Shani Jayanti 2022: ಪ್ರಖ್ಯಾತ ಶನಿ ದೇವಾಲಯಗಳಿವು.. ಭೇಟಿ ಕೊಟ್ಟರೆ ಶನಿದೋಷದಿಂದ ಮುಕ್ತಿ

By Suvarna NewsFirst Published May 29, 2022, 5:28 PM IST
Highlights

ಭಾರತದ ಪ್ರಮುಖ ಶನಿ ದೇವಾಲಯಗಳನ್ನು ಇಲ್ಲಿ ಕೊಡಲಾಗಿದ್ದು, ಒಂದೊಂದರ ಸ್ಥಳ ಮಹಿಮೆಯೂ ಅಪಾರವಾಗಿದೆ. ಈ ದೇವಾಲಯಗಳ ಹಿನ್ನೆಲೆ, ನಂಬಿಕೆ ವಿಶಿಷ್ಠವಾಗಿವೆ. 

ಶನಿ ಜಯಂತಿ(Shani Jayanti) 2022 ರ ಹಬ್ಬವನ್ನು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇದು ಶನಿಯ ಜನ್ಮದಿನ. ಈ ಬಾರಿ ಈ ಹಬ್ಬವು ಮೇ 30ರ ಸೋಮವಾರದಂದು ಬರುತ್ತಿದೆ. ಈ ದಿನ, ಪ್ರಮುಖ ಶನಿ ದೇವಾಲಯಗಳಿಗೆ ಭಕ್ತರು ಧಾವಿಸಿ ಶನಿಪೂಜೆ, ಪರಿಹಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಮೂಲಕ ಆತನನ್ನು ಮೆಚ್ಚಿಸಿ ಶನಿ(Saturn)ಯ ಆಶೀರ್ವಾದ ಪಡೆಯ ಬಯಸುತ್ತಾರೆ. 

ನಮ್ಮ ದೇಶದಲ್ಲಿ ಶನಿದೇವನ ಅನೇಕ ದೇವಾಲಯ(Temple)ಗಳಿದ್ದರೂ, ಕೆಲವು ದೇವಾಲಯಗಳು ಅವುಗಳಲ್ಲಿ ಅತ್ಯಂತ ವಿಶೇಷವಾಗಿವೆ. ಇಲ್ಲಿ ಶನಿದೇವನಿಗೆ ತಲೆ ಬಾಗಲು ದೂರದೂರುಗಳಿಂದ ಭಕ್ತರು ಬರುತ್ತಾರೆ. ಈ ದೇವಾಲಯಗಳಿಗೆ ಸಂಬಂಧಿಸಿದ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳು ಅವುಗಳನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ಶನಿ ಜಯಂತಿಯ ಸಂದರ್ಭದಲ್ಲಿ ಶನಿದೇವನ ಕೆಲವು ವಿಶೇಷ ದೇವಾಲಯಗಳ ಬಗ್ಗೆ ತಿಳಿಯೋಣ. 

Latest Videos

ಕಷ್ಟಭಂಜನ ಹನುಮಾನ್ ದೇವಸ್ಥಾನ, ಸಾರಂಗಪುರ
ಶನಿದೇವನ ಪ್ರಸಿದ್ಧ ದೇವಾಲಯಗಳಲ್ಲಿ ಇದು ಒಂದು. ಈ ದೇವಾಲಯವು ಗುಜರಾತ್‌(Gujarat)ನ ಭಾವನಗರದಲ್ಲಿರುವ ಸಾರಂಗಪುರ ಎಂಬ ಸ್ಥಳದಲ್ಲಿದೆ. ಈ ದೇವಾಲಯದ ದೊಡ್ಡ ವೈಶಿಷ್ಟ್ಯವೆಂದರೆ ಇಲ್ಲಿರುವ ಪ್ರತಿಮೆ. ಈ ದೇವಾಲಯವು ಮೂಲತಃ ಹನುಮಂತನಿಗೆ ಸೇರಿದ್ದರೂ, ಇಲ್ಲಿ ಶನಿದೇವನು ಹನುಮನ ಪ್ರತಿಮೆಯ ಪಾದದ ಮೇಲೆ ಸ್ತ್ರೀ ರೂಪದಲ್ಲಿ ಕುಳಿತಿದ್ದಾನೆ. ಇಂಥ ಚಿತ್ರ ಜಗತ್ತಿನಲ್ಲೇ ಬೇರೆಲ್ಲೂ ಕಾಣಸಿಗದು. ಇಲ್ಲಿಗೆ ಭೇಟಿ ನೀಡುವುದರಿಂದ ಶನಿದೋಷದಿಂದ ಮುಕ್ತಿ ದೊರೆಯುವುದಲ್ಲದೆ, ಹನುಮಂತನಿಗೆ ಸಂತಸವಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇಲ್ಲಿ ಭಕ್ತರ ದಂಡೇ ಇರುತ್ತದೆ.

