Astro tips: ಆರ್ಥಿಕ ಸಂಕಷ್ಟ ನಿವಾರಣೆಗೆ ಗುರುವಾರದ ಸೂತ್ರವಿದು

By Suvarna NewsFirst Published Feb 10, 2022, 5:13 PM IST
Highlights

ಶಾಸ್ತ್ರದಲ್ಲಿ ಹೇಳಿದ ಕೆಲವು ಉಪಾಯಗಳನ್ನು ಆಯಾ ದಿನದಂದೇ ಮಾಡಿದಲ್ಲಿ ಫಲ ಪ್ರಾಪ್ತಿಯಾಗುತ್ತದೆ. ಹಾಗೆಯೇ ಗುರುವಾರದಂದು ಮಾಡುವ ಕೆಲವು ಉಪಾಯಗಳಿಂದ ಸಕಲ ಸಂಕಷ್ಟಗಳ ನಿವಾರಣೆಯ ಧನ ಸಂಪತ್ತು ವೃದ್ಧಿಸುತ್ತದೆ. ಹಾಗಾಗಿ ಗುರುವಾರ ಮಾಡಬೇಕಾದ ಉಪಾಯಗಳ ಬಗ್ಗೆ ತಿಳಿಯೋಣ..

ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ಬೇರೆ ಬೇರೆ ದೇವತೆಗಳಿಗೆ (God) ಸಮರ್ಪಿತವಾಗಿರುತ್ತದೆ. ಆಯಾ ದಿನದಂದು ಯಾವ ದೇವರಿಗೆ ವಿಶೇಷವಾಗಿ ಪೂಜಿಸಿದರೆ (Worship) ಶ್ರೇಷ್ಠ ಎಂಬುದನ್ನು ತಿಳಿದು ಪೂಜಿಸಿದಲ್ಲಿ ಇಷ್ಟಾರ್ಥ ಸಿದ್ಧಿಸುತ್ತದೆ. ಗುರುವಾರದಂದು (Thursday)  ಕೆಲವು ಉಪಾಯಗಳನ್ನು (Tips) ಮಾಡಿದರೆ  ಆರ್ಥಿಕ ಸಂಕಷ್ಟ ದೂರವಾಗಿ ಮನೆಯಲ್ಲಿ ಸುಖ (Happiness) ಸಮೃದ್ಧಿ ನೆಲೆಸುತ್ತದೆ. 

ಸೋಮವಾರ ಶಿವನನ್ನು, ಮಂಗಳವಾರ ದೇವಿಯನ್ನು, ಶುಕ್ರವಾರ ಲಕ್ಷ್ಮಿಯನ್ನು ಶನಿವಾರ ಆಂಜನೇಯನನ್ನು ಪೂಜಿಸಿದರೆ ಮನೋ ಕಾಮನೆಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಆ ದಿನಗಳಂದು ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ ಕೆಲವು ಸರಳ ಉಪಾಯಗಳನ್ನು (Simple tips) ಅನುಸರಿಸಿ ದಲ್ಲಿ ಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಶ್ರೀ ಮಹಾ ವಿಷ್ಣುವಿನ (Lord Vishnu) ವಾರವಾದ ಗುರುವಾರ ಶಾಸ್ತ್ರ ತಿಳಿಸಿದ ಕೆಲವು ಉಪಾಯಗಳನ್ನು ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರವಾಗಿ ಹಣ ಕೈಯಲ್ಲಿ ನಿಲ್ಲುತ್ತದೆ. ಹಾಗಾದರೆ ಆ ಉಪಾಯಗಳ ಬಗ್ಗೆ ತಿಳಿಯೋಣ....
  
ಇದನ್ನು ಓದಿ: Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು! 

ಬೃಹಸ್ಪತಿವಾರ ಗುರು ಗ್ರಹದ (Jupiter) ಕೃಪೆ ಪಡೆಯಲು ಶ್ರೇಷ್ಠವಾದ ವಾರವಾಗಿದೆ. ಜೀವನದಲ್ಲಿ (Life) ಸುಖ ಸಮೃದ್ಧಿ ನೆಲೆಸಲು ಗುರು ಗ್ರಹದ ಕೃಪೆ ಬಹಳ ಮುಖ್ಯವಾಗುತ್ತದೆ. ವಿವಾಹ (Marriage), ಸಂತಾನ, ಸಮೃದ್ದಿ, ಬುದ್ಧಿವಂತಿಕೆ ಮತ್ತು ಸಂಪತ್ತಿನ ಕಾರಕ ಗ್ರಹ ಗುರು ಗ್ರಹವಾಗಿದೆ. ಯಶಸ್ಸಿಗೆ ಪ್ರಮುಖವಾಗಿ ಗುರು ಗ್ರಹದ ಅನುಗ್ರಹ ಅವಶ್ಯಕವಾಗಿರುತ್ತದೆ. ಹಾಗಾಗಿ ಶಾಸ್ತ್ರ ಹೇಳಿರುವ ಕೆಲವು ಉಪಾಯಗಳು ಇಲ್ಲಿವೆ.

