Latest Videos

ಸುಲಭವಾಗಿ ಪ್ರೀತಿಯಲ್ಲಿ ಬೀಳೋ ರಾಶಿಗಳಿವು!

By Suvarna NewsFirst Published May 29, 2022, 4:08 PM IST
Highlights

ಕೆಲವರು ಹಾಗೆಯೇ, ಅವರಿಗೆ ಪ್ರೀತಿಯಾಗೋಕೆ ಹೆಚ್ಚು ಸಮಯ ಬೇಕಿಲ್ಲ. ಅದೆಷ್ಟು ಬೇಗ ಅವರು ಮತ್ತೊಬ್ಬರ ಪ್ರೀತಿಗೆ ಬೀಳುತ್ತಾರೆಂದರೆ, ಕೇಳಿದವರಿಗೆ ಅದು ಕೇವಲ ಇನ್‌ಫ್ಯಾಚುಯೇಶನ್ ಇರಬೇಕು ಎನಿಸುತ್ತದೆ. ಅಂಥ ರಾಶಿಗಳು ಯಾವುವು ನೋಡೋಣ. 

ಸಾಮಾನ್ಯವಾಗಿ ಒಬ್ಬರಿಗೆ ಮತ್ತೊಬ್ಬರ ಮೇಲೆ ಪ್ರೀತಿಯ ಭಾವನೆಗಳು ಮೂಡಲಾರಂಭಿಸಿದಾಗ ಅವರು ಹೆಚ್ಚು ಸಮಯ ತೆಗೆದುಕೊಂಡು ತಮ್ಮ ಭಾವನೆಗಳನ್ನು ಒರೆಗೆ ಹಚ್ಚುತ್ತಾರೆ. ಕೆಲವರಿಗೆ ವರ್ಷಗಟ್ಟಲೆಯ ಒಡನಾಟದ ಬಳಿಕ ಪ್ರೀತಿಯಾಗುತ್ತದೆ. ಮತ್ತೆ ಕೆಲವರು ಆಕರ್ಷಣೆಯ ಸಂಬಂಧಕ್ಕೆ ಹೆಚ್ಚಿನ ಸಮಯ ನೀಡುತ್ತಾರೆ. ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದು ಯಾವಾಗಲೂ ಅವಶ್ಯಕ. ಆದರೆ ಕೆಲವರು ಅತಿಯಾಗಿ ಭಾವುಕರಾಗಿರುತ್ತಾರೆ ಮತ್ತು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ. ಅದು ತಪ್ಪೋ ಸರಿಯೋ ಯೋಚಿಸದೆ ಕೊಂಚ ಕಾಳಜಿ ತೋರುತ್ತಿದ್ದಂತೆಯೇ ಭಾವುಕರಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಅಂಥವರನ್ನು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದನ್ನು ತಡೆಯುವುದು ತುಂಬಾ ಕಠಿಣ ಕೆಲಸ. ಹೀಗೆ ಸುಲಭವಾಗಿ ಪ್ರೀತಿಯಲ್ಲಿ ಬೀಳೋ ರಾಶಿಚಕ್ರಗಳಿವು..

ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರು ಎಲ್ಲ ರಾಶಿಗಳಿಗಿಂತ ಹೆಚ್ಚು ಭಾವನಾತ್ಮಕ ವ್ಯಕ್ತಿಗಳಾಗಿದ್ದು, ಅವರು ಯಾರದೇ ಸಿಹಿಯಾದ ನಡೆಗೆ ಸುಲಭವಾಗಿ ಕರಗುತ್ತಾರೆ. ಯಾರಾದರೂ ಕೊಂಚವೇ ಕಾಳಜಿ ತೋರಿಸಿದರೂ, ಮನಸ್ಸಿಗೆ ಹಿಡಿಸುವಂಥ ಮಾತನಾಡಿದರೂ ಅವರಿಗೆ ಅವರ ಮೇಲೆ ಪ್ರೀತಿಯಾಗಿ ಬಿಡುತ್ತದೆ. ಅವರು ಪ್ರೀತಿಯಲ್ಲಿ ಬೀಳಲು ಒಂದು ವಾರವೂ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಅವರು ಆ ವ್ಯಕ್ತಿಯೊಂದಿಗೆ ಬಹಳ ಕಡಿಮೆ ಸಮಯದಲ್ಲಿ ಅಂಟಿಕೊಳ್ಳುತ್ತಾರೆ. ಆದರೆ, ಅವರು ನೋಯಿಸಿದರೆ ಮಾತ್ರ ಪ್ರೀತಿಯಲ್ಲಿ ಮುಂದುವರಿಯಲು ಅವರಿಗೆ ಕಠಿಣವಾಗುತ್ತದೆ. ಆಗ ಅಷ್ಟೇ ಬೇಗ ಹೃದಯ ಚೂರಾದ ಭಾವವನ್ನೂ ಅನುಭವಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ಸಾಕಷ್ಟು ಏಳುಬೀಳನ್ನು ನೋಡುವವರು ಇವರು. 

ಹುಟ್ಟಿದವರೆಲ್ಲ ಸಾಯೋದು ಗ್ಯಾರಂಟಿ, ಆದರೆ, ರಾಶಿಗೆ ತಕ್ಕಂತೆ ಸಾವೂ ವಿಧಿ ಲಿಖಿತವೇ?