ಸುಲಭವಾಗಿ ಪ್ರೀತಿಯಲ್ಲಿ ಬೀಳೋ ರಾಶಿಗಳಿವು!

ಶನಿ ಶಿಂಗ್ನಾಪುರ(Shani Shingnapur), ಮಹಾರಾಷ್ಟ್ರ 
ಶ ನಿದೇವಾಲಯಗಳ ಬಗ್ಗೆ ಮಾತನಾಡಿದರೆ ಮಹಾರಾಷ್ಟ್ರದ ಶಿಂಗ್ಣಾಪುರದಲ್ಲಿರುವ ಶನಿದೇವರ ಹೆಸರು ಬರದೇ ಇರುವುದಿಲ್ಲ. ಆದರೆ, ಇದು ದೇಶದಲ್ಲೇ ಪ್ರಸಿದ್ದ ಗಣೇಶ ಮಂದಿರ ಎಂದು ನಿಮಗೆ ಗೊತ್ತೇ? ಈ ದೇವಾಲಯವು ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ ಛಾವಣಿಯಿಲ್ಲದ ಕಟ್ಟೆಯ ಮೇಲೆ ಶನಿದೇವನನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಮಹಾರಾಷ್ಟ್ರದ ಅಹಮದ್‌ನಗರದಿಂದ ಸುಮಾರು 35 ಕಿಮೀ ದೂರದಲ್ಲಿದೆ. ಈ ಶನಿ ಎಷ್ಟೊಂದು ಪ್ರಭಾವಶಾಲಿ ಎಂದರೆ ಶಿಂಗ್ಣಾಪುರದಲ್ಲಿ ಯಾರೊಬ್ಬರೂ ತಮ್ಮ ಮನೆಯ ಬಾಗಿಲಿಗೆ ಬೀಗ ಹಾಕುವುದಿಲ್ಲ. ಶನಿಯೇ ತಮ್ಮ ಮನೆಯನ್ನು ಕಾಯುತ್ತಾನೆ ಎಂದು ನಂಬಿದ್ದಾರೆ. 
 
ಶನಿ ಮಂದಿರ(Shani Mandir), ಉಜ್ಜಯಿನಿ
ಶನಿ ದೇವಾಲಯಗಳ ಸರಣಿಯಲ್ಲಿ ಉಜ್ಜಯಿನಿಯ ಶನಿ ದೇವಾಲಯವೂ ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ರಾಜ ವಿಕ್ರಮಾದಿತ್ಯ ಸ್ಥಾಪಿಸಿದನೆಂದು ನಂಬಲಾಗಿದೆ. ಈ ದೇವಾಲಯದಲ್ಲಿ ಶನಿದೇವನ ವಿಗ್ರಹದ ಜೊತೆಗೆ ಇತರ ಗ್ರಹಗಳನ್ನೂ ಲಿಂಗದ ರೂಪದಲ್ಲಿ ಸ್ಥಾಪಿಸಲಾಗಿದೆ. ಆದ್ದರಿಂದ ಈ ದೇವಾಲಯವನ್ನು ನವಗ್ರಹ ಮಂದಿರ ಎಂದೂ ಕರೆಯುತ್ತಾರೆ. ಶನೈಶ್ಚರಿ ಅಮಾವಾಸ್ಯೆಯಂದು ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮತ್ತು ತಮ್ಮ ಹಳೆಯ ಬಟ್ಟೆ ಮತ್ತು ಪಾದುಕೆಗಳನ್ನು ಇಲ್ಲಿ ಬಿಡುತ್ತಾರೆ. ಈ ರೀತಿ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ದೇವಾಲಯದ ಬಳಿ ಕ್ಷಿಪ್ರಾ ನದಿ ಹರಿಯುತ್ತಿದೆ.

