Tag Secret: ಬಟ್ಟೆ ಮೇಲಿರೋ ಟ್ಯಾಗ್ ಅದರ ಗುಣಮಟ್ಟ ಹೇಳೋ 'ಪಾಸ್‌ಪೋರ್ಟ್' ಇದ್ದಂತೆ.. ಈ ಸೀಕ್ರೆಟ್ ನಿಮಗೆ ತಿಳಿದಿರಲಿ!

Published : Jul 14, 2026, 04:50 PM IST
Clothe Tag

ಸಾರಾಂಶ

ಇತ್ತೀಚಿನ ಲೈಫ್‌ಸ್ಟೈಲ್ ಟ್ರೆಂಡ್‌ನಂತೆ ಸ್ಮಾರ್ಟ್ ಆಗಿ ಶಾಪಿಂಗ್ ಮಾಡುವುದು ಕೇವಲ ಬೆಲೆ ನೋಡುವುದರಲ್ಲಿಲ್ಲ, ಬದಲಾಗಿ ಬಟ್ಟೆಯ ಮೇಲಿರುವ ಆ ಸಣ್ಣ ಟ್ಯಾಗ್‌ನ ಬಣ್ಣ ಮತ್ತು ಅಕ್ಷರಗಳನ್ನು ಗಮನಿಸುವುದರಲ್ಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಟ್ಯಾಗ್‌ಗಳು ಬಟ್ಟೆಗಳ ಪಾಸ್‌ಪೋರ್ಟ್‌ ಇದ್ದಂತೆ..

ಟ್ಯಾಗ್ ಬಟ್ಟೆಯ ಪಾಸ್‌ಪೋರ್ಟ್ ಇದ್ದಂತೆ

ನಿಮ್ಮ ಲೈಫ್‌ಸ್ಟೈಲ್ ಮತ್ತು ಶಾಪಿಂಗ್ ಹವ್ಯಾಸವನ್ನೇ ಬದಲಿಸಬಲ್ಲ ಒಂದು ಕುತೂಹಲಕಾರಿ ವಿಷಯದ ಬಗ್ಗೆ ಇಲ್ಲಿದೆ ನೋಡಿ.. ಸಾಮಾನ್ಯವಾಗಿ ನಾವೆಲ್ಲರೂ ಬಟ್ಟೆ ಖರೀದಿಸುವಾಗ ಏನು ಮಾಡುತ್ತೇವೆ? ಬಟ್ಟೆಯ ಬಣ್ಣ ನೋಡ್ತೇವೆ, ವಿನ್ಯಾಸ (Design) ಇಷ್ಟವಾಗುತ್ತಾ ಅಂತ ಚೆಕ್ ಮಾಡ್ತೇವೆ, ಇಲ್ಲವೇ ಕೈಯಲ್ಲಿ ಮುಟ್ಟಿ ಬಟ್ಟೆಯ ಸಾಫ್ಟ್‌ನೆಸ್ ನೋಡ್ತೇವೆ. ಆದರೆ, ನೀವು ಮನೆಗೆ ತಂದ ಬಟ್ಟೆ ಎರಡೇ ಒಗೆತಕ್ಕೆ ಬಣ್ಣ ಮಸುಕಾದರೆ ಅಥವಾ ಹರಿದು ಹೋದರೆ ಹೇಗನಿಸುತ್ತದೆ? ಖಂಡಿತ ಬೇಸರವಾಗುತ್ತದೆ. ಆದರೆ, ನಾವು ಈ ಬಗ್ಗೆ ಅಸಹಾಯಕತೆಯಿಂದ ನರಳುತ್ತೇವೆ. ಆದರೆ, ಬಟ್ಟೆಯಲ್ಲೇ ಬಟ್ಟೆಯ ಗುಣಮಟ್ಟದ ರಹಸ್ಯ ಅಡಗಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಆ ರಹಸ್ಯವೇ 'ಬಟ್ಟೆಯ ಟ್ಯಾಗ್'.

ಹೌದು, ಇತ್ತೀಚಿನ ಲೈಫ್‌ಸ್ಟೈಲ್ ಟ್ರೆಂಡ್‌ನಂತೆ ಸ್ಮಾರ್ಟ್ ಆಗಿ ಶಾಪಿಂಗ್ ಮಾಡುವುದು ಕೇವಲ ಬೆಲೆ ನೋಡುವುದರಲ್ಲಿಲ್ಲ, ಬದಲಾಗಿ ಬಟ್ಟೆಯ ಮೇಲಿರುವ ಆ ಸಣ್ಣ ಟ್ಯಾಗ್‌ನ ಬಣ್ಣ ಮತ್ತು ಅಕ್ಷರಗಳನ್ನು ಗಮನಿಸುವುದರಲ್ಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಟ್ಯಾಗ್‌ಗಳು ಬಟ್ಟೆಯ ಆಯಸ್ಸು ಮತ್ತು ಗುಣಮಟ್ಟದ ಬಗ್ಗೆ ನಮಗೆ ಮುನ್ಸೂಚನೆ ನೀಡುತ್ತವೆ. ಆದ್ದರಿಂದ ನೀವು ಬಟ್ಟೆ ಖರೀದಿ ಮಾಡುವಾಗ, ಮೊಟ್ಟಮೊದಲು ನೋಡಬೇಕಾಗಿದ್ದು ಟ್ಯಾಗ್!

