ಈ ವರ್ಷದ ಮೊದಲ ಸೂರ್ಯಗ್ರಹಣ ಈ ತಿಂಗಳಲ್ಲಿ ಘಟಿಸಲಿದೆ. ಇದು ಯಾವಾಗ ಆಗಲಿದೆ, ಇದರಿಂದ ಎಲ್ಲ ರಾಶಿಗಳ ಮೇಲೆ ಏನು ಪರಿಣಾಮವಾಗಲಿದೆ, ಯಾವ ರಾಶಿಗೆ ಲಾಭವಿದೆ, ಯಾರೇನು ಮಾಡಬೇಕು ಎಲ್ಲ ವಿವರ ನೋಡೋಣ.
ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ(solar eclipse) ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಈ ವರ್ಷದ ಮೊದಲ ಸೂರ್ಯ ಗ್ರಹಣವು ಏಪ್ರಿಲ್ ತಿಂಗಳ 30ನೇ ತಾರೀಖಿನಂದು ಸಂಭವಿಸಲಿದೆ. ಪಂಚಾಂಗದ ಪ್ರಕಾರ, ಈ ಸೂರ್ಯ ಗ್ರಹಣವು ಅಂದು ಮಧ್ಯಾಹ್ನ 12:15ರಿಂದ ಸಂಜೆ 04:07 ರವರೆಗೆ ಸಂಭವಿಸುತ್ತದೆ.
ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನು ಸೂರ್ಯನನ್ನು ಭಾಗಶಃ ಆವರಿಸಿದರೆ ಅದನ್ನು ಭಾಗಶಃ ಸೂರ್ಯಗ್ರಹಣ ಎನ್ನುತ್ತೇವೆ. ಇನ್ನು ಚಂದ್ರನು (Moon) ಸೂರ್ಯನನ್ನು ಮಧ್ಯದ ಭಾಗದಲ್ಲಿ ಆವರಿಸಿಕೊಂಡಂತೆ ಕಂಡರೆ ಅದನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ವರ್ಷ 2 ಬಾರಿ ಸೂರ್ಯ ಗ್ರಹಣ ಕಾಣಿಸಿಕೊಳ್ಳಲಿದೆ. ಈ ವರ್ಷದ 2ನೇ ಸೂರ್ಯಗ್ರಹಣವು ಇದೇ ಅಕ್ಟೋಬರ್ 25ರಂದು ಕಾಣಿಸಿಕೊಳ್ಳಲಿದೆ.
ಗ್ರಹಣಕ್ಕೆ, ಅದರಲ್ಲೂ ಸೂರ್ಯ ಗ್ರಹಣಕ್ಕೆ ನಮ್ಮಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ. ಸೂರ್ಯನು ಕಣ್ಣಿಗೆ ಕಾಣುವ ಏಕೈಕ ಗ್ರಹವಾಗಿದ್ದು, ಆತನ ಕಿರಣಗಳು ಭೂಮಿಯನ್ನು ತಲುಪದ ಸಂದರ್ಭ ಬಹಳಷ್ಟು ಕೆಡುಕನ್ನುಂಟು ಮಾಡುತ್ತದೆ. ಆದರೆ, ಈ ಗ್ರಹಣದಿಂದಾಗಿ ಕೆಲ ರಾಶಿಗಳಿಗೆ ಶುಭವಾಗಲಿದೆ. ಈ ಸೂರ್ಯಗ್ರಹಣವು ಯಾವ ರಾಶಿಗೆ ಏನು ಫಲ ತರಲಿದೆ ನೋಡಿ.
ಮೇಷ(Aries)
ಹಣ(money)ಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಹಣದ ದಿನ ಹಣಕ್ಕೆ ಸಂಬಂಧಿಸಿದ ಯಾವೊಂದು ಕೆಲಸಗಳನ್ನೂ ಮಾಡಬೇಡಿ. ಎಂಥದ್ದೇ ಸಮಸ್ಯೆ ಎದುರಾದರೂ ಶಾಂತವಾಗಿ ಪರಿಹರಿಸಿಕೊಳ್ಳಬೇಕು.
Thursday ಹೀಗೆ ಮಾಡಿ, ಬೇಡದ ದುರ್ದೈವ ಮೈ ಮೇಲೆ ಎಳೆದುಕೊಳ್ಳಬೇಡಿ
ವೃಷಭ(Taurus)
ಗ್ರಹಣದ ಕಾರಣದಿಂದ ವೃಷಭ ರಾಶಿಯವರ ಆತ್ಮವಿಶ್ವಾಸ ಕುಗ್ಗಲಿದೆ. ಆ ದಿನ ಅನಗತ್ಯ ಕೋಪ ಮಾಡಿಕೊಳ್ಳುವುದು ಇಲ್ಲವೇ ಒತ್ತಡ ಕಲ್ಪಿಸಿಕೊಳ್ಳುವುದನ್ನು ಬಿಡಬೇಕು.
