ಪ್ರತಿ ರಾತ್ರಿ ಎಷ್ಟೇ ಹೊರಳಾಡಿದ್ರೂ ನಿದ್ರೆ ಬರ್ತಿಲ್ಲ ಅಂದ್ರೆ ಜಾತಕದಲ್ಲಿ ರಾಹುವಿನ ದೋಷ ಕಾರಣವಾಗಿರಬಹುದು. ಈ ಬಗ್ಗೆ ನೀವೇನು ಮಾಡಬೇಕು?
ವೈದಿಕ ಜ್ಯೋತಿಷ್ಯ(Vedic Astrology)ದಲ್ಲಿ, ಎಲ್ಲ ಗ್ರಹಗಳು ಪ್ರತಿಯೊಂದು ರಾಶಿಚಕ್ರ(Zodiac signs)ದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು 'ಶಾಡೋ ಪ್ಲಾನೆಟ್ಸ್' ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಚಲನೆಯು ಮಾನವ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.
ಜಾತಕದಲ್ಲಿ ರಾಹು(Rahu)ವಿನ ಬಲಹೀನತೆಯು ಒಬ್ಬ ವ್ಯಕ್ತಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡುವುದಲ್ಲದೆ, ಅವನು ಕ್ಷಣಮಾತ್ರದಲ್ಲಿ ಶ್ರೀಮಂತಿಕೆಯಿಂದ ಬಡತನಕ್ಕೆ ಹೊರಳುವಂತೆ ಮಾಡುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಗಳ ಮಹತ್ವ ದೊಡ್ಡದು ಎನ್ನುವುದು. ಇವು ಬಹಳ ಕ್ರೂರ ಗ್ರಹಗಳು.
ಇಂದು ನಾವು ರಾಹು ದೋಷ(Rahu Dosha)ದ ಬಗ್ಗೆ ಮಾತನಾಡೋಣ. ಈ ಗ್ರಹಗಳ ದಿಕ್ಕುಗಳು ಋಣಾತ್ಮಕತೆಯನ್ನು ತರಲು ಸಮರ್ಥವಾಗಿವೆ ಮತ್ತು ಪ್ರತಿ ಜೀವಿಗಳ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುವ ಶಕ್ತಿ ಹೊಂದಿವೆ. ಅದಕ್ಕಾಗಿಯೇ ಹಿಂದೂ ಕ್ಯಾಲೆಂಡರ್‌ನಲ್ಲಿ, ರಾಹು ಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವುದನ್ನು ತಪ್ಪಿಸಲಾಗುತ್ತದೆ. ಈ ಹಂತದಲ್ಲಿ ಮಾಡಿದ ಕೆಲಸವು ವಿಫಲಗೊಳ್ಳುತ್ತದೆ ಎಂದು ನಂಬಲಾಗಿದೆ. ಆ ಸಮಯದಲ್ಲಿ ಮಾಡುವ ಕೆಲಸದಿಂದ ದುರದೃಷ್ಟಕರ ಫಲಿತಾಂಶಗಳನ್ನು ಪಡೆಯಬೇಕಾಗುತ್ತದೆ.
ಜ್ಯೋತಿಷ್ಯಶಾಸ್ತ್ರಜ್ಞರ ಪ್ರಕಾರ, ರಾಹುವು ಜಾತಕದಲ್ಲಿನ ಎಲ್ಲ 12 ಮನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ರಾಹು ದಶಾದ ಋಣಾತ್ಮಕ ಪರಿಣಾಮಗಳು ಮತ್ತು ಅವುಗಳನ್ನು ತಪ್ಪಿಸಲು ಪರಿಹಾರವನ್ನು ನೋಡೋಣ.
ಜಾತಕದಲ್ಲಿ ರಾಹುವಿನ ಋಣಾತ್ಮಕ ಪ್ರಭಾವ
ಜ್ಯೋತಿಷ್ಯದಲ್ಲಿ, ರಾಹುವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾವುದೇ ಜಾತಕದಲ್ಲಿ ರಾಹು ಬಲವಾಗಿದ್ದರೆ ಅದು ವ್ಯಕ್ತಿಗೆ ಪ್ರಯೋಜನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ, ಯಾವುದೇ ಜಾತಕದಲ್ಲಿ ರಾಹು ದುರ್ಬಲನಾಗಿದ್ದರೆ, ಆ ವ್ಯಕ್ತಿಯು ಜೀವನದಲ್ಲಿ ಅಡೆತಡೆಗಳು ಅಥವಾ ಸವಾಲುಗಳನ್ನು ಅನುಭವಿಸುತ್ತಾನೆ. ಇದಲ್ಲದೆ, ರಾಹು ದೋಷವು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಗುಣಪಡಿಸಲಾಗದ ಕಾಯಿಲೆ ಅನುಭವಿಸಬೇಕಗಬಹುದು. ಆದಾಗ್ಯೂ, ರಾಹು ಬಲಶಾಲಿಯಾಗಲು ಕೆಲವು ಸರಳ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ.
Garuda Purana: ಈ ಕೆಲಸಗಳನ್ನು ಸಂಜೆಯ ನಂತರ ಮಾಡಿದರೆ ನಷ್ಟ ಗ್ಯಾರಂಟಿ!
ಜಾತಕದಲ್ಲಿ ರಾಹು ದುರ್ಬಲನಾಗಿದ್ದರೆ ಏನಾಗುತ್ತದೆ?
ರಾಹು ದೋಷ ಪರಿಹಾರಗಳು(Remedies for Rahu Dosha)