ಶನಿ ಮಂದಿರ, ಇಂದೋರ್(Indoor)
ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿದೇವನ ಪುರಾತನ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹವು ಭೂಮಿಯಿಂದ ಕಾಣಿಸಿಕೊಂಡಿದೆ ಎಂಬುದು ಜನಪ್ರಿಯ ನಂಬಿಕೆಯಾಗಿದೆ. ಶನಿದೇವನ ಕೃಪೆಯಿಂದ ಈ ಪ್ರತಿಮೆಯನ್ನು ಕಂಡುಹಿಡಿದ ಪಂಡಿತನ ದೃಷ್ಟಿ ಮರಳಿತು. ಸಾಮಾನ್ಯವಾಗಿ ಶನಿದೇವನ ವಿಗ್ರಹವು ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿರುತ್ತದೆ ಮತ್ತು ಅದರ ಮೇಲೆ ಯಾವುದೇ ಅಲಂಕಾರ ಇರುವುದಿಲ್ಲ. ಆದರೆ ಇಲ್ಲಿ ಶನಿಗೆ ಪ್ರತಿ ದಿನ ಆಕರ್ಷಕ ಅಲಂಕಾರ ಮಾಡಲಾಗುತ್ತದೆ ಮತ್ತು ರಾಜ ಉಡುಪುಗಳನ್ನು ಸಹ ಧರಿಸಲಾಗುತ್ತದೆ. ಈ ದೇವಾಲಯವು ಪ್ರಾಚೀನತೆ ಮತ್ತು ಅದ್ಭುತ ಕಥೆಗಳಿಗೆ ಹೆಸರುವಾಸಿಯಾಗಿದೆ.

30 ವರ್ಷಗಳ ಬಳಿಕ ಕುಂಭದಲ್ಲಿ ಶನಿ ಜಯಂತಿ; ಈ ಮೂರು ರಾಶಿಗೆ ಮಂಗಳಕರ

ಶನಿ ದೇವಸ್ಥಾನ, ಕೋಸಿಕಲನ್(Kosikalan)
ಶನಿದೇವನ ಮತ್ತೊಂದು ಪ್ರಸಿದ್ಧ ದೇವಾಲಯವು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೋಸಿಕಲನ್ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಈ ದೇವಾಲಯವಿರುವ ಸ್ಥಳವು ಒಂದು ಕಾಲದಲ್ಲಿ ದಟ್ಟವಾದ ಅರಣ್ಯವಾಗಿತ್ತು, ಆದ್ದರಿಂದ ಈ ಸ್ಥಳವನ್ನು ಕೋಕಿಲವನ ಎಂದೂ ಕರೆಯುತ್ತಾರೆ. ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಶನಿದೇವನೊಂದಿಗೆ ಶ್ರೀಕೃಷ್ಣನ ಆಶೀರ್ವಾದವನ್ನೂ ಪಡೆಯುತ್ತಾರೆ. ಇಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಮನುಷ್ಯನ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ಸ್ಥಳದಲ್ಲಿ ಶ್ರೀಕೃಷ್ಣನು ಶನಿದೇವನಿಗೆ ಕೋಗಿಲೆಯ ರೂಪದಲ್ಲಿ ಕಾಣಿಸಿಕೊಂಡನು ಮತ್ತು ಇಲ್ಲಿಗೆ ಬಂದು ದೇವಾಲಯವನ್ನು ಪ್ರದಕ್ಷಿಣೆ ಮಾಡುವ ವ್ಯಕ್ತಿಗೆ ಶನಿದೇವ ಯಾವುದೇ ಹಾನಿ ಮಾಡುವುದಿಲ್ಲ ಎಂದು ವರ ನೀಡಿದ್ದಾನೆ ಎಂದು ಹೇಳಲಾಗುತ್ತದೆ.
 

click me!