಷಯದಲ್ಲಿ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಲ್ಲಿ ಇರುತ್ತದೆ. ಬ್ರೇಕ್ ಅಪ್ ಆದಾಗ ಕೆಲವು ರಾಶಿಯವರು ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಮೂವ್ ಆನ್ ಆಗುತ್ತಾರೆ. ಆದರೆ ಕೆಲವು ರಾಶಿಯ ವ್ಯಕ್ತಿಗಳು ಬ್ರೇಕಪ್ ಆದಾಗ ಅದರಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ.

ಪ್ರೀತಿ (Love) ಮಾಡೋರು ಮದುವೆಯಾದರೆ (Marriage) ಎಲ್ಲವೂ ಓಕೆ. ಆದರೆ, ಪ್ರೀತಿ ಮಾಡಿದವರೆಲ್ಲ ಮದುವೆ ಆಗಿಬಿಡುತ್ತಾರೆಂದೇನಿಲ್ಲ. ಕೆಲವೊಮ್ಮೆ ತುಂಬಾ ಪ್ರೀತಿ ಮಾಡಿದವರೂ ಸಹ ಒಂದಲ್ಲ ಒಂದು ಕಾರಣಕ್ಕೆ ಬ್ರೇಕಪ್ (Break-up) ಮಾಡಿಕೊಂಡಿರುತ್ತಾರೆ. ಪ್ರೀತಿ ಎಂಬುದು ಪ್ರತಿಯೊಬ್ಬರ ಬಾಳಿನಲ್ಲೂ ಇರುವಂಥದ್ದು. ಅಪ್ಪ-ಅಮ್ಮ (Father – Mother), ಅಣ್ಣ-ತಂಗಿ (Brother – Sister) , ಸ್ನೇಹಿತ, ಸ್ನೇಹಿತೆಯರ (Friends) ನಡುವೆ ಒಂದಲ್ಲಾ ಒಂದು ರೀತಿಯ ಪ್ರೀತಿ ಇದ್ದೇ ಇರುತ್ತದೆ. ಆದರೆ, ಇಲ್ಲಿನ ವಿಷಯ ಒಂದು ಗಂಡು ಹಾಗೂ ಹೆಣ್ಣು ಪರಸ್ಪರ ಆಕರ್ಷಣೆಗೊಳಪಟ್ಟು ಪ್ರೀತಿ ಮಾಡುವವರು ಒಂದು ವೇಳೆ ಬ್ರೇಕಪ್ ಮಾಡಿಕೊಂಡರೆ ಹೇಗೆ? 

ಕೆಲವು ಲವರ್‌ಗಳು ಬ್ರೇಕಪ್ ಬಗ್ಗೆ ಅಷ್ಟೇನೂ ಯೋಚನೆ ಮಾಡುವುದಿಲ್ಲ. ಇವರಲ್ಲದಿದ್ದರೆ ಮತ್ತೊಬ್ಬರು ಎಂದು ಹೋಗುವವರಿದ್ದಾರೆ. ಆದರೆ ಕೆಲವರು ಹಾಗಲ್ಲ. ಜೀವನವಿಡೀ (Life) ಜೊತೆಯಲ್ಲಿಯೇ ಇರಬೇಕು. ಕಷ್ಟ-ಸುಖವನ್ನು ಹಂಚಿಕೊಂಡು ಬಾಳಬೇಕು ಎಂದು ಪ್ರೀತಿ ಮಾಡುತ್ತಿರುತ್ತಾರೆ. ಅವರ ಪ್ರೀತಿಯಲ್ಲಿ ಪ್ರಾಮಾಣಿಕತೆ (Honest)  ಇರುತ್ತದೆ. ಕೊನೆಗೆ ಯಾವುದೋ ಭಿನ್ನಾಭಿಪ್ರಾಯ, ಅಪಾರ್ಥದಿಂದಾಗಿ ಬ್ರೇಕಪ್ ಆಗಿಬಿಟ್ಟಿರುತ್ತದೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಆ ನೋವು (Pain) ಅದನ್ನು ಸದಾ ಕಾಡುತ್ತದೆ. ಅವರು ಎಮೋಶನಲ್ (Emotional) ಜೀವಿಗಳಾಗಿದ್ದು, ಪದೇ ಪದೆ ಅದೇ ನೆನಪಲ್ಲಿ ಕೊರಗುವವರೂ ಇದ್ದಾರೆ. ಮತ್ತೆ ಕೆಲವರು ಖಿನ್ನತೆಗೂ (Depression) ಒಳಗಾಗುತ್ತಾರೆ. ಸ್ವಲ್ಪ ಜನ ಅದನ್ನು ಮರೆತು ಹೊಸ ಜೀವನವನ್ನು ಕಟ್ಟಿಕೊಳ್ಳಲು ಮುಂದಾಗುತ್ತಾರೆ. 

