ಪತ್ನಿಗೆ ಮೋಸ ಮಾಡಿ ಬೇರೆಯವರೊಟ್ಟಿಗೆ ಸಂಬಂಧ ಬೆಳೆಸೋರು ಮುಂದಿನ ಜನ್ಮದಲ್ಲಿ ಏನಾಗ್ತಾರೆ?

Published : Jan 18, 2023, 03:56 PM IST
 ಪತ್ನಿಗೆ ಮೋಸ ಮಾಡಿ ಬೇರೆಯವರೊಟ್ಟಿಗೆ ಸಂಬಂಧ ಬೆಳೆಸೋರು ಮುಂದಿನ ಜನ್ಮದಲ್ಲಿ ಏನಾಗ್ತಾರೆ?

ಸಾರಾಂಶ

ಈಗಿನ ಜನ್ಮದಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹಿರಿಯರು ಹೇಳ್ತಾರೆ. ಬರೀ ಸ್ವರ್ಗ ದೊರೆಯೋದು ಮಾತ್ರವಲ್ಲ ಪುನರ್ಜನ್ಮ ಕೂಡ ನಾವು ಮಾಡುವ ಕೆಲಸವನ್ನು ಅವಲಂಭಿಸಿದೆ. ಈ ಜನ್ಮದಲ್ಲಿ ನೀವು ಒಳ್ಳೆ ಕೆಲಸ ಮಾಡಿದ್ರೆ ಮಾತ್ರ ಮುಂದಿನ ಜನ್ಮ ಕೂಡ ಉತ್ತಮವಾಗಿರಲು ಸಾಧ್ಯ.  

ಗರುಡ ಪುರಾಣ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದಾಗಿದೆ. ಇದನ್ನು ವೈಷ್ಣವ ಪಂಥದ ಪ್ರಮುಖ ಪುಸ್ತಕ ಎಂದೂ ಕರೆಯುತ್ತಾರೆ. ಗರುಡ ಪುರಾಣ, ವಿಷ್ಣು ಮತ್ತು  ಗರುಡರಾಜನ ಮಧ್ಯೆ ನಡೆಯುವ ಸಂಭಾಷಣೆಯಾಗಿದೆ. ಇಲ್ಲಿ ವಿಷ್ಣು, ಗರುಡನಿಗೆ ಅನೇಕ ಸಂಗತಿಯನ್ನು ಹೇಳ್ತಾನೆ. ಗರುಡ ಪುರಾಣದಲ್ಲಿ ಮನುಷ್ಯನ ಜೀವನದ ಬಗ್ಗೆ ಅನೇಕ ನಿಗೂಢ ವಿಷ್ಯಗಳನ್ನು ಹೇಳಲಾಗಿದೆ. ಗರುಡ ಪುರಾಣದಲ್ಲಿ 19 ಸಾವಿರ ಶ್ಲೋಕವಿದೆ. ಅದ್ರಲ್ಲಿ ಜನನ, ಮರಣ, ಸ್ವರ್ಗ ಮತ್ತು ನರಕಗಳ ಬಗ್ಗೆ ವಿವರಿಸಲಾಗಿದೆ. ಒಬ್ಬ ಮನುಷ್ಯನಿಗೆ ಸಾವು ಹತ್ತಿರ ಬಂದಾಗ ಆತನಿಗೆ ಏನೆಲ್ಲ ಅನುಭವವಾಗುತ್ತದೆ ಎಂಬುದನ್ನು ಕೂಡ ಇದ್ರಲ್ಲಿ ತಿಳಿಸಲಾಗಿದೆ. 

