
ಪೋಷಕರು ತಮ್ಮ ಮಗುವಿಗೆ ಸರಿಯಾದ ಹೆಸರನ್ನು ಆಯ್ಕೆ ಮಾಡಲು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ. ಆಗ ಅವರು ಮಗುವಿನ ಸೂರ್ಯ ಚಿಹ್ನೆ ಅಥವಾ ರಾಶಿಯ ಆಧಾರದ ಮೇಲೆ ಹೆಸರುಗಳನ್ನು ಸೂಚಿಸುತ್ತಾರೆ. ಈ ಹೆಸರುಗಳು ಮಗುವಿನ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ರಾಶಿಯೂ ನಿರ್ದಿಷ್ಟ ಅಕ್ಷರ ಹಾಗೂ ಉಚ್ಚಾರಗಳನ್ನು ಹೊಂದಿರುತ್ತದೆ. ಯಾವುದು ಮಗುವಿಗೆ ಹೆಸರಿಸಲು ಸೂಕ್ತವೆಂದು ತಜ್ಞರು ಹೇಳುತ್ತಾರೆ. ನಿಮ್ಮ ಮಗುವಿನ ಹೆಸರನ್ನು ಪ್ರಾರಂಭಿಸಲು ರಾಶಿಗಳಿಗೆ ಅನುಗುಣವಾದ, ಉಚ್ಚಾರಾಂಶಗಳಿಗೆ ಸಂಬಂಧಿಸಿದ, ವಿವಿಧ ವ್ಯಕ್ತಿತ್ವ ಗುಣಲಕ್ಷಣಗಳ ಕುರಿತು ಕೆಲವು ವಿವರಗಳು ಇಲ್ಲಿವೆ.
ಮೇಷ (Aries) ರಾಶಿ
ಮೇಷ ರಾಶಿಯ ಸೂರ್ಯ ಚಿಹ್ನೆಯಡಿಯಲ್ಲಿ ಜನಿಸಿದವರಿಗೆ ಆತ್ಮವಿಶ್ವಾಸ, ಸ್ವಾತಂತ್ರ್ಯ, ಧೈರ್ಯ ಮತ್ತು ಆದರ್ಶವಾದ ಸಾಮಾನ್ಯ. ಅವರು ಸ್ಪರ್ಧಾತ್ಮಕ, ಗುರಿ-ಆಧಾರಿತ ಮತ್ತು ಭಾವೋದ್ರಿಕ್ತ ಸ್ವಭಾವದವರು. ಈ ಚಿಹ್ನೆಯಡಿಯಲ್ಲಿ ಜನಿಸಿದ ಶಿಶುಗಳಿಗೆ A, L ಮತ್ತು C ಅಕ್ಷರಗಳೊಂದಿಗೆ ಪ್ರಾರಂಭವಾಗುವ ಹೆಸರುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ವೃಷಭ (Taurus) ರಾಶಿ
ಪ್ರಮುಖ ವೃಷಭ ರಾಶಿ ವ್ಯಕ್ತಿತ್ವದ ಲಕ್ಷಣಗಳು ಮೊಂಡುತನ, ನಿಷ್ಠೆ ಮತ್ತು ಭಕ್ತಿಯನ್ನು ಒಳಗೊಂಡಿವೆ. ಇವರು ತುಂಬಾ ದಯೆ, ಪ್ರೀತಿಯ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳು ಎಂದು ನಂಬಲಾಗಿದೆ. I, U, E, O, Wa, We, Wi ಮತ್ತು Woಗಳಿಂದ ಪ್ರಾರಂಭವಾಗುವ ಹೆಸರುಗಳು ಈ ರಾಶಿಗೆ ಸೇರಿದವರಿಗೆ ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ.
ಮಿಥುನ (Gemini) ರಾಶಿ
ಬುದ್ಧಿವಂತಿಕೆ, ಮಹತ್ವಾಕಾಂಕ್ಷೆ ಮತ್ತು ತ್ವರಿತ ಬುದ್ಧಿಯು ಮಿಥುನ ಸೂರ್ಯ ಚಿಹ್ನೆಯೊಂದಿಗೆ ಸಂಬಂಧ ಹೊಂದಿದೆ. ಈ ಚಿಹ್ನೆಯಡಿಯಲ್ಲಿ ಜನಿಸಿದವರು ಯಾವುದೇ ಪರಿಸ್ಥಿತಿಗೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಆಕರ್ಷಕ, ಸ್ಪಷ್ಟ ಮತ್ತು ವರ್ಚಸ್ವಿ ವ್ಯಕ್ತಿಗಳು. ನಿಮ್ಮ ಮಿಥುನ ರಾಶಿಯ ಮಗುವಿಗೆ ಹೆಸರಿಸಲು A, H, Gh, Ka, Ke ಮತ್ತು Ko ನಿಂದ ಪ್ರಾರಂಭವಾಗುವ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ.
