Nag Panchami ನಾಗ ದೇವರ ಕೋಪಕ್ಕೆ ಗುರಿಯಾದ್ರೆ ಬೀದಿಗೆ ಬರೋದು ನಿಶ್ಚಿತ

By Suvarna NewsFirst Published Aug 1, 2022, 5:47 PM IST
Highlights

ಹಾವನ್ನು ಕಂಡ್ರೆ ಭಯ ಸಾಮಾನ್ಯ. ಕೆಲವರು ಹಾವಿಗೆ ವಿನಾ ಕಾರಣ ಹಿಂಸೆ ನೀಡ್ತಾರೆ. ಇದು ನಾಗ ದೋಷಕ್ಕೆ ಕಾರಣವಾಗುತ್ತದೆ. ನಾಗ ದೋಷ ತಟ್ಟಿದ್ರೆ ಅದ್ರಿಂದ ಹೊರಗೆ ಬರುವುದು ಸುಲಭವಲ್ಲ.
 

ಹಾವಿನ ದ್ವೇಷ 12 ವರುಷ ಅಂತಾ ನಾವೆಲ್ಲ ಕೇಳಿರ್ತೇವೆ. ನಾಗರ ದೋಷಕ್ಕೆ ಗುರಿಯಾದ್ರೆ ಅದರಿಂದ ಹೊರಗೆ ಬರುವುದು ಕಷ್ಟ. ನಾಗನ ಕೆಂಗಣ್ಣಿನಿಂದ ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಾಗ ದೇವರ ಕೋಪ ಮನೆ ಬಡತನಕ್ಕೆ ಕಾರಣವಾಗುತ್ತದೆ. ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಬಯಸುವವರು ನಾಗದೇವತೆಯನ್ನು ಸಂತೋಷವಾಗಿಡುವುದು ಬಹಳ ಮುಖ್ಯ. ಏಕೆಂದರೆ ನಾಗದೇವರು ಸಂಪತ್ತನ್ನು ರಕ್ಷಿಸುತ್ತಾರೆಂದು ನಂಬಲಾಗಿದೆ. ಈ ಬಗ್ಗೆ ಧರ್ಮ ಗ್ರಂಥಗಳಲ್ಲಿ ಅನೇಕ ಕಥೆಗಳಿವೆ. ನಾಗರನ್ನು ಪೂಜಿಸಿದವರಿಗೆ ಎಂದೂ ಹಣದ ಕೊರತೆಯಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು. ನಾಗರನ್ನು ಆರಾಧಿಸುವವರ ಮೇಲೆ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ರಾಜ್ಯ ಸುಖಕರ ಹಾಗೂ ಸಮೃದ್ಧವಾಗಿರಲಿ ಎನ್ನುವ ಕಾರಣಕ್ಕೆ ಅನೇಕ ರಜರು ನಾಗದೇವಾಲಯಗಳನ್ನು ನಿರ್ಮಿಸಿದ್ದರು. ಅವರು ಪೀಳಿಗೆಯಿಂದ ಪೀಳಿಗೆಗೆ ನಾಗರ ಪೂಜೆ ನಡೆದುಕೊಂಡು ಬಂದಿದೆ. 

ಮೊದಲೇ ಹೇಳಿದಂತೆ ನಾಗ (Naga)ರ ದೋಷಕ್ಕೆ ಒಳಗಾದ್ರೆ ಆರ್ಥಿಕ ಸಮಸ್ಯೆ (Financial Problem) ಜೀವನದುದ್ದಕ್ಕೂ ಕಾಡುವುದು ನಿಶ್ಚಿತ. ನಾಗರಿಗೆ ಅವಮಾನ ಮಾಡಿದ್ರೆ ಅಥವಾ ನಾಗರು ಅಸಮಾಧಾನಗೊಂಡ್ರೆ ತಾಯಿ ಲಕ್ಷ್ಮಿ (Lakshmi) ಕೃಪೆ ನಮಗೆ ಸಿಗುವುದಿಲ್ಲ. ಲಕ್ಷ್ಮಿ ಮನೆಯಲ್ಲಿ ನೆಲೆಸಿಲ್ಲವೆಂದ್ರೆ ಜೇಬು ಖಾಲಿಯಾದಂತೆ. ನಾಗ ದೇವರು ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಹೇಗೆ ತಿಳಿಯುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳ ಮೂಲಕ ನಾಗ ದೇವರು ಅಸಮಾಧಾನಗೊಂಡಿದ್ದಾರೆ ಎಂಬುದನ್ನು ನಾವು ಅರಿಯಬಹುದು. 