ನಾವೆಲ್ಲ ಪುನರ್ಜನ್ಮದ ಬಗ್ಗೆ ಮಾತನಾಡ್ತೇವೆ. ಆದ್ರೆ ಹಿಂದೆ ಯಾವ ರೂಪದಲ್ಲಿದ್ವಿ, ಮುಂದೆ ಯಾವ ರೂಪ ತಾಳುತ್ತೇವೆ ಎನ್ನುವುದು ನಮಗೆ ತಿಳಿದಿಲ್ಲ. ಆದ್ರೆ ಗರುಡ ಪುರಾಣ (Garuda Purana) ದಲ್ಲಿ ಪುನರ್ಜನ್ಮದ ಬಗ್ಗೆಯೂ ಕೇಳಲಾಗಿದೆ.  ಸಾವಿನ (Death) ನಂತರ ಆತ್ಮ (Soul) ವು ಹೇಗೆ ಮತ್ತು ಯಾವ ರೂಪದಲ್ಲಿ ಮರುಹುಟ್ಟು ಪಡೆಯುತ್ತದೆ ಎಂಬುದನ್ನು ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿ  ತನ್ನ ಜೀವನ (Life) ದಲ್ಲಿ ಯಾವ ಕೆಲಸ ಮಾಡಿದ್ದಾನೆ ಎಂಬುದರ ಆಧಾರದ ಮೇಲೆ ಆತನ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಈ ಜನ್ಮದಲ್ಲಿ ಆತ ಯಾವ ಕರ್ಮ ಮಾಡಿದ್ದಾನೆ ಎಂಬುದು ಮುಂದಿನ ಜನ್ಮದ ಜೊತೆ ಸಂಬಂಧ ಹೊಂದಿರುತ್ತದೆ. ಮುಂದಿನ ಜನ್ಮಕ್ಕೆ ಸಂಬಂಧಿಸಿದಂತೆ ಗರುಡ ಪುರಾಣದಲ್ಲಿ ಏನೆಲ್ಲ ವಿಷ್ಯವನ್ನು ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೆವೆ.  

ಮುಂದಿನ ಜನ್ಮದಲ್ಲಿ ನೀವು ಏನಾಗಿ ಜನಿಸ್ತೀರಿ ? : 

ಗರ್ಭದಲ್ಲೇ ಸಾಯ್ತಾರೆ ಇವರು : ಮೊದಲೇ ಹೇಳಿದಂತೆ ನಾವೇನು ಮಾಡ್ತೇವೆ ಎನ್ನುವುದು ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಈ ಜನ್ಮದಲ್ಲಿ ನೀವು ನಿಮ್ಮ ಹೆತ್ತವರು ಮತ್ತು ಮಕ್ಕಳ ಸಂತೋಷಕ್ಕೆ ಅಡ್ಡಿಯಾದ್ರೆ, ಅವರನ್ನು ಅಸಂತೋಷಗೊಳಿಸಿದ್ದರೆ ನೀವು ಮುಂದಿನ ಜನ್ಮದಲ್ಲಿ ಭೂಮಿ ಮೇಲೆ ಜನಿಸುವುದಿಲ್ಲ. ನೀವು ತಾಯಿಯ ಗರ್ಭದಲ್ಲಿಯೇ ಸಾವನ್ನಪ್ಪುತ್ತೀರಿ. 

ಮುಂದಿನ ಜನ್ಮದಲ್ಲಿ ಕಾಡುತ್ತೆ ಭೀಕರ ರೋಗ : ಹೆಣ್ಣನ್ನು ದೇವರಂತೆ ಕಾಣ್ಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೊಂದ ಹೆಣ್ಣಿನ ಶಾಪ ಮುಂದಿನ ಜನ್ಮದಲ್ಲೂ ನಮ್ಮನ್ನು ಬಿಡುವುದಿಲ್ಲ. ಹೆಣ್ಣಿಗೆ ಹಿಂಸೆ ನೀಡಿದ ವ್ಯಕ್ತಿ ಮುಂದಿನ ಜನ್ಮದಲ್ಲಿ ಭೀಕರ ರೋಗಗಳಿಂದ ಬಳಲಿ ದೈಹಿಕ ನೋವಿನಲ್ಲೇ ಜೀವನ ಕಳೆಯುತ್ತಾನೆ.