ಧನ ಪ್ರಾಪ್ತಿಗೆ ಇಲ್ಲಿದೆ ಮಾರ್ಗ : ಉದ್ಯೋಗ (Job) ಅಥವಾ ವ್ಯಾಪಾರದಲ್ಲಿ ಯಶಸ್ಸು (Success) ಸಿಗುತ್ತಿಲ್ಲ ಎಂದಾದರೆ ಗುರುವಾರದಂದು ಶ್ರೀ ಮಹಾ ವಿಷ್ಣುವಿನ ದೇವಸ್ಥಾನಕ್ಕೆ ತೆರಳಿ ಕೇಸರಿ ಮತ್ತು ಬೇಳೆಯನ್ನು ಅರ್ಪಿಸಿ ನಂತರ ಅದನ್ನು ದಾನವಾಗಿ ನೀಡಬೇಕು. ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಮಹಾ ವಿಷ್ಣುವನ್ನು ಪೂಜಿಸಿ ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಈ ದಿನ ಹಣೆಗೆ ಶ್ರೀಗಂಧದ ತಿಲಕವನ್ನು ಇಟ್ಟುಕೊಂಡಲ್ಲಿ ಹಣ ಸಂಪಾದಿಸುವ ಮಾರ್ಗ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಸಹ ಇದೆ. 

ದೀಪ ಬೆಳಗಿಸುವುದು (Lightening): ಗುರುವಾರದ ದಿನ ಧಾರ್ಮಿಕ ಪುಸ್ತಕಗಳನ್ನು (Religious book) ದಾನವಾಗಿ ನೀಡುವುದರಿಂದ ವ್ಯಾಪಾರ ಮತ್ತು ಉದ್ಯೋಗಗಳಿಗೆ ಬರುವ ಅಡೆತಡೆಗಳು ದೂರವಾಗುತ್ತವೆ. ಗುರುವಾರದಂದು ಮನೆಯ ಮುಖ್ಯ ದ್ವಾರದ ಬಳಿ ಮತ್ತು ವಾಸ್ತು ಬಾಗಿಲ ಬಳಿ ತುಪ್ಪದ (Ghee) ದೀಪವನ್ನು ಹಚ್ಚಿಡುವುದರಿಂದ ಹಣಕಾಸು ನಷ್ಟವಾಗುವುದು ತಪ್ಪುತ್ತದೆ.

ಈ ಮಂತ್ರಗಳನ್ನು ಜಪಿಸಬೇಕು

ಹನ್ನೊಂದು ಗುರು ವಾರಗಳ ಕಾಲ ಗಣೇಶನನ್ನು ಪೂಜಿಸಿ ಮೋದಕವನ್ನು ಅರ್ಪಿಸುವುದರಿಂದ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. 
ಗುರು ಗ್ರಹವನ್ನು ಬಲ ಪಡಿಸಲು "ಓಂ ಗ್ರಾಂ ಗ್ರೀಂ ಗ್ರೋಂ  ಸಃ ಗುರವೇ ನಮಃ// "
ಅಥವಾ "ಓಂ ನಮೋ ಭಗವತೇ ವಾಸುದೇವಾಯ ನಮಃ //" ಅಥವಾ "ಓಂ ಬೃಹಸ್ಪತಯೇ ನಮಃ// "  ಈ ಮಂತ್ರಗಳನ್ನು ಕನಿಷ್ಠ  108 ಬಾರಿ ಜಪಿಸುವುದರಿಂದ ಕಷ್ಟಗಳು ನಿವಾರಣೆಯಾಗಿ ಅಂದುಕೊಂಡದ್ದು ಬಹು ಬೇಗ ಈಡೇರುತ್ತದೆ. ಅಷ್ಟೇ ಅಲ್ಲದೆ ಗುರುವಾರದಂದು ಹಳದಿ ವಸ್ತುಗಳನ್ನು ದಾನ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ. 

ಇದನ್ನು ಓದಿ: Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!

ಗುರುವಾರದ ವ್ರತ  ಕಥೆ ಮತ್ತು ಶ್ರವಣ  : ಗುರುವಾರದ ವ್ರತವನ್ನು ಪಾಲಿಸುವದು. ಗುರುವಾರದಂದು ಸತ್ಯನಾರಾಯಣ ಕಥೆ ಯನ್ನು  ಕೇಳುವುದರಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಈ ದಿನ ಹಳದಿ ವಸ್ತ್ರದಲ್ಲಿ ಅರಿಶಿಣವನ್ನು ಹಾಕಿ ಅದನ್ನು ಗಂಟುಮಾಡಿ ಕಟ್ಟಿಕೊಳ್ಳುವುದರಿಂದ ಸಕಲ ಕಷ್ಟಗಳು ದೂರವಾಗುತ್ತವೆ. ಗುರುವಾರದಂದು ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು (Turmeric) ಹಾಕಿ ಸ್ನಾನ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ. ಗುರುವಾರದಂದು ಬಾಳೆ (Banana) ಮರವನ್ನು ಪೂಜಿಸುವದರಿಂದ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ.

Latest Videos

click me!