ಮಿಥುನ(Gemini)
ಮಿಥುನ ರಾಶಿಯವರು ಗ್ರಹಣದ ದಿನ ಜನನಿಬಿಡ ಸ್ಥಳಕ್ಕೆ ಹೋಗಕೂಡದು. ಜೊತೆಗೆ, ನಿಮ್ಮ ಸುತ್ತಲಿನ ಚಲನವಲನಗಳ ಮೇಲೆ ಹೆಚ್ಚಿನ ಗಮನವಿಡಬೇಕು.
ಕಟಕ(Cancer)
ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಒಳಿತಾಗಲಿದೆ. ಕೌಟುಂಬಿಕ ಸಮಸ್ಯೆಗಳು ದೂರ ಹೋಗುತ್ತವೆ. ಇದಲ್ಲದೆ, ಹಣಕಾಸಿನ ಸಮಸ್ಯೆಗಳೂ ಕಡಿಮೆಯಾಗುತ್ತವೆ. ಮದುವೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ಸಹ ಈ ಬಾರಿ ಪರಿಹಾರವಾಗಲಿದೆ.
ಸಿಂಹ(Leo)
ಈ ರಾಶಿಯವರಿಗೆ ಸೂರ್ಯ ಗ್ರಹಣದ ಪ್ರಭಾವದಿಂದಾಗಿ ಉದ್ಯಮಗಳಲ್ಲಿ ಹಣ(money) ದೊರೆಯುತ್ತದೆ. ಆದರೆ, ಗ್ರಹಣ ಕಾಲದಲ್ಲಿ ಯಾವುದೇ ಹೂಡಿಕೆ ಮಾಡಬಾರದು.
ಕನ್ಯಾ(Virgo)
ಸೂರ್ಯಗ್ರಹಣದಿಂದಾಗಿ ಯಶಸ್ಸಿಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಉದ್ಯೋಗ ಬದಲಿಸುವ ಯೋಚನೆ ಬೇಡ.
ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!
ತುಲಾ(Libra)
ಸೂರ್ಯ ಗ್ರಹಣವು ಈ ರಾಶಿಯವರಿಗೆ ಕೊಂಚ ನಕಾರಾತ್ಮಕ ಪರಿಣಾಮ ಬೀರಲಿದೆ. ಆರೋಗ್ಯ ಸಮಸ್ಯೆಗಳನ್ನು ತರಬಹುದು. ಹೀಗಾಗಿ, ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಕಾನೂನಾತ್ಮಕ ವಿವಾದಗಳನ್ನು ದೂರವಿಡಲು ಪ್ರಯತ್ನಿಸಿ.
ವೃಶ್ಚಿಕ(Scorpio)
ಸೂರ್ಯ ಗ್ರಹಣದ ಪರಿಣಾಮವಾಗಿ ನಿಮ್ಮ ಉದ್ಯೋಗ(job) ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇದರ ಹೊರತಾಗಿ ಉದ್ಯಮಗಳಲ್ಲಿ ಹಣಕಾಸಿನ ಅಡಚಣೆ ಎದುರಾಗುವುದು.
ಧನು(Sagittarius)
ಆರೋಗ್ಯ ಚೆನ್ನಾಗಿರಲಿದೆ. ಅತಿಯಾದ ಆತ್ಮವಿಶ್ವಾಸ(over confiodence)ವನ್ನು ದೂರವಿಡಿ. ವಿನಯ ಕಾಪಾಡಿಕೊಳ್ಳಿ.
ಮಕರ(Capricorn)
ಗ್ರಹಣ ಕಾಲದಲ್ಲಿ ಮಕರ ರಾಶಿಯ ಮಕ್ಕಳ ಆರೋಗ್ಯ(health)ದ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ಸಹವಾಸಕ್ಕೆ ಹೋಗಬೇಡಿ.
ಕುಂಭ(Aquarius)
ಹೂಡಿಕೆಯಲ್ಲಿ ನಷ್ಟಫಲವಿರಲಿದೆ. ಕೌಟುಂಬಿಕ ರಗಳೆಗಳಿಂದಾಗಿ ಮನಸ್ಸಿನ ಶಾಂತಿ ಕದಡುವುದು. ಸಂಗಾತಿ(spouse)ಯ ಮಾತುಗಳು ಸಮಸ್ಯೆ ತರುತ್ತವೆ. ತಾಳ್ಮೆಗೆಡದೆ ಒಳ್ಳೆಯ ಸಮಯಕ್ಕಾಗಿ ಕಾಯಿರಿ.
Vastu Tips: ತವಾ ತಲೆ ಕೆಳಗಿಟ್ರೆ ತೊಂದರೆ ತಪ್ಪಿದ್ದಲ್ಲ!
ಮೀನ(Pisces)
ಸೂರ್ಯ ಗ್ರಹಣ ಮೀನಕ್ಕೆ ಉತ್ತಮ ಫಲಗಳನ್ನು ತರುತ್ತದೆ ಹೂಡಿಕೆಯಲ್ಲಿ ಉತ್ತಮ ಲಾಭವಿರಲಿದೆ. ಸಾಮಾಜಿಕವಾಗಿ ಗೌರವಾದರಗಳು(Social prestige) ಹೆಚ್ಚಲಿವೆ.