ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ಜಾತಕ ಹೇಳುತ್ತೆ ಕೇಳಿ

By Suvarna News  |  First Published Jun 21, 2022, 3:41 PM IST

ಜಾತಕದಿಂದ ವ್ಯಕ್ತಿಯ ಭವಿಷ್ಯದ ಹಲವಾರು ವಿಷಯಗಳನ್ನು ತಿಳಿಯಬಹುದಾಗಿರುತ್ತದೆ. ಕೆಲವರಿಗೆ ಎರಡು ಅಥವಾ ಮೂರು ಮದುವೆ ಯೋಗಗಳಿರುತ್ತವೆ. ಅದು ಜಾತಕವನ್ನು ಸರಿಯಾಗಿ ಪರಿಶೀಲಿಸಿದರೆ ತಿಳಿಯುತ್ತದೆ. ಅಂತಹ ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯೋಣ..


ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಮದುವೆಗೆ ವಿಶೇಷವಾದ ಪ್ರಾಶಸ್ತ್ಯವಿದೆ. ಅಷ್ಟೇ ಅಲ್ಲದೆ ಮದುವೆಗೂ ಮುನ್ನ ಹಲವಾರು ಕ್ರಮಗಳನ್ನು ಸಹ ಅನುಸರಿಸಲಾಗುತ್ತದೆ. ಜಾತಕದಿಂದ (Horoscope) ವ್ಯಕ್ತಿಯ ಭವಿಷ್ಯ ಹಲವಾರು ವಿಚಾರಗಳನ್ನು ತಿಳಿಯಬಹುದಾಗಿದೆ. ಹಾಗಾಗಿ ವಿವಾಹಕ್ಕೂ ಮುನ್ನ ಹುಡುಗ (Boy) ಮತ್ತು ಹುಡುಗಿಯ (Girl) ಜಾತಕವನ್ನು ಪರಿಶೀಲಿಸಿ, ಅದು ಹೊಂದಾಣಿಕೆ ಆಗುತ್ತದೆ ಎಂಬುದು ಖಾತ್ರಿಯಾದಾಗ ಮಾತ್ರ ಮದುವೆಯ ವಿಚಾರದಲ್ಲಿ ಮುಂದುವರೆಯಲಾಗುತ್ತದೆ. 

ಮದುವೆಯ (Marriage) ನಂತರದಲ್ಲಿ ಹುಡುಗ ಮತ್ತು ಹುಡುಗಿ ಅನ್ಯೋನ್ಯತೆಯಿಂದ ಜೀವನ (Life) ಸಾಗಿಸುತ್ತಾರೆ ಅಥವಾ ಇಲ್ಲ ಎಂಬುದನ್ನು ಜಾತಕದ ಮೂಲಕವೇ ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ ಜಾತಕದಿಂದ ಇನ್ನೂ ಅನೇಕ ವಿಚಾರಗಳನ್ನು ತಿಳಿಯಬಹುದು. ಉದಾಹರಣೆಗೆ ಆರ್ಥಿಕ ಸ್ಥಿತಿ, ಉತ್ತಮ ಯೋಗಗಳು, ಸಂಪತ್ತು, ಆಸ್ತಿ – ಭೂಮಿ, ಸಂತಾನ ಯೋಗ, ಇವುಗಳ ಜೊತೆಗೆ ಹುಡುಗ ಅಥವಾ ಹುಡುಗಿಗೆ ಜಾತಕದ ಪ್ರಕಾರ ಎಷ್ಟು ಮದುವೆಯಾಗುವ ಯೋಗವಿದೆ ಎಂಬುದನ್ನು ಸಹ ತಿಳಿಯಬಹುದಾಗಿದೆ. ಹಾಗಾದರೆ ಜಾತಕದಿಂದ ಈ ವಿಚಾರವನ್ನು ತಿಳಿಯುವ ಬಗೆ ಹೇಗೆ ಎಂಬುದನ್ನು ನೋಡೋಣ...