ದುರ್ಬಲರಾಗ್ತಾರೆ ಈ ಪುರುಷರು : ಪತ್ನಿಗೆ ಮೋಸ ಮಾಡಿ ಬೇರೆ ಮಹಿಳೆಯರ ಜೊತೆ ಸಂಬಂಧ ಬೆಳೆಸುವ ಪುರುಷರು ಮುಂದಿನ ಜನ್ಮದಲ್ಲಿ ದುರ್ಬಲರಾಗಿ ಜನಿಸ್ತಾರೆ ಎನ್ನುತ್ತದೆ ಗರುಡ ಪುರಾಣ. 

ಬ್ರಹ್ಮರಾಕ್ಷಸರಾಗ್ತಾರೆ ಇವರು : ಗುರುವನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಈ ಜನ್ಮದಲ್ಲಿ ಗುರುವನ್ನು ಕೀಳಾಗಿ ನೋಡುವ, ಅವರಿಗೆ ಗೌರವ ನೀಡದ ವ್ಯಕ್ತಿಗೆ ಮರಣದ ನಂತ್ರ ನರಕ ಪ್ರಾಪ್ತಿಯಾಗುತ್ತದೆ. ಜೊತೆಗೆ ಮುಂದಿನ ಜನ್ಮದಲ್ಲಿ ಆತ ನೀರಿಲ್ಲದೆ ಬ್ರಹ್ಮರಾಕ್ಷಸರಾಗಿ ಹುಟ್ಟುತ್ತಾನೆ. 

ಶನಿಯ ಕ್ರೂರದೃಷ್ಟಿಗೆ ತುತ್ತಾಗದಂತೆ ಯಾವ ಹರಳು ಧರಿಸಬೇಕು? ಜನ್ಮರಾಶಿಗೆ ತಕ್ಕಂತೆ ನೋಡಿ

ಗೂಬೆಯಾಗ್ತೀರಾ ನೀವು : ಈ ಜನ್ಮದಲ್ಲಿ ಜನರಿಗೆ ಮೋಸ ಮಾಡಿದ ವ್ಯಕ್ತಿಗಳಿಗೆ ಮುಂದಿನ ಜನ್ಮದಲ್ಲಿ ಮನುಷ್ಯ ಜನ್ಮ ಸಿಗೋದಿಲ್ಲ. ಅವರು ಗೂಬೆಯಾಗಿ ಜನಿಸ್ತಾರೆ. 

ಮುಂದಿನ ಜನ್ಮದಲ್ಲಿ ಕುರುಡು ಕಾಡುತ್ತೆ : ಈ ಜನ್ಮದಲ್ಲಿ ನೀವು ಮಾಡಿದ ಪ್ರತಿಯೊಂದು ಕೆಲಸದ ಲೆಕ್ಕವೂ ಇರುತ್ತದೆ. ನೀವು ಅಮಾಯಕರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದರೆ ಮುಂದಿನ ಜನ್ಮದಲ್ಲಿ ಅಂಧತ್ವ ನಿಮ್ಮನ್ನು ಕಾಡುತ್ತದೆ ಎನ್ನುತ್ತದೆ ಗರುಡ ಪುರಾಣ.

ಈ ವಸ್ತುಗಳನ್ನು ಹಂಚಿಕೊಂಡ್ರೆ 2023ಕ್ಕೆ ದೌರ್ಭಾಗ್ಯ ಆಹ್ವಾನಿಸಿದಂತೇ ಸರಿ!

ಮೇಕೆ ಜನ್ಮವೇ ಗತಿ : ಈ ಜನ್ಮದಲ್ಲಿ ಕೊಲೆ, ಸುಲಿಗೆ, ಲೂಟಿ ಮಾಡಿ ಅಥವಾ ಪ್ರಾಣಿಗಳನ್ನು ಬೇಟೆಯಾಡಿ ಹಣ ಸಂಪಾದಿಸುತ್ತಿದ್ದರೆ ಮುಂದಿನ ಜನ್ಮದಲ್ಲಿ ಕಟುಕನ ಕೈನಲ್ಲಿ ಬಲಿಯಾಗುವ ಮೇಕೆಯಾಗ್ತಿರಾ ನೀವು.  
 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!