ಈ ಐದು ರಾಶಿಗಳು ಎಲ್ಲರನ್ನೂ ಖುಷಿಯಾಗಿಡುತ್ತವೆ!

By Suvarna News  |  First Published Jun 21, 2022, 2:53 PM IST

ಕೆಲವರು ಹಾಗೆಯೇ, ಇವರು ಇದ್ದಲ್ಲೆಲ್ಲ ಪಾಸಿಟಿವ್ ವೈಬ್ಸ್. ಎಲ್ಲರಿಗೂ ಅವರ ಇರುವಿಕೆ ಖುಷಿ ತರುತ್ತದೆ. ಇಂಥವರು ಯಾವ ರಾಶಿಗೆ ಸೇರಿರುತ್ತಾರೆ ತಿಳ್ಕೋಬೇಕಾ?


ನಮ್ಮನ್ನು ಪರಸ್ಪರ ಪ್ರತ್ಯೇಕಿಸುವ ಕೆಲವು ಗುಣಲಕ್ಷಣಗಳಿವೆ. ಈ ಗುಣಲಕ್ಷಣಗಳು ಪ್ರತಿಯೊಬ್ಬರ ವೈಶಿಷ್ಟ್ಯವಾಗಿರುತ್ತವೆ. ಇತರರಿಗಿಂತ ಅವರನ್ನು ವಿಭಿನ್ನವಾಗಿಸುತ್ತವೆ. ಕೆಲವರ ಗುಣ ಸ್ವಭಾವ ಎಷ್ಟೊಂದು ಚೆನ್ನಾಗಿರುತ್ತದೆಂದರೆ ಬಹುತೇಕ ಜನರು ಅವರನ್ನು ಇಷ್ಟ ಪಡುತ್ತಿರುತ್ತಾರೆ. ಎಲ್ಲರೂ ಮೆಚ್ಚುವ ಹಲವಾರು ಗುಣಗಳು ಮತ್ತು ವೈಶಿಷ್ಟ್ಯಗಳನ್ನು ಅವರು ಹೊಂದಿರುತ್ತಾರೆ. ಎಲ್ಲರ ಕಾಳಜಿ ವಹಿಸುತ್ತಾರೆ, ಎಲ್ಲರ ಕಷ್ಟಗಳಿಗೂ ಮರುಗುತ್ತಾರೆ, ಹೆಗಲಾಗುತ್ತಾರೆ, ತಾವು ಬಯಸಿದ್ದನ್ನು ಪಡೆಯುವ ಛಲವನ್ನೂ ಪ್ರದರ್ಶಿಸುತ್ತಾರೆ. ಚೆನ್ನಾಗಿ ಮಾತನಾಡುತ್ತಾರೆ. ಸತ್ಯವನ್ನು ಹೇಳುವಾಗಲೂ ಕಠಿಣರಾಗುವುದಿಲ್ಲ. ಇತರರನ್ನು ನೋಯಿಸದೆಯೇ ಹೇಳಬೇಕಾದ್ದನ್ನು ಹೇಳುವುದು ಹೇಗೆ ಎಂದು ಅವರಿಗೆ ಗೊತ್ತಿದೆ. 

ಇಂಥವರು ತುಂಬಾ ಸುಂದರವಾಗಿರದಿಲ್ಲಬಹುದು, ಆದರೆ, ಅವರ ವ್ಯಕ್ತಿತ್ವದ ಕಳೆಯೇ ಇತರರು ಅವರೆಡೆ ನೋಡುವಂತೆ ಮಾಡುತ್ತದೆ. ಆಕರ್ಷಕ ನಡೆ, ನುಡಿ, ಸ್ವಭಾವದಿಂದಲೇ ಎಲ್ಲರನ್ನೂ ಸೆಳೆಯುತ್ತಾರೆ. ಇಂಥ ಮುದ್ದಾದ ಸ್ವಭಾವದವರು ಇದ್ದಲ್ಲಿ ಸದಾ ಸಂತೋಷ ತುಂಬಿರುತ್ತದೆ. ಎಲ್ಲರನ್ನೂ ಖುಷಿಯಾಗಿಡುವ ಇಂಥವರು ಯಾವ ರಾಶಿಗೆ ಸೇರಿರುತ್ತಾರೆ ಹೇಳ್ತೀವಿ ಕೇಳಿ..

