Asianet Suvarna News Asianet Suvarna News

ಈ ವಸ್ತುಗಳನ್ನು ಹಂಚಿಕೊಂಡ್ರೆ 2023ಕ್ಕೆ ದೌರ್ಭಾಗ್ಯ ಆಹ್ವಾನಿಸಿದಂತೇ ಸರಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮ್ಮ ಅದೃಷ್ಟವನ್ನು ಹಾಳು ಮಾಡುತ್ತವೆ. ಕೆಲ ವಸ್ತುಗಳನ್ನು ಕೊಡುವುದು, ಕೆಲ ವಸ್ತುಗಳನ್ನು ಹಂಚಿಕೊಳ್ಳುವುದು- ಇವೆಲ್ಲ ನಮ್ಮ ಅದೃಷ್ಟದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಈ ವಿಷಯಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದು ಮುಖ್ಯ. 

Jyotish Tips do not share these things in 2023 it ruins your luck skr
Author
First Published Jan 18, 2023, 12:35 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮ್ಮ ಅದೃಷ್ಟವನ್ನು ಹಾಳು ಮಾಡುತ್ತವೆ. ಅವು ಹೇಳುವಾಗ, ಕೇಳುವಾಗ ಮತ್ತು ನೋಡುವಾಗ ತೀರಾ ಚಿಕ್ಕದಾಗಿ ಕಾಣುತ್ತವೆ, ಆದರೆ ಅವುಗಳ ಪರಿಣಾಮವು ತುಂಬಾ ವಿಸ್ತಾರವಾಗಿರುತ್ತದೆ. ಉದಾಹರಣೆಗೆ, ನೀವು ಇತರರಿಗೆ ಏನು ಕೊಡುತ್ತೀರಿ ಅಥವಾ ಅವರಿಂದ ನೀವು ಏನು ತೆಗೆದುಕೊಳ್ಳುತ್ತೀರಿ ಎಂಬುದು ನಿಮ್ಮ ಹಣೆಬರಹದ ಮೇಲೆ ಪರಿಣಾಮ ಬೀರುತ್ತದೆ.

ಪೌರಾಣಿಕ ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯು ಎಷ್ಟೇ ತೊಂದರೆಯಲ್ಲಿದ್ದರೂ, ಅವನು ಎಂದಿಗೂ ಇತರರೊಂದಿಗೆ ಕೆಲವು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಬಾರದು. ಅಂದರೆ, ಅವನು ಈ ವಸ್ತುಗಳನ್ನು ಇತರರಿಗೆ ಕೊಡಬಾರದು ಅಥವಾ ಯಾರಿಂದಲೂ ತೆಗೆದುಕೊಳ್ಳಬಾರದು. ನೀವು ಏನನ್ನಾದರೂ ತೆಗೆದುಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಪ್ರತಿಯಾಗಿ ಹಣವನ್ನು ನೀಡಿ. ಹಾಗೆಯೇ ಈ ವಸ್ತುಗಳನ್ನೂ ಉಚಿತವಾಗಿ ನೀಡಬಾರದು. ಈ ವಿಷಯಗಳ ಬಗ್ಗೆ ತಿಳಿಸುತ್ತೇವೆ ಕೇಳಿ..

ಹೊಸ ವರ್ಷದಲ್ಲಿ ತಪ್ಪಾಗಿಯೂ ಈ 4 ಕೆಲಸಗಳನ್ನು ಮಾಡಬೇಡಿ!
ನಿಮಗೆ ಸಿಕ್ಕ ಉಡುಗೊರೆಗಳನ್ನು ಇತರರಿಗೆ ನೀಡಬೇಡಿ(Do not pass on your gift)

ನಮಗೆ ಯಾವುದೇ ಉಡುಗೊರೆ ಸಿಕ್ಕರೂ, ಅದು ಬೇಡದ್ದಾದರೆ ಹಾಗೆಯೇ ಇಟ್ಟು ಅದನ್ನು ಇತರರಿಗೆ ನೀಡುವುದು ಬಹಳ ಸಾಮಾನ್ಯ ಸಂಗತಿ. ಆದರೆ ಇದನ್ನು ಮಾಡಬಾರದು. ಇದರಿಂದ ದುರದೃಷ್ಟ ಬರುತ್ತದೆ. ಅಷ್ಟೊಂದು ಆ ವಸ್ತು ನಿಮಗೆ ಬೇಡವೇ ಬೇಡವಾಗಿದ್ದರೂ ಅದನ್ನು ಮತ್ತೊಬ್ಬರಿಗೆ ನೀಡುವಾಗ ಪ್ರತಿಯಾಗಿ ಕನಿಷ್ಠ ಒಂದು ರೂಪಾಯಿಯನ್ನಾದರೂ ತೆಗೆದುಕೊಳ್ಳಬೇಕು. ಇದರಿಂದ ನೀವು ದುರದೃಷ್ಟವನ್ನು ಎದುರಿಸಬೇಕಾಗಿಲ್ಲ.

