White Cloth Cleaning: ಚೆಂದವಿದ್ರೂ ಬಿಳಿ ಬಟ್ಟೆ ಹಾಕೋಕೆ ಹೆದರ್ತೀರಾ? ಅದೊಂದು ಪೆನ್‌ನಿಂದ ಕಲೆ ಮಂಗಮಾಯ!

Published : Dec 13, 2025, 04:13 PM IST
best 10 cloth cleaning liquid

ಸಾರಾಂಶ

White Cloth Cleaning Tips: ಬಿಳಿ ಬಟ್ಟೆಗಳನ್ನು ಹಾಕಿಕೊಂಡಾಗ ಅವು ನೀಡುವ ಸೌಂದರ್ಯ, ಪ್ರತಿಷ್ಠೆಯೇ ಬೇರೆ. ಬೇಗ ಕಲೆ ಆಗುತ್ತದೆ, ಮ್ಯಾನೇಜ್‌ ಮಾಡೋಕೆ ಆಗೋದಿಲ್ಲ ಎಂದು ಕೆಲವರು ಬಿಳಿ ಬಟ್ಟೆ ಹಾಕಲು ಯೋಚನೆ ಮಾಡುತ್ತಾರೆ. ಆದರೆ ಬಿಳಿ ಬಟ್ಟೆಯನ್ನು ಬಿಳಿಯಾಗಿ ಇಡಲು ಇರುವ ಸಿಂಪಲ್‌ ಕ್ರಮಗಳು ಇಲ್ಲಿವೆ.

White Cloth Cleaning: ಬಿಳಿ ಬಟ್ಟೆಗಳನ್ನು ಬಿಳಿಯಾಗಿಡುವುದು, ಕ್ಲೀನ್‌ ಆಗಿ ಇಟ್ಟುಕೊಳ್ಳೋದು ಒಂದು ಸವಾಲಿನ ಕೆಲಸ. ಹೀಗಾಗಿ ಕೆಲವರು ಕಲೆಯಾಗುತ್ತೆ ಎಂದು ಬಿಳಿ ಬಟ್ಟೆಗಳನ್ನು ತಗೊಳ್ಳೋದಿಲ್ಲ, ಇನ್ನೂ ಕೆಲವರು ತಗೊಂಡ್ರೂ ಕೂಡ ಹಾಕಿಕೊಳ್ಳೋದಿಲ್ಲ. ಮನೆಯಲ್ಲಿ ನಾವು ಬಿಳಿ ಬಟ್ಟೆಯ ಮೇಲಿನ ಕಲೆ ತೆಗೆಯಬಹುದು

ಏನೇನು ಮಾಡಬಹುದು?

  • ಕಲೆಗಳು ಆದ ಕೂಡಲೇ ತೆಗೆಯಬೇಕು
  • ಕಲೆಗಳು ಬಿದ್ದ ತಕ್ಷಣವೇ ತೆಗೆಯಬೇಕು, ಅದನ್ನು ಆಮೇಲೆ ತೆಗೆಯೋಣ ಎಂದರೆ ಆಗೋದಿಲ್ಲ. ಅದಿಕ್ಕೆ ಸ್ಟೇನ್ ಟ್ರೀಟ್‌ಮೆಂಟ್ ಹಾಕಿ ತೊಳೆಯಿರಿ. ಹೊರಗಡೆ ಇದ್ದರೆ ನೀರು ಅಥವಾ ಕೋಲ್ಡ್ ವಾಟರ್‌ನಿಂದ ಕಲೆ ನಿವಾರಿಸಲು ಪ್ರಯತ್ನಿಸಿ. ಮಾರ್ಕೆಟ್‌ನಲ್ಲಿ ಸ್ಟೇನ್ ಪೆನ್ ಅಥವಾ ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕಲೆ ತೆಗೆಯಬಹುದು
  • ಕಾಲರ್, ಕಫ್, ಮತ್ತು ಹೆಮ್‌ ಮುಖ್ಯ
  • ಶರ್ಟ್‌ನಲ್ಲಿ ಅದರಲ್ಲಿ ಕುತ್ತಿಗೆ, ತೋಳು, ಅಂಚುಗಳ ಮೇಲಿನ ಕಲೆಗಳನ್ನು ಆದಷ್ಟು ಬೇಗೆ ತೆಗೆಯಬೇಕು. ತೊಳೆಯುವ ಮೊದಲು, enigmatic stain remover ಬಳಸಿ ಕ್ಲೀನ್‌ ಮಾಡಿ
  • ಬಳಸುವ ವಸ್ತುಗಳ ಮೇಲೆ ಗಮನ ಕೊಡಿ

 

