Thursday Born: ಗುರುವಾರ ಹುಟ್ಟಿದವರ ಗುಣ ಹೀಗಿರತ್ತೆ..

By Suvarna NewsFirst Published Jan 15, 2022, 3:14 PM IST
Highlights

ಗುರುವಾರದಂದು ಜನಿಸಿದವರು ನಾಯಕತ್ವ ಗುಣವನ್ನು ಹೊಂದಿದವರಾಗಿದ್ದು, ಅವರು ಗುರುವಿನ ಆಶೀರ್ವಾದವನ್ನು ಪಡೆದವರಾಗಿರುತ್ತಾರೆ. ನೇರವಾಗಿ ಮಾತನಾಡುವ ಗುಣವಿದ್ದರೂ ಇವರು ಮಾತಿನಲ್ಲಿ ಹಿಡಿತವನ್ನು ಇಟ್ಟುಕೊಂಡರೆ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ, ಗುರುವಾರ ಹುಟ್ಟಿದವರ ಬಗ್ಗೆ ತಿಳಿಯೋಣವೇ..?

ಮನುಷ್ಯನ ಹುಟ್ಟಿಗೊಂದು (Birth) ಅರ್ಥವಿರುವಂತೆ ಆ ಹುಟ್ಟಿದ ಘಳಿಗೆ, ಸಮಯ (Time), ವಾರ (Week), ತಿಂಗಳು (Month) ಹೀಗೆ ವಿವಿಧ ಪ್ರಕಾರಗಳಿಗೆ ಅನುಸಾರವಾಗಿ ಅವರ ಭವಿಷ್ಯ (Future), ಸ್ವಭಾವಗಳು (Nature) ನಿರ್ಧರಿತವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಜ್ಯೋತಿಷ್ಯದ ಅನುಸಾರ ಗುರು ಗ್ರಹ (Jupiter Planet) ಬಹಳ ಪ್ರವಾವಶಾಲಿ. ಹೀಗಾಗಿ ಯಾರಿಗೇ ಆದರೂ ಗುರು ಬಲ ಇದ್ದರೆ ಸಾಕು ಎಂದು ಹೇಳುತ್ತಾರೆ. ಇದಿದ್ದರೆ ಜೀವನಕ್ಕೆ ಸಖತ್ ಪ್ಲಸ್ ಅಂತಲೇ ಹೇಳಬಹುದು. ಇನ್ನು ಗುರುವಿನ ವಾರ ಗುರುವಾರ (Thursday) ಜನಿಸಿದವರ ವ್ಯಕ್ತಿತ್ವದ ಬಗ್ಗೆ ನಾವು ನೋಡುವುದಾದರೆ ಅವರು ಸದಾ ಸಂತೋಷದ ಜೀವನವನ್ನು (Happy Life) ನಡೆಸುವವರು, ಜೊತೆಗೆ ಉದಾರ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಆದರೆ, ಅದೇ ರೀತಿಯಲ್ಲಿ ಕೆಲವು ಅಶುಭ ಫಲಗಳೂ ಇದ್ದು, ಅವುಗಳ ಬಗ್ಗೆ ತಿಳಿಯೋಣ.