ವಿವಾಹ ಸಂಬಂಧಗಳಿಗೆ ಕಾರಕ ಗ್ರಹ ಗುರು (Jupiter Planet) ಗ್ರಹವಾಗಿದೆ. ಗುರುಬಲ ಚೆನ್ನಾಗಿದ್ದರಷ್ಟೇ ವಿವಾಹಕ್ಕೆ ಯೋಗ ಕೂಡಿ ಬರುವುದು. ಹಾಗಾಗಿ ಮದುವೆಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಯಲು ಜಾತಕದಲ್ಲಿ ಗುರು ಗ್ರಹದ ಸ್ಥಿತಿಯನ್ನು ನೋಡಲಾಗುತ್ತದೆ. ಗುರುವಿನ ಜೊತೆ ಉಳಿದ ಗ್ರಹಗಳ ಯುತಿಯನ್ನು ನೋಡಿ ಸ್ತ್ರೀ ಮತ್ತು ಪುರುಷರ ಸಂಖ್ಯೆಯನ್ನು ತಿಳಿಯಲಾಗುತ್ತದೆ.

ಜಾತಕದಲ್ಲಿ ಸಪ್ತಮ ಸ್ಥಾನವನ್ನು ಸಂಗಾತಿಯ (Partner) ಸ್ಥಾನವೆಂದು ಕರೆಯಲಾಗುತ್ತದೆ. ಈ ಸ್ಥಾನದಲ್ಲಿ ಗುರು ಮತ್ತು ಬುಧಗ್ರಹಗಳು ಒಟ್ಟಿಗೆ ಸ್ಥಿತಿವಾಗಿದ್ದರೆ ಅಂತಹ ಪುರುಷರಿಗೆ ಒಂದು ಮದುವೆ. ಅದೇ ಸಪ್ತಮದಲ್ಲಿ ಮಂಗಳ (Mars) ಅಥವಾ ಸೂರ್ಯ ಗ್ರಹ (Sun Planet) ಸ್ಥಿತವಾಗಿದ್ದರೆ ಅಂತಹವರಿಗೂ ಒಂದೇ ಮದುವೆ ಯೋಗವಿರುತ್ತದೆ. 

Best Partners: ಈ 4 ರಾಶಿಯವರು ನಿಮ್ಮ ಅತ್ಯುತ್ತಮ ಸಂಗಾತಿ ಆಗಬಲ್ಲರು!

ಲಗ್ನದ ಅಧಿಪತಿ ಗ್ರಹ ಮತ್ತು ಸಪ್ತಮ ಸ್ಥಾನದ ಗ್ರಹ, ಈ ಎರಡೂ ಗ್ರಹಗಳು ಜೊತೆಯಾಗಿ ಮೊದಲನೇ ಅಥವಾ ಏಳನೇ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅಂತಹವರಿಗೆ ಎರಡು ಹೆಂಡತಿಯರೆಂದು (Wife) ಜಾತಕ ಹೇಳುತ್ತದೆ. ಉದಾಹರಣೆಗೆ ಲಗ್ನ ಸಿಂಹವಾದರೆ ಅದರ ಅಧಿಪತಿ ಗ್ರಹ ಸೂರ್ಯನಾಗಿರುತ್ತಾನೆ. ಸಪ್ತಮ ಸ್ಥಾನದಲ್ಲಿ ಕುಂಭ ರಾಶಿಯ (Aquarius) ಅಧಿಪತಿ ಗ್ರಹ ಶನಿ (Saturn) ಸ್ಥಿತವಾಗಿದ್ದರೆ, ಮತ್ತು ಈ ಎರಡೂ ಗ್ರಹಗಳು ಪ್ರಥಮ ಅಥವಾ ಸಪ್ತಮ ಸ್ಥಾನದಲ್ಲಿದ್ದರೆ ಅಂತಹ ಪುರುಷರಿಗೆ ಎರಡು ಹೆಂಡತಿಯರು ಇರುತ್ತಾರೆ. ಅದೇ ಮಹಿಳೆಯರಿಗಾದರೆ ಎರಡು ಮದುವೆ ಯೋಗವಿದೆ ಎಂದೇ ಹೇಳಬಹುದಾಗಿರುತ್ತದೆ.