Tap to resize

Latest Videos

1. ಮೀನ(Pisces)
ಮೀನ ರಾಶಿಯವರು ತುಂಬಾ ಮುದ್ದು. ಮೀನ ರಾಶಿಯ ಪುರುಷರು ಮತ್ತು ಮಹಿಳೆಯರು ಚಿಂತನಶೀಲರು, ಪ್ರೀತಿ ತೋರುವವರು ಮತ್ತು ಪರಹಿತಚಿಂತಕರು. ಯಾವಾಗಲೂ ಅಗತ್ಯವಿರುವವರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ ಮತ್ತು ಅವರು ಉತ್ತಮ ಕೇಳುಗರು. ಇವರು ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಎಲ್ಲರೂ ಒಟ್ಟಿಗಿರುವುದು ಪರಮ ಸುಖ ಎಂದು ನಂಬುತ್ತಾರೆ. ಇತರರ ಜೀವನವನ್ನು ಸುಧಾರಿಸಲು ತಮ್ಮಿಂದಾಗುವ ಎಲ್ಲವನ್ನೂ ಮಾಡಲು ಬಯಸುತ್ತಾರೆ. , ಈ ಜನರು ತಮ್ಮನ್ನು ತಾವು ಉತ್ತಮ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳಲು ನಿರಂತರವಾಗಿ ಕಲಿಯುತ್ತಾರೆ ಮತ್ತು ಕಲಿತದ್ದನ್ನು ಅನ್ವಯಿಸುತ್ತಾರೆ. ಅವರ ಈ ಗುಣಗಳು ಎಲ್ಲರಿಗಿಂತ ಹೆಚ್ಚು ಪ್ರೀತಿಪಾತ್ರರನ್ನಾಗಿಸುತ್ತವೆ. 

Vastu Tips: ಮನೆಯ ಈ ದಿಕ್ಕಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿದ್ದರೆ ಅನಾರೋಗ್ಯ ಹೆಚ್ಚಬಹುದು!

2. ಕರ್ಕಾಟಕ(Cancer)
ಕರ್ಕಾಟಕ ರಾಶಿಯವರನ್ನು ಕೂಡಾ ಬಹಳಷ್ಟು ಜನ ಇಷ್ಟ ಪಡುತ್ತಾರೆ. ಇವರು ಅತ್ಯುತ್ತಮ ಆತಿಥ್ಯ ನೀಡಬಲ್ಲರು. ಮನೆಗೆ ಬರುವವರನ್ನು ಸಂತೋಷ ಪಡಿಸಲು ಅವರಿಷ್ಟದ ಆಹಾರ ಅಡಿಗೆಯನ್ನು ಕೊಂಚವೂ ಬೇಸರಿಸಿಕೊಳ್ಳದೆ ಮಾಡುವರು, ಅವರ ವಾಸ್ತವ್ಯ ಆರಾಮದಾಯಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವರು. ಅವರು ಸೌಜನ್ಯ, ಸ್ನೇಹಪರ, ಸಭ್ಯ ಮತ್ತು ಸಹಾಯಕರಾಗಿದ್ದಾರೆ. ಕರ್ಕಾಟಕ ರಾಶಿಯವರು ಜನರು ತಮ್ಮ ಮನೆಯನ್ನು ನೆಲೆಸಲು ಆರಾಮದಾಯಕ ಸ್ಥಳವೆಂದು ಪರಿಗಣಿಸಲು ಬಯಸುತ್ತಾರೆ. ಅಲ್ಲದೆ, ಅವರು ಅತ್ಯಂತ ದಯಾಪರರು. ಬಹಳ ತಾಳ್ಮೆಯನ್ನು ಕೂಡಾ ಹೊಂದಿದ್ದಾರೆ. ಯಾರಿಗೂ ಅವರು ಬಯಸದ ಕೆಲಸ ಮಾಡಲು ಎಂದಿಗೂ ಒತ್ತಾಯಿಸುವವರಲ್ಲ. 

