Astrology And Traits: ಪ್ರೀತಿ ಓಕೆ, ಕಮಿಟ್ ಆಗೋದ್ಯಾಕೆ ಎನ್ನೋ ರಾಶಿಯವರಿವರು!

By Suvarna News  |  First Published Feb 10, 2022, 3:17 PM IST

ಜಾಲಿಯಾಗಿ ಸುತ್ತೋಕೆ ಓಕೆ, ಆದ್ರೆ ಮದುವೆಯಾಗೋಣ ಎಂದ್ರೆ ಮಾತ್ರ ಕೆಲವರಿಗೆ ಏನೋ ಅಪಶಕುನ ಕಿವಿಗೆ ಬಿದ್ದಂತಾಗುತ್ತದೆ. ಯಾವೆಲ್ಲ ರಾಶಿಯವರು ಕಮಿಟ್‌ಮೆಂಟ್‌ಗೆ ಹೆದರುತ್ತಾರೆ ಗೊತ್ತಾ?


ಪ್ರೀತಿ ಮಾಡೋಕೆ ಚೆನ್ನಾಗಿರುತ್ತದೆ, ಸುತ್ತಾಡೋಕೆ ಚೆನ್ನಾಗಿರುತ್ತದೆ, ಹರಟೆ ಹೊಡೆಯುತ್ತಾ ಇಡೀ ದಿನ ಸಂದೇಶಗಳನ್ನು ಕಳುಹಿಸುವುದಕ್ಕೂ ಚೆನ್ನಾಗಿರುತ್ತದೆ. ಆದರೆ ಕಮಿಟ್ ಆಗಬೇಕು ಅಂದ್ರೆ ಮಾತ್ರ ಕೆಲವರಿಗೆ ಹಾವು ತುಳಿದಂತಾಗುತ್ತದೆ! ಅದ್ಯಾಕೋ ಗೊತ್ತಿಲ್ಲ, ಕೆಲವರು ಸಂಬಂಧದಲ್ಲಿ ಕಮಿಟ್ ಆಗಲು ಹೆದರುತ್ತಾರೆ. ಪ್ರೀತಿ ಪ್ರೇಮ ಎಂದು ಓಡಾಡುವ ಇವರು ಮದುವೆ ಎಂಬ ಪದ ಕೇಳಿದರೆ ಕಾರಣ ಹೇಳಲು ಶುರು ಮಾಡುತ್ತಾರೆ. 

ಕೆಲವರಿಗೆ ಮದುವೆ ಎಂದರೆ, ಒಬ್ಬರಿಗೇ ಕಮಿಟ್ ಆಗುವುದು ಎಂದರೆ ಜೀವನದಲ್ಲಿ ಸೆಟಲ್ ಆದಂತೆ. ಮತ್ತೆ ಕೆಲವರಿಗೆ ತಮ್ಮ ಜೀವನದ ಮೇಲೆ ಮತ್ಯಾರೋ ಸವಾರಿ ಮಾಡಿದಂತೆ ಎನಿಸುತ್ತದೆ. ಪ್ರೀತಿ ಓಕೆ, ಕಮಿಟ್‌ಮೆಂಟ್ ಯಾಕೆ ಎನ್ನುವ ರಾಶಿಯವರಿವರು. 

Latest Videos

ಮೇಷ(Aries)
ಇವರಿಗೆ ಜೀವನದಲ್ಲಿ ಹೊಸ ಹೊಸ ವಿಷಯಗಳನ್ನು ಟ್ರೈ ಮಾಡಲು ಇಷ್ಟ. ಅವರು ಇನ್ನೊಬ್ಬರೊಂದಿಗೆ ಪ್ರೀತಿಯಲ್ಲಿ ನಿಂತಾಗ ಪ್ರೀತಿಯ ತುತ್ತ ತುದಿಯಲ್ಲಿರುವವರ ಹಾಗೆ ಕಾಣಿಸುತ್ತಾರೆ. ತಮ್ಮ ಪ್ರೇಮಿಯನ್ನು ಬಿಟ್ಟೇ ಇರರು ಎನಿಸುತ್ತಾರೆ. ಆದರೆ, ಯಾವಾಗ ಮದುವೆ, ಬದ್ಧತೆ(commitment) ಎಂಬ ಪದಗಳು ಕಿವಿಗೆ ಬೀಳುತ್ತವೋ, ತಕ್ಷಣ ಇವರು ಬದಲಾಗಿ ಬಿಡುತ್ತಾರೆ. ಈ ಸಂಬಂಧ ಹೀಗೆ ಚೆನ್ನಾಗಿದೆಯಲ್ಲ, ಈಗೇಕೆ ಆ ಮಾತು ಎನ್ನುತ್ತಾ ಸಾಧ್ಯವಾದಷ್ಟು ದಿನ ತಳ್ಳುತ್ತಾರೆ. ನಂತರ ತಮಗೆ ಕಮಿಟ್‌ಮೆಂಟ್ ಕೊಡುವುದರಿಂದ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ ಎನಿಸಿದಾಗ ಬಿಟ್ಟು ನಡೆಯುತ್ತಾರೆ. 