ಸಪ್ತಮ ಮನೆಯ ಅಧಿಪತಿ ಗ್ರಹದ ಜೊತೆಗೆ ಮಂಗಳ, ರಾಹು, ಕೇತು, ಶನಿ ಗ್ರಹಗಳು, ಆರು, ಎಂಟು ಮತ್ತು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ, ಅಂತಹವರಿಗೆ ಒಂದು ಹೆಂಡತಿಯು ಮೃತ್ಯುಹೊಂದಿದ ಕಾರಣಕ್ಕೆ ಇನ್ನೊಂದು ಮದುವೆ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಲಗ್ನ, ಸಪ್ತಮ ಸ್ಥಾನ ಮತ್ತು ಚಂದ್ರಲಗ್ನಗಳು ದ್ವಿಸ್ವಭಾವ ರಾಶಿಗಳಾದ ಮಿಥುನ, ಕನ್ಯಾ, ಧನು ಅಥವಾ ಮೀನ (Gemini, Virgo, Sagittarius or Pisces) ಇದ್ದರೆ ಅಂತಹ ಜಾತಕದವರಿಗೆ ಎರಡು ವಿವಾಹವಾಗುತ್ತದೆ.

ಲಗ್ನದ ಅಧಿಪತಿ ಗ್ರಹವು ಹನ್ನೆರಡನೇ ಮನೆಯಲ್ಲಿ ಮತ್ತು ದ್ವೀತಿಯ ಮನೆಯ ಅಧಿಪತಿ ಗ್ರಹ  ಮಂಗಳ, ಶನಿ, ರಾಹು, ಕೇತು ಗ್ರಹಗಳು ಜೊತೆಗಿದ್ದು, ಸಪ್ತಮ ಸ್ಥಾನದಲ್ಲಿ ಪಾಪಗ್ರಹವಿದ್ದರೆ ಅಂತಹ ಜಾತಕದವರಿಗೆ ಎರಡು ಮದುವೆ ಯೋಗವಿರುತ್ತದೆ. ಅದೇ ಮಹಿಳೆಯರ ಜಾತಕವಾದರೆ ಅವರಿಗೂ ಎರಡು ಮದುವೆ ಯೋಗವೆಂದು ಜಾತಕ ಹೇಳುತ್ತದೆ. 

ಕೋಪವೂ ಜಾಸ್ತಿ, ಪ್ರೀತಿಯೂ ಹೆಚ್ಚು.. ಕರ್ಕಾಟಕ ರಾಶಿಯ ಸ್ವಭಾವ ಹೀಗೆ..

ಶುಕ್ರ ಗ್ರಹವು (Venus planet) ಪಾಪಗ್ರಹದ ಜೊತೆಗೆ ಸ್ಥಿತವಾಗಿದ್ದರೆ ಅಂತಹ ಜಾತಕದವರಿಗೆ ಎರಡು ಮದುವೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧನ ಸ್ಥಾನ ಅಂದರೆ ಎರಡನೇ ಸ್ಥಾನದಲ್ಲಿ ಅನೇಕ ಪಾಪಗ್ರಹಗಳು ಮತ್ತು ದ್ವೀತಿಯ ಮನೆಯ ಅಧಿಪತಿ ಗ್ರಹ ಕೂಡಾ ಪಾಪ ಗ್ರಹಗಳ ಜೊತೆಗೆ ಸ್ಥಿತವಾಗಿದ್ದರೆ ಅಂತಹ ಜಾತಕದವರಿಗೆ ಮೂರು ವಿವಾಹ ಯೋಗವಿರುತ್ತದೆ.

click me!