ವೀಳ್ಯದೆಲೆ ಹೀಗೆ ಬಳಸಿದ್ರೆ ಹಣ ನಿಮ್ಮತ್ತ ಹರಿದು ಬರುತ್ತದೆ..

By Suvarna News  |  First Published Apr 7, 2022, 1:44 PM IST

ವೀಳ್ಯದೆಲೆಗೆ ಸನಾತನ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದೆ. ದೃಷ್ಟಿ ದೋಷ ನಿವಾರಣೆಗೆ, ಯಶಸ್ಸಿಗೆ, ಸಮಸ್ಯೆಗಳನ್ನು ನಿವಾರಿಸಲು, ಸಂತೋಷಕ್ಕಾಗಿ... ಹೀಗೆ ಒಂದೊಂದು ಕಾರಣಕ್ಕೆ ಒಂದೊಂದು ರೀತಿಯಲ್ಲಿ ವೀಳ್ಯದೆಲೆ ಬಳಸಬಹುದಾಗಿದೆ. 


ಸನಾತನ ಧರ್ಮದಲ್ಲಿ ವೀಳ್ಯದೆಲೆ(betel leaves)ಗೆ ಮಹತ್ತರ ಸ್ಥಾನವಿದೆ. ಶುಭ ಕಾರ್ಯಗಳೆಲ್ಲದರಲ್ಲೂ ವೀಳ್ಯದೆಲೆ ಬಳಕೆಯಾಗುತ್ತದೆ. ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲೂ ವೀಳ್ಯ ಬೇಕೇ ಬೇಕು. ಇನ್ನು ದಾನ ಕೊಡಲು, ಬಾಗೀನ ಕೊಡಲು ಜೊತೆಯಲ್ಲಿ ವೀಳ್ಯದೆಲೆ ಇರಲೇಬೇಕು. ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದೆನಿಸಿರುವ ವೀಳ್ಯದೆಲೆ ಎಂದರೆ ಆಂಜನೇಯನಿಗೆ ಬಹಳ ಇಷ್ಟ. 

ವೀಳ್ಯದೆಲೆಯನ್ನು ಪೂಜೆಯಲ್ಲಿ ಬೇರೆ ಬೇರೆ ರೀತಿ ಬಳಸುವುದರಿಂದ ವಿಭಿನ್ನ ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ. ಹೌದು, ಶತ್ರು ಸಂಹಾರಕ್ಕಾಗಿ, ಹಣ ಗಳಿಕೆಗಾಗಿ, ಉದ್ಯಮ ಗೆಲ್ಲಲು, ಸಮಸ್ಯೆಗಳಿಂದ ಕಳಚಿಕೊಳ್ಳಲು.. ಹೀಗೆ ಅಗತ್ಯ ರೀತಿಯ ಫಲಿತಾಂಶಕ್ಕೆ ತಕ್ಕಂಥ ರೀತಿಯಲ್ಲಿ ವೀಳ್ಯದೆಲೆಯ ಬಳಕೆಯಾಗುತ್ತದೆ. 

Tap to resize

Latest Videos

ಸಂತೋಷ, ಸಮೃದ್ಧಿಗಾಗಿ(happiness and prosperity)
ಜೀವನದಲ್ಲಿ ಏನೇ ಮಾಡಿದರೂ ಸಂತೋಷ ಸಿಗುತ್ತಿಲ್ಲ, ನೆಮ್ಮದಿಯಿಲ್ಲ ಎಂದರೆ ಹೀಗೆ ಮಾಡಿ. ಮಂಗಳವಾರ ಮತ್ತು ಶನಿವಾರದ ದಿನ ಆಂಜನೇಯನಿಗೆ ಸ್ವೀಟ್ ಬೀಡಾ ನೀಡಿ ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ಇದರಿಂದ ಬದುಕಲ್ಲಿ ಸಂತೋಷ, ಸಮೃದ್ಧಿ ತುಂಬುತ್ತದೆ. 

ಉದ್ಯಮದ ಯಶಸ್ಸಿಗಾಗಿ(For success in business)
ಉದ್ಯಮದ ಯಶಸ್ಸಿಗಾಗಿ ಎಷ್ಟೇ ಕಸರತ್ತು ಮಾಡಿದರೂ ಫಲ ಮಾತ್ರ ಶೂನ್ಯ ಎನಿಸುತ್ತಿದ್ದರೆ ನೀವು ಮಾಡಬೇಕಾದ್ದಿಷ್ಟೇ- ಐದು ಅಶ್ವತ್ಥ ಎಲೆಗಳನ್ನು ಸೇರಿಸಿ ಒಂದು ಕಟ್ಟು ಮಾಡಿ. ಇನ್ನೈದು ವೀಳ್ಯದೆಲೆಯ ಕಟ್ಟು ಮಾಡಿ. ಶನಿವಾರದ ದಿನ ನಿಮ್ಮ ಕಚೇರಿಯ ಪೂರ್ವ ದಿಕ್ಕಿನಲ್ಲಿ ಇದನ್ನಿರಿಸಿ. ಇಲ್ಲವೇ ವ್ಯಾಪಾರ ಸ್ಥಳದಲ್ಲಿ ದೇವರನ್ನಿಟ್ಟಲ್ಲಿ ಪೂರ್ವಕ್ಕೆ ಮುಖ ಮಾಡಿ ಈ ಎರಡು ಕಟ್ಟುಗಳನ್ನಿರಿಸಿ. ಮುಂದಿನ ಶನಿವಾರ ಇದನ್ನು ತೆಗೆದು ಅದೇ ಸ್ಥಳದಲ್ಲಿ ನೇತು ಹಾಕಿ ಇಲ್ಲವೇ ಹರಿವ ನೀರಿನಲ್ಲಿ ಬಿಡಿ. ಈ ಎಲೆಗಳು ಯಾವುದೇ ಕಾರಣಕ್ಕೂ ಹರಿದಿರಬಾರದು ಎಂಬುದು ಗಮನದಲ್ಲಿರಲಿ. ಹೀಗೆ ಏಳು ಶನಿವಾರಗಳ ಕಾಲ ಮಾಡುವುದರಿಂದ ಯಶಸ್ಸು ಸಿಗಲಾರಂಭಿಸುತ್ತದೆ. 

Solar Eclipse 2022: ವರ್ಷದ ಮೊದಲ ಗ್ರಹಣದಿಂದ ಈ ರಾಶಿಗಳಿಗೆ ಲಾಭ

ಆಸೆಗಳ ಈಡೇರಿಕೆಗಾಗಿ(To fulfill wishes)
ಅಮ್ಮನವರನ್ನು ನಂಬಿದವರು ನೀವಾದರೆ ಪ್ರತಿ ಶುಕ್ರವಾರ ತಾಯಿಯ ಪೂಜೆಯಲ್ಲಿ ವೀಳ್ಯದೆಲೆ ಬಳಕೆ ಮಾಡಬೇಕು. ನಿಮ್ಮ ಮನದ ಆಸೆಗಳನ್ನು ತಾಯಿಯಲ್ಲಿ ಹೇಳಿಕೊಂಡು ಆಕೆಗೆ ಸಿಹಿ ಬೀಡಾವನ್ನು ಶುಕ್ರವಾರ ನೀಡಬೇಕು. ಹೀಗೆ ಏಳು ಶುಕ್ರವಾರಗಳ ಕಾಲ ಮಾಡುವುದರಿಂದ ಬಯಕೆಗಳು ಈಡೇರುತ್ತವೆ. 

