ಕೈಲಾಸವಾಸಿ ಶಂಕರನಿಗೆ ಸಾವಿರಾರು ಹೆಸರಗಳಿವೆ. ಒಂದೊಂದಕ್ಕೂ ಒಂದೊಂದು ಕತೆ, ಒಂದೊಂದು ಪವರ್. ನಿಮಗೆ ಏನು ಅಗತ್ಯವೋ ಅದನ್ನು ನೆನಪಿಟ್ಟುಕೊಂಡು ಆ ಹೆಸರನ್ನು ಜಪಿಸಿದರೆ ಶುಭಫಲ ಗ್ಯಾರಂಟಿ.
ಶಿವನನ್ನು ಸಾವಿರಾರು ಹೆಸರುಗಳಿಂದ ಕರೆಯಲಾಗುತ್ತದೆ. ಒಂದೊಂದು ಹೆಸರಿಗೂ ಒಂದೊಂದು ಅರ್ಥ ಹಾಗೂ ಹಿನ್ನೆಲೆಯಲ್ಲಿ ಒಂದೊಂದು ಕತೆಯಿದೆ. ಅವುಗಳನ್ನು ನೆನೆದರೆ ನಿಮಗೆ ವಿಭಿನ್ನ ಫಲಗಳೂ ಸಿಗುತ್ತವೆ ಶಿವನ ಒಂದೊಂದು ಹೆಸರಿಗೂ ಒಂದೊಂದು ಬಗೆಯ ಪ್ರಭಾವ ಇದೆ. ಹಾಗಿದ್ದರೆ ನಿಮಗೆ ಇಷ್ಟವಾಗಬಹುದಾದ, ನೀವು ಜಪಿಸಬಹುದಾದ ಹೆಸರುಗಳು ಯಾವುವು? ಕೆಲವನ್ನು ನೋಡೋಣ.
ಭೋಲೇನಾಥ, ಭೋಲೆಬಾಬಾ
ಭೋಲೆನಾಥ ಅಥವಾ ಭೋಲೆಬಾಬಾ ಶಿವನ ಮುಗ್ಧತೆಯನ್ನು ನೆನಪಿಸುವ ಹೆಸರು. ಇದು ಶಿವನ ಶಾಂತ ರೂಪವಾಗಿದೆ. ಶಿವನ ಈ ಹೆಸರು ಶಿವನನ್ನು ಕರುಣಾಮಯಿ ಎಂದು ಸೂಚಿಸುತ್ತದೆ. ಶಿವನ ಬೋಲೆ ಬಾಬಾ ಎಂದು ಕರೆಯುವ ಹೆಸರನ್ನು ನೀವೆಷ್ಟು ಬಾರಿ ಜಪಿಸುತ್ತೀರೋ ಅಷ್ಟು ಬಾರಿ ನಿಮಗೆ ಒಳ್ಳೆಯದೇ ಆಗುತ್ತದೆ. ನಿಮ್ಮಲ್ಲಿ ಕೋಪದ ಪ್ರಮಾಣ ಅಧಿಕವಾಗಿದ್ದರೆ ಈ ಹೆಸರನ್ನು ಜಪಿಸಿದರೆ ಒಳ್ಳೆಯದಾಗುತ್ತದೆ. ಶಿವನ ಈ ನಾಮವನ್ನು ಹೇಳುವಾಗ ಶಿವಲಿಂಗಕ್ಕೆ ಜಲಾಭಿಷೇಕ ಅಥವಾ ನೀರಿನ ಅಭಿಷೇಕವನ್ನು ಮತ್ತು ಬಿಲ್ವಪತ್ರೆ ಎಲೆಯನ್ನು ಅರ್ಪಿಸಬೇಕು.
