
ಬಾಲ್ಯದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಸಡಿಲವಾಗಿ ಅಥವಾ ಫ್ರೀಯಾಗಿ ಬಿಟ್ಟ ಕೂದಲನ್ನು ಹೆಣೆಯುತ್ತಿದ್ದರು. ಆದರೆ ಈಗ ಹುಡುಗರಾಗಲಿ ಅಥವಾ ಹುಡುಗಿಯರಾಗಲಿ ಯಾರೂ ತಮ್ಮ ಕೂದಲ ಬಗ್ಗೆ ಅಷ್ಟು ಕಾಳಜಿ ವಹಿಸುವುದಿಲ್ಲ. ಅದೆಷ್ಟೇ ದಿನಗಳಾಗಿದ್ರೂ ಎಣ್ಣೆ ಹಚ್ಚುವುದಿಲ್ಲ ಅಥವಾ ಸರಿಯಾಗಿ ಬಾಚಿಕೊಳ್ಳುವುದಿಲ್ಲ. ಇದೆಲ್ಲಾ ಒಂದೆಡೆಯಾದರೆ ಇಂದು ಹುಡುಗಿಯರು ತಮ್ಮ ಕೂದಲನ್ನು ದೀರ್ಘಕಾಲದವರೆಗೆ ಫ್ರೀಯಾಗಿ ಬಿಟ್ಟು ತಿರುಗಾಡುತ್ತಾರೆ. ಇದರಿಂದ ಅವರ ಕೂದಲು ಒಡೆದು ನಿರ್ಜೀವವಾಗಲು ಕಾರಣವಾಗುತ್ತದೆ. ಆದ್ದರಿಂದ ಈಗ ನಾವು ನಮ್ಮ ಇತಿಹಾಸವನ್ನು ಪರಿಶೀಲಿಸಿ, ಅದನ್ನು ಅನುಸರಿವುದಾದರೆ ಜಡೆ ಹೆಣೆಯುವುದು ಉತ್ತಮ ವಿಧಾನ. ಇದು ಕೂದಲು ಹೆಚ್ಚು ಕಾಲ ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತದೆ. ಇಲ್ಲಿ ಜಡೆಯ ಇತರ ಹಲವು ಪ್ರಯೋಜನಗಳಿವೆ. ಉದಾಹರಣೆಗೆ ಇದು ನಿಮ್ಮ ತಲೆಯಲ್ಲಿರುವ ಎಲ್ಲಾ ನರಗಳನ್ನು ಆರಾಮವಾಗಿಡುತ್ತದೆ. ಮತ್ತೇಕೆ ತಡ, ಕೂದಲು ಬಿಡುವ ಬದಲು ಜಡೆ ಹೆಣೆಯುವುದರಿಂದಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಕೂದಲು ಒಡೆಯುವುದನ್ನು ತಡೆಯುತ್ತೆ
ನಿಮ್ಮ ಕೂದಲನ್ನು ಹೆಣೆಯುವುದು ಉತ್ತಮ. ಇದರಿಂದ ಕೂದಲು ಒಡೆಯುವುದನ್ನು ತಡೆಯಬಹುದು. ಜಡೆ ಹೆಣೆಯುವಾಗ ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ ನಂತರ ಅದನ್ನು ನಿಧಾನವಾಗಿ ಹೆಣೆಯಿರಿ. ರಾತ್ರಿ ಜಡೆ ಹಾಕಿ ಮಲಗುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ನಿಮ್ಮ ಕೂದಲನ್ನು ಬಿಗಿಯಾಗಿ ಇರಿಸುತ್ತದೆ ಮತ್ತು ಒಡೆಯುವುದನ್ನು ತಡೆಯುತ್ತದೆ.
ಮಲಗುವ ಮುನ್ನ
ಮಲಗುವ ಮುನ್ನ ಕೂದಲನ್ನು ಹೆಣೆಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಏಕೆಂದರೆ ಕಟ್ಟಿದ ಕೂದಲು ಮತ್ತು ದಿಂಬಿನ ನಡುವೆ ಕಡಿಮೆ ಘರ್ಷಣೆ ಇರುತ್ತದೆ. ಇದು ನಿಮ್ಮ ನರಗಳನ್ನು ಶಮನಗೊಳಿಸುತ್ತದೆ. ಈ ರೀತಿಯಾಗಿ ನಿಮ್ಮ ನರಗಳು ಒತ್ತಡಕ್ಕೊಳಗಾಗುವುದಿಲ್ಲ ಮತ್ತು ನೀವು ಮಲಗುವಾಗ ಯಾವುದೇ ಅಸ್ವಸ್ಥತೆಯನ್ನು ಅನುಭವಿಸುವುದಿಲ್ಲ. ರಾತ್ರಿಯಲ್ಲಿ ನಿಮ್ಮ ಕೂದಲನ್ನು ನೋಡಿಕೊಳ್ಳಲು ಇದು ತುಂಬಾ ಪರಿಣಾಮಕಾರಿ ವಿಧಾನವಾಗಿದೆ.