ನವಗ್ರಹಗಳ ಸ್ವರೂಪ ಹೇಗಿದೆ ಗೊತ್ತಾ? ಮತ್ಸ್ಯ ಪುರಾಣ ಹೇಳುತ್ತೆ ಕೇಳಿ..
ಕಟಕ (Cancer) ರಾಶಿ
ಭಾವನಾತ್ಮಕ, ಸೂಕ್ಷ್ಮ, ಪೋಷಣೆ, ಸಹಾನುಭೂತಿ - ಇವುಗಳು ಕಟಕ ರಾಶಿಯ ಸೂರ್ಯನ ಚಿಹ್ನೆಗೆ ಸಂಬಂಧಿಸಿದ ಕೆಲವು ಗುಣಗಳಾಗಿವೆ. ಈ ಸೂರ್ಯನ ಚಿಹ್ನೆಯಡಿಯಲ್ಲಿ ಜನಿಸಿದವರು ತಮ್ಮ ಉತ್ತುಂಗಕ್ಕೇರಿದ ಸೂಕ್ಷ್ಮತೆಯ ಕಾರಣದಿಂದಾಗಿ ಬಹಳ ಕಲಾತ್ಮಕರು ಎಂದು ಪರಿಗಣಿಸಲಾಗುತ್ತದೆ. ಈ ಚಿಹ್ನೆಯಡಿಯಲ್ಲಿ ಜನಿಸಿದ ಶಿಶುಗಳಿಗೆ ದ, ದೇ, ದೋ, ಹೆ, ಹೈ, ಹೋ ಮತ್ತು ಹೂ ಎಂದು ಪ್ರಾರಂಭವಾಗುವ ಹೆಸರುಗಳು ಸೂಕ್ತವೆಂದು ನಂಬಲಾಗಿದೆ.
ಸಿಂಹ(Leo) ರಾಶಿ
ಉದಾರ ಮತ್ತು ಬೆಚ್ಚಗಿನ ಹೃದಯದವರಾದ ಸಿಂಹ ರಾಶಿಯವರು ತಮ್ಮ ಹತ್ತಿರವಿರುವವರಿಗೆ ಬಹಳ ರಕ್ಷಣೆ ನೀಡುತ್ತಾರೆ. ಅವರು ಸೃಜನಶೀಲತೆಯ ಬಲವಾದ ಪ್ರೇರಣೆಯನ್ನು ಹೊಂದಿರುತ್ತಾರೆ. ಅವರ ಶಕ್ತಿಯುತ ಮತ್ತು ಉತ್ಸಾಹಭರಿತ ಸ್ವಭಾವದಿಂದಾಗಿ ಅವರು ಹೆಚ್ಚು ಕ್ರಿಯಾಶೀಲರಾಗಿರಬಹುದು. ನಿಮ್ಮ ಸಿಂಹರಾಶಿ ಮಗುವಿಗೆ ಮಾ, ಮಿ, ಮೋ, ತಾ, ತೆ ಮತ್ತು ಟು ದಿಂದ ಪ್ರಾರಂಭವಾಗುವ ಹೆಸರುಗಳನ್ನು ನೀವು ಪರಿಗಣಿಸಬಹುದು.