ನಾಗ ದೇವರ ಅಸಮಾಧಾನದ ಸಂಕೇತ ಮತ್ತು ಕಾರಣ : 
1. ನೀವು ನಿಮ್ಮ ಜೀವಿತಾವಧಿಯಲ್ಲಿ ಅಥವಾ ನಿಮ್ಮ ಹಿಂದಿನ ಜನ್ಮದಲ್ಲಿ ಹಾವಿಗೆ ಹಾನಿ ಮಾಡಿದ್ದರೆ ಆಗ ನಾಗದೋಷ ನಿಮ್ಮ ಮೇಲೆ ಬರುತ್ತದೆ. ಇದ್ರಿಂದ ನಾಗರು ಕೋಪಗೊಂಡಿರ್ತಾನೆ. 
2.  ಜಾತಕದಲ್ಲಿ  ಇದನ್ನು ಕಾಲ ಸರ್ಪ ದೋಷವೆಂದು ಕರೆಯಲಾಗುತ್ತದೆ.
3. ಕಷ್ಟಪಟ್ಟು ಕೆಲಸ ಮಾಡಿದರೂ ಹಣದ ಮುಗ್ಗಟ್ಟು ಮುಗಿಯುತ್ತಿಲ್ಲ ಎಂದಾದ್ರೆ ನಿಮಗೆ ಕಾಲ ಸರ್ಪ ದೋಷವಿರಬಹುದು. 
4.  ಮನೆಯಲ್ಲಿ ಮಾಡಿದ ಆಸ್ತಿ ವ್ಯರ್ಥವಾಗುತ್ತಿದೆ, ಒಬ್ಬ ವ್ಯಕ್ತಿಯು ಬಡವನಾಗಿದ್ದರೆ, ನಾಗದೇವನ ಅಸಮಾಧಾನವು ಅದರ ಹಿಂದಿನ ಕಾರಣವಾಗಿರಬಹುದು. 
5. ಇದಲ್ಲದೇ ನಾಗ ದೇವರು ಕೋಪಗೊಂಡರೆ ಆ ವ್ಯಕ್ತಿಯ ದೇಹದಲ್ಲಿ ಟಾಕ್ಸಿನ್ ಪ್ರಮಾಣ ಹೆಚ್ಚುತ್ತದೆ.
6.  ಕುಟುಂಬ ಸದಸ್ಯರು ಮತ್ತೆ ಮತ್ತೆ ಆಹಾರ ವಿಷಕ್ಕೆ ಬಲಿಯಾಗುತ್ತಾರೆ. 
7.  ಪದೇ ಪದೇ ಒಂದಲ್ಲ ಒಂದು ಗಾಯಕ್ಕೊಳಗಾಗ್ತಿರುತ್ತಾರೆ. ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. 
8. ಹಾವು ಕಚ್ಚುವ ಅಪಾಯವೂ ಇದೆ. 
9. ಹಾವು ಮತ್ತೆ ಮತ್ತೆ ಮನೆಗೆ ಬರುತ್ತಿದ್ದರೆ ಅಥವಾ ಆಗಾಗ ಕನಸಿನಲ್ಲಿ ಕಾಣಿಸಿಕೊಂಡುತ್ತಿದ್ದರೂ ನಿಮ್ಮ ಮೇಲೆ ಹಾವು ಕೋಪಗೊಂಡಿದೆ ಎಂದು ಅರ್ಥೈಸಿಕೊಳ್ಳಿ. 
10. ನಾಗರ ದೋಷ ಕ್ಯಾನ್ಸರ್ ಗೆ ಕಾರಣವಾಗಬಹುದು. ಏಕೆಂದರೆ ಕ್ಯಾನ್ಸರ್ ರಾಹುವಿನ ದುಷ್ಪರಿಣಾಮಗಳಿಂದ ಉಂಟಾಗುತ್ತದೆ. 

ಭವಭಾರವನ್ನು ಮಾತ್ರವಲ್ಲ, ಅನಾರೋಗ್ಯವನ್ನೂ ದೂರ ಮಾಡುತ್ತೆ ಜನಿವಾರ!

ನಾಗದೇವರ ದೋಷಕ್ಕೆ ಪರಿಹಾರ : ನಾಗ ದೇವರ ಪೂಜೆಯೊಂದೇ ನಾಗ ದೋಷಕ್ಕೆ ದೊಡ್ಡ ಪರಿಹಾರ. ಇದಕ್ಕಾಗಿ ನವನಾಗ ಮಂತ್ರವನ್ನು ಜಪಿಸಬೇಕು. ನವನಾಗ ಮಂತ್ರವನ್ನು 9 ಬಾರಿ ಪಠಿಸಬೇಕು. ನಾಗರ ಪಂಚಮಿ ದಿನ ಇದನ್ನು ಪಠಿಸಿದ್ರೆ ಪರಿಣಾಮ ಹೆಚ್ಚು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ವಿದೇಶದಲ್ಲೂ ಇದೆ ಐತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ , ಏನೀದರ ವಿಶೇಷ?

ಇದಲ್ಲದೆ ಸರ್ಪದ ಆಕಾರದಲ್ಲಿರುವ ಆಹಾರವನ್ನು ಸೇವನೆ ಮಾಡಬಾರದು. ಮ್ಯಾಗಿ, ನೂಡಲ್ಸ್ ಗಳನ್ನು ತಿನ್ನಬಾರದು. ನಾಗದೋಷ ಪರಿಹಾರಕ್ಕೆ ಶಿವಲಿಂಗದ ಮೇಲೆ ಒಂದು ಜೋಡಿ ಬೆಳ್ಳಿ ಹಾವನ್ನು ಅರ್ಪಿಸಬೇಕು. ಹಾವನ್ನು ಎಂದಿಗೂ ನೋಯಿಸಬಾರದು. ಹಾವಿಗೆ ಯಾವುದೇ ರೀತಿಯಲ್ಲೂ ಕಿರುಕುಳ ನೀಡಬಾರದು.   ಶ್ರೀಗಂಧದ ವಸ್ತುಗಳಾದ ಸಾಬೂನು, ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ಹಾವಿನ ಅಸಮಾಧಾನದ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.  

click me!