ಬಳ್ಳಾರಿ ಅಧಿದೇವತೆ ಕನಕದುರ್ಗಮ್ಮ ಸಿಡಿ ಬಂಡೆ ಉತ್ಸವ; ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು

By Ravi Janekal  |  First Published Feb 28, 2023, 11:49 PM IST

ಲಕ್ಷಾಂತರ ಭಕ್ತರ ಆರಾಧ್ಯ ದೈವವೆಂದೇ ಪ್ರಸಿದ್ದ ಪಡೆದ ಬಳ್ಳಾರಿಯ ಕನಕದುರ್ಗಮ್ಮನ ಸಿಡಿ ಬಂಡಿ ಉತ್ಸವ ಈ ಭಾರಿ ಅದ್ದೂರಿಯಾಗಿ ಜರುಗಿತು. ಸಿಡಿ ಬಂಡಿ ಉತ್ಸವದಲ್ಲಿ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಫೆ.28)_: ಸಾಮಾನ್ಯವಾಗಿ ಜಾತ್ರೆ ಅಂದ್ರೇ ಅಲ್ಲಿ ರಥವನ್ನ ಎಳೆಯುತ್ತಾರೆ. ತೇರಿಗೆ ಬಾಳೆ ಹಣ್ಣು ಹೂವನ್ನು ಎಸೆದು ಭಕ್ತರು ಸಂಭ್ರಮಿಸುತ್ತಾರೆ.  ಆದ್ರೇ ಈ ಜಾತ್ರೆಯಲ್ಲಿ ಮಾತ್ರ ಭಕ್ತರು ತೇರು ಎಳೆಯಲ್ಲ. ಬದಲಾಗಿ ಎತ್ತುಗಳಿಗೆ ಕಟ್ಟಿರೋ ಸಿಡಿ ಬಂಡಿಯನ್ನು ಎಳೆಯುತ್ತಾರೆ. ಹೂವು ಬಾಳೆಹಣ್ಣು ಉತ್ತುತ್ತಿ ಜೊತೆಗೆ  ಸಿಡಿಬಂಡಿಗೆ ಜೀವಂತ ಕೋಳಿ ತೂರಿ ಹರಕೆ ತೀರಿಸುತ್ತಾರೆ. 

Tap to resize

Latest Videos

undefined

ಹೌದು, ಬಳ್ಳಾರಿ(Bellary)ಯ ಅಧಿದೇವತೆಯಂದೇ ಪ್ರಸಿದ್ದ ಪಡೆದಿರುವ ಕನಕದುರ್ಗಮ್ಮ(Kanakadurgamma jatra mahotsav)ನ ಸಿಡಿ ಬಂಡಿ ಉತ್ಸವ(Sidibandi utsav)  ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. 

ನಂದಿ ಧ್ವಜ ಪಡೆದವರು ಚುನಾವಣೆಯಲ್ಲಿ ಗೆಲ್ಲುತ್ತಾರೆಂಬ ನಂಬಿಕೆ, ಧ್ವಜಕ್ಕಾಗಿ ಕಾಂಗ್ರೆಸ್ ಮುಖಂಡರ ಪೈಪೋಟಿ
   
ವಿಶೇಷವಾಗಿ ಬಂಗಾರದಿಂದ ಅಲಂಕಾರಗೊಂಡ ಕನಕದುರ್ಗಮ್ಮ 

ಲಕ್ಷಾಂತರ ಭಕ್ತರ ಆರಾಧ್ಯ ದೈವವೆಂದೇ ಪ್ರಸಿದ್ದ ಪಡೆದ ಬಳ್ಳಾರಿಯ ಕನಕದುರ್ಗಮ್ಮನ ಸಿಡಿ ಬಂಡಿ ಉತ್ಸವ ಈ ಭಾರಿ ಅದ್ದೂರಿಯಾಗಿ ಜರುಗಿತು. ಸಿಡಿ ಬಂಡಿ ಉತ್ಸವ(Sidi bandi utsav bellary)ದಲ್ಲಿ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.  ಎತ್ತಿನ‌ ಬಂಡಿಗೆ ವಿಶೇಷ ಮರದ ದಿಮ್ಮಿಯೊಂದನ್ನು
ಕಟ್ಟಿರುತ್ತಾರೆ ಇದನ್ನೇ ಸಿಡಿ ಬಂಡಿ ಉತ್ಸವದಲ್ಲಿ ಸಜ್ಜನ ಗಾಣಿಗ ಸಮುದಾಯ(Ganiga community)ದವರು ವಿಶೇಷವಾಗಿ ಅಲಂಕರಿಸಿ ದೇವಸ್ಥಾನದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸಿಡಿ ಉತ್ಸವ ಆಚರಿಸಲಾಗುತ್ತದೆ.  

