ಈ Zodiac Signs ಗೆ ಏನು ಮಾಡಿದರೂ ಸಮಾಧಾನವೇ ಇರೋಲ್ಲ, ಏನೋ ಕಸಿವಿಸಿ

By Suvarna NewsFirst Published Aug 1, 2022, 5:30 PM IST
Highlights

ಕೆಲವರಿಗೆ ಜೀವನದಲ್ಲಿ ಏನು ಮಾಡಿದರೂ ತೃಪ್ತಿ ಇರುವುದಿಲ್ಲ. ಎಷ್ಟೇ ಯಶಸ್ಸು ಗಳಿಸಿದರೂ ಅತೃಪ್ತರಾಗಿಯೇ ಇರುತ್ತಾರೆ. ಸಮಾಧಾನವಾಗಿರಲು ಅವರಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಅವರ ರಾಶಿಗಳೇ ಕಾರಣ.
 

“ಏನ್ ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಇಷ್ಟೇ’ ಎನ್ನುವ ಮಾತುಗಳನ್ನು ಕೇಳಿರಬಹುದು. ಸಾಕಷ್ಟು ಯಶಸ್ವಿ ಎನಿಸಿಕೊಂಡ ಜನರೇ ಕೆಲವೊಮ್ಮೆ ಇಂತಹ ಮಾತುಗಳನ್ನು ಆಡುತ್ತಾರೆ. “ಇಷ್ಟೇ’ ಅಂದರೆ ಏನು ಎಂದು ಅವರ ಬಳಿ ಕೇಳಿನೋಡಿ. ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. ಅವರಿಗೆ ಜೀವನದಲ್ಲಿ ಅದೇನೇ ಸಾಧಿಸಿದರೂ ತೃಪ್ತಿ ಎನ್ನುವುದು ಇರುವುದಿಲ್ಲ. ಅಷ್ಟಕ್ಕೂ ಸಂತೃಪ್ತಿ ಎನ್ನುವುದು ನಮ್ಮಲ್ಲೇ ಇದೆ, ನಮ್ಮ ಮನಸ್ಸಿನಿಂದಲೇ ಅದು ಮೂಡಬೇಕು ಎಂದು ಪ್ರಾಜ್ಞರು ಹೇಳಿರುವುದು ಸರಿಯಾಗಿಯೇ ಇದೆ. ಏಕೆಂದರೆ, ಕೆಲವರು ಜೀವನದ ಅತ್ಯುತ್ತಮ ಎನ್ನಬಹುದಾದ ಹಂತ ತಲುಪಿದರೂ ತೃಪ್ತಿಯನ್ನು ಅನುಭವಿಸುವುದಿಲ್ಲ. ನಾವೆಲ್ಲರೂ ವೃತ್ತಿಯಲ್ಲಿ ಉನ್ನತಿ ಸಾಧಿಸುವುದಕ್ಕಾಗಿ, ಖಾಸಗಿ ಜೀವನದಲ್ಲಿ ನೆಮ್ಮದಿ ಪಡೆಯುವುದಕ್ಕಾಗಿ ಹರಸಾಹಸ ಮಾಡುತ್ತಿರುತ್ತೇವೆ. ಕಷ್ಟ ಪಡುತ್ತೇವೆ, ನಿರಂತರವಾಗಿ ಶ್ರಮಿಸುತ್ತೇವೆ. ಗುರಿ ತಲುಪಿದಾಗ ಒಂದು ಹಂತದಲ್ಲಿ ನಿರಾಳರಾಗುತ್ತೇವೆ, ತೃಪ್ತರಾಗುತ್ತೇವೆ. ಆದರೆ, ಎಲ್ಲರೂ ಹಾಗಲ್ಲ, ಕೆಲವರು ಮಾತ್ರ ಗುರಿ ತಲುಪಿದ ಬಳಿಕ ತೃಪ್ತರಾಗುತ್ತಾರೆ. ಆದರೆ, ಕೆಲವರು ಎಂದಿಗೂ ಅತೃಪ್ತರಾಗಿಯೇ ಇರುತ್ತಾರೆ. ಅದು ಅವರ ರಾಶಿಗಳನ್ನು ಅವಲಂಬಿಸಿದೆ. ಕೆಲವು ರಾಶಿಗಳ ಜನ ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ತೃಪ್ತಿ ಕಾಣುವುದಿಲ್ಲ. 

•    ಸಿಂಹ (Leo)
ಸಿಂಹ ರಾಶಿಯ (Zodiac Sign) ಜನ (People) ಜೀವನದ ಎಲ್ಲ ಹಂತದಲ್ಲೂ ಮಾಸ್ಟರ್ (Master) ಆಗಿಯೇ ಇರುವ ಭರವಸೆ ಹೊಂದಿರುತ್ತಾರೆ. ಸಾಮಾಜಿಕ ಬದುಕು, ಖಾಸಗಿ ಜೀವನ, ವೃತ್ತಿ ಜೀವನ ಎಲ್ಲರದಲ್ಲೂ ತಾವು ಮೇಲುಗೈ ಸಾಧಿಸಬೇಕೆಂಬ ಆಶಯ ಹೊಂದಿರುತ್ತಾರೆ. ಆದರೆ, ಒಬ್ಬ ವ್ಯಕ್ತಿ ಎಲ್ಲ ಕಡೆಗಳಲ್ಲೂ ಯಶಸ್ವಿ (Success) ಹೊಂದುವುದು ಕಡಿಮೆ. ಜೀವನದ ಈ ಸತ್ಯವನ್ನು ಅರ್ಥ ಮಾಡಿಕೊಳ್ಳದ ಸಿಂಹ ರಾಶಿಯ ಜನ ಬಹುಬೇಗ ನಿರಾಶೆ (Disappoint) ಹೊಂದುತ್ತಾರೆ. ಹೀಗಾಗಿ, ತಮ್ಮ ಯೋಜನೆಯಂತೆ ಎಲ್ಲವೂ ನಡೆಯದಿದ್ದಲ್ಲಿ ಭಾರೀ ಅತೃಪ್ತರಾಗುತ್ತಾರೆ. ಒಂದೇ ಒಂದು ವಿಚಾರ ತಾವು ಅಂದುಕೊಂಡಂತೆ ನಡೆಯದೇ ಹೋದರೆ ತೀವ್ರವಾಗಿ ವರ್ತಿಸುತ್ತಾರೆ. ಹತಾಶ (Frustrate) ಮನೋಭಾವದಲ್ಲಿ ತಮ್ಮ ಪ್ರೀತಿಪಾತ್ರರ ಮೇಲೆ ರೇಗುತ್ತಾರೆ. ಇದರಿಂದ ಇನ್ನಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳುತ್ತಾರೆ.

