ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

By Suvarna News  |  First Published Jan 15, 2022, 10:47 AM IST

ಒಂದೊಂದು ಬಣ್ಣದ ಎನರ್ಜಿ ಒಂದಿರುತ್ತದೆ. ಕೆಲವು ಕಣ್ಣಿಗೆ ತಂಪೆನಿಸಿದರೆ, ಕೆಲವು ಮನಸ್ಸಿನಗೆ ತಂಪೆನಿಸುತ್ತವೆ. ಮತ್ತೆ ಕೆಲ ಬಣ್ಣಗಳು ನೆನಪುಗಳನ್ನು ಬಡಿದೇಳಿಸಿದರೆ, ಮತ್ತೆ ಕೆಲವು ಕನಸುಗಳನ್ನು ಕಟ್ಟಿ ಕೊಡುತ್ತವೆ. ಯಾವ ಬಣ್ಣ ನಿಮ್ಮ ರಾಶಿಗೆ ಹೆಚ್ಚು ಪವರ್ ತಂದು ಕೊಡುತ್ತದೆ ತಿಳಿಯಿರಿ.


ಪ್ರತಿ ಬಣ್ಣಕ್ಕೂ ತನ್ನದೇ ಆದ ಎನರ್ಜಿ ಇರುತ್ತದೆ. ಕೆಲ ಬಣ್ಣಗಳು(colors) ಕೆಲವರಿಗೆ ಹೆಚ್ಚು ಆಗಿ ಬರುತ್ತವೆ. ರಾಶಿಗನುಗುಣವಾಗಿ ನಿಮ್ಮ ಪವರ್ ಕಲರ್ ಯಾವುದೆಂದು ತಿಳಿದು ಬಳಸಿ ನೋಡಿ. ಅವು ನಿಮ್ಮ ಆತ್ಮವಿಶ್ವಾಸ(confidence) ಹೆಚ್ಚುವ ಜೊತೆಗೆ, ಮನಸ್ಸಿನ ಅಭದ್ರತೆಗಳನ್ನು ತಣ್ಣಗಾಗಿಸುತ್ತವೆ. ಬಳಸದ ಎನರ್ಜಿಯನ್ನು ಸರಿಯಾಗಿ ಚಾನಲೈಸ್ ಮಾಡುತ್ತವೆ. ನಿಮ್ಮ ಬಲ ಹೆಚ್ಚಿಸಿ, ಮನಸ್ಸನ್ನು ಪ್ರಶಾಂತವಾಗಿಡುತ್ತವೆ. ಹಾಗಿದ್ದರೆ ಯಾವ ರಾಶಿಯವರು ಯಾವ ಬಣ್ಣದಿಂದ ಇಂಥದೊಂದು ಅಪೂರ್ವ ಶಕ್ತಿ ಗಳಿಸುತ್ತಾರೆ ನೋಡೋಣ. 

ಮೇಷ(Aries)
ನೀವು ಮೇಷ ರಾಶಿಯವರಾದರೆ ನಿಮಗೆ ಬಲ ತರುವ ಬಣ್ಣ ಕೆಂಪು(red). ಕೆಂಪು ಪ್ಯಾಶನ್, ಎನರ್ಜಿ, ಸಾಧಿಸುವ ಛಲದ ಪ್ರತೀಕವಾಗಿದೆ. ಇವರಿಗೆ ಜೀವನ ಪ್ರೀತಿ ಹೆಚ್ಚು. ಇವರ ಉತ್ಸಾಹಕ್ಕೆ ಕೆಂಪು ಸರಿಯಾದ ಬಣ್ಣವಾಗಿದೆ. 