ಅಂದಹಾಗೆ ಈ ಎಮೋಶನಲ್ ವ್ಯಕ್ತಿತ್ವವು, ನೋವನ್ನು ಪಡುವ ಸ್ವಭಾವವು ರಾಶಿಗಳಿಗೆ ಅನುಸಾರವಾಗಿ ಕೆಲವರಿಗೆ ಬಂದಿರುತ್ತದೆ. ಹಾಗಾಗಿ ಯಾವ ರಾಶಿಯವರು ಮನಸ್ಸಿನಲ್ಲಿಯೇ ನೋವಿಟ್ಟುಕೊಂಡು ಜೀವಿಸುತ್ತಾರೆ ಎಂಬ ಬಗ್ಗೆ ಅರಿಯೋಣ... 

ಇದನ್ನು ಓದಿ: Astrology Tips: ಮಾಘ ಮಾಸದಲ್ಲಿ ಹೀಗೆ ಮಾಡಿದರೆ ವರ್ಷವಿಡೀ ಅದೃಷ್ಟ

ಮಕರ ರಾಶಿ (Capricorn)
ಮಕರ ರಾಶಿಯವರು ಪ್ರೀತಿ ಮಾಡುವುದರಲ್ಲಿ ನಿಸ್ಸೀಮರು. ಆದರೆ, ಇವರು ಬ್ರೇಕಪ್ ಮಾಡಿಕೊಂಡರೆ ಆ ನೋವಿನಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ. ನೋಡುವವರ ದೃಷ್ಟಿಯಲ್ಲಿ ಇವರು ಆ ಕೊರಗಿನಿಂದ ಹೊರಬಂದಂತೆ ಕಂಡರೂ ಒಳಗೆ ಕೊರಗನ್ನು ಇಟ್ಟುಕೊಂಡಿರುತ್ತಾರೆ. ಸಂಬಂಧದ ವಿಷಯದಲ್ಲಿ ಇವರು ಬಹಳ ಮೃದು ಸ್ವಭಾವವನ್ನು ಹೊಂದಿದ್ದು, ಸೂಕ್ಷ್ಮಮತಿಗಳಾಗಿರುತ್ತಾರೆ. ಹಾಗಾಗಿ ಹೊಸ ಸಂಬಂಧ ಮಾಡಿಕೊಂಡರೂ ಹಳೇ ಕೊರಗು ಇದ್ದೇ ಇರುತ್ತದೆ. 

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಸಖತ್ ಭಾವನಾಜೀವಿಗಳು. ಬ್ರೇಕಪ್ ಆದರೆ ಇವರಿಗೆ ತಡೆದುಕೊಳ್ಳುವ ಶಕ್ತಿ ಬಹಳ ಕಡಿಮೆ. ಅಲ್ಲದೆ, ಇವರು ಲವ್ ಮಾಡುವುದೂ ಹಾಗೇ ಥಟ್ಟನೆ ಪ್ರೀತಿಯಲ್ಲಿ ಬಿದ್ದುಬಿಡುತ್ತಾರೆ. ಪ್ರೀತಿಸುವವರನ್ನು ಬಹಳ ಹಚ್ಚಿಕೊಳ್ಳುವ ಈ ರಾಶಿಯ ವ್ಯಕ್ತಿಗಳು, ಪ್ರೀತಿಯಿಂದ ವಂಚಿತರಾದರೆ ಒಪ್ಪಿಕೊಳ್ಳಲು ಬಹಳ ಕಷ್ಟಪಡುತ್ತಾರೆ. ಆ ನೋವಿನಿಂದ ಹೊರಬರುವುದು ಸುಲಭದ ಕೆಲಸವಾಗಿರುವುದಿಲ್ಲ. ಜೊತೆಗೆ ಸೂಕ್ಷ್ಮ ಮನಸ್ಸುಳ್ಳವರಾಗಿರುವ ಇವರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. 

