ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮೇಕಪ್ ಟ್ರಾನ್ಸ್‌ಫಾರ್ಮೇಷನ್ ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯ ಮೇಕಪ್ ನೋಡಿದವರು ಮಾತ್ರ ಫಿದಾ ಆಗುತ್ತಿರುವುದಂತೂ ಸುಳ್ಳಲ್ಲ. ಇದು ಎಂಥವರನ್ನೂ ಬೆರಗುಗೊಳಿಸುತ್ತದೆ. ಆರಂಭದಲ್ಲಿ ಮಹಿಳೆ ತುಂಬಾ ಸಿಂಪಲ್ಲಾಗಿ ಕಾಣುತ್ತಾರೆ. ಆದರೆ ಕೆಲವೇ ಸೆಕೆಂಡುಗಳ ನಂತರ ಅವರ ಫೈನಲ್ ಲುಕ್ ರಿವೀಲ್ ಆದಾಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ.
ಈ ವಿಡಿಯೋವನ್ನು maha_luxury_beauty_lounge ಮತ್ತು namma_karaikal2.0 ಹೆಸರಿನ ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಿದ್ದು, ಜನರು ವಿಡಿಯೋವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ.
ಈ ವಿಡಿಯೋದಲ್ಲಿ ಮಹಿಳೆ ಥೇಟ್ ವಧುವಿನ ಸ್ಟೈಲ್‌ನಲ್ಲಿ ಮೇಕಪ್ ಮಾಡಿಕೊಂಡಿರುವುದನ್ನು ತೋರಿಸಲಾಗಿದೆ. ಹೆವಿ ಆಭರಣಗಳು, ಪರ್‌ಫೆಕ್ಟ್ ಕಣ್ಣಿನ ಮೇಕಪ್ ಮತ್ತು ಸಾಂಪ್ರದಾಯಿಕ ಸೀರೆಯೊಂದಿಗೆ ಸಿನಿಮಾ ನಟಿಯಂತೆ ಕಾಣುತ್ತಾರೆ. ಮೇಕಪ್ ಎಷ್ಟು ಪರ್‌ಫೆಕ್ಟ್ ಆಗಿದೆ ಎಂದರೆ ಯಾರೇ ಆದರೂ ಇದನ್ನು AI ಕ್ರಿಯೇಟ್ ಮಾಡಿದ ಫೋಟೋ ಎಂದು ತಪ್ಪಾಗಿ ಭಾವಿಸಬಹುದು ಎಂದು ವೀಕ್ಷಕರೇ ಹೇಳುತ್ತಿದ್ದಾರೆ. ಅದಕ್ಕಾಗಿಯೇ ವಿಡಿಯೋದ ಮೇಲೆ ದಪ್ಪ ಅಕ್ಷರಗಳಲ್ಲಿ "ಇದು AI ಅಲ್ಲ" ಎಂದು ಶೀರ್ಷಿಕೆ ಕೊಡಲಾಗಿದೆ.
ಸಾಮಾಜಿಕ ಮಾಧ್ಯಮವು AI ವಿಡಿಯೋ ಮತ್ತು ಫೋಟೋಗಳಿಂದಲೇ ಕೂಡಿದ್ದು, ಇಂತಹ ವಿಡಿಯೋಗಳು ಬಂದಾಗ ಜನ ಒಂದು ಕ್ಷಣ ಅವಕ್ಕಾಗುತ್ತಾರೆ. ಆದರೆ ಈ ವಿಡಿಯೋ ಫಿಲ್ಟರ್ ಅಥವಾ AI ಅಲ್ಲ, ಮೇಕಪ್ ಕಲಾವಿದನ ನಿಜವಾದ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಎಂದು ಸ್ಪಷ್ಟಪಡಿಸುತ್ತದೆ.
ಶ್ಲಾಘಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು
ವಿಡಿಯೋ ನೋಡಿ ಜನರು ಮೇಕಪ್ ಕಲಾವಿದೆಯನ್ನು ಹೊಗಳುತ್ತಿದ್ದಾರೆ. ಕೆಲವರು "ಇದು ಮ್ಯಾಜಿಕ್" ಎಂದು ಬರೆದರೆ, ಇನ್ನು ಕೆಲವರು "ಇಂತಹ ಪ್ರತಿಭೆ ಅಪರೂಪ" ಎಂದು ಹೇಳುತ್ತಿದ್ದಾರೆ. ಅನೇಕ ಬಳಕೆದಾರರು ಇದನ್ನು ಭಾರತದ ಅತ್ಯುತ್ತಮ ಮೇಕಪ್ ರೂಪಾಂತರ ವಿಡಿಯೋಗಳಲ್ಲಿ ಒಂದೆಂದು ಕರೆದಿದ್ದಾರೆ. ಮಹಿಳೆಯ ಆತ್ಮವಿಶ್ವಾಸದ ನಗು ಮತ್ತು ಆಕೆಯ ಮೇಕಪ್‌ಗೆ ಫೈನಲ್ ಟಚ್ ಅನ್ನು ಸಹ ಜನರು ಹೊಗಳುತ್ತಿದ್ದಾರೆ.
