ಯಾಗ ನಡೆಯುವ ಸ್ಥಳಕ್ಕೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಆಗಮಿಸಿದ್ದು, ಮಧ್ಯಾಹ್ನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಕೈಗೊಂಡರು.
ಶಶಿಧರ ಮಾಸ್ತಿಬೈಲು, ಉಡುಪಿ
ಉಡುಪಿ ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಆರನೇ ದಿನ ಮುಂಜಾನೆ ಅತಿರುದ್ರ ಯಾಗ ಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಮಹಾಮೃತ್ಯುಂಜಯ ಹೋಮ ನೆರವೇರಿತು.
undefined
ಯಾಗ ನಡೆಯುವ ಸ್ಥಳಕ್ಕೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಆಗಮಿಸಿದ್ದು, ಮಧ್ಯಾಹ್ನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಕೈಗೊಂಡರು. ನಂತರ ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡು, ಯಾಗಕ್ಕೆ ಬೇಕಾಗುವ ದ್ರವ್ಯಗಳನ್ನು ಅರ್ಪಿಸಿದರು.
ಪುಂಗನೂರು ಗೋವಿನ ಆಕರ್ಷಣೆ
ಶ್ರೀ ಉಮಾಮಹೇಶ್ವರ ದೇವರಿಗೆ ಪೂಜೆಯನ್ನು ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು. ನಂತರ ಶಿವಪಾಡಿಯ ಅತಿರುದ್ರ ಮಹಾಯಾಗದ ಆಕರ್ಷಣೆಯಾಗಿರುವ ಪುಂಗನೂರು ತಳಿಯ ಗೋವುಗಳನ್ನು ವೀಕ್ಷಿಸಿ ಸಮಯವನ್ನು ಕಳೆದರು. ಸಂಜೆ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಿದ್ದು, ಬಳಿಕ ಅತಿರುದ್ರ ಮಹಾಯಾಗದ ಆರನೇ ದಿನದ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಹಿಡಿದ ಕೆಲಸದಲ್ಲಿ ಯಶಸ್ಸು ಸಿಗಬೇಕೆಂದರೆ ಹೀಗ್ ಗೋ ಸೇವೆ ಮಾಡಿ
ಯಾಗ ಕಾಣಲು ಬಂದ ಶತಾಯುಷಿ ಮಹಿಳೆ
ಮಹಾಯಾಗದ ವಿಶೇಷವೋ ಎಂಬಂತೆ ತುಮಕೂರು ಜಿಲ್ಲೆಯ ತಿಮ್ಮಲಾಪುರದಿಂದ ಉಡುಪಿಗೆ ಆಗಮಿಸಿದ 100 ವರ್ಷದ ಶಿವಮ್ಮ ಮತ್ತು ಅವರ ಮಗ ಶಿವರುದ್ರಯ್ಯ ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆ ಬಂದಿರುವುದು ವಿಶೇಷವಾಗಿದೆ. ತಮ್ಮ ಇಳಿ ವಯಸ್ಸಿನಲ್ಲೂ ಅತಿರುದ್ರ ಮಹಾಯಾಗವನ್ನು ಕಾಣುವ ಹಂಬಲವನ್ನು ಇಟ್ಟುಕೊಂಡು ಶಿವಪಾಡಿಯ ಉಮಾಮಹೇಶ್ವರ ಸನ್ನಿಧಿಗೆ ಆಗಮಿಸಿರುವುದು ಎಲ್ಲರ ಗಮನ ಸೆಳೆದಿದೆ.
ಮಾರ್ಚ್ 1, 2 ರಂದು ಆಕಾಶದಲ್ಲಿ ಗುರು ಶುಕ್ರಗಳ ಜೋಡಿ ಝಲಕ್
ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರು ಶಾಸಕ ಕೆ. ರಘುಪತಿ ಭಟ್ ಮತ್ತು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಶಿವಮ್ಮ ಅವರಿಗೆ ಸತ್ಕರಿಸಿ ಆಶೀರ್ವಾದವನ್ನು ಪಡೆದರು. ಶಿವಮ್ಮ ಮತ್ತು ಅವರ ಮಗ ಶಿವರುದ್ರಯ್ಯ ಅವರು ಶ್ರೀ ಉಮಾಮಹೇಶ್ವರ ದೇವರ ಆಶೀರ್ವಾದವನ್ನು ಪಡೆದು, ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡರು.
ಅತಿರುದ್ರ ಮಹಾಯಾಗ ಸಮಿತಿ ಮತ್ತು ದೇವಸ್ಥಾನದ ಪ್ರಮುಖರು, ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ಕೂಡ ಶಿವಮ್ಮ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದರು. ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಭಾಗ್ಯಸೂಕ್ತ ಹೋಮ ನೆರವೇರಿತು.