ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರದಲ್ಲಿಯೂ ಜನ್ಮ ದಿನಾಂಕವನ್ನು ಆಧರಿಸಿ ಭವಿಷ್ಯದ ವಿಚಾರಗಳನ್ನು ಹಾಗೂ ವ್ಯಕ್ತಿಯ ವ್ಯಕ್ತಿತ್ವ, ಗುಣಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಪಾದಾಂಕಗಳ ಮೂಲಕವೂ ವ್ಯಕ್ತಿಗಳ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ. ಪಾದಾಂಕ ಮೂರರಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ವರ್ಷ ಅಂದರೆ 2022 ಹೇಗಿರಲಿದೆ ಎಂಬುದನ್ನು ತಿಳಿಯೋಣ...
ಪ್ರತಿ ವರ್ಷವೂ ಬದಲಾಗುತ್ತದೆ. ಅದೇ ಹೊತ್ತಿನಲ್ಲಿ ತಮ್ಮ ಭವಿಷ್ಯವೂ (Future) ಬದಲಾಗಲಿ, ಹೊಸ ವರ್ಷ (New Year) ಹೊಸ ಉತ್ಸಾಹ (Excitement), ಹುರುಪು ತರಲಿ, ಎಲ್ಲ ದೃಷ್ಟಿಯಿಂದಲೂ ಒಳ್ಳೆಯದಾಗಲಿ ಎಂಬುದು ಎಲ್ಲರ ಆಶಯವಾಗಿರುತ್ತದೆ. 2022ರ ಕ್ಯಾಲೆಂಡರ್ (Calendar) ವರ್ಷ ಆರಂಭವಾಗಿದೆ. ಸಹಜವಾಗಿಯೇ ಎಲ್ಲರಿಗೂ ವರ್ಷದ ಆರಂಭದಲ್ಲಿ ಇಡೀ ವರ್ಷದಲ್ಲಿ ತಮ್ಮ ಭವಿಷ್ಯ, ಅದೃಷ್ಟ (Luck) ಹೇಗಿರುತ್ತದೆ ಎಂಬುದನ್ನು ತಿಳಿಯುವ ಆಸಕ್ತಿ ಇರುತ್ತದೆ. ಹಾಗಾಗಿ ವೈಯಕ್ತಿಕ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಸಂಖ್ಯಾಶಾಸ್ತ್ರದ (Numerology) ಪ್ರಕಾರ ಪಾದಾಂಕವನ್ನು (Padanka) ಆಧರಿಸಿ ಭವಿಷ್ಯದ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. 2022ರ ಈ ವರ್ಷ ಪಾದಾಂಕ ಮೂರರಲ್ಲಿ ಜನಿಸಿದವರಿಗೆ ಹೇಗಿದೆ ಎಂಬುದರ ಬಗ್ಗೆ ತಿಳಿಯೋಣ....
ಪಾದಾಂಕ ಮೂರರಲ್ಲಿ ಜನಿಸಿದವರಿಗೆ 2022 ಅನೇಕ ಏರುಪೇರುಗಳನ್ನು (Fluctuation) ತಂದೊಡ್ಡಲಿದೆ. ಈ ವರ್ಷ ಈ ವ್ಯಕ್ತಿಗಳು ಹೊಸ ಕಾರ್ಯಗಳನ್ನು ಆರಂಭಿಸುವುದು ಉತ್ತಮವಲ್ಲ. ಈ ವ್ಯಕ್ತಿಗಳ ಉದಾರತೆ, ಕರುಣೆ (Mercy) ತೋರುವಂಥ ಗುಣಗಳು ಇವರಿಗೆ ಸಮಸ್ಯೆಯಾಗುವ (Problem) ಸಾಧ್ಯತೆ ಹೆಚ್ಚಿರುತ್ತದೆ. ವರ್ಷದ ಮೊದಲ ತ್ರೈಮಾಸಿಕ (Quarter) ಈ ವ್ಯಕ್ತಿಗಳಿಗೆ ಕಷ್ಟಕರವಾಗಿರಲಿದೆ. ಆದರೆ ವರ್ಷದ ಎರಡನೇ ತ್ರೈಮಾಸಿಕವು ಉತ್ತಮವಾದ ಪರಿಣಾಮಗಳನ್ನು ನೀಡುತ್ತವೆ. ಉದ್ಯೋಗಸ್ಥ (Job) ವ್ಯಕ್ತಿಗಳಿಗೆ ವರ್ಗಾವಣೆ (Transfer) ಅಥವಾ ವಿಭಾಗಗಳ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ಬದಲಾವಣೆಯು ಪಾದಾಂಕ ಮೂರರಲ್ಲಿ ಜನಿಸಿದ ವ್ಯಕ್ತಿಗಳಿಗೆ ಉತ್ತಮವಾದ ಫಲಿತಾಂಶವನ್ನೇ (Result) ನೀಡುತ್ತದೆ. ವ್ಯಾಪಾರಸ್ಥರು (Businessman) ಈ ವರ್ಷ ವ್ಯಾಪಾರದ ಸಲುವಾಗಿ ಅನೇಕ ಕಡೆ ಪ್ರಯಾಣ (Tour) ಬೆಳೆಸಬೇಕಾಗುತ್ತದೆ. ಈ ಪ್ರಯಾಣವು ಈ ವ್ಯಕ್ತಿಗಳಿಗೆ ಲಾಭವನ್ನು (Profit) ಸಹ ತರಲಿದೆ.