ಗುರುವಾರದವರ ವ್ಯಕ್ತಿತ್ವ (Personality)
ಗುರುವಾರ ಜನಿಸಿದವರು ತಮ್ಮ ಜೀವನದಲ್ಲಿ ಸಂಪತ್ತನ್ನು (Wealth) ಹೊಂದಲಿದ್ದಾರೆ. ಜೊತೆಗೆ ಅವರು ಮಹತ್ವವಾದದ್ದನ್ನು ಸಾಧಿಸುವವರಾಗಿದ್ದು, ವಿಶಾಲ ದೃಷ್ಟಿಕೋನವನ್ನು ಹೊಂದಿದವರಾಗಿದ್ದಾರೆ. ಕೆಲವೊಮ್ಮೆ ಖಿನ್ನತೆಯ (Depression) ಮನಸ್ಥಿತಿ ಇವರದ್ದಾಗುತ್ತದೆ. ಆದರೆ, ಅದಕ್ಕೆ ಇವರು ತಲೆಕೆಡಿಸಿಕೊಳ್ಳಬೇಕಿಲ್ಲ. ಅವರು ತಮ್ಮ ಜೀವನವನ್ನು ಸದಾ ನಿರೀಕ್ಷೆಯೊಂದಿಗೆ ಜೀವಿಸಲು (Life) ಇಷ್ಟಪಡುತ್ತಾರೆ. ಎಂದೂ ಎಲ್ಲಿಯೂ ಹೋಪ್ (Hope) ಕಳೆದುಕೊಳ್ಳುವುದಿಲ್ಲ. ಹೀಗಾಗಿ ಜೀವನದಲ್ಲಿ ಎಂಥೆದ್ದೇ ಸಂದರ್ಭ ಎದುರಾದರೂ ದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಸಲಹೆ ನೀಡುವಲ್ಲಿ ನಿಪುಣರಾಗಿದ್ದು, ಇವರ ಬಳಿ ಹಲವು ಸಲಹೆ ಸೂಚನೆಗಳನ್ನು ಕೇಳಿಪಡೆಯುತ್ತಾರೆ. ಇವರ ಅದೃಷ್ಟ ಸಂಖ್ಯೆ (Lucky Number) 3. ಅಲ್ಲದೆ, ಗುರುವಾರದಂದು ಗುರುವಿನ ದೇವಸ್ಥಾನಕ್ಕೆ (Temple) ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ. 

ವೃತ್ತಿಜೀವನ ಹೇಗೆ? (Career) 
ಈಗಂತೂ ವೇಗವಾದ ಜೀವನ. ಎಲ್ಲವೂ ಫಾಸ್ಟ್ (Fast), ಹೊಸತನಕ್ಕೆ ಒಗ್ಗಿಕೊಳ್ಳಬೇಕು. ಆದರೆ, ಗುರುವಾರದಂದು ಜನಿಸಿದವರು, ಹುಟ್ಟಿನಿಂದಲೇ ನಾಯಕತ್ವ (Leadership) ಗುಣವನ್ನು ಹೊಂದಿರುತ್ತಾರೆ. ಇವರದ್ದು ವರ್ಚಸ್ವಿ ವ್ಯಕ್ತಿತ್ವವಾಗಿದ್ದು, ಇತರರನ್ನು ಸುಲಭವಾಗಿ ಮೆಚ್ಚಿಸಿಬಿಡುತ್ತಾರೆ. ಒಂದು ವೇಳೆ ಇವರು ರಾಜಕೀಯ ಜೀವನದಲ್ಲಿದ್ದರೆ (Political Life) ಏನನ್ನಾದರೂ ಸಾಧಿಸುವ ಶಕ್ತಿ ಇವರಲ್ಲಿದೆ. ಸದಾ ಹಿಂಬಾಲಕರು ಇವರಿಗಿರುತ್ತಾರೆ. ಇದಲ್ಲದೆ, ಉನ್ನತ ಮಟ್ಟದ ಹುದ್ದೆಗಳನ್ನು, ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಹೊಸತನ್ನು ಸದಾ ಹುಡುಕುವ ಇವರು, ವ್ಯವಹಾರ (Business) ಕ್ಷೇತ್ರಕ್ಕೂ ಸೈ ಎನಿಸಿಕೊಳ್ಳುವವರು. ಏಕತಾನತೆಯ ಕೆಲಸಗಳೆಂದರೆ ಇವರಿಗೆ ಇಷ್ಟವಾಗದು. 

ಇದನ್ನು ಓದಿ: Samudrika Shastra: ಲವ್, ಸೆಕ್ಸ್, ಹೆಲ್ತ್‌‌‌ನ ಮಚ್ಚೆ ಭವಿಷ್ಯ.. ನಿಮಗೆಲ್ಲಿದೆ?