Tap to resize

Latest Videos

undefined

ವೃಷಭ(Taurus)
ವೃಷಭ ರಾಶಿಯವರಿಗೆಹೆಸರು ತರುವ ಬಣ್ಣ ಹಸಿರು(green). ಹಸಿರು ಬಣ್ಣವು ಪ್ರಕೃತಿ(nature) ಹಾಗೂ ಬೆಳವಣಿಗೆಯ ಪ್ರತೀಕವಾಗಿದೆ. ವೃಷಭ ಎಂದರೆ ಎತ್ತು ಕೂಡಾ ಹಸಿರಿನ ನಡುವೆಯೇ ಇರುತ್ತದೆ ಹಾಗೂ ಹಸಿರನ್ನು ಸೇವಿಸುತ್ತದೆ. ಅಲ್ಲದೆ ವೃಷಭವು ವಂಸತ ಕಾಲದ ಜೊತೆ ಬೆಸೆದುಕೊಂಡಿದೆ. ಅದೂ ಕೂಡಾ ಹಸಿರನ್ನೇ ಮೆರೆಸುವ ಕಾಲವಾಗಿದೆ. 

ಮಿಥುನ(Gemini)
ಮಿಥುನ ರಾಶಿಯವರ ಪವರ್ ಕಲರ್ ಹಳದಿ(yellow). ಹಳದಿಯು ಹೊಳಪಿನ ಬಣ್ಣ. ಇದು ಪ್ರೇರಣೆ ತುಂಬುವ ಜೊತೆಗೆ ಉತ್ಸಾಹದಾಯಕವೂ ಆಗಿದೆ. ಇದು ಸೂರ್ಯನ ಕಿರಣಗಳಂತೆ ಪ್ರಜ್ವಲಿಸುವ ಬಣ್ಣವಾಗಿದ್ದು, ಸುತ್ತಲಿನ ಎಲ್ಲವೂ ಹೊಳೆಯುವಂತೆ ನೋಡಿಕೊಳ್ಳುತ್ತದೆ. ಮಿಥುನ ರಾಶಿಯವರು ಹಳದಿ ಬಳಕೆ ಹೆಚ್ಚಿಸಿದಾಗ ಇವರ ಸುತ್ತಲೂ ಸುಖ ಸಂತೋಷ ಹೆಚ್ಚಲಿದೆ. 

ಕಟಕ(Cancer)
ನಿಮ್ಮ ಬಣ್ಣ ಬಿಳಿ(white) ಹಾಗೂ ಬೆಳ್ಳಿಯ ಬಣ್ಣ(silver). ಈ ಎರಡೂ ಬಣ್ಣಗಳು ನೀರು ಹಾಗೂ ಚಂದ್ರನನ್ನು ಪ್ರತಿನಿಧಿಸುತ್ತವೆ. ಇವು ಶುದ್ಧತೆಯ ಬಣ್ಣ. ಕಟಕ ರಾಶಿಯವರಿಗೆ ಇವು ಹೆಚ್ಚು ಸಂಪರ್ಕಗಳನ್ನು, ಪ್ರೀತಿಯನ್ನು ತಂದುಕೊಡಲಿವೆ. 

Burning Of Milk : ಬುಧವಾರದಂದು ಅಪ್ಪಿತಪ್ಪಿಯೂ ಹಾಲು ತಳ ಹೊತ್ತಿಸ್ಬೇಡಿ‍!

ಸಿಂಹ(Leo)
ನಿಮ್ಮದು ಸಿಂಹದ ಬಣ್ಣದಂತೆಯೇ ಬಂಗಾರದ ಬಣ್ಣ(gold). ಗೋಲ್ಡ್ ಬಹಳ ಧನಾತ್ಮಕ ಗುಣವುಳ್ಳ ಬೆಚ್ಚನೆಯ ಬಣ್ಣವಾಗಿದೆ. ಇದು ಘನತೆ ಹಾಗೂ ಕ್ಲಾಸ್ ತೋರಿಸುತ್ತದೆ. ಯಾವಾಗಲೂ ಇದು ಅಧಿಕಾರದ ಬಣ್ಣವಾಗಿದೆ. ಸಿಂಹ ರಾಶಿಯವರಿಗೆ ಈ ಬಣ್ಣ ಅಧಿಕಾರ, ಘನತೆ, ಹೆಸರನ್ನು ತಂದು ಕೊಡಲಿದೆ. 