ಈ 6 ರಾಶಿಗಳು ಮನಸ್ಸು ಮಾಡಿದರೆ ಶತಕೋಟ್ಯಧಿಪತಿಗಳಾಗುವುದು ಕನಸಿನ ಮಾತಲ್ಲ!

ಇತರರ ಬಟ್ಟೆಗಳನ್ನು ಧರಿಸಬೇಡಿ(Do not wear others' cloths)
ಅನೇಕ ಜನರು ಇತರರ ಬಟ್ಟೆಗಳನ್ನು ಧರಿಸುತ್ತಾರೆ. ಅದರಲ್ಲೂ ಹಾಸ್ಟೆಲ್, ಪಿಜಿಯಲ್ಲಿರುವವರು ಸಿಕ್ಕ ಸಿಕ್ಕ ಗೆಳೆಯರ ಕಪಾಟಿನಿಂದ ಸಲುಗೆಯಲ್ಲಿ ಬಟ್ಟೆ ತೆಗೆದುಕೊಂಡು ಬೇಕಾಬಿಟ್ಟಿ ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಮಾಡಲೇಬಾರದು. ಹೀಗೆ ಮಾಡುವುದರಿಂದ ನಿಮ್ಮ ಹಣೆಯ ಮೇಲೆ ನೀವು ಧರಿಸಿರುವ ವ್ಯಕ್ತಿಯ ದುರಾದೃಷ್ಟವನ್ನು ನೀವು ತೆಗೆದುಕೊಳ್ಳುತ್ತೀರಿ. ತುರ್ತು ಪರಿಸ್ಥಿತಿಯ ಹೊರತು ಇತರ ಜನರ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ. ನಿಮ್ಮ ಬಟ್ಟೆ ಹಳೆಯದಾಗಿದ್ದರೂ ಪರವಾಗಿಲ್ಲ, ಸ್ವಚ್ಛವಾದ ನಿಮ್ಮದೇ ಬಟ್ಟೆಗಳನ್ನು ಧರಿಸುವ ಅಭ್ಯಾಸ ಒಳ್ಳೆಯದು. 

ಹಾಸಿಗೆ ಹಂಚಿಕೊಳ್ಳಬೇಡಿ(Do not share bed)
ಕೆಲವರಿಗೆ ಯಾರ ಹಾಸಿಗೆಯ ಮೇಲಾದರೂ ಸರಿ, ಮಲಗುವ ಅಭ್ಯಾಸ ಇರುತ್ತದೆ. ಇದೂ ಕೂಡ ಕೆಟ್ಟ ಅಭ್ಯಾಸ. ಹೀಗೆ ಮಾಡುವುದರಿಂದ ನಿಮಗೆ ತೊಂದರೆಯಾಗಬಹುದು. ನಿಮ್ಮ ಹಾಸಿಗೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ಅಥವಾ ಇತರರ ಹಾಸಿಗೆಯನ್ನು ನಿಮಗಾಗಿ ತೆಗೆದುಕೊಳ್ಳಬೇಡಿ. ಅಲ್ಲದೆ, ಬಳಸಿದ ಹಾಸಿಗೆಯನ್ನು ಪಡೆದು ಬಳಸಬಾರದು. ಈ ಎರಡೂ ವಿಷಯಗಳು ದುರಾದೃಷ್ಟವನ್ನು ತರುತ್ತವೆ. ನೀವು ಎಲ್ಲೋ ಹೊರಗೆ ಹೋಗಿದ್ದಾಗ ನೀವು ಇದನ್ನು ಮಾಡಬಹುದು. ಆದರೆ ಸಾಮಾನ್ಯವಾಗಿ ಇದನ್ನು ಮಾಡಬಾರದು.

ಜೈನದೀಕ್ಷೆ ಪಡೆಯುತ್ತಿದ್ದಾಳೆ ನೂರಾರು ಕೋಟಿ ಒಡೆಯನ 8 ವರ್ಷದ ಪುಟಾಣಿ!

ದಾರಿಯಲ್ಲಿ ಬಿದ್ದಿರುವ ವಸ್ತುಗಳನ್ನು ಮುಟ್ಟಬೇಡಿ(Do not touch random things thrown on road)
ದಾರಿಯಲ್ಲಿ ನಿಂಬೆ-ಮೆಣಸಿನಕಾಯಿ, ತೆಂಗಿನಕಾಯಿ, ಪೂಜಾ ಸಾಮಾಗ್ರಿಗಳು ಬಿದ್ದಿರುವುದನ್ನು ಹಲವು ಬಾರಿ ನೋಡುತ್ತೇವೆ. ಅವುಗಳನ್ನು ತಪ್ಪಾಗಿಯೂ ಮುಟ್ಟಬಾರದು. ನಂಬಿಕೆಗಳ ಪ್ರಕಾರ, ಇದನ್ನು ಮಾಡುವುದರಿಂದ, ಅವರೊಳಗಿನ ನಕಾರಾತ್ಮಕ ಶಕ್ತಿಯು ನಿಮ್ಮನ್ನು ಪ್ರವೇಶಿಸುತ್ತದೆ ಮತ್ತು ನಿಮಗೆ ಹಾನಿ ಮಾಡುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios