ಗುರುವಾರ ಎಂದರೆ ಗುರುವಿನ ದಿನ. ದೇವಾನುದೇವತೆಗಳ ಗುರುವಾದ ಬೃಹಸ್ಪತಿಯ ದಿನ. ಬೃಹಸ್ಪತಿಯನ್ನು ವಿಷ್ಣುವಿನ ಅವತಾರವೆಂದೂ ಹೇಳಲಾಗುತ್ತದೆ. ಈ ದಿನ ಬೃಹಸ್ಪತಿಗೆ ಕೋಪ ತರಿಸುವಂಥ ಈ ಕೆಲಸಗಳನ್ನು ಮಾಡಕೂಡದು.
ಗುರುವಾರ(Thursday)ವು ದೇವಾನುದೇವತೆಗಳ ಗುರುವಾದ ಬೃಹಸ್ಪತಿಯ ದಿನ. ಮಹಾವಿಷ್ಣು(Lord Vishnu)ವಿನ ಅವತಾರ ಬೃಹಸ್ಪತಿ ಎಂದೂ ಹೇಳಲಾಗುತ್ತದೆ. ಹಾಗಾಗಿ ಇಂದ ವಿಷ್ಣುವಿನ ದಿನ. ವಿಷ್ಣು ಎಂದರೆ ಜೊತೆಗೆ ಲಕ್ಷ್ಮೀಯೂ ಇರುತ್ತಾಳೆ. ಆಕೆಯನ್ನೂ ಇಂದು ಆರಾಧಿಸಲಾಗುತ್ತದೆ. ಇದರೊಂದಿಗೆ ಗುರು ಗ್ರಹ ಈ ದಿನದ ಅಧಿಪತಿ. ಇಷ್ಟೇ ಅಲ್ಲದೆ, ಗುರುವಾರ ಶ್ರೀ ಗುರು ರಾಘವೇಂದ್ರ ಯತಿಗಳ ದಿನವೂ ಹೌದು. ಇಂದು ಈ ಎಲ್ಲರನ್ನೂ ಸ್ಮರಿಸಿ ಭಜಿಸುತ್ತೇವೆ. ಹೇಗೆ ಒಂದೊಂದು ದೇವರಿಗೆ ಒಂದೊಂದು ದಿನ ಮೀಸಲಿರಿಸಲಾಗಿದೆಯೋ ಹಾಗೆಯೇ ವಾರದ ಒಂದೊಂದು ದಿನವೂ ಕೆಲ ಕೆಲಸಕ್ಕೆ ಉತ್ತಮವಾಗಿದೆ ಮತ್ತು ಕೆಲವು ಕೆಲಸ ಅಂದು ಮಾಡುವುದನ್ನು ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ.
ಅಂತೆಯೇ ಗುರುವಾರ ನಮ್ಮ ಬಾಳಿನಲ್ಲಿ ನೆಮ್ಮದಿ, ಸಂತೋಷ ತರುವ ವಿಷ್ಣುವನ್ನು ಪೂಜಿಸಬೇಕು. ಗುರುಬಲ ತರುವ ಗುರುವಿನ ಆರಾಧನೆ ಮಾಡಬೇಕು. ಉತ್ತಮ ಸಂಸಾರ ಜೀವನ, ಶಿಕ್ಷಣ, ಜ್ಞಾನ, ಸಮೃದ್ಧಿ, ವಿವಾಹಕ್ಕೆ ಗುರುವು ಕಾರಣನಾಗಿರುತ್ತಾನೆ. ಹಾಗೆಯೇ, ಇಂದು ಬೃಹಸ್ಪತಿ(Brihaspati)ಗೆ ಕೋಪ ತರುವಂಥ ಈ ಕೆಲವೊಂದು ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಯಾವುವು ನೋಡೋಣ.
ಇವರನ್ನು ಅವಮಾನಿಸಬೇಡಿ
ವಾರದ ಯಾವ ದಿನ ಕೂಡಾ ಯಾರನ್ನೂ ಅವಮಾನಿಸುವುದು ಒಳ್ಳೆಯದಲ್ಲ. ಅದರಲ್ಲೂ ಗುರುವಾರದ ದಿನ ತಂದೆ(father), ಗುರು ಹಾಗೂ ಸನ್ಯಾಸಿಯನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು. ಇದರ ಪರಿಣಾಮಗಳು ಬಹಳ ಕೆಟ್ಟದಾಗಿರುತ್ತವೆ. ಇವರೊಂದಿಗೆ ಕೋಪ ತೋರಬಾರದು. ಇವರನ್ನು ಹಂಗಿಸುವುದು, ಎದುರು ಮಾತಾಡುವುದು ತಪ್ಪಾಗಿರುತ್ತದೆ. ದೋಷಕ್ಕೆ ಕಾರಣವಾಗುತ್ತದೆ.