ಕನ್ಯಾ(Virgo)
ಕನ್ಯಾ ರಾಶಿಯವರ ಬಲದ ಬಣ್ಣ ಹಸಿರು ಹಾಗೂ ಕಂದು(brown). ಈ ಎರಡೂ ಬಣ್ಣಗಳು ನಿಮ್ಮ ಫೋಕಸ್ ಹೆಚ್ಚಿಸಿ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚು ಉತ್ತಮವಾಗಿಸುತ್ತವೆ. ಹಸಿರು ಬೆಳವಣಿಗೆಯ ಸಂಕೇತವಾಗಿದ್ದು, ಇದು ಕನ್ಯಾ ರಾಶಿಗೆ ಸದಾ ಸ್ವ ಬೆಳವಣಿಗೆಗೆ ಪ್ರೋತ್ಸಾಹಿಸುತ್ತದೆ. ಕಂದು ಬಣ್ಣವು ಸ್ಥಿರತೆ(stability)ಯ ಪ್ರತಿನಿಧಿಯಾಗಿದ್ದು, ಬದುಕಿನಲ್ಲಿ ಚಾಂಚಲ್ಯ ಕಡಿಮೆ ಮಾಡುತ್ತದೆ. 

ತುಲಾ(Libra)
ಈ ರಾಶಿಯವರು ಗುಲಾಬಿ(pink) ಹಾಗೂ ತಿಳಿ ನೀಲಿ(light blue)ಯ ಬಣ್ಣಗಳಿಂದ ಶಕ್ತಿ ಪಡೆಯಬಲ್ಲರು. ಈ ಎರಡೂ ಬಣ್ಣಗಳು ತುಲಾ ರಾಶಿಯವರನ್ನು ಹೆಚ್ಚು ಮೃದುವಾಗಿಸುವ ಜೊತೆಗೆ ಪ್ರೀತಿಸುವ ಗುಣ ಹೆಚ್ಚಿಸುತ್ತದೆ. ಈ ರಾಶಿಯವರು ಹೆಚ್ಚು ಶಾಂತಮುಖದವರಾಗಿ ಕಾಣಲು ಸಹಾಯ ಮಾಡುತ್ತವೆ. ತಿಳಿ ನೀಲಿಯು ವ್ಯಕ್ತಿಯಲ್ಲಿ ಬ್ಯಾಲೆನ್ಸ್ ಹಾಗೂ ಸ್ಪಷ್ಟತೆ ತರುತ್ತದೆ. ಪಿಂಕ್ ಬಣ್ಣವು ಪ್ರೀತಿಯ ಗುಣ ಹೆಚ್ಚಿಸುತ್ತದೆ. 

Party Lovers: ಈ ಆರು ರಾಶಿಯವರನ್ನು ಪಾರ್ಟಿಗೆ ಕರೆದರೆ ಅದು ಫ್ಲಾಪ್ ಆಗೋ ಚಾನ್ಸೇ ಇಲ್ಲ!

ವೃಶ್ಚಿಕ(Scorpio)
ನಿಮ್ಮ ರಾಶಿಯ ಬಲದ ಬಣ್ಣ ಕಪ್ಪು. ಕಪ್ಪೆಂದರೆ ನಿಗೂಢತೆ(mystery). ಈ ರಾಶಿಯವರು ಹೆಚ್ಚು ಫೋಕಸ್ಡ್ ಆಗಿಯೂ, ವಿಚಾರ ಮಾಡುವ ಗುಣದವರಾಗಿಯೂ ಇರಲು ಕಪ್ಪು ನೆರವಾಗುತ್ತದೆ. ಚೇಳು ಅಂದರೆ ವೃಶ್ಚಿಕವು ಜೀವಿಸುವ ಆಳವನ್ನು ಕಪ್ಪು ಪ್ರತಿನಿಧಿಸುತದೆ. ಭೂಮಿಯ ಕೆಳಗೆ ಬದುಕುವ ಅದರಂತೆ, ಆದಷ್ಟು ಎಲ್ಲರ ಕಣ್ಣಿಗೆ ಬೀಳದೆ ಬದುಕಲಿಚ್ಚಿಸುವವರು ಇವರು.  