ಕನ್ಯಾ (Virgo) ರಾಶಿ
ಕನ್ಯಾ ರಾಶಿಯವರು ಶಾಂತ, ಒಂದೇ ರೀತಿಯ ಸ್ವಭಾವದ ವ್ಯಕ್ತಿಗಳು ಎಂದು ನಂಬಲಾಗಿದೆ. ಅವರು ಹಠಾತ್ ಪ್ರವೃತ್ತಿ ವ್ಯತ್ಯಾಸಗಳಿಗೆ ಗುರಿಯಾಗುವುದಿಲ್ಲ. ದೊಡ್ಡ ಕೆಲಸಗಳಿಗೆ ಇಳಿಯುವ ಮೊದಲು ಪರಿಣಾಮಗಳ ಬಗ್ಗೆ ಯೋಚಿಸುತ್ತಾರೆ. ಕನ್ಯಾ ರಾಶಿಯವರು ತೀಕ್ಷ್ಣವಾದ ಮನಸ್ಸನ್ನು ಹೊಂದಿರುತ್ತಾರೆ. ಅವರು ಪ್ರಾಯೋಗಿಕ ಮತ್ತು ನಿಖರ. ಆದರೆ ನಾಚಿಕೆಪಡುತ್ತಾರೆ. ಕನ್ಯಾ ರಾಶಿಯ ಹೆಸರುಗಳ ಉಚ್ಚಾರಾಂಶಗಳು ಪ, ಪೆ, ಪೋ, ಶ್, ತ ಮತ್ತು ಠ್.
ತುಲಾ (Libra) ರಾಶಿ
ತುಲಾ ಚಿಹ್ನೆಯಡಿಯಲ್ಲಿ ಜನಿಸಿದವರು ರಾಜತಾಂತ್ರಿಕ ಮತ್ತು ಅತ್ಯಾಧುನಿಕ ಸ್ವಭಾವದರು. ಅವರು ಸಾಮಾನ್ಯವಾಗಿ ವಿಶಾಲವಾದ ಸಾಮಾಜಿಕ ವಲಯವನ್ನು ಹೊಂದಿರುತ್ತಾರೆ ಮತ್ತು ಹೃದಯದಲ್ಲಿ ರೊಮ್ಯಾಂಟಿಕ್ ಆಗಿರುತ್ತಾರೆ. ರಾ, ರೇ, ರೋ, ತ, ತೆ ಮತ್ತು ಟು ತುಲಾ ಮಗುವಿನ ಹೆಸರನ್ನು ಪ್ರಾರಂಭಿಸಲು ಅದೃಷ್ಟದ ಉಚ್ಚಾರಾಂಶಗಳು ಎಂದು ನಂಬಲಾಗಿದೆ.
ವೃಶ್ಚಿಕ (Scorpio) ರಾಶಿ
ವೃಶ್ಚಿಕದವರು ಶಕ್ತಿಯುತ, ಭಾವೋದ್ರಿಕ್ತ ಮತ್ತು ವರ್ಚಸ್ವಿಗಳು. ಅವರು ಆಯಸ್ಕಾಂತದಂತೆ ಜನರನ್ನು ತಮ್ಮ ಕಡೆಗೆ ಸೆಳೆಯುತ್ತಾರೆ. ಇವರು ಕೆಲವೊಮ್ಮೆ ರೋಮಾಂಚನಕಾರಿ ಮತ್ತು ಕೆಲವೊಮ್ಮೆ ಅದ್ದೂರಿ. ಆದರೆ ಅವರು ಭಾವನಾತ್ಮಕ ಭಾಗವನ್ನು ಸಹ ಹೊಂದಿರುತ್ತಾರೆ. ವೃಶ್ಚಿಕ ರಾಶಿಯ ಶಿಶುಗಳಿಗೆ ನಾ, ನೆ, ನೋ, ಟೊ, ಯಾ, ಯೆ ಮತ್ತು ಯು ಎಂದು ಪ್ರಾರಂಭವಾಗುವ ಹೆಸರುಗಳನ್ನು ಆಯ್ಕೆ ಮಾಡಲು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ನಿದ್ರೆ ಬರೋಲ್ವಾ? ರಾಹುದೋಷ ಇರ್ಬೋದು! ಪರಿಹಾರ ಇಲ್ಲಿದೆ..
ಧನು (Sagittarius) ರಾಶಿ
ಈ 'ಬಿಲ್ಲುಗಾರ'ರು ಅತ್ಯಂತ ಆಶಾವಾದಿ ವ್ಯಕ್ತಿಗಳು. ಧನು ರಾಶಿಯಲ್ಲಿ ಜನಿಸಿದವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ ಮತ್ತು ಒಳ್ಳೆಯ ಹಾಸ್ಯಪ್ರವೃತ್ತಿಯವರು. ಅವರು ತಮ್ಮ ಸುತ್ತಲಿನ ಎಲ್ಲದರ ಬಗ್ಗೆ ಬೌದ್ಧಿಕ ಕುತೂಹಲವನ್ನು ಹೊಂದಿರುತ್ತಾರೆ ಮತ್ತು ಆಗಾಗ್ಗೆ ತಾತ್ವಿಕವಾಗಿ ಚಿಂತಿಸುತ್ತಾರೆ. Bh, Dh, Ph, Ta, Ye ಮತ್ತು Yo ಯಿಂದ ಪ್ರಾರಂಭವಾಗುವ ಹೆಸರುಗಳು ಈ ಚಿಹ್ನೆಗೆ ಸೇರಿದ ಜನರಿಗೆ ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ.