ಅಡೆತಡೆಗಳನ್ನು ತೆಗೆಯಲು(To remove all obstacles)
ಗಣೇಶನು ಅಡೆತಡೆಗಳನ್ನು ತೆಗೆಯುವ ಸರ್ವಶಕ್ತ. ಗಣಪತಿ ಪೂಜೆಯಲ್ಲಿ ವೀಳ್ಯದೆಲೆ ಬಳಸುವ ಮೂಲಕ ಆತನ ಆಶೀರ್ವಾದ ಪಡೆಯಿರಿ. ಎಷ್ಟೇ ಕಷ್ಟ ಪಟ್ಟರೂ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಹೆಚ್ಚುತ್ತಿವೆ ಎನಿಸುತ್ತಿದ್ದರೆ, ಎಲೆ, ಅಡಿಕೆ, ಏಲಕ್ಕಿಯನ್ನು ಸೇರಿಸಿ ಬುಧವಾರದ ದಿನ ಗಣಪತಿಗೆ ನೀಡಬೇಕು. ಇದರಿಂದ ಅಡೆತಡೆಗಳ ನಿವಾರಣೆಯಾಗುತ್ತದೆ. ಗಣಪತಿಗೆ ಸ್ವೀಟ್ ಬೀಡಾ ಕೊಡುವುದರಿಂದ ವೈವಾಹಿಕ ಬದುಕಲ್ಲಿ ಪ್ರೀತಿ ಹೆಚ್ಚುತ್ತದೆ. 

ದೃಷ್ಟಿ ದೋಷ ತೆಗೆಯಲು(To avoid the evil eye)
ಹಲವಾರು ಬಾರಿ ನಿಮ್ಮ ಏಳ್ಗೆ, ಸಂತೋಷದ ಮೇಲೆ ಕೆಟ್ಟ ಕಣ್ಣು ಬೀಳುವುದುಂಟು. ಇದರಿಂದ ನಕಾರಾತ್ಮಕ ಶಕ್ತಿಗಳು ಪ್ರಾಬಲ್ಯ ಸಾಧಿಸಲು ಶುರು ಮಾಡುತ್ತವೆ. ಇದಕ್ಕಾಗಿ, ಮನೆಯ ಯಜಮಾನನಿಗೆ ವೀಳ್ಯದೆಲೆಯ ಒಳಗೆ ಏಳು ಗುಲಾಬಿ ದಳಗಳನ್ನಿಟ್ಟು ತಿನ್ನಲು ಕೊಡಬೇಕು. ಇಲ್ಲದಿದ್ದಲ್ಲಿ, ಯಾರಿಗೆ ದೃಷ್ಟಿ ನಿವಾಳಿಸಬೇಕೋ ಅವರಿಗೆ ಕೊಡಬೇಕು. ಇದರಿಂದ ದೃಷ್ಟಿ ನಿವಾರಣೆಯಾಗುತ್ತದೆ. 

ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ನಕಾರಾತ್ಮಕತೆ ಓಡಿಸಲು(To remove negativity)
ಮನೆಯಲ್ಲಿ ಯಾರಿಗೋ ಆರೋಗ್ಯ ಸರಿ ಇರದಿದ್ದರೆ, ಅಥವಾ ಸಮಸ್ಯೆಗಳು ಹೆಚ್ಚಿದ್ದರೆ, ಆಗ ಮನೆಯನ್ನು ಸ್ವಚ್ಛಗೊಳಿಸಿ. ಬಳಿಕ ಮನೆಯ ಮುಖ್ಯ ದ್ವಾರದ ಬಳಿ ನೀರಿನಿಂದ ತೊಳೆದು, ವೀಳ್ಯದೆಲೆಯನ್ನು ಬಾಗಿಲ ಮೇಲೆ ನೇತು ಹಾಕಿ. ಅದರ ಮೇಲೆ ಅರಿಶಿನದಲ್ಲಿ ಶ್ರೀ ಬರೆಯಿರಿ. ಈ ಎಲೆಯನ್ನು ಪ್ರತಿ ದಿನ ಬದಲಾಯಿಸಿ. ಎಲೆ ಒಣಗಲು ಬಿಡಬೇಡಿ. 

click me!