undefined
ವಿಶ್ವಂಭರ, ವಿಶ್ವಾಂಬರ
ವಿಶ್ವಂಭರ ಎಂದರೆ ವಿಶ್ವವನ್ನೇ ಧರಿಸಿದವನು ಎಂದು. ವಿಶ್ವಾಂಬರ ಎಂದರೆ ವಿಶ್ವವನ್ನೇ ಬಟ್ಟೆಯಾಗಿ ಹೊಂದಿದವನು ಎಂದು. ಅಂಬರ ಎಂದರೆ ಬಟ್ಟೆ. ಆತನು ಇಡೀ ವಿಶ್ವಕ್ಕೆ ಅಧಿಪತಿ, ವಿಶ್ವಕ್ಕೆ ದೇವರೆಂಬುದನ್ನು ಸೂಚಿಸುತ್ತದೆ. ಒಂದು ವೇಳೆ ನೀವು ನಿಮ್ಮ ಉದ್ಯೋಗದಲ್ಲಿ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಥವಾ ನೀವು ನಿರುದ್ಯೋಗಿಗಳಾಗಿದ್ದು, ಉದ್ಯೋಗವನ್ನು ಹುಡುಕುತ್ತಿದ್ದರೆ ವಸಂತ ಋತುವಿನಲ್ಲಿ ತಪ್ಪದೇ ಶಿವನ ಈ ಹೆಸರನ್ನು ಜಪಿಸಬೇಕು. ಇದರಿಂದ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
ತನ್ನೊಡನೆ ಯುದ್ಧ ಮಾಡಲು ಇಚ್ಛಿಸಿದ ಬಾಣಾಸುರನ ಗರ್ವವನ್ನು ಶಿವ ಇಳಿಸಿದ್ಹೇಗೆ.? ...
ಮಹೇಶ್ವರ ಅಥವಾ ಮಹೇಶ
ಪರಶಿವನ ಈ ಹೆಸರು ಮಹಾ ಮತ್ತು ಈಶ ಎನ್ನುವ ಎರಡು ಪದಗಳ ಸಂಯೋಜನೆಯಾಗಿದೆ. ಈ ಹೆಸರು ಶಿವನ ಸಹಾನುಭೂತಿ ಸ್ವರೂಪವನ್ನು ವಿವರಿಸುತ್ತದೆ. ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಶಿವ ಭಕ್ತರು ಶಿವನ ಈ ಹೆಸರನ್ನು ಪಠಿಸಬೇಕು. ಇದರಿಂದ ನಿಮ್ಮೆಲ್ಲಾ ವ್ಯವಹಾರದ ಸಮಸ್ಯೆಗಳು ನಿವಾರಣೆಯಾಗುವುದು.
ಅಶುತೋಷ
ಶಿವನ ಈ ಹೆಸರು ಗೃಹಸ್ಥಾಶ್ರಮಕ್ಕೆ ಸಂಬಂಧಿಸಿದ ಹೆಸರಾಗಿದೆ. ಶಿವನ ಈ ಅಶುತೋಷ ಎನ್ನುವ ನಾಮವು ಗೃಹಸ್ಥಾಶ್ರಮವನ್ನು ಪ್ರತಿನಿಧಿಸುವುದರಿಂದ ವೈವಾಹಿಕ ಸಮಸ್ಯೆಯನ್ನು ಹೊಂದಿದವರು ಈ ಹೆಸರನ್ನು ಜಪಿಸಬೇಕು. ಇದರಿಂದ ನಿಮ್ಮ ವೈವಾಹಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದರೆ ಈ ಹೆಸರನ್ನು ಶ್ರಾವಣ ಮಾಸದಲ್ಲಿ ಜಪಿಸಬೇಕು. ಇದು ಪತಿ - ಪತ್ನಿಯರ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ.
ಲಕ್ಷ್ಮಿಯನ್ನು ಮಾತ್ರವಲ್ಲ, ಲಕ್ಷ್ಮಿ ಜೊತೆಗೆ ಈ ದೇವರನ್ನೂ ಪೂಜಿಸಬೇಕು ಗೊತ್ತೆ? ...