ಪ್ರೇಮಿಗಳಿಗೆ ಶುಭ ಸುದ್ದಿ (Lovers)
ಈ ಪಾದಾಂಕದಲ್ಲಿ ಜನಿಸಿದವರು ಪ್ರೀತಿಯಲ್ಲಿದ್ದರೆ (Love) ಅಂಥವರಿಗೆ ಈ ವರ್ಷ ಶುಭವಾಗಲಿದೆ. ಪ್ರೇಮಿಗಳಿಗೆ ವಿವಾಹ (Marriage) ಯೋಗ ಕೂಡಿ ಬರಲಿದೆ. ಅಷ್ಟೇ ಅಲ್ಲದೆ, ವಿವಾಹಿತರು ಸಹ ತಮ್ಮ ಸಂಗಾತಿಯೊಂದಿಗೆ (Partner) ಈ ವರ್ಷ ಉತ್ತಮ ಸಮಯವನ್ನು (Time) ಕಳೆಯುತ್ತಾರೆ. ಈ ವರ್ಷ ಆರ್ಥಿಕ ಸ್ಥಿತಿಯಲ್ಲಿ (Economic Status) ಚೇತರಿಕೆ ಕಾಣುವುದು ಕಷ್ಟಕರವಾಗಿರುತ್ತದೆ. ಹಾಗಾಗಿ ಖರ್ಚಿನಲ್ಲಿ (Expenses) ನಿಯಂತ್ರಣವಿಟ್ಟು(Control) ಕೊಳ್ಳುವುದು ಉತ್ತಮ. ವರ್ಷದ ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ.
ಶಿಕ್ಷಣಕ್ಕೆ (Education) ಸಂಬಂಧಿಸಿದಂತೆ ಈ ಪಾದಾಂಕದ ವಿದ್ಯಾರ್ಥಿಗಳಿಗೆ ಈ ವರ್ಷ ಅನೇಕ ಏರುಪೇರುಗಳನ್ನು ಕಾಣಬಹುದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಈ ವರ್ಷ ಅನೇಕ ಕಷ್ಟಗಳನ್ನು (Difficult) ಎದುರಿಸಬೇಕಾಗುತ್ತದೆ.
ಇದನ್ನು ಓದಿ : Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!
ಬೇಕು ಸತತ ಪರಿಶ್ರಮ (Perseverance)
ಈ ಪಾದಾಂಕದಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ವರ್ಷ ಸತತ ಪರಿಶ್ರಮದಿಂದ ಮಾತ್ರ ಅಂದುಕೊಂಡ ಫಲಿತಾಂಶ ಪಡೆಯಲು ಸಾಧ್ಯವಿದೆ. ಸರ್ಕಾರಿ ಕೆಲಸಕ್ಕಾಗಿ (Government Job) ಪ್ರಯತ್ನ (Try) ಪಡುತ್ತಿರುವ ಅವರಿಗೆ ಈ ವರ್ಷ ಶುಭ ಸುದ್ದಿ ಸಿಗಲಿದೆ. ಈ ವರ್ಷ ಆರೋಗ್ಯದ (Health) ಬಗ್ಗೆ ಹೆಚ್ಚು ಕಾಳಜಿ (Care) ವಹಿಸಬೇಕಾಗುತ್ತದೆ. ಹೆಚ್ಚು ಸಿಹಿಯನ್ನು (Sweet) ತಿನ್ನದಿರುವುದು (Eat) ಉತ್ತಮ. ಇದರಿಂದ ಮಧುಮೇಹ (Diabetes) ಸೇರಿದಂತೆ ಅನೇಕ ರೋಗಗಳಿಗೆ (Disease) ತುತ್ತಾಗುವ ಸಾಧ್ಯತೆ ಇರುತ್ತದೆ.
ಮೂಲಾಂಕವನ್ನು ತಿಳಿಯುವುದು ಹೇಗೆ?
ಹುಟ್ಟಿದ ದಿನಾಂಕವನ್ನು ಕೂಡಿದಾಗ ಬಂದ ಸಂಖ್ಯೆಯನ್ನು ಪಾದಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 3 ಎಂದಾದರೆ ಪಾದಾಂಕ 3 ಆಗುತ್ತದೆ. ಅದೇ ಜನಿಸಿದ ದಿನಾಂಕವು 13 ಆಗಿದ್ದರೆ ಒಂದು ಮತ್ತು ಮೂರನ್ನು ಕೂಡಿದಾಗ ಬರುವ ಸಂಖ್ಯೆ ನಾಲ್ಕು (Four) (1 + 3 = 4) ಇದು ಪಾದಾಂಕವಾಗಿರುತ್ತದೆ. ಪಾದಾಂಕದಿಂದ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ.
ಇದನ್ನು ಓದಿ : Numerology: ಪಾದಾಂಕ 2ರಲ್ಲಿ ಜನಿಸಿದ ವ್ಯಕ್ತಿಗಳ ವರ್ಷ ಭವಿಷ್ಯ ತಿಳಿಯಿರಿ
ಪಾದಾಂಕ 3ರ (Three) ತಾರೀಖುಗಳು ಯಾವುವು?
ಪಾದಾಂಕ 3ರ ದಿನಾಂಕದ ಬಗ್ಗೆ ಗಮನಿಸುವುದಾದರೆ, ಯಾವುದೇ ತಿಂಗಳ 3, 12, 21 ಮತ್ತು 30ನೇ ತಾರೀಖಿನಂದು ಜನಿಸಿದರು ಈ ಪಾದಾಂಕಕ್ಕೆ ಸೇರುತ್ತಾರೆ.