ಟ್ಯಾಗ್ ಬಣ್ಣಗಳ ರಹಸ್ಯ ಸಂಕೇತ ಇಲ್ಲಿದೆ:

1. ಬ್ಲಾಕ್ ಅಂಡ್ ಗೋಲ್ಡ್ (ರಾಜವೈಭೋಗದ ಗುಣಮಟ್ಟ):

ನಿಮ್ಮ ಬಟ್ಟೆಯ ಟ್ಯಾಗ್ ಕಪ್ಪು ಬಣ್ಣದ್ದಾಗಿದ್ದು, ಅದರ ಮೇಲೆ ಬಂಗಾರದ ಬಣ್ಣದಲ್ಲಿ (Golden Letters) ಬ್ರ್ಯಾಂಡ್ ಹೆಸರು ಅಥವಾ ಮಾಹಿತಿ ಬರೆದಿದ್ದರೆ, ನೀವು ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ಆರಿಸಿದ್ದೀರಿ ಎಂದರ್ಥ. ಇವು 'ಪ್ರೀಮಿಯಂ' ಸಾಲಿಗೆ ಸೇರುತ್ತವೆ. ಇವುಗಳನ್ನು ಎಷ್ಟು ಬಾರಿ ತೊಳೆದರೂ ಹೊಸದರಂತೆಯೇ ಇರುತ್ತವೆ ಮತ್ತು ಬಣ್ಣ ಮಸೆಯುವುದಿಲ್ಲ. ಆದ್ದರಿಂದ ಇಂಥ ಬಟ್ಟೆಗೆ ನೀವು ಹೂಡಿಕೆ ಮಾಡಿದರೆ ಅದು ನೀವು ಮಾಡುವ ದೀರ್ಘಕಾಲದ ಹೂಡಿಕೆಯಂತೆ! ಇವುಗಳನ್ನು ನೀವು ಈವೆಂಟ್, ಫಂಕ್ಷನ್‌ಗಳಿಗೆ ಬಳಸಬಹುದು, ತುಂಬಾ ವರ್ಷಗಳ ಕಾಲ ಬಳಸುತ್ತಾ ಇರಬಹುದು.

2. ಕಪ್ಪು ಟ್ಯಾಗ್ - ಬಿಳಿ ಅಕ್ಷರ:

ಇದು ಕೂಡ ಉತ್ತಮ ಗುಣಮಟ್ಟದ ಸೂಚಕ. ಆಫೀಸ್ ಅಥವಾ ದಿನನಿತ್ಯದ ಬಳಕೆಗೆ ಇಂತಹ ಬಟ್ಟೆಗಳು ಹೇಳಿ ಮಾಡಿಸಿದಂತಿರುತ್ತವೆ. ಇವು ಸ್ಟೈಲಿಶ್ ಆಗಿರುವುದರ ಜೊತೆಗೆ ಬಾಳಿಕೆಯನ್ನೂ ನೀಡುತ್ತವೆ. ಕೊಟ್ಟ ಹಣಕ್ಕೆ ಬಡ್ಡಿ ಸಮೇತ ಉಪಯೋಗ ನೀಡುತ್ತವೆ.

3. ಬಿಳಿ ಟ್ಯಾಗ್ - ಕಪ್ಪು ಅಕ್ಷರ:

ಇದು ಮಾರುಕಟ್ಟೆಯಲ್ಲಿ ಸಾಮಾನ್ಯವಾದ ಬಟ್ಟೆಗಳು. ಇವು ನೋಡಲು ಚೆನ್ನಾಗಿರುತ್ತವೆ ಮತ್ತು ಕೆಲವು ತಿಂಗಳುಗಳ ಕಾಲ ಆರಾಮವಾಗಿ ಧರಿಸಬಹುದು. ಆದರೆ ಇವುಗಳಿಂದ ದೀರ್ಘಕಾಲದ ಬಾಳಿಕೆಯನ್ನು ನಿರೀಕ್ಷಿಸುವುದು ಕಷ್ಟ. ಕೊಟ್ಟ ದುಡ್ಡಿಗೆ ಮೋಸವಿಲ್ಲ ಎನ್ನಬಹುದು.