ಮಹಾದೇವ
ದೇವರ ದೇವನಾದ ಪರಶಿವನನ್ನು ಮಹಾದೇವ ಎಂದು ಕರೆಯಲಾಗುತ್ತದೆ. ಪರಶಿವನು ಮಹಾದೇವನಾದ್ದರಿಂದ ಆತನಿಗೆ ಭಕ್ತರ ನೋವುಗಳನ್ನು ನಿವಾರಿಸುವ ವಿಶೇಷ ಶಕ್ತಿಯಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ನೀರನ್ನು ಅರ್ಪಿಸಿ ಅಥವಾ ನೀರಿನ ಅಭಿಷೇಕವನ್ನು ಮಾಡಿ ಆತನ ಮಹಾದೇವ ಎನ್ನುವ ಹೆಸರನ್ನು ಸುಮಾರು 15 ನಿಮಿಷಗಳ ಕಾಲ ಜಪಿಸಬೇಕು. ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ಮಾತ್ರವಲ್ಲ, ಆರೋಗ್ಯದ ಸಮಸ್ಯೆಗಳು ಕೂಡ ದೂರಾಗುತ್ತದೆ.
ರುದ್ರ
ಶಿವನಿಗಿರುವ ಹೆಸರುಗಳಲ್ಲಿ ರುದ್ರ ಎನ್ನುವ ಹೆಸರು ಶಿವನ ಕೋಪದ ರೂಪವನ್ನು ಪ್ರತಿನಿಧಿಸುತ್ತದೆ. ಶಿವನ ರುದ್ರಾವತಾರವನ್ನು ರೌದ್ರಾವತಾರವೆಂದೂ ಹೇಳಲಾಗುತ್ತದೆ. ಈ ರೂಪದಲ್ಲಿ ಶಿವನು ಭಯಂಕರನಾಗಿ ಕಾಣಿಸುತ್ತಾನೆ. ಶಿವನು ರೌದ್ರಾವತಾರದಲ್ಲಿದ್ದಾಗ ರೌದ್ರ ನಟನೆಯನ್ನು ಮಾಡುತ್ತಾನೆಂದು ಕೂಡ ಹೇಳಲಾಗುತ್ತದೆ. ಜೀವನದಲ್ಲಿ ನಿಮಗೆ ಸಂಕಷ್ಟಗಳು ದುಷ್ಟರ ರೂಪದಲ್ಲಿ ಎದುರಾದರೆ, ಅದನ್ನು ದೂರ ಮಾಡಲು ಈ ನಾಮಜಪ ನೆರವಾಗುತ್ತದೆ. ದುಷ್ಟರು ನಿಮ್ಮಿಂದ ದೂರವಾಗುತ್ತಾರೆ.
ಈ ಕನಸ ಕಂಡರೆ ದಿಢೀರ್ ಶ್ರೀಮಂತರಾಗುವಿರಿ ಎಂದರ್ಥ ...
ನಟರಾಜ
ಶಿವನನ್ನು ನಟರಾಜ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಆತನ ನೃತ್ಯರೂಪ. ಶಿವನು ತನ್ನ ಸಂತೋಷವನ್ನು, ದುಃಖವನ್ನು ಹಾಗೂ ಕೋಪವನ್ನು ನೃತ್ಯದ ಮೂಲಕ ಹೊರಹಾಕುತ್ತಾನೆ. ಶಿವನ ನಟರಾಜ ಎನ್ನುವ ಹೆಸರಿಗೆ ಗೌರವ ಹಾಗೂ ಕೀರ್ತಿಯನ್ನು ಹೆಚ್ಚಿಸುವ ಶಕ್ತಿಯಿದೆ. ಹಾಗಾಗಿ ಶಿವನ ಈ ಹೆಸರನ್ನು ಆಗಾಗ ಜಪಿಸುತ್ತಿರಬೇಕು. ಕಲೆ, ಸಂಗೀತ, ನಾಟಕ ಮುಂತಾದ ಕ್ಷೇತ್ರದಲ್ಲಿ ಇರುವವರಿಗೆ ಈ ಹೆಸರು ಪ್ರಿಯ. ಶಿವನ ಈ ಸ್ವರೂಪವನ್ನು ಆಗಾಗ ನೆನೆಯುವದರಿಂದ ಅವರು ನಿತ್ಯ ಸ್ಫೂರ್ತಿಯನ್ನು ಪಡೆಯುತ್ತಾರೆ.
