Daily Horoscope: ಈ ರಾಶಿಯವರಿಗೆ ಹೊಸ ಆಸ್ತಿ ಖರೀದಿ ಯೋಗ

Published : Jan 19, 2022, 07:03 AM IST
Daily Horoscope: ಈ ರಾಶಿಯವರಿಗೆ ಹೊಸ ಆಸ್ತಿ ಖರೀದಿ ಯೋಗ

ಸಾರಾಂಶ

19 ಜನವರಿ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಸಿಂಹ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ

ಮೇಷ(Aries): ಹೊಸ ಆಸ್ತಿ ಖರೀದಿಯಿಂದ ಮನೆಯಲ್ಲಿ ಹರ್ಷ. ಸಿಹಿ ತಿನ್ನುವ ಭಾಗ್ಯ. ಪೂಜಾಕೈಂಕರ್ಯಗಳಲ್ಲಿ ಭಾಗಿಯಾಗುವ ಸಂಭವ. ದೈವಾನುಕೂಲ ಇರಲಿದೆ. ಸೌಂದರ್ಯ ಸಂಬಂಧಿ ವಿಷಯಗಳಿಗಾಗಿ ಖರ್ಚು. ಉದ್ಯೋಗದಲ್ಲಿ ಕೊಂಚ ಬಿಡುವು.  ಶ್ರದ್ಧೆಯಿಂದ ಲಲಿತಾ ಸಹಸ್ರನಾಮ ಪಠಿಸಿ. 

ವೃಷಭ(Taurus): ಸ್ವಲ್ಪ ವಿವೇಚನೆಯಿಂದ ಖರ್ಚು ಮಾಡಿ. ಏನನ್ನು ಕೊಂಡುಕೊಳ್ಳಬೇಕೆನಿಸಿದರೂ ಅರ್ಧ ದಿನ ಸಮಯ ಕೊಟ್ಟು ಮತ್ತೆ ಬೇಕೋ ಬೇಡವೋ ಯೋಚಿಸಿ. ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರಕುವುದು. ದೈವಾನುಕೂಲ ಇರಲಿದೆ, ದುರ್ಗಾ ಕವಚ ಪಠಿಸಿ.

ಮಿಥುನ(Gemini): ಸುಖಾಸುಮ್ಮನೆ ಬೇಡದ ವಿವಾದಗಳಲ್ಲಿ ಸಿಕ್ಕಿ ಬೀಳುವಿರಿ. ಅಸಮಾಧಾನದ ದಿನ. ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಸಂಬಂಧಗಳಲ್ಲಿ ಬಿರುಕು. ಮಾತಿನ ಮೇಲೆ ಹಿಡಿತ ಅಗತ್ಯ, ಗಣಪತಿ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಾಣಲಿದ್ದೀರಿ. ಉದ್ಯೋಗ ಬದಲಿಸುವ ಇರಾದೆ ಇದ್ದರೆ ಇಂದು ಪ್ರಯತ್ನಿಸಿ. ನಿಮ್ಮ ಸಂಪರ್ಕಗಳ ಮೂಲಕವೇ ಸಹಾಯ ದೊರೆಯಲಿದೆ. ಅವಿವಾಹಿತರಿಗೆ ಉತ್ತಮ ಸಂಬಂಧ ಸಿಗಬಹುದು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಸಿಂಹ(Leo): ಮನೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಆಸಕ್ತಿ, ಧನವ್ಯಯ. ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ವಿಷ್ಣು ಸಹಸ್ರನಾಮ ಪಠಣ ಮಾಡಿ. 

Paryaya mahotsava 2022: ಉಡುಪಿ ಪರ್ಯಾಯೋತ್ಸವದ ನಿಮಗೆಷ್ಟು ಗೊತ್ತು?

ಕನ್ಯಾ(Virgo): ಹೆಚ್ಚುವರಿ ಆದಾಯ ಮೂಲದಲ್ಲಿ ನಿರೀಕ್ಷಿತ ಹಣ ಸಿಗದೆ ಬೇಸರವಾಗಲಿದೆ. ಅನಿರೀಕ್ಷಿತವಾಗಿ ಖರ್ಚುಗಳು ಹೆಚ್ಚಿ ಕಂಗಾಲಾಗಬಹುದು. ಸಂಗಾತಿಗೆ ಹೆಚ್ಚು ಸಮಯ ಕೊಡದೆ ಸಮಸ್ಯೆಗಳು ಏಳಬಹುದು. ಮಕ್ಕಳಿಂದ ಮನಸ್ತಾಪಗಳು ಏಳಬಹುದು. ಗಣಪತಿಗೆ 21 ದರ್ಬೆ ಅರ್ಪಿಸಿ. 

ತುಲಾ(Libra): ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ನಿರುದ್ಯೋಗಿಗಳಿಗೂ ಅವಕಾಶ ಅರಸಿ ಬರಲಿದೆ. ಹೆಚ್ಚು ಯೋಚಿಸದೆ ಬಳಸಿಕೊಳ್ಳಿ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ವೃಶ್ಚಿಕ(Scorpio): ಹಿಂದೆ ಮಾಡಿದ ತಪ್ಪುಗಳು ಇಂದೂ ಕಾಡುತ್ತಿವೆ. ಪಶ್ಚಾತ್ತಾಪ ವ್ಯಕ್ತಪಡಿಸದಿದ್ದರೆ ಸಂಬಂಧಗಳು ಸುಧಾರಣೆಯಾಗುವುದಿಲ್ಲ. ಬಹು ದಿನಗಳಿಂದ ಮುಂದೂಡಿಕೊಂಡು ಬಂದಿದ್ದ ಕೆಲಸಗಳು ಮುಗಿದು ನಿರಾಳವಾಗುವಿರಿ. ಹಣದ ವಿಚಾರದಲ್ಲಿ ಸಮಾಧಾನ ಇರಲಿದೆ. ನವಗ್ರಹ ಆರಾಧನೆ ಮಾಡಿ.

Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!

ಧನುಸ್ಸು(Sagittarius): ನಿಮ್ಮ ವಾಕ್ಚಾತುರ್ಯವನ್ನು ಎಲ್ಲರೂ ಮೆಚ್ಚುವರು. ಬರವಣಿಗೆ, ಸಿನಿಮಾ ರಂಗ ಹಾಗೂ ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಪ್ರಗತಿ, ಮೆಚ್ಚುಗೆ ಸಿಗಲಿದೆ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ಅಶ್ವತ್ಥ ಮರದೆದುರು ದೀಪ ಹಚ್ಚಿ ನಮಸ್ಕರಿಸಿ.

ಮಕರ(Capricorn): ಆರೋಗ್ಯ ವಿಚಾರದಲ್ಲಿ ಕಡೆಗಣನೆ ಬೇಡ. ಮೂಗು, ಗಂಟಲ ಕಿರಿಕಿರಿ, ಜ್ವರ ಕಾಣಿಸಿಕೊಳ್ಳಬಹುದು. ವ್ಯಾಪಾರದಲ್ಲಿ ಸ್ಪರ್ಧಿಗಳ ಮೇಲುಗೈ ಕೊಂಚ ಆತಂಕ ತರಲಿದೆ. ಕೋರ್ಟ್ ವ್ಯಾಜ್ಯಗಳಲ್ಲಿ ಹಿನ್ನಡೆಯಾಗಲಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕುಂಭ(Aquarius): ನಿಮ್ಮ ಶ್ರಮಕ್ಕೆ ಪ್ರತಿಫಲ ಪಡೆಯಲು ಕಾಲ ಸನ್ನಿಹಿತವಾಗಿದೆ. ನಿಮ್ಮ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳ ನೆರವು ಸಿಗಲಿದೆ.  ಪ್ರಯಾಣ ಮಾಡುವ ಮುನ್ನ ಮನೆ ದೇವರಿಗೆ ಪ್ರಾರ್ಥಿಸಿ. ಅವಿವಾಹಿತರಿಗೆ ಶುಭ ದಿನ. ವಿವಾಹಿತರಿಗೆ ಕುಟುಂಬ ಸೌಖ್ಯ. ತಾಯಿ ಅನ್ನಪೂರ್ಣೇಶ್ವರಿಯ ಪ್ರಾರ್ಥನೆ ಮಾಡಿ. 

ಮೀನ(Pisces): ನರಗಳ ದೌರ್ಬಲ್ಯತೆ ಕಾಡಬಹುದು. ಆಸ್ತಿ ಸಂಬಂಧ ಸಂಘರ್ಷಗಳಿಂದ ಮನಸ್ಸಿಗೆ ಕಸಿವಿಸಿ. ಬಂಧುಗಳೊಂದಿಗೆ ಮುನಿಸು. ಮಾತಿನ ಮೇಲೆ ಹಿಡಿತವಿರಲಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಎಡವಟ್ಟು ವಿಳಂಬಕ್ಕೆ ಕಾರಣವಾಗಬಹುದು. ಮನೆ ದೇವರ ಪ್ರಾರ್ಥನೆ ಮಾಡಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