ಮಿಥುನ(Gemini)
ಇವರು ಎಲ್ಲರೊಂದಿಗೆ ನಗುತ್ತಾ ಆರಾಮಾಗಿ ಬೆರೆಯುವವರು. ಎಲ್ಲ ವಿಷಯವನ್ನೂ ತಮಾಷೆಯಾಗಿ, ಸುಲಭವಾಗಿ ಪರಿಗಣಿಸಲು ಇಷ್ಟ ಪಡುವವರು. ಇವರಿಗೆ ಜೀವನದಲ್ಲಿ ಬೇಗ ಸೆಟಲ್ ಆಗಬೇಕು. ಆದರೆ, ಸಂಬಂಧದ ವಿಷಯಕ್ಕೆ ಬಂದಾಗ ಒಮ್ಮೊಮ್ಮೆ ಒಂದೊಂದು ರೀತಿ ಆಡುತ್ತಾರೆ. ಅದನ್ನು ಸರಿಯಾಗಿ ನಿಭಾಯಿಸಲು ಬಾರದೆ ಹೋಗುತ್ತಾರೆ. ಸಂಬಂಧವನ್ನೂ ಹಗುರವಾಗೇ ತೆಗೆದುಕೊಳ್ಳುವ ಇವರಿಗೆ ಕಮಿಟ್‌ಮೆಂಟ್ ಮಾಡಿಕೊಂಡು ನಿಭಾಯಿಸಲು ಸಾಧ್ಯವಿಲ್ಲ. ಬೇಕಿತ್ತಾ ತಲೆಬಿಸಿ ಎನಿಸಲು ಆರಂಭಿಸುತ್ತದೆ. ಇನ್ಯಾರೋ ತಮ್ಮನ್ನು ಇಷ್ಟಪಟ್ಟರು ಎಂಬ ಕಾರಣಕ್ಕೆ ಅವರನ್ನು ಇಷ್ಟಪಡುವವರೂ ಇವರಲ್ಲ. 

Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು!

ಕನ್ಯಾ(Virgo)
ಕನ್ಯಾ ರಾಶಿಯವರು ಸಣ್ಣದಾಗಿ ವಿವರಗಳನ್ನು ಕೆದಕಿ ನೋಡುವವರು. ಜೊತೆಗೆ ತುಂಬಾ ಪ್ರಾಕ್ಟಿಕಲ್. ಹಾಗಾಗಿ, ಅವರ ದೈನಂದಿನ ಬದುಕಿನ ಪ್ರಾಯೋಗಿಕತೆ ಅಡ್ಡಿಯಾಗುವ ಯಾವೊಂದೂ ಅವರಿಗಿಷ್ಟವಾಗುವುದಿಲ್ಲ. ಸಂಬಂಧ ಎಂದ ಮೇಲೆ ಒಮ್ಮೊಮ್ಮೆ ಪ್ರೀತಿ, ಮತ್ತೊಮ್ಮೆ ಮುನಿಸು, ಜಗಳ ಸಾಮಾನ್ಯ. ಮನೆಯಲ್ಲಿ ವಿಷಯ ಹೇಳಬೇಕು, ಒಂದಿಷ್ಟು ವಿರೋಧ ಎದುರಿಸಬೇಕು. ಎಲ್ಲವೂ ಸರಿಯಾಗಲು ಕೊಂಚ ಹೋರಾಟ ಬೇಕು. ಆದರೆ, ಇದು ಪದೇ ಪದೇ ಆದಾಗ ಇವರು ತಮ್ಮ ದಿನಚರಿ ಹಾಳಾಗುತ್ತಿರುವುದ ಬಗ್ಗೆ ವಿಪರೀತ ಆತಂಕ ಹೊಂದುತ್ತಾರೆ. ನಿಧಾನವಾಗಿ ಸಂಬಂಧದಲ್ಲಿ ಮತ್ತೊಬ್ಬರು ಗಂಭೀರವಾಗುತ್ತಿದ್ದಾರೆ ಎಂದಾಗ ಅದರಿಂದ ಕಳಚಿಕೊಳ್ಳಲು ಆರಂಭಿಸುತ್ತಾರೆ. 

Astrology Tips: ಜಾತಕದ ದುರ್ಬಲ ಗ್ರಹಗಳಿಗೆ ಬಲ ತುಂಬಲು ಬಳಸಿ ಮಸಾಲೆ!

ಧನು(Sagittarius)
ಇವರ ತಮಾಷೆ ಸ್ವಭಾವ, ಧನಾತ್ಮಕ ಚಿಂತನೆಗಳು, ಸ್ವತಂತ್ರತೆ ಎಲ್ಲವೂ ನಿಮ್ಮನ್ನು ಪ್ರೀತಿಯಲ್ಲಿ ಹುಚ್ಚರಾಗಿಸಬಹುದು. ಆದರೆ, ಅದೇ ನಿಮಗೆ ಮುಳುವಾಗಬಹುದು. ಏಕೆಂದರೆ ಸ್ವಾತಂತ್ರ್ಯವನ್ನು ಎಲ್ಲರಿಗಿಂತ ಹೆಚ್ಚು ಇಷ್ಟ ಪಡುವ ಇವರಿಗೆ, ಸಂಬಂಧದ ನೆಪದಲ್ಲಿ ತಮ್ಮನ್ನು ಭಾವನಾತ್ಮಕವಾಗಿ, ದೈಹಿಕವಾಗಿ ಕಟ್ಟಿ ಹಾಕಲಾಗುತ್ತಿದೆ ಎನಿಸಿದಾಗ ಉಸಿರು ಕಟ್ಟಿದಂತಾಗುತ್ತದೆ. ಈ ಸಂಬಂಧವು ತಮ್ಮನ್ನು ಬೆಳೆಯಲು ಬಿಡುತ್ತಿಲ್ಲ, ಬೇಕಾದ್ದು ಮಾಡಲು ಸಾಧ್ಯವಾಗುತ್ತಿಲ್ಲ ಎನಿಸುತ್ತದೆ. ಕಡೆಗವರು ಬದ್ಧತೆ ಹಾಗೂ ಸ್ವಾತಂತ್ರ್ಯದಲ್ಲಿ ಎರಡನೆಯದನ್ನೇ ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತಾರೆ.

click me!