ಸಿಂಹ ರಾಶಿ (Leo)
ಸಿಂಹರಾಶಿಯವರು ಬಹಳ ಕೋಪಿಷ್ಠರು. ಆದರೆ ಪ್ರೀತಿ ಮಾಡಿದರೆ ಅಷ್ಟೇ ಹುಚ್ಚು ಪ್ರೀತಿಯನ್ನು ತೋರಿಸುತ್ತಾರೆ. ಅಲ್ಲದೆ, ಇನ್ನೊಬ್ಬರು ಆಕರ್ಷಿಸುವ ಸ್ವಭಾವ ಇವರದ್ದಾಗಿದೆ. ಜೊತೆಗೆ ತಮ್ಮ ಮಾತೇ ನಡೆಯಬೇಕು ಎಂಬ ಮನೋಸ್ಥಿತಿ. ಇವರು ಯಾರನ್ನಾದರೂ ರಿಜೆಕ್ಟ್ ಮಾಡಿದರೆ ಬೇಸರಿಸಿಕೊಳ್ಳುವವರಲ್ಲ. ಅದೇ ತಮ್ಮನ್ನು ಪ್ರೀತಿಸುವವರು ಬ್ರೇಕಪ್ ಬಗ್ಗೆ ಹೇಳಿದರೆ ಸಾಕು ರಂಪಾಟ ಮಾಡಿಬಿಡುತ್ತಾರೆ. ಅವರು ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡದೇ ಸಾರ್ವಜನಿಕವಾಗಿ ಮರ್ಯಾದೆ ತೆಗೆದುಬಿಡುತ್ತಾರೆ. 

ಇದನ್ನು ಓದಿ: Marriage Horoscope: ನಿಮ್ಮದು ಲವ್ ಮ್ಯಾರೇಜಾ, ಆರೇಂಜ್ಡ್ ಮ್ಯಾರೇಜಾ? ಜಾತಕ ಏನ್ ಹೇಳತ್ತೆ?

ವೃಷಭ ರಾಶಿ (Taurus)
ವೃಷಭ ರಾಶಿಯವರು ಸ್ವಲ್ಪ ಲೆಕ್ಕಾಚಾರಸ್ತರು. ಇವರು ಸೀಮಿತ ಜನರನ್ನು ಹೊಂದಿರುತ್ತಾರೆ. ಹಾಗೆಯೇ ಪ್ರೀತಿ ಮಾಡುವ ಮುಂಚೆ ಸಂಗಾತಿ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಟೈಂ ತೆಗೆದುಕೊಳ್ಳುತ್ತಾರೆ. ಆದರೆ, ಇವರು ಒಮ್ಮೆ ನಂಬಿದರೆಂದರೆ, ಪ್ರೀತಿ ಮಾಡುತ್ತಿದ್ದಾರೆ ಎಂದರೆ ಅಷ್ಟು ನಂಬಿಕೆ ಇಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು.  ಹೀಗೆ ನಂಬಿಕೆ ಇಟ್ಟು ಪ್ರೀತಿ ಮಾಡುತ್ತಿದ್ದಾಗ ಸಂಗಾತಿ ಪ್ರೀತಿಯನ್ನು ಒಲ್ಲೆ ಎಂದರೆ ಇವರಿಗೆ ಆಕಾಶವೇ ಕೆಳಗೆ ಬಿದ್ದಂತೆ ಭಾಸವಾಗುತ್ತದೆ. ಈ ನೋವು ಇವರಿಗೆ ಹಲವಾರು ವರ್ಷ ಕಾಡುತ್ತದೆ. 

click me!