ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್ ವಾಸಿಸುವುದು ಮಾತ್ರ ಬಾಡಿಗೆ ಮನೆಯಲ್ಲಿ!

By Suvarna News  |  First Published Aug 28, 2021, 4:46 PM IST

ನಮ್ಮ ಇನ್‌ಫೋಸಿಸ್ ನಾರಾಯಣಮೂರ್ತಿ ಮುಂತಾದವರ ಸರಳ ಬದುಕಿನ ಆದರ್ಶವನ್ನು ಅಮೆರಿಕ ಎಲಾನ್ ಮಸ್ಕ್ ಕೂಡ ಅನುಸರಿಸಿದ್ದಾರೆ. ಅವರು ಒಂದು ಸಾಮಾನ್ಯ ಟೆಂಟ್ ಹೌಸ್‌ನಲ್ಲಿ ಬದುಕುತ್ತಿದ್ದಾರೆ.


ಅಮೆರಿಕದ ಅತಿ ದೊಡ್ಡ ಉದ್ಯಮಿ, ಇ- ವಾಹನ ಉದ್ಯಮದ ಕುಬೇರ, ಉತ್ಸಾಹಿಗಳನ್ನು ಬಾಹ್ಯಾಕಾಶಕ್ಕೂ ಕಳಿಸಲು ಸಿದ್ಧವಾಗಿರುವ ಸ್ಪೇಸ್ ಎಕ್ಸ್ ಕಂಪನಿಯ ರೂವಾರಿ ಎಲಾನ್‌ ಮಸ್ಕ್‌ನ ಆಸ್ತಿಯ ಮೌಲ್ಯ ಎಷ್ಟೆಂಬುದು ಯಾರಿಗೂ ಗೊತ್ತಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ ಅದು 209 ಶತಕೋಟಿ ಡಾಲರ್. ಅಂದರೆ ಸುಮಾರು 1.6 ಕೋಟಿ ಕೋಟಿ ರೂಪಾಯಿ. ಇಂಥ ಕುಬೇರಪ್ಪ ಬದುಕುತ್ತಿರೋದು ಒಂದು ಪುಟ್ಟ ಗುಡಿಸಲಿನಂಥ ಕ್ಯಾಂಪ್‌ನಲ್ಲಿ ಎಂದರೆ ನಂಬುತ್ತೀರಾ?

ಇದು ನಿಜ. ಕಳೆದ ವರ್ಷ ಎಲಾನ್ ಮಸ್ಕ್ ಅವರು ತಮ್ಮ ಹೆಚ್ಚಿನ ಆಸ್ತಿಯನ್ನು ಮಾರುವುದಾಗಿ ಮತ್ತು ತಾವು ಯಾವುದೇ ಸ್ವಂತ ಮನೆ ಹೊಂದಿಲ್ಲ ಎಂದು ಘೋಷಿಸಿದ್ದರು. ಒಂದು ವರ್ಷದ ನಂತರ, ಅಮೆರಿಕದ ಈ ಬಿಲಿಯನೇರ್ ತಮ್ಮ ಸ್ಪೇಸ್‌ಎಕ್ಸ್ ಪ್ರಧಾನ ಕಚೇರಿಯಿರುವ ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿ ಕೇವಲ 50,000 ಡಾಲರ್ ಬೆಲೆಯ ಒಂದು 'ಪುಟ್ಟ ಮನೆಯನ್ನು' ಬಾಡಿಗೆಗೆ ಪಡೆದಿದ್ದಾರೆ. ಅವರು ಪ್ರತಿದಿನ ಗಳಿಸುವ ಹಣದ ಮೌಲ್ಯಕ್ಕೆ ಹೋಲಿಸಿದರೂ ಇದು ಎಷ್ಟೋ ಕಿರಿದು. ತಮ್ಮ ಒಂದು ದಿನದ ಗಳಿಕೆಯಿಂದಲೇ ಅವರು ಐಷಾರಾಮಿ ರಿಯಲ್ ಎಸ್ಟೇಟ್ ಆಸ್ತಿಯನ್ನು ಸುಲಭವಾಗಿ ಖರೀದಿಸಬಹುದು. ಆದರೆ ಅವರ ಆಯ್ಕೆ ಈ ಬಾಡಿಗೆ ಮನೆ.