ಶಿವ
ಪರಶಿವನ ಹೆಸರುಗಳಲ್ಲೇ ಅತ್ಯಂತ ಪ್ರಮುಖವಾದ ಹೆಸರೆಂದರೆ ಅದುವೇ ಶಿವ. ಈ ಹೆಸರನ್ನು ಜಪಿಸುವುದರಿಂದ ಆ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಅದರಲ್ಲೂ, ವಸಂತ ಋತುವಿನಲ್ಲಿ ಪರಶಿವನ ಈ ಹೆಸರನ್ನು ಜಪಿಸಿದರೆ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷ ನಿಮ್ಮದಾಗುತ್ತದೆ. ಭಕ್ತ ಮಾರ್ಕಂಡೇಯನು ಈ ನಾಮಜಪ ಮಾಡಿದ್ದರಿಂದಲೇ ಅವನು ಚಿರಂಜೀವಿಯಾದನು ಎಂಬ ಕತೆಯಿದೆ.
ಪಶುಪತಿನಾಥ
ಶಿವನು ಪ್ರಾಣಿಗಳೊಂದಿಗೆ ಬ್ರಹ್ಮಾಂಡದ ಸಕಲ ಜೀವರಾಶಿಗಳನ್ನು ರಕ್ಷಿಸುತ್ತಾನೆಂಬ ಕಾರಣದಿಂದ ಆತನನ್ನು ಪಶುಪತಿನಾಥನೆಂದು ಕರೆಯಲಾಗುತ್ತದೆ. ಪಶುಪತಿನಾಥನನ್ನು ಕೇದಾರನಾಥದ ಅರ್ಧಭಾಗವೆಂದು ಪರಿಗಣಿಸಲಾಗಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಗವಾನ್ ಪಶುಪತಿನಾಥನ ಭವ್ಯವಾದ ಹಾಗೂ ಪ್ರಸಿದ್ಧ ದೇವಾಲಯವಿದ್ದು, ಇಲ್ಲಿನ ಶಿವಲಿಂಗಕ್ಕೆ ಮೂರು ಮುಖಗಳಿವೆ. ಈ ಹೆಸರು ಸಂಪತ್ತಿಗೆ ಸಂಬಂಧಪಟ್ಟಿದೆ. ನಿಮಗೆ ಬಡತನದ ಬಾಧೆಯಿದ್ದರೆ, ಸಂಪತ್ತಿದ್ದೂ ಅದು ಕೈತಪ್ಪುವ ಭೀತಿ ಇದ್ದರೆ ಈ ಹೆಸರನ್ನು ಪ್ರತಿದಿನ ಸಹಸ್ರಬಾರಿ ಜಪಿಸುವುದರಿಂದ ಉನ್ನತೋನ್ನತ ಸಿದ್ಧಿಯಾಗುತ್ತದೆ.
ಕೈಲಾಸವಾಸಿ
ಕೈಲಾಸ ಪರ್ವತವು ಪರಶಿವನ ಅಥವಾ ಬ್ರಹ್ಮಾಂಡವನ್ನು ಕಾಯುವ ಶಿವನ ವಾಸಸ್ಥಾನವಾದುದ್ದರಿಂದ ಶಿವನನ್ನು ಕೈಲಾಸವಾಸಿ, ಕೈಲಾಸಪತಿಯೆಂದು ಪೂಜಿಸಲಾಗುತ್ತದೆ. ಇದರಿಂದ ಕುಟುಂಬ ಸೌಖ್ಯ ಸಿದ್ಧಿ ಈ ಹೆಸರನ್ನು ಜಪಿಸುವುದರಿಂದ ಕುಟುಂಬದಲ್ಲಿ ಬರುವ ಯಾವುದೇ ವಿರಸ- ಮುನಿಸು- ಕೋಪ- ದ್ವೇಷ ಇತ್ಯಾದಿಗಳು ಪರಿಹಾರ ಆಗುತ್ತವೆ.