ತುಲಾ ರಾಶಿ(Libra)
ತುಲಾ ರಾಶಿಯವರು ಅತ್ಯಂತ ಸಕಾರಾತ್ಮಕ ಮನೋಭಾವದವರು. ಸಾಮಾನ್ಯವಾಗಿ ಸಂತೋಷವಾಗಿರುವ ಆತ್ಮಗಳು. ಅವರ ನಡುವಳಿಕೆ ಎಷ್ಟು ಸಿಹಿಯಾಗಿರುತ್ತದೆಯೋ, ಅವರು ಕೂಡಾ ಇತರರ ಉತ್ತಮ ನಡವಳಿಕೆಯಿಂದ ಸುಲಭವಾಗಿ ಸಂತೋಷ ಹೊಂದುತ್ತಾರೆ. ಅಂತೆಯೇ, ಅವರು ಸುಲಭವಾಗಿ ಪ್ರೀತಿಯಲ್ಲಿ ಬೀಳಬಹುದು. ಹಾಗಂಥ ಅವರಿಗಾಗುವುದು ಕೇವಲ ಆಕರ್ಷಣೆಯಲ್ಲ. ತಾವೊಬ್ಬರನ್ನು ಪ್ರೀತಿಸಿದರೆ ಅವರಿಗೆ ಸಂಪೂರ್ಣ ನಿಷ್ಠರಾಗಿರುತ್ತಾರೆ. ಅವರನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ.

ಮೇಷ ರಾಶಿ(Aries)
ಮೇಷ ರಾಶಿಯ ಜನರು ಹಠಾತ್ ಪ್ರವೃತ್ತಿಯುಳ್ಳವರು. ಅವರಿಗೆ ಒಳ್ಳೆಯದನ್ನು ಮಾಡುವ ಯಾರಿಗಾದರೂ ಅವರು ಸುಲಭವಾಗಿ ಬೀಳುತ್ತಾರೆ. ಅವರು ಅಪಾಯ-ತೆಗೆದುಕೊಳ್ಳುವವರು ಮತ್ತು ಧೈರ್ಯಶಾಲಿ ಜನರು.  ಸಮಾನವಾಗಿ ಸಾಹಸಮಯವಾಗಿರುವ ಯಾರಿಗಾದರೂ ಸುಲಭವಾಗಿ ಆಕರ್ಷಿತರಾಗುತ್ತಾರೆ. ಅಲ್ಲದೆ, ಅವರಿಗೆ ಜೀವನದಲ್ಲಿ ಎಲ್ಲವೂ ಬೇಗ ಬೇಕು. ಹಾಗೆಯೇ ಪ್ರೀತಿ ಮತ್ತು ಪ್ರೀತಿಸುವ ಅನುಭವ ಕೂಡಾ. 

ಎಂಥ ಒತ್ತಡದ ಸಂದರ್ಭವನ್ನೂ ಸಮಾಧಾನದಿಂದ ನಿಭಾಯಿಸುವ ರಾಶಿಗಳಿವು..

ಮೀನ ರಾಶಿ(Pisces)
ಮೀನ ರಾಶಿಯವರು ಹಗಲು-ಕನಸುಗಾರರು, ಅವರು ತಮ್ಮ ಕಲ್ಪನೆಯ ಜಗತ್ತಿನಲ್ಲಿ ಬೇಗನೆ ಕಳೆದು ಹೋಗುತ್ತಾರೆ. ಆದ್ದರಿಂದ, ಅವರು ಯಾರೊಬ್ಬರ ಉತ್ತಮ ನಡವಳಿಕೆಯನ್ನು ಅವರ ಮೇಲಿನ ಪ್ರೀತಿ ಎಂದು ಸುಲಭವಾಗಿ ವ್ಯಾಖ್ಯಾನಿಸಬಹುದು. ಯಾರೋ ತಮ್ಮೊಂದಿಗೆ ಆಪ್ತವಾಗಿದ್ದಾರೆ ಎಂದರೆ ಆ ಬಗ್ಗೆ ಊಹಾಪೋಹಗಳನ್ನು ಕಟ್ಟಿಕೊಂಡು ಪ್ರೀತಿಯಲ್ಲಿ ಬೀಳುತ್ತಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಈ ಕನಸಿನ ಕುಸಿದಾಗ ಅಷ್ಟ ನೋವನುಭವಿಸುತ್ತಾರೆ. 

ಸಿಂಹ ರಾಶಿ(Leo)
ಸಿಂಹ ರಾಶಿಯವರು ಗಮನ ಸೆಳೆಯುವ ಸ್ವಭಾವದವರು. ಎಲ್ಲರ ಗಮನ ತಮ್ಮ ಮೇಲಿದ್ದಷ್ಟೂ ಖುಷಿ ಇವರಿದೆ. ಆದ್ದರಿಂದ, ಅವರು ಶೀಘ್ರವಾಗಿ ತಮಗೆ ಗಮನವನ್ನು ನೀಡುವ ಯಾರಿಗಾದರೂ ಆಕರ್ಷಿತರಾಗುತ್ತಾರೆ ಅವರು ತಮ್ಮನ್ನು ಪರಿಗಣಿಸುತ್ತಿದ್ದಾರೆ, ಪ್ರೀತಿಸುತ್ತಿದ್ದಾರೆ ಎಂಬ ಭಾವವೇ ಇವರಲ್ಲಿ ಪ್ರೀತಿ ಹುಟ್ಟಿಸುತ್ತದೆ. \

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!