ಕೂದಲನ್ನು ಪೋಷಿಸುತ್ತೆ
ಜಡೆ ಹೆಣೆಯುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಅಂದರೆ ನಿಮ್ಮ ಕೂದಲನ್ನು ಹೈಡ್ರೀಕರಿಸಿ ಪೋಷಿಸುತ್ತದೆ. ನಿಮ್ಮ ಕೂದಲನ್ನು ಆಳವಾಗಿ ಪೋಷಿಸಲು ತೆಂಗಿನ ಎಣ್ಣೆಯನ್ನು ಹಚ್ಚಿ. ನಂತರ ಜಡೆ ಹೆಣೆಯಿರಿ. ಈ ರೀತಿಯಾಗಿ ಪೋಷಕಾಂಶಗಳು ನಿಮ್ಮ ಕೂದಲಲ್ಲಿ ಲಾಕ್ ಆಗುತ್ತವೆ. ಬೆಳವಣಿಗೆಯೂ ಚೆನ್ನಾಗಿರುತ್ತದೆ. ಜಡೆ ಹೆಣೆಯುವಿಕೆಯ ಮತ್ತೊಂದು ಪ್ರಯೋಜನವೆಂದರೆ ತೇವಾಂಶವು ಒಂದು ಎಳೆಯಿಂದ ಇನ್ನೊಂದಕ್ಕೆ ಸುಲಭವಾಗಿ ವರ್ಗಾಯಿಸಲ್ಪಡುತ್ತದೆ. ಈ ತೇವಾಂಶವು ಕ್ರಮೇಣ ನಿಮ್ಮ ಕೂದಲನ್ನು ಹೊಳಪುಗೊಳಿಸುತ್ತದೆ.
ಸುಕ್ಕುಗಟ್ಟುವಿಕೆಯನ್ನು ತಡೆಯುತ್ತೆ
ಸುಕ್ಕುಗಟ್ಟಿದ, ನಿರ್ಜೀವ ಮತ್ತು ಅಸಹ್ಯವಾದ ಕೂದಲು ನಿಮ್ಮ ಲುಕ್ಕನ್ನೇ ಹಾಳುಮಾಡಬಹುದು. ಜಡೆ ಕಟ್ಟುವುದು ಇದನ್ನು ತಡೆಯಲು ಸಹಾಯ ಮಾಡುತ್ತದೆ. ಸಾಂದರ್ಭಿಕವಾಗಿ ಸೀಳುವ ಕೂದಲು ಹೊಂದಿರುವವರಿಗೆ ಇದು ಉತ್ತಮ ಪರಿಹಾರವಾಗಿದೆ. ನೀವು ಹೊರಗೆ ಹೋಗುವಾಗ ಕಠಿಣ ಶಾಖ ಮತ್ತು ಗಾಳಿಯಿಂದ ನಿಮ್ಮ ಕೂದಲನ್ನು ರಕ್ಷಿಸಲು ಸಹ ಜಡೆ ಕಟ್ಟುವುದು ಸಹಾಯ ಮಾಡುತ್ತದೆ.
*ದಿನಕ್ಕೆ 7-8 ಗಂಟೆಗಳಿಗಿಂತ ಹೆಚ್ಚು ಕಾಲ ನಿಮ್ಮ ಕೂದಲನ್ನು ಕಟ್ಟದಿರುವುದು ಒಳ್ಳೆಯದು.
*ಅಷ್ಟೇ ಅಲ್ಲ, ನಿಮ್ಮ ಕೂದಲನ್ನು ಸಡಿಲವಾಗಿ ಕಟ್ಟಿಕೊಳ್ಳಿ, ಏಕೆಂದರೆ ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. *ಹೆಣೆಯುವುದು ನಿಮ್ಮ ಕೂದಲಿಗೆ ಪ್ರಯೋಜನಕಾರಿಯಾಗಿದ್ದರೂ, ಬಿಗಿಯಾಗಿ ಹೆಣೆಯುವುದನ್ನು ತಪ್ಪಿಸಿ. ಏಕೆಂದರೆ ಅದು ಕೂದಲಿನ ಬೇರುಗಳ ಮೇಲೆ ಒತ್ತಡವನ್ನು ಬೀರುತ್ತದೆ.
*ಆರಾಮವಾಗಿ ಹೆಣೆಯಿರಿ ಮತ್ತು ಬೇರುಗಳ ಮೇಲೆ ಅತಿಯಾದ ಒತ್ತಡ ಹೇರಬೇಡಿ. ಹೆಣೆಯುವಿಕೆಯ ಜೊತೆಗೆ, ಟ್ರೈಕಾಲಜಿಸ್ಟ್ ಮಾರ್ಗದರ್ಶನದಲ್ಲಿ ನಿಮ್ಮ ಕೂದಲನ್ನು ನಿಯಮಿತವಾಗಿ ನೋಡಿಕೊಳ್ಳುವ ಮೂಲಕ ಕೂದಲಿನ ಬೆಳವಣಿಗೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.