Beauty Tips : ಲಿಪ್ ಬಾಮ್ ಅನ್ನು ಹೀಗೂ ಬಳಸಿ ನೋಡಿ

By Suvarna NewsFirst Published Jan 2, 2023, 3:50 PM IST
Highlights

ಲಿಪ್ ಬಾಮ್ ಅಂದ್ರೆ ಅದನ್ನು ತುಟಿಗೆ ಮಾತ್ರ ಹಚ್ಚಿಕೊಳ್ಳಬೇಕಾಗಿಲ್ಲ. ಅದನ್ನು ಮುಖಕ್ಕೆ, ಕಣ್ಣಿಗೆ ಕೂಡ ಬಳಸಬಹುದು. ಅದು ಅನೇಕ ಉಪಯೋಗಗಳನ್ನು ಹೊಂದಿದೆ. ಲಿಪ್ ಬಾಮ್ ಮನೆಯಲ್ಲಿದ್ರೆ ಅದನ್ನು ಬಳಸುವ ವಿಧಾನ ತಿಳಿದುಕೊಳ್ಳಿ.
 

ಚಳಿಗಾಲ ಶುರುವಾಗ್ತಿದ್ದಂತೆ ಲಿಪ್ ಬಾಮ್ ಹೊರಗೆ ಬರುತ್ತದೆ. ಸೌಂದರ್ಯಕ್ಕೆ ಮಹತ್ವ ನೀಡದ ವ್ಯಕ್ತಿ ಕೂಡ ಚಳಿಗಾಲದಲ್ಲಿ ತುಟಿ ಒಡೆದು ನೋವು ನೀಡದಿರಲಿ ಎನ್ನುವ ಕಾರಣಕ್ಕೆ ಲಿಪ್ ಬಾಮ್ ಹಚ್ಚುತ್ತಾರೆ. ಚಳಿಗಾಲಕ್ಕೆ ಮಾತ್ರ ಲಿಪ್ ಬಾಮ್ ಸೀಮಿತವಾಗಿಲ್ಲ. ಹುಡುಗಿಯರು ಹಾಗೂ ಮಹಿಳೆಯರ ಮೇಕಪ್ ಕಿಟ್ ನಲ್ಲಿ ಸದಾ ಇರುವ ಸೌಂದರ್ಯ ಉತ್ಪನ್ನ ಇದು.   

ಲಿಪ್ (Lip)  ಬಾಮ್ (Balm), ತುಟಿಗಳಿಗೆ ಹೆಚ್ಚುವರಿ ತೇವಾಂಶ (Moisture) ವನ್ನು ಒದಗಿಸಲು ಸಹಾಯ ಮಾಡುತ್ತದೆ. ಚಳಿಗಾಲ (Winter) ದಲ್ಲಿ ಆಗಾಗ ತುಟಿಗೆ ಲಿಪ್ ಬಾಮ್ ಹಚ್ಚಿಕೊಳ್ಳುವವರಿದ್ದಾರೆ. ಲಿಪ್ ಬಾಮ್ ಹೆಸರು ಹೇಳುವಂತೆ ಇದು ತುಟಿಗೆ ಹಚ್ಚಿಕೊಳ್ಳುವ ಸೌಂದರ್ಯ (Beauty) ವರ್ದಕ ನಿಜ. ಆದ್ರೆ ಅದನ್ನು ಬರೀ ತುಟಿಗೆ ಹಚ್ಚಿಕೊಳ್ಳಬೇಕಾಗಿಲ್ಲ. ಬೇರೆ ಬೇರೆ ರೀತಿಯಲ್ಲಿ ನಾವು ಬಳಸಬಹುದು. ನಾವಿಂದು ಲಿಪ್ ಬಾಮ್ ಬಳಕೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.    

ಲಿಪ್ ಬಾಮ್ ಹೀಗೂ ಬಳಸಿ ನೋಡಿ : 
ಮಸ್ಕರಾ (Mascara) ಸ್ವಚ್ಛಗೊಳಿಸಲು ಲಿಪ್ ಬಾಮ್ :
ಮಸ್ಕರಾ ಇಲ್ಲ ಅಂದ್ರೆ ಕಣ್ಣಿನ ಮೇಕಪ್ ಅಪೂರ್ಣ. ಮಸ್ಕಾರಾ ಹೆಚ್ಚಾದ್ರೆ ಅದು ಕಣ್ಣಿನ ಸೌಂದರ್ಯ ಹಾಳು ಮಾಡುತ್ತದೆ. ನೀವು ಇದಕ್ಕಾಗಿ ಇಡೀ ಮುಖ ತೊಳೆಯಬೇಕಾಗಿಲ್ಲ. ಹೆಚ್ಚುವರಿ ಮಸ್ಕರಾವನ್ನು ಲಿಪ್ ಬಾಮ್ ಹಚ್ಚುವ ಮೂಲಕ ಸರಿಪಡಿಸಬಹುದು. ನೀವು ಕಾಟನ್ ಬಡ್ಸ್ ತೆಗೆದುಕೊಂಡು ಅದನ್ನು ಲಿಪ್ ಬಾಮ್ ನಲ್ಲಿ ಅದ್ದಿ, ಕಣ್ಣಿನ ರೆಪ್ಪೆ ಮೇಲೆ ಇಟ್ಟರೆ ಸಾಕು. ಇದು ಮಸ್ಕಾರಾವನ್ನು ತೆಗೆಯುವ ಜೊತೆಗೆ ಕಣ್ಣಿನ ಸೌಂದರ್ಯವನ್ನು ಕಾಪಾಡುತ್ತದೆ.

