Astrology Tips: ಜಾತಕದ ದುರ್ಬಲ ಗ್ರಹಗಳಿಗೆ ಬಲ ತುಂಬಲು ಬಳಸಿ ಮಸಾಲೆ!

By Suvarna News  |  First Published Feb 10, 2022, 12:38 PM IST

ನಮ್ಮ ಗ್ರಹದೋಷಗಳನ್ನು ನಿವಾರಿಸಿ, ಜಾತಕದಲ್ಲಿ ಶಕ್ತಿಹೀನವಾಗಿರುವ ಗ್ರಹಗಳಿಗೆ ಬಲ ತುಂಬುವ ಕೆಲಸವನ್ನು ಅಡುಗೆಮನೆಯ ಮಸಾಲೆ ಪದಾರ್ಥಗಳು ಮಾಡಬಲ್ಲವು. ಯಾವ ಮಸಾಲೆ ವಸ್ತುಗಳನ್ನು ಹೇಗೆ ಬಳಸಿದರೆ ಗ್ರಹಬಲ ಸಿಗಲಿದೆ ತಿಳಿಯಿರಿ. 


ಭಾರತೀಯ ಮಸಾಲೆ ಪದಾರ್ಥಗಳು ಜಗತ್ಪ್ರಸಿದ್ಧ. ತಮ್ಮ ರುಚಿ, ಪರಿಮಳಕ್ಕಾಗಿ ಮನೆ ಮಾತಾಗಿರುವ ಇವು ಬಂಗಾರಕ್ಕಿಂತ ದುಬಾರಿಯಾದ ಕಾಲವೊಂದಿತ್ತು. ಪ್ರತಿ ನಿತ್ಯದ ಅಡುಗೆಯಲ್ಲಿ ಇವುಗಳ ಮಿತವಾದ ಬಳಕೆಯಿಂದ ಆಹಾರ ಪದಾರ್ಥಗಳ ರುಚಿ ಹೆಚ್ಚುವುದಷ್ಟೇ ಅಲ್ಲ, ಹಲವಾರು ಆರೋಗ್ಯ ಲಾಭಗಳಿವೆ. ಇದರ ಹೊರತಾಗಿಯೂ ನಮ್ಮ ಗ್ರಹಬಲ ಕ್ಷೀಣವಾಗಿದ್ದರೆ, ಅವಕ್ಕೆ ಶಕ್ತಿ ತುಂಬಲು ಕೂಡಾ ಮಸಾಲೆ ಪದಾರ್ಥಗಳನ್ನು ಬಳಸಬಹುದು ಎಂಬುದು ನಿಮಗೆ ಗೊತ್ತೇ? 
 
ಸೋಂಪು(Fennel)
ಸೋಂಪು ತಿನ್ನುವುದರಿಂದ ಶುಕ್ರ(Venus)ನನ್ನು ಬಲಶಾಲಿಯಾಗಿಸಬಹುದು. ಪ್ರತಿ ಊಟದ ಬಳಿಕ ಸೋಂಪನ್ನು ತಿನ್ನುವುದರಿಂದ ಅಸಿಡಿಟಿ ಅಥವಾ ಸಂಕಟ ನಿವಾರಣೆಯಾಗುತ್ತದೆ. ಹೊರಗೆ ಹೋಗುವಾಗ ಸೋಂಪನ್ನು ಬೆಲ್ಲದೊಂದಿಗೆ ತಿಂದು ಹೊರಟರೆ, ಮಂಗಳ(Mars)ನು ನಿಮ್ಮ ಕೆಲಸ ಮುಗಿಸಲು ಬೆಂಬಲ ನೀಡುತ್ತಾನೆ. 

ದಾಲ್ಚಿನ್ನಿ(Cinnamon)
ಯಾರದಾದರೂ ಜಾತಕದಲ್ಲಿ ಶುಕ್ರ ಹಾಗೂ ಮಂಗಳ ದುರ್ಬಲವಾಗಿದ್ದರೆ ಅವರು ಜೇನುತುಪ್ಪ ಹಾಗೂ ನೀರಿನೊಂದಿಗೆ ದಾಲ್ಚಿನ್ನಿ ಸೇವಿಸಬೇಕು. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚಿ, ಚಳಿಗಾಲದ ಕೆಮ್ಮು ಕಡಿಮೆಯಾಗುತ್ತದೆ. 

Tap to resize

Latest Videos

Jaya Ekadashi 2022: ಶೈವ, ವೈಷ್ಣವರಿಬ್ಬರಿಗೂ ಮಹತ್ವದ ದಿನ ಜಯ ಏಕಾದಶಿ

ಕಾಳುಮೆಣಸು(Pepper)
ಕಾಳುಮೆಣಸಿನ ಸೇವನೆಯಿಂದ ಸೂರ್ಯ ಹಾಗೂ ಚಂದ್ರನಿಗೆ ಬಲ ತುಂಬಬಹುದು. ಇದರಿಂದ ಕೆಮ್ಮು ನಿವಾರಣೆಯಾಗುವ ಜೊತೆಗೆ ನಮ್ಮ ನೆನಪಿನ ಶಕ್ತಿ ಹೆಚ್ಚುತ್ತದೆ. ಕಾಳುಮೆಣಸನ್ನು ತಾಮ್ರ(copper)ದ ಪಾತ್ರೆಯಲ್ಲಿ ಹಾಕಿ ಡೈನಿಂಗ್ ಟೇಬಲ್ ಮೇಲೆ ಇಡುವುದರಿಂದ ಮನೆಯ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳು ತಗ್ಗುತ್ತವೆ. ತಾಮ್ರದ ಜಗ್‌ನಲ್ಲಿ ನೀರಿನ ಜೊತೆ ಹಾಕಿಟ್ಟು, ಅದೇ ನೀರನ್ನು ಕುಡಿಯಲು ಉಪಯೋಗಿಸಿ. 