ಈ ವೈರಲ್ ವಿಡಿಯೋ ಕೇವಲ ಮೇಕಪ್ ರೂಪಾಂತರವಲ್ಲ, ಆದರೆ ಭಾರತದಲ್ಲಿ ಸೌಂದರ್ಯ ಉದ್ಯಮ ಎಷ್ಟು ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಇಂದು ಮೇಕಪ್ ಕೇವಲ ಅಂದಗೊಳಿಸುವಿಕೆಯ ಬಗ್ಗೆ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಗುರುತಿನೊಂದಿಗೆ ಸಹ ಸಂಬಂಧ ಹೊಂದಿದೆ. AI ಯುಗದಲ್ಲಿ ಮಾನವ ಪ್ರತಿಭೆ ತಂತ್ರಜ್ಞಾನಕ್ಕಿಂತ ಕಡಿಮೆ ಶಕ್ತಿಶಾಲಿಯಲ್ಲ ಎಂಬುದನ್ನು ಈ ವಿಡಿಯೋ ಸಾಬೀತುಪಡಿಸುತ್ತದೆ.
maha_luxury_beauty_lounge ನ ಈ ವಿಡಿಯೋ ಸರಿಯಾದ ಕೌಶಲ್ಯ ಮತ್ತು ಕಠಿಣ ಪರಿಶ್ರಮದಿಂದ ಯಾರದ್ದೇ ಜೀವನ ಮತ್ತು ಲುಕ್ ಅನ್ನು ಪರಿವರ್ತಿಸಬಹುದು ಎಂಬುದಕ್ಕೆ ಪುರಾವೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ಮಾತ್ರವಲ್ಲದೆ, ಮೇಕಪ್ ಕಲಾವಿದರಿಗೆ ಸ್ಫೂರ್ತಿಯಾಗಿದೆ. ನಿಜವಾಗಿಯೂ ಇದನ್ನು ನೋಡಿದ ನಂತರ ಪ್ರತಿಯೊಬ್ಬರು AI ಅಲ್ಲ, ನಿಜವಾದ ಟ್ಯಾಲೆಂಟ್ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ಈ ಹಿಂದೆ ವೈರಲ್ ಆಗಿತ್ತು ಇಂತಹುದೇ ವಿಡಿಯೋ
ಕೆಲವೊಮ್ಮೆ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಇಂತಹ ವಿಷಯಗಳು ವೈರಲ್ ಆಗುವುದಲ್ಲದೆ ಜನರನ್ನು ದಿಗ್ಭ್ರಮೆಗೊಳಿಸುತ್ತವೆ. ಇತ್ತೀಚೆಗೆ ಇದೇ ರೀತಿಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿತ್ತು. ಇದರಲ್ಲಿ ಇರಾನಿನ ಮೇಕಪ್ ಕಲಾವಿದೆಯ ಮೇಕಪ್ ಕೈಚಳಕ ನೋಡಿ ಎಲ್ಲರೂ ಫಿದಾ ಆಗಿದ್ದರು. ಏಕೆಂದರೆ ಅವರು ಮೇಕಪ್ ಮೂಲಕ ಬಾಲಿವುಡ್ ಸೂಪರ್‌ಸ್ಟಾರ್ ಕಾಜೋಲ್‌ನಂತೆ ಕಾಣಲು ಪ್ರಾರಂಭಿಸಿದರು. ಈ ಅದ್ಭುತ ರೂಪಾಂತರವನ್ನು ಮಾಡಿಕೊಂಡ ಮೇಕಪ್ ಕಲಾವಿದೆಯ ಹೆಸರು ನಸೀಮ್ ಇರಾನಿ. ವಿಡಿಯೋದಲ್ಲಿ ಮೇಕಪ್ ನೋಡಿದವರು ಆಶ್ಚರ್ಯಚಕಿತರಾದರು. ಮೊದಲಿಗೆ, ಇದು AI ಯ ಕೆಲಸ ಎಂದು ಜನರು ಭಾವಿಸಿದ್ದರು. ಆದರೆ ನಿಜಕ್ಕೂ ಇದು AI ಅಲ್ಲ, ಮೇಕಪ್ ಕಲಾವಿದೆಯ ಕೆಲಸ ಎಂಬುದು ಆ ನಂತರ ಗೊತ್ತಾಯ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.