ಧನು(Sagittarius)
ಧನು ರಾಶಿಯ ಪವರ್ ಕಲರ್ ನೇರಳೆ(purple). ಈ ಬಣ್ಣವು ಧನು ರಾಶಿಯವರ ತತ್ವಜ್ಞಾನ ಗುಣವು ಹೆಚ್ಚು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಇದೊಂದು ಧನಾತ್ಮಕ ಬಣ್ಣವಾಗಿದ್ದು, ಧನು ರಾಶಿಯವರಿಗೆ ತಮ್ಮ ಮಿತಿಗಳನ್ನು ಮೀರಲು ನೆರವಾಗುತ್ತದೆ. 

ಮಕರ(Capricorn)
ನೀವು ಮಕರ ರಾಶಿಯವರಾಗಿದ್ದರೆ ನಿಮಗೆ ಬಲ ತರುವ ಬಣ್ಣಗಲು ಕಂದು ಹಾಗೂ ಬೂದು(gray). ಈ ಎರಡೂ ಬಣ್ಣಗಳು ಮಕರ ರಾಶಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯುತ್ತಮ ಪ್ರಾಯೋಗಿಕ ದಾರಿ ಯಾವುದೆಂದು ತೋರಿಸುತ್ತವೆ. ಇವೆರಡೂ ನ್ಯೂಟ್ರಲ್ ಬಣ್ಣಗಳಾಗಿದ್ದರೂ ಹೆಚ್ಚು ಸ್ಟ್ರಾಂಗ್ ಆಗಿವೆ. ಬೂದು ಬಣ್ಣವು ಮಕರ ರಾಶಿಯ ನೇರ ನಡೆನುಡಿಗಳನ್ನು, ಸರಳ ಜೀವನವನ್ನು ಪ್ರತಿನಿಧಿಸುತ್ತದೆ. ಕಂದು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. 

Vastu tips for Roof: ಮನೆಯ ಛಾವಣಿ ಮೇಲೆ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ..

ಕುಂಭ(Aquarius)
ಕುಂಭ ರಾಶಿಯ ಬಣ್ಣ ನೀಲಿ(blue). ನೀಲಿ ಬಣ್ಣವು ಕುಂಭ ರಾಶಿಯವರಲ್ಲಿ ಸೃಜನಶೀಲತೆಯನ್ನು ಬಡಿದೇಳಿಸುತ್ತದೆ. ಜೊತೆಗೆ ಇವರ ಅಭದ್ರತೆಯನ್ನು ನಿಯಂತ್ರಣಕ್ಕೆ ತರುತ್ತದೆ. ನೀಲಿಯು ಸಾಗರದ ಬಣ್ಣವಾಗಿದ್ದು, ಹರಿವನ್ನು ಸೂಚಿಸುತ್ತದೆ. ಕುಂಭ ರಾಶಿಗೆ ಹೊಸ ಆಲೋಚನೆಗಳು ಹುಟ್ಟಲು, ಪ್ರಯೋಗಗಳಿಗೆ ಸಹಾಯ ಮಾಡುತ್ತದೆ. 

ಮೀನ(Pisces)
ಈ ರಾಶಿಯ ಬಲದ ಬಣ್ಣ ತಿಳಿ ಹಸಿರು. ಈ ಬಣ್ಣವು ಹೊಸತು ಹಾಗೂ ನವೀಕರಣದ ಪ್ರತೀಕ. ಮೀನ ರಾಶಿಗೆ ತನ್ನ ಅಂತರಂಗದ ಜೊತೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಇದು ಬದುಕಿನ ಬಣ್ಣವಾಗಿದ್ದು, ಪ್ರೇರಣಾದಾಯಕವಾಗಿರಲಿದೆ. 
 

click me!