  • ನಾವು ಬಟ್ಟೆ ಹಾಕಿದ ಬಳಿಕ ಡಿಯೋಡರೆಂಟ್‌ ಹಾಕುತ್ತೇವೆ, ಲೋಷನ್‌ ಹಚ್ಚಿಕೊಳ್ತೀವಿ, ಮೇಕಪ್ ಹಾಕಿಕೊಳ್ತೀವಿ. ಆದರೆ ಇವೆಲ್ಲ ಮೊದಲೇ ಹಾಕಿಕೊಂಡು ಒಣಗಿದ ಬಳಿಕ ಬಟ್ಟೆ ಹಾಕಿಕೊಳ್ಳಬೇಕು.
  • ಡೈ ವರ್ಗಾವಣೆಯನ್ನು ತಪ್ಪಿಸಿ
  • ಬಿಳಿ ಬಟ್ಟೆಗಳ ಜೊತೆ ಡಾರ್ಕ್ ಡೆನಿಮ್‌ನಂತಹ ಬಣ್ಣಗಳ ಬಟ್ಟೆಗಳನ್ನು ಹತ್ತಿರ ಇಡಬೇಡಿ. ಲಾಂಡ್ರಿಯಲ್ಲಿ ಡೈ ಕ್ಯಾಚರ್ ಶೀಟ್‌ಗಳನ್ನು ಬಳಸಬೇಕಾಗುವುದು.
  • ಲಾಂಡ್ರಿ ಉತ್ಪನ್ನ ಬಳಸಬೇಡಿ

 

  • ಹೆಚ್ಚು ಡಿಟರ್ಜೆಂಟ್/ ಇತರ ಉತ್ಪನ್ನಗಳನ್ನು ಬಳಸಿದರೆ ಬಟ್ಟೆಗಳ ಮೇಲೆ ಉಳಿದು ಅವು ಮಂಕಾಗುತ್ತದೆ. ಕಡಿಮೆ ಬಳಸಿ
  • ಬಿಳಿದಾಗಿಸುವ ಬೂಸ್ಟರ್ ಬಳಸಿ
  • ಆಕ್ಸಿಜನ್ ಬ್ಲೀಚ್, ಬೋರಾಕ್ಸ್ / ಅಡುಗೆ ಸೋಡಾವನ್ನು ಸೇರಿಸುವುದರಿಂದ ಬಟ್ಟೆಗಳು ಹೆಚ್ಚು ಕಾಲ ಬಿಳಿಯಾಗಿರುತ್ತದೆ. ಬ್ಲೂಯಿಂಗ್ ಎಂಬ ಹಳೆಯ ಉತ್ಪನ್ನವು ಹಳದಿ ಬಣ್ಣವನ್ನು ತಟಸ್ಥಗೊಳಿಸುತ್ತದೆ.
  • ಕ್ಲೋರಿನ್ ಬ್ಲೀಚ್ ಬಳಸುವುದನ್ನು ಬಿಡಿ. ಇದು ಸನ್‌ಸ್ಕ್ರೀನ್ ಅಥವಾ ದೇಹದ ಎಣ್ಣೆಗಳಿಂದಾದ ಕಲೆಗಳನ್ನು ಹೆಚ್ಚು ಮಾಡುತ್ತದೆ, ಆ ಕಲೆ ಹಾಗೆ ಉಳಿಯುತ್ತದೆ.
  • ಬಿಳಿ ಬಟ್ಟೆಗಳನ್ನು ಹೆಚ್ಚು ತೊಳೆಯಬೇಕು, ಇದರಿಂದ ಕಾಣದ ಕಲೆಗಳು ಮಾಯ ಆಗುತ್ತವೆ.
  • ಬಿಳಿ ಬಟ್ಟೆಗಳನ್ನು ಡ್ರೈಯರ್ ಬದಲು ಬಿಸಿಲಿನಲ್ಲಿ ಒಣಗಸಿ. ಸೂರ್ಯನ ಬೆಳಕಿನಿಂದ ಬಟ್ಟೆ ಬೆಳ್ಳಗಾಗುತ್ತದೆ.
  • ಪ್ಲಾಸ್ಟಿಕ್‌ ಕವರ್‌ನಲ್ಲಿ ಬಟ್ಟೆ ಇಡಬಾರದು, ಇದರ ಬದಲು ಲಿನಿನ್ ಅಥವಾ ಹತ್ತಿಯ ಕವರ್‌ನಲ್ಲಿ ಇಡಿ
  • ಗ್ರ್ಯಾಂಡ್‌ ಬಿಳಿ ಬಟ್ಟೆಗಳನ್ನು ದೀರ್ಘಕಾಲ ಇಡಲು, ಆರ್ಕೈವಲ್ ಟಿಶ್ಯೂ ಬಳಸಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!