Shani Amavasya 2023: ಶನಿ ದೋಷ ಕಳೆದುಕೊಳ್ಳೋಕೆ ಇದೇ ಸುದಿನ, ಇಷ್ಟ್ ಮಾಡಿ ಸಾಕು..

By Suvarna News  |  First Published Jan 18, 2023, 3:07 PM IST

30 ವರ್ಷಗಳ ನಂತರ ಶನಿ ಅಮಾವಾಸ್ಯೆಯಂದು ಅಪರೂಪದ ಕಾಕತಾಳೀಯವಾಗುತ್ತಿದೆ. ಶನಿ ಅಮಾವಾಸ್ಯೆ ಜನವರಿ 21ರಂದು ಬರುತ್ತದೆ. ಶುಭ ಸಮಯ ಮತ್ತು ದಿನಾಂಕವನ್ನು ತಿಳಿಸಿ.
 


ಶನಿ ಅಮಾವಾಸ್ಯೆಗೆ ಧರ್ಮಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ. ಶನಿವಾರದಂದು ಅಮವಾಸ್ಯೆ ಬಂದಾಗ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶನಿವಾರವು ಶನಿಗೆ ಸಂಬಂಧಿಸಿದ ದಿನವಾದ್ಧರಿಂದ ಶನಿ ಅಮಾವಾಸ್ಯೆಯನ್ನು ವಿಶೇಷವಾಗಿ ನೋಡಲಾಗುತ್ತದೆ. ಈ ದಿನ ವಿಶೇಷವಾಗಿ ಶನಿ ದೇವರನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆ ಎಂದರೆ ಸ್ನಾನ, ದಾನ, ಪಿತೃಕಾರ್ಯಗಳನ್ನು ಮಾಡಲಾಗುತ್ತದೆ. ಏಕೆಂದರೆ, ಪಿತೃ ದೋಷ(Pitru dosh) ನಿವಾರಣೆಗೆ ಅಮಾವಾಸ್ಯೆ ಒಳ್ಳೆಯ ದಿನವಾಗಿದೆ. ಇನ್ನು ಶನೈಶ್ಚರಿ ಅಮಾವಾಸ್ಯೆ ಎಂದರೆ ಪಿತೃದೋಷದ ಜೊತೆಗೆ ಪರಿಹಾರಗಳ ಮೂಲಕ ಶನಿ ದೋಷವನ್ನೂ ತೊಡೆದು ಹಾಕಬಹುದು. ಹಾಗಾಗಿ ಶನಿವಾರದ ಅಮಾವಾಸ್ಯೆಗೆ ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. 

ಈ ಬಾರಿ ಶನಿ ಅಮಾವಾಸ್ಯೆಯು(Shani Amavasya 2023) ಜನವರಿ 21ರಂದು ಬರುತ್ತದೆ. ಇದರೊಂದಿಗೆ ಈ ದಿನ ಮೌನಿ ಅಮಾವಾಸ್ಯೆಯೂ ಇದ್ದು 30 ವರ್ಷಗಳ ನಂತರ ಶನಿದೇವರು ಕುಂಭ ರಾಶಿಯಲ್ಲಿದ್ದು ಅಪರೂಪದ ಕಾಕತಾಳೀಯವೂ ಆಗಿದೆ. ಇದರೊಂದಿಗೆ ಇನ್ನೂ 4 ಯೋಗಗಳು ಕೂಡ ಈ ದಿನ ರೂಪುಗೊಳ್ಳುತ್ತಿವೆ. ಹಾಗಾಗಿಯೇ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಿದೆ. ಶನಿ ಅಮಾವಾಸ್ಯೆಯ ಶುಭ ಮುಹೂರ್ತ, ತಿಥಿ, ಯೋಗ ಮತ್ತು ಪೂಜೆಯ ಸಮಯವನ್ನು ತಿಳಿಯೋಣ.

Tap to resize

Latest Videos

ಶನಿ ಅಮಾವಾಸ್ಯೆ ಶುಭ ಸಮಯ ಮತ್ತು ದಿನಾಂಕ
ವೈದಿಕ ಪಂಚಾಂಗದ ಪ್ರಕಾರ ಈ ಬಾರಿಯ ಅಮಾವಾಸ್ಯೆಯು ಜನವರಿ 21ರಂದು ಬೆಳಿಗ್ಗೆ 6.16ರಿಂದ ಪ್ರಾರಂಭವಾಗಿ ಜನವರಿ 22ರ ಮಧ್ಯರಾತ್ರಿ 2.21ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ಜನವರಿ 21 ರಂದು ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಶನಿದೇವನ ಪೂಜೆಗೆ ಮಂಗಳಕರ ಸಮಯ ಸಂಜೆ 6 ರಿಂದ 7.30ರವರೆಗೆ ಇರುತ್ತದೆ.