ಮಕರ (Capricorn) ರಾಶಿ
ನಿಷ್ಠೆ ಮತ್ತು ಮಹತ್ವಾಕಾಂಕ್ಷೆ ಮಕರ ರಾಶಿಯ ಲಕ್ಷಣಗಳಾಗಿವೆ. ಅವರು ಹೆಚ್ಚು ಶಿಸ್ತುಬದ್ಧರಾಗಿರುವವರು. ಇವರು ಯಾವುದನ್ನಾದರೂ ಸಾಧಿಸಲು ಸ್ಥಿರವಾಗಿ ನಿಂತು ಕೆಲಸ ಮಾಡುತ್ತಾರೆ. ಅವರು ಕೆಲವೊಮ್ಮೆ ಸೀರಿಯಸ್ಸಾಗಿ ವರ್ತಿಸಬಹುದಾದರೂ, ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ಈ ಚಿಹ್ನೆಯಡಿಯಲ್ಲಿ ಜನಿಸಿದ ಶಿಶುಗಳಿಗೆ Bh, Ga, Ge, Ja, Je ಮತ್ತು Kh ನಿಂದ ಪ್ರಾರಂಭವಾಗುವ ಹೆಸರುಗಳು ಉತ್ತಮವೆಂದು ನಂಬಲಾಗಿದೆ.
ಕುಂಭ (Aquarius) ರಾಶಿ
ಕುಂಭ ರಾಶಿಯವರು ಎಲ್ಲರಿಗಿಂತ ಭಿನ್ನವಾಗಿರಲು ಇಷ್ಟಪಡುತ್ತಾರೆ. ಇವರು ಸ್ನೇಹಪರರು, ಪ್ರಾಮಾಣಿಕರು ಮತ್ತು ನಿಷ್ಠಾವಂತರು. ಆಗಾಗ್ಗೆ ಪಕ್ಷ ಬದಲಿಸುವುದಿಲ್ಲ. ಕುಂಭ ರಾಶಿಯವರು ಸ್ವತಂತ್ರ ಚಿಂತಕರು. ನಿಮ್ಮ ಕುಂಭ ರಾಶಿಯ ಮಗುವಿಗೆ ಅದೃಷ್ಟವನ್ನು ತರಲು ನೀವು Da, Ge, Go, Sa, Se ಮತ್ತು So ನಿಂದ ಪ್ರಾರಂಭವಾಗುವ ಹೆಸರುಗಳನ್ನು ಪರಿಗಣಿಸಬಹುದು.
ಮೀನ (Pisces) ರಾಶಿ
ನಿಸ್ವಾರ್ಥ, ಸಹಾನುಭೂತಿ, ದಯೆ ಹೊಂದಿರುವ ಮೀನ ರಾಶಿಯವರು ಬಹುಶಃ ರಾಶಿಚಕ್ರದ ಅತ್ಯಂತ ಮೃದು ಪ್ರಾಣಿಗಳು. ಇವರು ಹೆಚ್ಚು ಕಾಲ್ಪನಿಕ ಮತ್ತು ಸೃಜನಶೀಲ ಕಲೆಗಳಲ್ಲಿ ಉತ್ಕೃಷ್ಟರಾಗಿರುತ್ತಾರೆ. ನಿಮ್ಮ ಮೀನ ರಾಶಿ ಮಗುವಿಗೆ Ch, De, Jh, Th ಮತ್ತು Ya ನಿಂದ ಪ್ರಾರಂಭವಾಗುವ ಹೆಸರುಗಳನ್ನು ಆಯ್ಕೆಮಾಡುವುದನ್ನು ನೀವು ಪರಿಗಣಿಸಬಹುದು.
ಎಚ್ಚರ, ಗರ್ಭಿಣಿ ಇರೋ ಮನೆಯಲ್ಲಿರಬಾರದು ಮುಳ್ಳಿನ ಗಿಡ!