ಈ ನಾಲ್ಕು ದಿನಾಂಕಗಳಲ್ಲಿ ಹುಟ್ಟಿದವರು ಲಕ್ಕಿ

•    ವೃಷಭ (Taurus)
ಭೂಮಿ (Earth) ತತ್ವದ ಈ ಜನ ತಮ್ಮ ಸಂಗಾತಿ (Partner) ಮತ್ತು ಕುಟುಂಬವನ್ನು (Family) ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ, ತಮ್ಮಿಂದ ತಾವು ಗರಿಷ್ಠ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ, ಕೆಲವೊಮ್ಮೆ ಅನಗತ್ಯ ಎನಿಸುವಂತಹ ಜವಾಬ್ದಾರಿಗಳನ್ನು ಬೆನ್ನಿಗೇರಿಸಿಕೊಳ್ಳುತ್ತಾರೆ. ತಮ್ಮ ಕೆಲಸ ಪೂರೈಸುವಲ್ಲಿ ಉತ್ತಮ ವೃತ್ತಿಪರತೆ (Professionalism) ಮೆರೆಯುತ್ತಾರೆ.  ಆದರೆ, ಎಷ್ಟೇ ಯಶಸ್ವಿಯಾದರೂ ಅದರಲ್ಲಿ ಸಂತಸ ಕಾಣುವುದಿಲ್ಲ. ಭವಿಷ್ಯದ ಬಗ್ಗೆ ಭ್ರಮನಿರಸನ ಹೊಂದಿದವರಂತೆ ವರ್ತಿಸುತ್ತಾರೆ. ಇದುವರೆಗೆ ನಿಭಾಯಿಸಿದ ಕಷ್ಟಕರ ಕಾರ್ಯಗಳನ್ನು ಮಾಡದೆ ಮಧ್ಯದಲ್ಲೇ ಕೈ ಚೆಲ್ಲುತ್ತಾರೆ, ಹತಾಶರಾಗಿ ಬಿಟ್ಟುಬಿಡುತ್ತಾರೆ. ಉದ್ಯೋಗವನ್ನೂ ತೊರೆಯಬಹುದು ಅಥವಾ ಭರವಸೆ (Hope) ಕಳೆದುಕೊಳ್ಳಬಹುದು. 

ಈ ರಾಶಿಗಳಿಗೆ ಅಪ್ಪನೆಂದರೆ ಸೂಪರ್ ಮ್ಯಾನ್

•    ಧನು (Sagittarius)
ಧನು ರಾಶಿಯ ಜನ ತಮ್ಮ ಯಶಸ್ಸನ್ನು ತಮ್ಮದೇ ಕ್ಷೇತ್ರದ ಇತರರೊಂದಿಗೆ ಅಥವಾ ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಅದರಿಂದ ತಮ್ಮಲ್ಲಿ ಕೊರತೆ ಇದೆ ಎಂದು ಭಾವಿಸಿ ಹತಾಶೆ ಹೊಂದುತ್ತಾರೆ. ಕೋಪ (Anger) ಪ್ರದರ್ಶಿಸುತ್ತಾರೆ. ಧನು ರಾಶಿಯವರು ತಮ್ಮ ವೃತ್ತಿಯಲ್ಲಿ ಮೇಲಕ್ಕೆ ಏರಲು ಸಾಧ್ಯವಾಗದೆ ಇದ್ದಾಗ ಪತಿ/ಪತ್ನಿ ಅಥವಾ ಕುಟುಂಬವನ್ನು ಹೊಣೆಯನ್ನಾಗಿಸುತ್ತಾರೆ. ಮನೆಯವರ ಮೇಲೆ ಆರೋಪ ಮಾಡುತ್ತಾರೆ. ವೃತ್ತಿಯಲ್ಲಿ ಯಶಸ್ಸು ಸಾಧಿಸಿದರೂ ಅವರಿಗೆ ಅದರಲ್ಲಿ ತೃಪ್ತಿ ಇರುವುದಿಲ್ಲ. ಇನ್ನೂ ಯಶಸ್ಸು ಸಾಧಿಸಬೇಕೆಂಬ ಹಂಬಲವಿದ್ದರೂ ಅದಕ್ಕೆ ತಕ್ಕ ಪ್ರಯತ್ನ ಮಾಡುವುದಿಲ್ಲ. ಅಲ್ಲದೆ, ಪ್ರತಿಭೆಯಿದ್ದರೂ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಪರಿತಪಿಸುವುದು ಕೂಡ ಕಂಡುಬರುತ್ತದೆ. ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದರೂ ಅವರಿಗೆ ಸಮಾಧಾನ ಇರುವುದಿಲ್ಲ. 
 

click me!