ಬಾರ್ಲಿ(Barley)
ಇದು ಮಂಗಳ ಗ್ರಹದ ಬಲವರ್ಧನೆಗೆ ಅತ್ಯುತ್ತಮವಾಗಿದೆ. ಬಾರ್ಲಿಯನ್ನು ಹೆಚ್ಚು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವುದರಂಥ ಸಮಸ್ಯೆಗಳು ತಗ್ಗುತ್ತವೆ. 

ಹಸಿರು ಏಲಕ್ಕಿ(Green cardamom)
ರಾಹು ಕೇತುವಿನ ದೋಷ ನಿಮಗಿದ್ದರೆ, ಹಸಿರು ಏಲಕ್ಕಿಯನ್ನು ಹಾಲಿನಲ್ಲಿ ಬೇಯಿಸಿ, 6 ವಾರಗಳ ಕುಡಿಯಿರಿ. ನಿಮ್ಮ ಸಮಸ್ಯೆ ನಿವಾರಣೆಯಾಗುವುದು. ಹಾಲನ್ನು ಕ್ಯಾಲ್ಶಿಯಂಗಾಗಿ ಕುಡಿಯುವ ಬಯಕೆ ಇದ್ದರೂ, ಕುಡಿದರೆ ಜೀರ್ಣವಾಗುವುದಿಲ್ಲ ಎನ್ನುವವರಿಗೆ ಈ ರೀತಿ ಸೇವಿಸುವುದರಿಂದ ಪರಿಹಾರ ಸಿಗಲಿದೆ. 

ಕೋಪ ನಿಯಂತ್ರಿಸಲು ಸಾಧ್ಯವಾಗ್ತಿಲ್ವೇ? ಈ Vastu Tips ಫಾಲೋ ಮಾಡಿ

ಅರಿಶಿನ(Turmeric)
ಅರಿಶಿನದಲ್ಲಿ ಅಡಗಿರುವ ಸಾಕಷ್ಟು ಔಷಧೀಯ ಗುಣಗಳು ನಮಗೆಲ್ಲ ಗೊತ್ತು. ಆದರೆ ಅರಿಶಿನವನ್ನು ಸೇವಿಸುವುದರಿಂದ ಗುರು ಗ್ರಹಕ್ಕೆ ಬಲ ಸಿಗುತ್ತದೆ ಎಂಬುದು ನಿಮಗೆ ಗೊತ್ತೇ? ಅಷ್ಟೇ ಅಲ್ಲ, ಅರಿಶಿನ ಬೇರನ್ನು ದಾರದಲ್ಲಿ ಕಟ್ಟಿಕೊಂಡು, ಕುತ್ತಿಗೆಗೆ ಸರದಂತೆ ಹಾಕಿಕೊಳ್ಳುವುದರಿಂದ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆ. ಇನ್ನು ಆರ್ತ್ರೈಟಿಸ್, ಮೂಳೆಗಳ ಸಮಸ್ಯೆ, ಸೋಂಕಿನ ಸಮಸ್ಯೆಗಳಿದ್ದರೆ ಅರಿಶಿನವನ್ನು ಹಾಲಿನಲ್ಲಿ ಹಾಕಿಕೊಂಡು ಸೇವಿಸುವುದರಿಂದ ಉತ್ತಮ ಪರಿಹಾರ ಕಾಣಬಹುದು. 

Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!

ಬಿಳಿ ಸಾಸಿವೆ(White Mustard)
ಬಿಳಿ ಸಾಸಿವೆಯನ್ನು ಮನೆಯ ಮೂಲೆ ಮೂಲೆಗೂ ಹಾಕಿ ಮರುಬೆಳಗ್ಗೆ ಚೆನ್ನಾಗಿ ಗುಡಿಸಿ ತೆಗೆಯಬೇಕು. ಇದರಿಂದ ಮನೆಗೆ ಬಿದ್ದ ದೃಷ್ಟಿ ನಿವಾರಣೆಯಾಗುವ ಜೊತೆಗೆ, ನಿಮ್ಮ ಗ್ರಹದೋಷಗಳೂ ಕಡಿಮೆಯಾಗುತ್ತವೆ. ಇದೇ ರೀತಿ ಉಪ್ಪನ್ನು ಕೂಡಾ ಬಳಸಲು ವಾಸ್ತು ಶಾಸ್ತ್ರ ಹೇಳುತ್ತದೆ.

ಕೇಸರಿ(Saffron)
ಸೂರ್ಯನನ್ನು ಬಲಪಡಿಸುವ ಬಹಳಷ್ಟು ಮಸಾಲೆ ಪದಾರ್ಥಗಳು ಮಂಗಳನನ್ನೂ ಬಲ ಪಡಿಸುತ್ತವೆ. ಅಂಥದೊಂದು ಪದಾರ್ಥ ಕೇಸರಿ. ಈ ಬಣ್ಣ ಕೂಡಾ ಮಂಗಳನನ್ನು ಪ್ರತಿನಿಧಿಸುತ್ತದೆ. 

ಒಣಶುಂಠಿ(Dry Ginger)
ಒಣಶುಂಠಿಯು ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಉತ್ತಮವಾಗಿದೆ. ಇದರ ಸೇವನೆಯಿಂದ ಕೆಮ್ಮು, ಕಫ ಸಮಸ್ಯೆಗಳೂ ಕಡಿಮೆಯಾಗುತ್ತವೆ. 

click me!