3. ತುಲಾ(Libra)
ತುಲಾ ರಾಶಿಯ ಸ್ಥಳೀಯರು ಯಾವಾಗಲೂ ಸುತ್ತಲಿನ ಜನರನ್ನು ಸಂತೋಷವಾಗಿಟ್ಟುಕೊಳ್ಳಲು ನೋಡುತ್ತಾರೆ. ಯಾರಿಗೆ ಏನು ಮಾಡಿದರೆ ಸಂತೋಷವಾಗುತ್ತದೆ ಎಂಬುದು ಇವರಿಗೆ ಚೆನ್ನಾಗಿ ಗೊತ್ತು. ಇವರು ಸಮತೋಲಿತ ಮನಸ್ಥಿತಿಯವರು. ಎಲ್ಲರನ್ನೂ ಒಂದೇ ರೀತಿ ಕಾಣುತ್ತಾರೆ. ಹೆಚ್ಚು ಹೆಚ್ಚು ಜನರು ಇವರಿಗೆ ಬೇಕು. ಸದಾ ಜನರ ನಡುವೆ ಇರಲು ಇಷ್ಟಪಡುತ್ತಾರೆ. ಅವರು ವಿಷಯಗಳನ್ನು ತಮ್ಮ ಮೂಗಿನ ನೇರಕ್ಕೆ ನೋಡದೆ, ಮತ್ತೊಬ್ಬರ ಪ್ರಕಾರವಾಗಿ ಅರಿಯಬಲ್ಲರು. ಮೋಹಕವಾಗಿ ನಗುತ್ತಾ ಇರಬಲ್ಲರು. ಇವರ ನಗುವೇ ಇವರತ್ತ ಎಲ್ಲರನ್ನೂ ಸೆಳೆಯುತ್ತದೆ. 

4. ಧನು(Sagittarius)
ಧನು ರಾಶಿಯ ಜನರು ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ ಮತ್ತು ಹೊಸದನ್ನು ಪ್ರಯತ್ನಿಸುವ ಅವರ ಉತ್ಸಾಹವು ಪ್ರಿಯವಾಗಿರುತ್ತದೆ. ಅವರು ಎಲ್ಲ ವಿಷಯಗಳನ್ನೂ ಸಕಾರಾತ್ಮಕವಾಗಿ ನೋಡುತ್ತಾರೆ. ತಮ್ಮ ಬಗ್ಗೆ ಕಾಳಜಿ ವಹಿಸುವಷ್ಟೇ ಇತರರ ಬಗ್ಗೆ ಕಾಳಜಿ ವಹಿಸುತ್ತಾರೆ. ಪ್ರತಿ ದಿನ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಎದುರಿಸುವ ಜೊತೆಗೆ ಒಳ್ಳೆಯ ನಾಳೆ ಎಂಬುದಿದೆ ಎಂಬ ಮನಸ್ಥಿತಿಯಲ್ಲೇ ದಿನ ಕಳೆಯುತ್ತಾರೆ. ಇಂಥ ಪಾಸಿಟಿವ್ ಎನರ್ಜಿಯ ಜನರೊಂದಿಗೆ ಇರಲು ಎಲ್ಲರೂ ಬಯಸುತ್ತಾರೆ. ಇವರು ಇದ್ದಲ್ಲೆಲ್ಲ ಬೆಳಗುತ್ತಾರೆ. 

ಇಂದು ವಿಶ್ವ ಯೋಗ ದಿನಾಚರಣೆ: ಪೇಜಾವರ ಶ್ರೀಗಳಿಗೆ ಪ್ರತಿನಿತ್ಯವೂ ಯೋಗ ದಿನವೇ..!

5. ವೃಷಭ(Scorpio)
ವೃಷಭ ರಾಶಿಯ ಪುರುಷರು ಮತ್ತು ಮಹಿಳೆಯರು ಹಠಮಾರಿ, ಆದರೆ ಅವರು ತಾವೂ ಬದುಕುತ್ತೇವೆ, ಇತರರನ್ನೂ ಬದುಕಲು ಬಿಡುತ್ತೇವೆ ಎಂಬ ಸ್ವಭಾವದವರು. ಇವರು ಎಲ್ಲರೊಂದಿಗೆ ತಾಳ್ಮೆಯಿಂದಿರುತ್ತಾರೆ. ಎಲ್ಲರಲ್ಲೂ ನ್ಯೂನತೆಗಳಿರುತ್ತವೆ ಎಂಬುದನ್ನಿವರು ಅರ್ಥ ಮಾಡಿಕೊಳ್ಳುತ್ತಾರೆ. 
 

click me!