ಲಿಪ್ ಸ್ಟಿಕ್ ಸೌಂದರ್ಯ ಹೆಚ್ಚಿಸುತ್ತೆ ಲಿಪ್ ಬಾಮ್ :  ಟಿಂಟೆಡ್ ಲಿಪ್ ಬಾಮ್ ಅನ್ನು ಅನ್ವಯಿಸುತ್ತಿದ್ದರೆ, ಲಿಪ್ಸ್ಟಿಕ್ ಅನ್ನು ಅನ್ವಯಿಸುವ ಅವಶ್ಯಕತೆ ಕಡಿಮೆ ಇರುತ್ತದೆ.  ಸಾಮಾನ್ಯ ಲಿಪ್‌ಸ್ಟಿಕ್‌  ಹೊಳಪು ಹೆಚ್ಚಿಸಬೇಕು ಎನ್ನುವವರು ಲಿಪ್ ಬಾಮ್ ಬಳಸಬಹುದು. ನೀವು ಮೊದಲು ನಿಮ್ಮಿಷ್ಟದ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಲಿಪ್ ಸ್ಟಿಕ್ ಒಣಗಿದ ನಂತ್ರ ಅದ್ರ ಮೇಲೆ ಲಿಪ್ ಬಾಮ್ ಹಚ್ಚಿಕೊಳ್ಳಿ. ಇದು ತುಟಿಗಳಿಗೆ ಹೊಳಪು ನೀಡುತ್ತದೆ. ತುಟಿಯ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ತುಟಿ ಒಣಗಿದಾಗ ಸಾಮಾನ್ಯ ಲಿಪ್ ಸ್ಟಿಕ್ ತುಟಿ ಸೌಂದರ್ಯವನ್ನು ಹಾಳು ಮಾಡುತ್ತದೆ. ನೀವು ಲಿಪ್ ಬಾಮ್ ಹಚ್ಚಿದ್ರೆ ಅದು ಒಣಗುವುದಿಲ್ಲ. 

ಕೂದಲಿನ ಸಮಸ್ಯೆ ನಿವಾರಿಸಲು ಕಾಫಿ ಹೇರ್ ಮಾಸ್ಕ್ !

ಮೇಕ್ಅಪ್ ಪ್ರೈಮರ್ ಆಗಿ ಲಿಪ್ ಬಾಮ್ ಬಳಸಿ  : ಲಿಪ್ ಬಾಮ್‌ಗಳು ಉತ್ತಮ ಮೇಕ್ಅಪ್ ಪ್ರೈಮರ್ ಆಗಿದೆ. ನೀವು ಮೇಕಪ್ ಹಚ್ಚುವ ಮೊದಲು ಲಿಪ್ ಬಾಮ್ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮ ಮೇಕ್ಅಪ್ ಅನ್ನು ಚೆನ್ನಾಗಿ ಹೊಂದಿಕೊಳ್ಳಲು ನೆರವಾಗುತ್ತದೆ. ಇದ್ರಿಂದ ಮೇಕಪ್ ಕೂಡ ಚೆನ್ನಾಗಿ ಕಾಣುತ್ತದೆ. ಆದ್ರೆ ನೀವು ಇದಕ್ಕೆ ಟಿಂಟೆಡ್ ಲಿಪ್ ಬಾಮ್ ಬಳಸಬೇಡಿ.   

15 ದಿನಕ್ಕೊಮ್ಮೆ ಫೇಶಿಯಲ್ ಮಾಡೋದು ಒಳ್ಳೆದಂತೆ!

ಸೆಂಟ್ ಸುವಾಸನೆ ಇಡೀ ದಿನ ಇರಬೇಕೆಂದ್ರೆ ಹೀಗೆ ಮಾಡಿ : ಇದನ್ನು ಅದ್ಭುತ ಹ್ಯಾಕ್ ಎನ್ನಬಹುದು. ಸೆಂಟ್ ಎಷ್ಟೇ ಹಾಕಿಕೊಂಡ್ರೂ ಕೆಲವೇ ಗಂಟೆಯಲ್ಲಿ ವಾಸನೆ ಹೋಗಿರುತ್ತದೆ. ಪದೇ ಪದೇ ಸೆಂಟ್ ಹಾಕಿಕೊಳ್ಳಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಅಂಥವರು ಇಡೀ ದಿನ ಸೆಂಟ್ ವಾಸನೆ ಬರಬೇಕೆಂದ್ರೆ ಲಿಪ್ ಬಾಮ್ ಬಳಸಿ.  ಸೆಂಟ್ ಹಚ್ಚುವ ಮೊದಲು ನೀವು ಸೆಂಟ್ ಹಾಕುವ ಜಾಗಕ್ಕೆ ಲಿಪ್ ಬಾಮ್ ಅನ್ನು ಅನ್ವಯಿಸಿ. ಅದರ ನಂತರ ಸುಗಂಧ ದ್ರವ್ಯವನ್ನು ಸಿಂಪಡಿಸಿ. ಸೆಂಟ್ ಜೊತೆ ಲಿಪ್ ಬಾಮ್ ಸರಿಯಾಗಿ ಹೊಂದಿಕೊಳ್ಳುವ ಜೊತೆಗೆ ಇಡೀ ದಿನ ವಾಸನೆ ಇರುತ್ತದೆ.  
 

click me!