ಹೋಳಿ ಬರೀ ಬಣ್ಣಗಳ ಹಬ್ಬ ಮಾತ್ರವಲ್ಲ. ಆ ದಿನ ಬಣ್ಣ ಹಚ್ಚಿಕೊಳ್ಳುವ ಜೊತೆಗೆ ಕೆಲ ಸಂಪ್ರದಾಯಗಳನ್ನು ಪಾಲನೆ ಮಾಡಲಾಗುತ್ತದೆ. ಆ ದಿನದ ಶುಭ ಮುಹೂರ್ತದಲ್ಲಿ ನೀವು ಕೆಲ ವಸ್ತುಗಳನ್ನು ಖರೀದಿಸಿದ್ರೆ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ಹೋಳಿ ಇನ್ನೇನು ಹತ್ತಿರ ಬರುತ್ತಿದೆ. ಎಲ್ಲರೂ ಹೋಳಿ ಹಬ್ಬದ ರಂಗಿನಲ್ಲಿ ಮುಳುಗಲು ಉತ್ಸುಕರಾಗಿದ್ದಾರೆ. ಬಣ್ಣ ಬಣ್ಣದ ಪಿಚಕಾರಿ, ರಂಗಿನಾಟ, ನೃತ್ಯ ಮುಂತಾದವುಗಳ ಮೂಲಕ ಜನರು ತಮ್ಮ ಕಷ್ಟಗಳನ್ನೆಲ್ಲ ಮರೆತು ಹೋಳಿಯ ರಂಗಿನಲ್ಲಿ ತೇಲುತ್ತಾರೆ. ಹೋಲಿಕಾಳ ದಹನದ ಜೊತೆಗೆ ಕೆಟ್ಟತನ, ಸ್ವಾರ್ಥ, ಮೋಸ ವಂಚನೆಗಳನ್ನು ಕೂಡ ದಹಿಸಿ ಒಳ್ಳೆಯದರ ಕಡೆಗೆ ಹೆಜ್ಜೆ ಹಾಕುವ ಬಣ್ಣದ ಹಬ್ಬ ಇದಾಗಿದೆ.
ಯಾವುದೇ ಕೆಲಸಕ್ಕೆ ಹೋಗುವಾಗ ಅಥವಾ ಏನಾದರೂ ಒಳ್ಳೆಯದನ್ನು ಮಾಡುವಾಗ, ಖರೀದಿಸುವಾಗ ಒಳ್ಳೆಯ ಮುಹೂರ್ತವನ್ನು ನೋಡುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಅಕ್ಷಯ ತೃತೀಯಕ್ಕೆ ಬಂಗಾರ (Gold) ವನ್ನು ಖರೀದಿಸಿದರೆ ಶ್ರೇಯಸ್ಸಾಗುತ್ತೆ, ಲಕ್ಷ್ಮಿ (Lakshmi ) ಪೂಜೆಗೆ ಹಣವನ್ನು ಇಟ್ಟು ಪೂಜೆ ಮಾಡಿದ್ರೆ ಧನ (Money) ಲಾಭವಾಗುತ್ತೆ ಹೀಗೆ ಒಂದೊಂದು ಹಬ್ಬದಲ್ಲಿ ಒಂದೊಂದು ರೀತಿಯ ಸಂಪ್ರದಾಯ, ಆಚರಣೆಗಳು ನಡೆದುಕೊಂಡು ಬಂದಿವೆ. ಎಲ್ಲ ಹಬ್ಬಗಳಂತೆಯೇ ಹೋಳಿ (Holi) ಹುಣ್ಣಿಮೆಯನ್ನು ಕೂಡ ವಿಜ್ರಂಬಣೆಯಿಂದಲೇ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಕೂಡ ಕೆಲವು ರೀತಿ ರಿವಾಜುಗಳಿವೆ. ಹೋಳಿ ಹುಣ್ಣಿಮೆಯ ದಿನ ಕೆಲವು ವಸ್ತುಗಳನ್ನು ಮನೆಗೆ ತಂದರೆ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ತಲೆದೋರುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಹೋಳಿ ಹುಣ್ಣಿಮೆಯ ದಿನ ಈ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಧನ, ಐಶ್ವರ್ಯದ ಕೊರತೆ ಎಂದೂ ಆಗುವುದಿಲ್ಲ :
Holi 2023: ಈ ಹೋಳಿ ಹಬ್ಬದಲ್ಲಿ ನಿಮ್ಮ ರಾಶಿಗೆ ತಕ್ಕ ಬಣ್ಣ ಬಳಸಿ, ಅದೃಷ್ಟ ಹೆಚ್ಚಿಸಿ..