ಲವ್ ಮ್ಯಾಟರ್ (Love)
ಪ್ರೀತಿ ವಿಷಯದಲ್ಲಿ ಇವರು ತುಂಬಾ ಪೊಸೆಸೀವ್ (Possessive). ಜೊತೆಗೆ ಅಷ್ಟೇ ಪ್ರೀತಿಸುವ ಗುಣವಂತರು. ಆದರೆ, ತಮಗೆ ಒಮ್ಮೆ ಪ್ರೀತಿಯಾದರೆ ಸಾಕು ಎದುರಿನ ವ್ಯಕ್ತಿ ಏನೇ ತಿಳಿಯಲಿ, ಇವರು ಹೋಗಿ ತಮಗನ್ನಿಸಿದ್ದನ್ನು ಹೇಳಿಕೊಂಡುಬಿಡುವವರು. ಆದರೆ, ಇವರ ಪ್ರೀತಿಯ ಜೀವನವ ನೋಡುವುದಾದರೆ ಸುಖಮಯವಾಗಿರಲಿದೆ. ಹೆಚ್ಚು ಭಾವೋದ್ರೇಕಕ್ಕೆ ಒಳಗಾಗುವ ಇವರು, ತಮ್ಮ ಸಂಗಾತಿಯನ್ನು ಬಹಳವೇ ಪ್ರೀತಿಸುತ್ತಾರೆ. ಪ್ರೀತಿಪಾತ್ರರನ್ನು ಮೆಚ್ಚಿಸಲು ಎಂತಹ ಕಾರ್ಯಕ್ಕೂ ಸಿದ್ಧರಾಗುತ್ತಾರೆ. ಆದರೆ, ತಮ್ಮನ್ನು ಪ್ರೀತಿಸುವವರ ಭಾವನೆಗಳನ್ನು ಅರ್ಥಮಾಡಿಕೊಂಡು ಬಾಳಿದರೆ ಸಾಮರಸ್ಯ, ಶಾಂತಿಯ ಜೊತೆಗೆ ಪ್ರೀತಿಯ ಬಾಳ್ವೆ ಇವರದ್ದಾಗುತ್ತದೆ. 

ಇದನ್ನು ಓದಿ: Astrology Tips: ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಮಹಿಳೆಯರೇನು ಮಾಡಬೇಕು?

ಮದುವೆ ಯೋಗ ಹೇಗೆ? (Marriage)
ನೇರ ನುಡಿ (Straight Forward) ವ್ಯಕ್ತಿತ್ವವನ್ನು ಹೊಂದಿರುವ ಇವರು ತಮ್ಮ ನಾಲಗೆ (Tongue) ಮೇಲೆ ನಿಯಂತ್ರಣವನ್ನು (Control) ಇಟ್ಟುಕೊಳ್ಳಬೇಕಾಗುತ್ತದೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ಜೊತೆಗೆ ಮಾತನ್ನು ನಿಯಂತ್ರಣದಲ್ಲಿಟ್ಟುಕೊಂಡಷ್ಟೂ ವೈವಾಹಿಕ ಜೀವನವು ತೃಪ್ತಿಕರವಾಗಿರುವುದಲ್ಲದೆ, ಯಶಸ್ವಿಯಾಗಬಹುದು. ಇವರ ಸಂಸಾರದಲ್ಲಿ ವಿವಾದಗಳು ಮತ್ತು ವಾದಗಳು ಸಾಮಾನ್ಯವಾಗಿದ್ದರೂ ಸಂಗಾತಿಯ ಭಾವನೆಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಬೇಕಿದೆ. ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿ ಯೋಚಿಸಿ ಹೆಜ್ಜೆ ಇಡಿ. ಆರ್ಥಿಕ (Economy) ಸ್ಥಿರತೆಗಾಗಿ ಕೆಲಸ ಮಾಡಿದರೆ ಒಳಿತು. 

click me!