ಸಿಡಿ ಬಂಡಿ ಉತ್ಸವಕ್ಕೆ ಸಾಕ್ಷಿಯಾದ್ರೂ ಲಕ್ಷಾಂತರ ಜನ

ದಶಕಗಳ ಹಿಂದೆ ಸಿಡಿ ಬಂಡಿಗೆ ಮಹಿಳೆಯರನ್ನು ಕಟ್ಟಿ ಉತ್ಸವ ಆಚರಿಸಲಾಗುತ್ತಿತ್ತು. ಆದ್ರೇ ಮಾನವ ಹಕ್ಕು ಉಲ್ಲಂಘನೆ ಕಾನೂನು ಜಾರಿ ಬಂದ ನಂತರ ಇದೀಗ ಮನುಷ್ಯರನ್ನ ಕಟ್ಟಿ ಸಿಡಿ ಬಂಡಿ ಉತ್ಸವ ಆಚರಣೆ ಮಾಡೋದು ತಪ್ಪಿದೆ. ಹೀಗಾಗಿ ಸಿಡಿ ಬಂಡಿ ಉತ್ಸವಕ್ಕೆ ಅಣಕು ಬೊಂಬೆಯನ್ನ ಕಟ್ಟಿ ಸಿಡಿ ಬಂಡಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಹೀಗೆ ಆಚರಣೆ ಮಾಡುವ ಸಿಡಿ ಬಂಡಿ ಉತ್ಸವಕ್ಕೆ ಹರಕೆ ಹೊತ್ತ ಸಾವಿರಾರು ಭಕ್ತರು ಕೋಳಿ ತೂರಿ ಹರಕೆ ತೀರಿಸೋದು ಜಾತ್ರೆಯ ವಿಶೇಷವಾಗಿದೆ. ಅಲ್ಲದೇ ಕನಕದುರ್ಗಮ್ಮನ ಮಹಿಮೆ ಅಪಾರವಾಗಿರುವುದರಿಂದ ಸಿಡಿ ಬಂಡಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಕುಂಕುಮ ಅರ್ಚನೆ ಮಾಡಿ ದೇವಿಯ ದರ್ಶನ ಪಡೆದು ಉತ್ಸವ ಆಚರಣೆ ಮಾಡುತ್ತಾರೆ.

ಭಾವೈಕತೆಯ ಭಗವಂತ, ಸಿದ್ದಿಪುರುಷ ಅದ್ದೂರಿ ವಿಶ್ವರಾಧ್ಯರ ರಥೋತ್ಸವ

ಇಷ್ಟಾರ್ಥ ಸಿದ್ದಿಗಾಗಿ ಬರುವ ಜನರು

ಬಳ್ಳಾರಿಯ ಅಧಿದೇವತೆಯಾಗಿರುವ ಕನಕ ದುರ್ಗಮ್ಮ ದೇವಾಲಯದಲ್ಲಿ ಎನೇ ಹರಿಕೆ ಹೊತ್ತರೂ ಅದು ವರ್ಷ ಕಳೆಯೋದ್ರಲ್ಲಿ ಪೂರ್ಣವಾಗುತ್ತದೆ ಅನ್ನೋದು ಪ್ರತೀತಿಯಿದೆ. ಹೀಗಾಗಿ ಇಷ್ಟಾರ್ಥ ಸಿದ್ದಿ ನೇರವೇರಿದ ಬಳಿಕ ಭಕ್ತರು ಸಿಡಿ ಉತ್ಸವದಲ್ಲಿ ಸಿಡಿ ಬಂಡೆಗೆ ಕೋಳಿ ಅರ್ಪಿಸಿ ಹರಿಕೆ ತೀರಿಸಲುವುದು ವಾಡಿಕೆ. ಅಲ್ಲದೇ ಸಿಡಿ ಬಂಡಿ ಉತ್ಸವಕ್ಕೆ  ಬರುವ ಭಕ್ತರಿಗೆ  ಬಳ್ಳಾರಿಯ ದಾನಿಗಳು  ಮಜ್ಜಿಗೆ, ಪಾನಕ, ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

click me!