4. ಹಳದಿ ಅಥವಾ ಮಸುಕಾದ ಬಿಳಿ ಟ್ಯಾಗ್:

ಒಂದು ವೇಳೆ ಬಟ್ಟೆಯ ಟ್ಯಾಗ್ ನೋಡಲು ಹಳೆಯದರಂತೆ ಅಥವಾ ಹಳದಿ ಬಣ್ಣಕ್ಕೆ ತಿರುಗಿದಂತೆ ಕಂಡರೆ, ಆ ಬಟ್ಟೆಯನ್ನು ಖರೀದಿಸದಿರುವುದೇ ಲೇಸು. ಇದು ಕಳಪೆ ಗುಣಮಟ್ಟದ ಸಂಕೇತವಾಗಿದ್ದು, ಕೇವಲ ಎರಡು-ಮೂರು ಒಗೆತಕ್ಕೆ ಬಟ್ಟೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಹೊರಗೆ ಹಾಕಿಕೊಂಡು ಹೋದರೆ ಮುಜುಗರ ಅನುಭವಿಸಬೇಕಾಗುತ್ತದೆ.

ಬ್ರ್ಯಾಂಡ್‌ಗಳು ಮತ್ತು ಅಂಗಡಿಯವರ ಟ್ರಿಕ್ಸ್:

ಜರಾ (Zara), H&M ನಂತಹ ಜಾಗತಿಕ ಫ್ಯಾಷನ್ ಬ್ರ್ಯಾಂಡ್‌ಗಳು ಈ 'ಕಲರ್ ಕೋಡಿಂಗ್' ಅನ್ನು ಅನುಸರಿಸುತ್ತವೆ. ಆದರೆ, ಹೆಚ್ಚಿನ ಅಂಗಡಿಯವರು ಈ ಸತ್ಯವನ್ನು ಗ್ರಾಹಕರಿಂದ ಮರೆಮಾಚುತ್ತಾರೆ. ಕಳಪೆ ಗುಣಮಟ್ಟದ ಬಟ್ಟೆಗಳನ್ನು ಆಕರ್ಷಕ ಡಿಸ್ಪ್ಲೇ ಮೂಲಕ ದುಬಾರಿ ಬೆಲೆಗೆ ಮಾರಾಟ ಮಾಡುವುದು ಅವರ ಉದ್ದೇಶವಾಗಿರುತ್ತದೆ. ಸಮೀಕ್ಷೆಯೊಂದರ ಪ್ರಕಾರ, ಶೇ. 70 ರಷ್ಟು ಜನ ಟ್ಯಾಗ್ ನೋಡುತ್ತಾರಾದರೂ, ಕೇವಲ ಬೆಲೆಗಾಗಿ ಮಾತ್ರ ಅದನ್ನು ಬಳಸುತ್ತಾರೆ. ಬಟ್ಟೆಗಳ ಕ್ವಾಲಿಟಿಗಾಗಿ ಟ್ಯಾಗ್ ನೋಡುವ ಅಭ್ಯಾಸ ಜನರಲ್ಲಿ ಬಹಳಷ್ಟು ಕಡಿಮೆ ಇದೆ.

ಸ್ಮಾರ್ಟ್ ಶಾಪಿಂಗ್ ಟಿಪ್ಸ್:

ಇನ್ಮುಂದೆ ಶಾಪಿಂಗ್ ಹೋದಾಗ ಬಟ್ಟೆಯ ವಿನ್ಯಾಸದ ಜೊತೆಗೆ ಈ ಟ್ಯಾಗ್ ಬಣ್ಣದ ಮೇಲೆ ಒಂದು ಕಣ್ಣಿರಲಿ. ಉತ್ತಮ ಟ್ಯಾಗ್ ಹೊಂದಿರುವ ಬಟ್ಟೆಗಳು ನಿಮ್ಮ ವಾರ್ಡ್ರೋಬ್‌ನ ಅಂದವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಹಣಕ್ಕೂ ಮೌಲ್ಯ ತರುತ್ತವೆ. ವಾರ್ಡ್ರೋಬ್‌ನಲ್ಲಿ ಬಟ್ಟೆಗಳ ಸಂಖ್ಯೆಗಿಂತ, ಗುಣಮಟ್ಟದ ಬಟ್ಟೆಗಳ ಸಂಗ್ರಹ ಇರುವುದು ಇಂದಿನ ಫ್ಯಾಷನ್ ಜಗತ್ತಿನ ಮೂಲಮಂತ್ರ.

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಮತ್ತು ವರದಿಗಳನ್ನು ಆಧರಿಸಿದೆ. ಯಾವುದೇ ಬ್ರ್ಯಾಂಡ್‌ನ ಅಂತಿಮ ಗುಣಮಟ್ಟವು ಆ ನಿರ್ಧಿಷ್ಟ ಬಟ್ಟೆಯ ನೂಲು ಮತ್ತು ತಯಾರಿಕೆಯ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ.)

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Green Blouse Designs: ಶ್ರಾವಣಕ್ಕೆ ಸೀರೆ ಜೊತೆ ಹೊಲಿಸಿ 7 ಬಗೆಯ ಟ್ರೆಂಡಿ ಹಸಿರು ಬ್ಲೌಸ್
Pearl Jewellery: ಬಾಲಿವುಡ್ ನಟಿಯರ ಬೆಸ್ಟ್ ಪರ್ಲ್ ಜ್ಯುವೆಲ್ಲರಿ ಲುಕ್ಸ್: ನೀವೂ ಟ್ರೈ ಮಾಡಬಹುದು