30 ವರ್ಷದ ಬಳಿಕ ಮಾಘ ಅಮವಾಸ್ಯೆಯಂದು ಅದ್ಭುತ ಯೋಗ, ಈ ದಿನ ನೀವೇನು ಮಾಡಬೇಕು?

ಈ ಯೋಗವಾಗುತ್ತಿದೆ..
ಪಂಚಾಂಗದ ಪ್ರಕಾರ ಶನೈಶ್ಚರ ಅಮಾವಾಸ್ಯೆಯಂದು ಈ ಬಾರಿ ಖಪ್ಪರ ಯೋಗ, ಚತುಗ್ರಾಹಿ ಯೋಗ, ಷಡಷ್ಟಕ ಯೋಗ, ಸಂಸಪ್ತಕ ಯೋಗಗಳು ರೂಪುಗೊಳ್ಳುತ್ತಿವೆ. ಇದರೊಂದಿಗೆ ಶನಿದೇವನು ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಇರುತ್ತಾನೆ.

ಈ ವಿಧಾನದಿಂದ ಪೂಜೆ ಮಾಡಿ

  • ಈ ದಿನ ಸಾಯಂಕಾಲ ಶನಿ ದೇವಾಲಯಕ್ಕೆ ಹೋಗಿ ಶನಿ ಮೂರ್ತಿಯ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಇದರೊಂದಿಗೆ ಶನಿ ಮೂರ್ತಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು. ಅದೇ ಸಮಯದಲ್ಲಿ ಶನಿ ಚಾಲೀಸಾ ಮತ್ತು ಶನಿದೇವನ ಬೀಜ ಮಂತ್ರವನ್ನು ಜಪಿಸಬೇಕು. 
  • ಸ್ಕಂದ ಪುರಾಣ(Skanda Puran), ಪದ್ಮ ಪುರಾಣ ಮತ್ತು ವಿಷ್ಣು ಧರ್ಮೋತ್ತರ ಪುರಾಣಗಳ ಪ್ರಕಾರ, ಶನೈಶ್ಚರಿ ಅಮವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳು ನಾಶವಾಗುತ್ತವೆ.

    Magh Masa 2023: ಈ ಮಾಸದಲ್ಲಿಯೇ ಬರಲಿದೆ ಶಿವರಾತ್ರಿ, ವಸಂತ ಪಂಚಮಿ
     
  • ಕಪ್ಪು ಹೊದಿಕೆ, ಕಪ್ಪು ಬೂಟುಗಳು, ಕಪ್ಪು ಎಳ್ಳು, ಕಪ್ಪು ಉದ್ದನ್ನು ದಾನ ಮಾಡುವುದು ಈ ದಿನದಂದು ಉತ್ತಮವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಶನಿ ಸಾಡೇಸಾತಿ ಅಥವಾ ಧೈಯ್ಯಾದಿಂದ ಬಳಲುತ್ತಿರುವವರು ಈ ದಿನ ಶನಿಕಾಲದಲ್ಲಿ ಅಶ್ವತ್ಥ ಮರದ ಕೆಳಗೆ ನಾಲ್ಕು ಮುಖದ ದೀಪವನ್ನು ಹಚ್ಚಬೇಕು. ಹಾಗೆಯೇ ಶನಿ ಮಹಾರಾಜನಿಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಹೀಗೆ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು. 
  • ಈ ದಿನವೂ ಮೌನಿ ಅಮಾವಾಸ್ಯೆ, ಆದ್ದರಿಂದ ಬೆಳಿಗ್ಗೆ ಗಂಗಾ ಸ್ನಾನವನ್ನು ಮಾಡಬೇಕು ಮತ್ತು ನಂತರ ವಿಷ್ಣುವನ್ನು ಪೂಜಿಸಬೇಕು, ಪೂರ್ವಜರ ಹೆಸರಿನಲ್ಲಿ ದಾನ ಮಾಡಬೇಕು.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!