ಈ ನಾಲ್ಕು ರಾಶಿಯವರು ಬೇರೆಯವರ ಹಿತ ಬಯಸುವವರು. ಇಂಥ ಜನರು ನಿಮ್ಮ ಸುತ್ತಮುತ್ತ ಇದ್ದರೆ ಅದು ಅದೃಷ್ಟವೇ ಸರಿ. ಸದಾ ತಮ್ಮವರ ಸುಖವನ್ನು ಬಯಸುವ ಗುಣ ಈ ರಾಶಿಯ ಜನರಲ್ಲಿ ಇದೆ. ಅದರಲ್ಲಿಯೂ ನೀವು ಇವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರೆ ಎಂದಿಗೂ ಇವರಿಂದ ದೂರ ಹೋಗಬೇಡಿ.
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ನೋವು, ನಲಿವುಗಳಿರುತ್ತವೆ. ಆದರೆ, ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ ಎಂದುಕೊಂಡು ಮುಂದುವರಿಯಬೇಕು. ಕೇವಲ ತಮ್ಮದೊಬ್ಬರ ಜೀವನದ ಯೋಚನೆಯೇ ಅಲ್ಲದೆ, ಮತ್ತೊಬ್ಬರ ಜೀವನದ ಬಗ್ಗೆಯೂ ಯೋಚಿಸುವವರು ವಿರಳ. ಇಂಥ ಸ್ವಾರ್ಥ ಜಗತ್ತಿನಲ್ಲೂ ತನ್ನವರು ಚೆನ್ನಾಗಿರಬೇಕು, ಅವರಿಗೆ ತನ್ನಿಂದಾಗುವಷ್ಟು ಭಾವನಾತ್ಮಕವಾಗಿ ಸ್ಪಂದಿಸಬೇಕು ಎನ್ನುವವರು ನಿಮ್ಮ ಸ್ನೇಹವಲಯದಲ್ಲಿದ್ದರೆ ನೀವು ಅದೃಷ್ಟವಂತರೇ ಸರಿ. ಇಂಥ ಸಹಾನುಭೂತಿ (Empathy) ಹೊಂದಿರುವ ಜನರು ಹೆಚ್ಚಾಗಿ ಈ 4 ರಾಶಿಯವರಾಗಿರುತ್ತಾರೆ.
ಮೀನ(Pisces)
ಮೀನ ರಾಶಿಯ ಜನರು ಹೆಚ್ಚು ಕರುಣಾಮಯಿಗಳು ಹಾಗೂ ಸಹಾನುಭೂತಿ ಹೊಂದಿರುವವರೂ ಆಗಿರುತ್ತಾರೆ. ಬೇರೆಯವರ ಕಷ್ಟ ನೋಡಿ ತಾವೇ ಆ ನೋವನ್ನು ಅನುಭವಿಸುತ್ತಿದ್ದೀವೇನೋ ಅನ್ನುವಷ್ಟು ಮರುಕ ಪಡುತ್ತಾರೆ. ಇತರರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅವರಿಗೆ ನೀರು ಕುಡಿದಷ್ಟು ಸುಲಭದ ಕೆಲಸ. ಸುತ್ತಮುತ್ತಲಿನ ಪರಿಸರವನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಇವರು ಇರುವ ವಾತವರಣವು ಶಾಂತಿಯಿಂದ (Peace) ಕೂಡಿರುತ್ತದೆ. ಮೀನ ರಾಶಿಯವರು ಬೇರೆಯವರಿಗೆ ತಮ್ಮಿಂದ ಆದಷ್ಟು ಸಹಾಯವನ್ನು (Help) ಮಾಡಲು ಬಯಸುತ್ತಾರೆ. ಜೊತೆಗೆ ಕೋಪ ಹಾಗೂ ಮನಸ್ತಾಪವನ್ನು ಹೆಚ್ಚು ದಿನ ಮುಂದುವರಿಸಿಕೊಂಡು ಹೋಗುವುದಿಲ್ಲ.
undefined
ಕರ್ಕಾಟಕ (Cancer)
ಕರ್ಕಾಟಕ ರಾಶಿಯವರು ಬಹಳ ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ. ಬೇರೆಯವರ ನೋವನ್ನು ಬಹಳ ಬೇಗ ತಿಳಿದುಕೊಂಡುಬಿಡುತ್ತಾರೆ. ಜೊತೆಗೆ ತಾವಿರುವ ಜಾಗದಲ್ಲಿ ಯಾವ ಶಕ್ತಿಯಿದೆ ಎಂದು ಬಹು ಬೇಗ ಗ್ರಹಿಸುತ್ತಾರೆ. ಅವರೀಗಾಗಲೇ ಇದರ ಅನುಭವ ಪಡೆದಿರಬಹುದು. ಕರ್ಕಾಟಕ ರಾಶಿಯವರಿಗೆ ಇತರರ ಮನಸ್ಸನ್ನು, ಭಾವನೆಯನ್ನು ಹಾಗು ಆಲೋಚನೆಗಳನ್ನು ಆರ್ಥ ಮಾಡಿಕೊಳ್ಳುವುದು ಬಹಳ ಸುಲಭವಾಗಿರುತ್ತದೆ (Easy). ಈ ಕಾರಣದಿಂದಾಗಿ ಇವರು ಬೇರಯವರಿಗೆ ನೋಯಿಸದೆ, ಕೋಪ ಬರದೇ ಇರುವಂತೆ ಹಾಗೂ ಅವರ ಮನಸ್ಸಿಗೆ ಗೊತ್ತಾಗುವ ರೀತಿಯಲ್ಲಿ ಯಾವುದೇ ವಿಷಯವನ್ನು ಅರ್ಥ ಮಾಡಿಸುವ ಜಾಣ್ಮೆ ಹೊದಿರುತ್ತಾರೆ.
ವ್ಯಾಪಾರ, ವಿವಾಹ, ದೃಷ್ಟಿ ದೋಷ ನಿವಾಳಿಸಲು ಸರಳ Vastu Tips..
ಕನ್ಯಾ(Virgo)
ಎಂಥದೇ ಸವಾಲುಗಳು ಎದುರಾದರೂ ಅದಕ್ಕೆ ಸರಿ ಹೊಂದುವ ದಾರಿ ಅಥವಾ ಉತ್ತರ ಕನ್ಯಾ ರಾಶಿಯವರ ಬಳಿ ಇದ್ದೇ ಇರುತ್ತದೆ. ತಾವು ಪ್ರೀತಿಸುವ ಹಾಗೂ ತನ್ನ ಸುತ್ತಮುತ್ತ ಇರುವ ಜನರ ಕಾಳಜಿ ಮಾಡುವುದರಲ್ಲಿ ಇವರಿಗೆ ಹೆಚ್ಚಿನ ಸುಖ ಸಿಗುತ್ತದೆ. ಈ ರಾಶಿಯವರು ತಮ್ಮ ಆತ್ಮೀಯ ಸ್ವಭಾವದಿಂದ ಸುತ್ತಲಿನ ಜನರನ್ನು ಖುಶಿಯಿಂದ (Happy) ಇರುವ ಹಾಗೆ ನೋಡಿಕೊಳ್ಳುತ್ತಾರೆ. ಬೇರೆಯವರ ಬೇಕು ಬೇಡಗಳನ್ನು ಬಹು ಬೇಗ ಅರ್ಥ ಮಾಡಿಕೊಳ್ಳುವ ಶಕ್ತಿ ಇವರಲ್ಲಿರುತ್ತದೆ. ಮುಂದೇನು ಮಾಡಬೇಕೆಂದು ತಿಳಿಯದೇ ಕಂಗೆಟ್ಟು ನಿಂತಾಗ ಕನ್ಯಾ ರಾಶಿಯಲ್ಲಿರುವ ಜನರು ಮಾರ್ಗದರ್ಶಕರಾಗುತ್ತಾರೆ.
love rejection: ಪ್ರೀತಿಯ ತಿರಸ್ಕಾರವನ್ನು ಯಾವ ರಾಶಿಯವರು ಹೇಗೆ ಎದುರಿಸುತ್ತಾರೆ?
ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನರು ಯಾವಾಗಲೂ ತಮಗಿರುವ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಮನದಾಳದಲ್ಲಿ ಇವರು ಕರುಣೆ, ಅನುಕಂಪಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಬಗ್ಗೆ ಯೋಚಿಸದೇ ಇರಬಹುದು. ಆದರೆ ಈ ರಾಶಿಯವರು ಬೇರೆಯವರ ಭಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ಳುವವರಾಗಿರುತ್ತಾರೆ. ಇದರಿಂದಾಗಿ ಇವರು ಬೇರೆಯವರೊಂದಿಗೆ ಬಹುಬೇಗ ಬೆರೆತು ಹೋಗುತ್ತಾರೆ. ತಮ್ಮ ಭಾವನೆಗಿಂತ ಬೇರೆಯವರ ಭಾವನೆಗಳಿಗೆ ಜಾಸ್ತಿ ಬೆಲೆ ಕೊಡುತ್ತಾರೆ.
ಸಹಾನುಭೂತಿ ಎಂದರೆ ಬೇರೆಯವರ ಕಷ್ಟವನ್ನು ಅವರ ಜಾಗದಲ್ಲಿ ನಿಂತು ಆ ಕಷ್ಟದ ಅನುಭವ ಮಾಡಿಕೊಳ್ಳುವುದು. ಇಂತಹ ಕಷ್ಟ ಅಥವಾ ನೋವು ಅವರಿಗೆ ಬರಬಾರದಾಗಿತ್ತು, ತನ್ನಿಂದ ಇದಕ್ಕೆ ಏನಾದರೂ ಪರಿಹಾರ ನೀಡಲು ಸಾಧ್ಯವಿದೆಯಾ ಎಂದು ಯೋಚಿಸುವುದೇ ಸಹಾನುಭೂತಿ. ನಮಗೆ ಮಾತ್ರ ಇಷ್ಟೊಂದು ಕಷ್ಟಗಳು ಯಾಕೆ ಎದುರಾಗುತ್ತಿವೆ ಎಂದು ಗೋಳಾಡುವವರ ನಡುವೆ ಇನ್ನೊಬ್ಬರ ಸ್ಥಿತಿ ನೋಡಿ ಮರುಗುವ ಗುಣ ಈ ನಾಲ್ಕು ರಾಶಿಯವರಿಗಿದೆ.