ಬೆಳ್ಳಿಯ ನಾಣ್ಯ ಖರೀದಿಸಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ಹುಣ್ಣಿಮೆಯಂದು ಬೆಳ್ಳಿಯ ನಾಣ್ಯ ಮತ್ತು ಸಣ್ಣ ಪೆಟ್ಟಿಗೆಯನ್ನು ಖರೀದಿಸಿ. ನಂತರ ಅದನ್ನು ಹಳದಿ ಬಣ್ಣದ ವಸ್ತ್ರದಲ್ಲಿ ಅರಿಸಿನದೊಂದಿಗೆ ಕಟ್ಟಿ ಲಕ್ಷ್ಮಿಯ ಮೂರ್ತಿಯ ಪಕ್ಕದಲ್ಲಿಡಿ. ಹೋಳಿ ಹುಣ್ಣಿಮೆಯಂದು ಹೋಲಿಕಾ ದಹನದ ನಂತರ ಸಿಗುವ ಬೂದಿಯನ್ನು ನೀವು ಖರೀದಿಸಿದ ಬೆಳ್ಳಿಯ ಪೆಟ್ಟಿಗೆಯಲ್ಲಿ ಹಾಕಿ ಅದನ್ನು ಕಬೋರ್ಡ್ ನಲ್ಲಿಡಿ. ಹೋಳಿ ಹುಣ್ಣಿಮೆಯಂದು ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಮನೆಯಲ್ಲಿ ಎಂದೂ ಹಣದ ಕೊರತೆ ಆಗುವುದಿಲ್ಲ.
ಬೆಳ್ಳಿ ಉಂಗುರ ಖರೀದಿಸಿ : ಬೆಳ್ಳಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಧರಿಸುವುದರಿಂದ ನಮ್ಮ ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಚಿಕ್ಕ ಮಕ್ಕಳಿಗೆ ಬೆಳ್ಳಿಯ ಕಾಲು ಬಳೆ ಕೈಬಳೆ ಹಾಕುವುದರಿಂದ ಅವರ ಸ್ನಾಯುಗಳು ಬಲಗೊಳ್ಳುತ್ತವೆ. ಹೋಳಿ ಹುಣ್ಣಿಮೆಯ ದಿನ ಬೆಳ್ಳಿಯ ಉಂಗುರವನ್ನು ಖರೀದಿಸಿ ಅದನ್ನು ಪೂಜಿಸಿ. ಪೂಜಿಸಿದ ಉಂಗುರವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿ ಅದನ್ನು ಧರಿಸಿ. ಬೆಳ್ಳಿಯ ಉಂಗುರದಿಂದ ನಿಮ್ಮ ಅದೃಷ್ಟ ಸದಾ ನಿಮ್ಮ ಜೊತೆಗಿರುತ್ತದೆ.
ಬೆಳ್ಳಿಯ ಕಾಲುಂಗುರ : ಕಾಲುಂಗುರ ಹೆಣ್ಣಿಗೆ ಮುತ್ತೈದೆತನದ ಸಂಕೇತ. ವೈಜ್ಞಾನಿಕವಾಗಿಯೂ ಇದು ಹೆಣ್ಣಿಗೆ ಶ್ರೇಯಸ್ಸನ್ನು ಕೊಡುತ್ತೆ. ಅಂತಹ ಶ್ರೇಷ್ಠವಾದ ಕಾಲುಂಗುರವನ್ನು ಹೋಳಿ ಹುಣ್ಣಿಮೆಯ ದಿನ ಖರೀದಿಸಿ. ಖರೀದಿಸಿದ ನಂತರ ಅದನ್ನು ಹಾಲಿನಿಂದ ತೊಳೆಯಿರಿ. ನಂತರ ಅದನ್ನು ನೀವು ಯಾವುದಾದರೂ ಮುತ್ತೈದೆಗೆ ಕೊಡಬಹುದು ಅಥವಾ ಸ್ವತಃ ನೀವೇ ಅದನ್ನು ಧರಿಸಬಹುದು. ಹೋಳಿ ಹುಣ್ಣಿಮೆಯ ದಿನ ಕಾಲುಂಗುರ ಖರೀಸಿದಿ ಧರಿಸುವುದರಿಂದ ಲಕ್ಷ್ಮಿಯ ಕೃಪೆ ಸದಾ ನಮ್ಮ ಮೇಲಿರುತ್ತೆ.
Holi ದಿನ ಈ ವಸ್ತು ಅಗ್ನಿಗೆ ನೀಡಿ ಲಾಭ ನೋಡಿ
ಬರುವ ಮಾರ್ಚ್ 8 ರಂದು ಆಚರಿಸಲಾಗುತ್ತಿರುವ ಹೋಳಿ ಹುಣ್ಣಿಮೆಯಂದು ಇಂತಹ ಕೆಲವು ವಸ್ತುಗಳನ್ನು ಖರೀದಿಸಿದರೆ ವ್ಯಕ್ತಿಯ ಎಲ್ಲ ಸಂಕಟ, ರೋಗ, ಬಾಧೆಗಳಿಗೆ ಮುಕ್ತಿ ಸಿಗುತ್ತದೆ. ಸಾಮಾನ್ಯವಾಗಿ ಜನರು ದೀಪಾವಳಿಯಲ್ಲಿ ಬೆಳ್ಳಿಯನ್ನು ಖರೀದಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೋಳಿ ಹುಣ್ಣಿಮೆಗೆ ಮಹತ್ವದ ಸ್ಥಾನವಿದೆ. ಜ್ಯೋತಿಷಿಗಳು ಹೇಳುವ ಪ್ರಕಾರ ಪಾಲ್ಗುಣ ಮಾಸದ ಹುಣ್ಣಿಮೆಯಂದು ಬೆಳ್ಳಿಯ ವಸ್ತುಗಳನ್ನು ಖರೀದಿಸಿದರೆ ಲಕ್ಷ್ಮಿಯ ಕೃಪೆ ಸದಾ ನಮ್ಮ ಮೇಲಿರುತ್ತೆ.