ಈ ಅಡುಗೆ ಮಾಡಬಾರದು
ಗುರುವಾರದ ದಿನ ಮನೆಯಲ್ಲಿ ಕಿಚಡಿ(Kichidi) ತಯಾರಿಸಬಾರದು. ಇದು ಮನೆಯ ಯಜಮಾನನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆ ಮನೆಯವರು ನಷ್ಟವನ್ನು ಎದುರಿಸಬೇಕಾಗುತ್ತದೆ.
Hanuman Jayantiಯಂದು ಹೀಗೆ ಮಾಡಿದ್ರೆ ಅದೃಷ್ಟ ನಿಮ್ಮದೇ
ತಲೆಸ್ನಾನ ಮಾಡಬಾರದು
ಗುರುವಾರದ ದಿನ ಮಹಿಳೆಯರು ತಲೆ ಸ್ನಾನ ಮಾಡಬಾರದು. ಜಾತಕದಲ್ಲಿರುವ ಗುರುವು ಮಹಿಳೆಯ ಪತಿ(husband)ಗೆ ಸಂಬಂಧಿಸಿದವನಾಗಿರುತ್ತಾನೆ. ಹಾಗಾಗಿ, ಈ ದಿನ ಮಹಿಳೆ ತಲೆ ಸ್ನಾನ ಮಾಡಿದರೆ ಅದರಿಂದ ಪತಿಯ ಆಯಸ್ಸು ಕುಗ್ಗುವುದು. ಪತಿಗೆ ಗುರುವಿನ ಅನುಗ್ರಹ ದುರ್ಬಲವಾಗುತ್ತದೆ.
ಉಗುರು ತೆಗೆಯಬಾರದು
ಗುರುವಾರ ಉಗುರು(nail) ತೆಗೆಯುವುದು ಒಳ್ಳೆಯದಲ್ಲ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿಗಳು ನುಗ್ಗುತ್ತವೆ. ಇದರಿಂದ ಮನೆಯ ಸಮೃದ್ಧಿ, ಸಂಪತ್ತು ಕರಗಲು ಆರಂಭಿಸುತ್ತದೆ. ಹಣ ಕಳೆದುಕೊಳ್ಳಬೇಕಾಗುತ್ತದೆ. ಬೆಲೆ ಬಾಳುವ ವಸ್ತುಗಳು ದೂರಾಗುತ್ತವೆ.
ಗಡ್ಡ ಮಾಡಿಕೊಳ್ಳಬಾರದು
ಪುರುಷರು ಗುರುವಾರ ಯಾವುದೇ ಕಾರಣಕ್ಕೂ ಗಡ್ಡ ಮಾಡಿಕೊಳ್ಳಬಾರದು. ಇದರಿಂದ ಗುರು ದುರ್ಬಲನಾಗುತ್ತಾನೆ. ಜೀವನದಲ್ಲಿ ಅಡೆತಡೆಗಳು ಹೆಚ್ಚುತ್ತವೆ. ಮಹಿಳೆರು ಕೂಡಾ ಈ ದಿನ ಕೂದಲು ಕತ್ತರಿಸಬಾರದು. ಇದು ಅವರ ಅಭಿವೃದ್ಧಿಗೆ ಸಮಸ್ಯೆಯಾಗುತ್ತದೆ.
ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!
ಬಟ್ಟೆ ಒಗೆಯುವುದು
ಗುರುವಾರ ಬಟ್ಟೆ ಒಗೆಯುವುದು ಹಾಗೂ ನೆಲ ಒರೆಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವ ಕಾರಣದಿಂದ ಮನೆಯಲ್ಲಿ ಮಕ್ಕಳ ಶಿಕ್ಷಣದ ಪ್ರಗತಿ ಮೇಲೆ ಪರಿಣಾಮ ಬೀರುವುದು. ವ್ಯಕ್ತಿಯ ಸಂಪತ್ತು ಮತ್ತು ಆರ್ಥಿಕ ಪರಿಸ್ಥಿತಿ(Finance condition)ಯೂ ಹದಗೆಡುತ್ತದೆ.
ಜೇಡರ ಬಲೆ ತೆಗೆಯುವುದು
ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೇಡರ ಬಲೆ ತೆಗೆಯುತ್ತಿರಬೇಕು. ಮನೆಯು ಶುಚಿಯಾಗಿಲ್ಲದೆ ಇದ್ದರೆ ಆಗ ಲಕ್ಷ್ಮೀ ದೇವಿಯು ಮನೆಗೆ ಬರುವುದಿಲ್ಲ. ಹಾಗಿದ್ದೂ, ಗುರುವಾರದ ದಿನ ಮನೆಯ ಜೇಡರಬಲೆ ತೆಗೆಯಬಾರದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.