Tap to resize

Latest Videos

undefined

ಎಲನ್ ಮಸ್ಕ್‌ಗೆ ಜನಸಂಖ್ಯೆ ಕುಸಿತದ ಚಿಂತೆ, 8ನೇ ಮಗು ಹೆಣ್ಣಾಗ್ಬೇಕಂತೆ

ಹೆಚ್ಚಿನ ಶ್ರೀಮಂತರಿಗೆ, ಉದ್ಯಮಪತಿಗಳಿಗೆ ಇಂಥ ಸರಳತೆ ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಇನ್‌ಫೋಸಿಸ್‌ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಿಂದ ಇದು ಸಾಧ್ಯವಾಗಿದೆ. ಅವರು ಭಾರತದ ಸಾಫ್ಟ್‌ವೇರ್ ಇಂಡಸ್ಟ್ರಿಗೆ ಹೊಸ ಸ್ವರೂಪ ನೀಡಿದ ಮಹಾನ್‌ ವ್ಯಕ್ತಿಗಳು. ಇಂದಿಗೂ ಇನ್‌ಫೋಸಿಸ್‌ ಸಾವಿರಾರು ಮಂದಿಗೆ ಕೆಲಸ ನೀಡಿರುವ ದೊಡ್ಡ ಉದ್ಯಮ. ಆದರೆ ಅವರು ಇಂದಿಗೂ ಎರಡು ಕೋಣೆಗಳ ಪುಟ್ಟ ಫ್ಲ್ಯಾಟ್‌ನಲ್ಲಿ ಸರಳವಾಗಿ ಬದುಕುತ್ತಿದ್ದಾರೆ. ಅವರು ಮನಸ್ಸು ಮಾಡಿದರೆ ಐಷಾರಾಮಿ ಬಂಗಲೆ ಕೊಂಡುಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಿಲ್ಲ.
 

ಎಲಾನ್ ಮಸ್ಕ್ ತಮ್ಮ ಪುಟ್ಟ ಮನೆಯಲ್ಲದೆ ಬೇ ಏರಿಯಾದಲ್ಲಿನ ಈವೆಂಟ್ ಹೌಸ್ ಅನ್ನೂ ಹೊಂದಿದ್ದಾರೆ. ಇದು ದೊಡ್ಡ ಮನೆ. ಆದರೆ ಇದನ್ನು ಮಾರುವ ಉದ್ದೇಶ ಅವರದು. ದೊಡ್ಡದೊಂದು ಕುಟುಂಬ ಇದನ್ನು ಖರೀದಿಸದ ಹೊರತು, ಇದರ ಎಲ್ಲ ಕೋಣೆಗಳು ಬಳಕೆಯನ್ನು ಹೊಂದಲಾರದು ಎಂಬುದು ಅವರ ವಾದ. ಈಗ ಹೊಂದಿರುವ ತನ್ನ ಬಾಡಿಗೆ ಮನೆ ಅದ್ಭುತವಾಗಿದೆ ಎನ್ನುತ್ತಾರೆ. ಅದು ಪುಟ್ಟದಾಗಿದ್ದರೂ ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಕನಿಷ್ಠ ಸವಲತ್ತುಗಳನ್ನು ಹೊಂದಿರಬೇಕು ಎಂಬುದು ಇತ್ತೀಚೆಗೆ ಅಮೆರಿಕದಲ್ಲಿ ಜನಪ್ರಿಯ ಆಗುತ್ತಿರುವ ಒಂದು ಚಳವಳಿ. ಮಸ್ಕ್ ಇದೇ ಮನೋಭಾವದವರು. ಈ ಮನೆಯನ್ನು ಬಾಕ್ಸಾಬ್ಲ್ ಎಂಬ ವಸತಿ ಕಂಪನಿ ತಯಾರಿಸುತ್ತದೆ. ಇದೊಂದು ಟೆಂಟ್ ಮನೆ.

ನಟ ಶತ್ರುಘ್ನ ಸಿನ್ಹಾ ಟ್ವಿಟರ್‌ ಖಾತೆಗೆ ಟೆಸ್ಲಾ CEO ಎಲನ್ ಮಸ್ಕ್ ಹೆಸರು

ಇದನ್ನು ಮಡಚಬಹುದು. ಬೇರೆಡೆ ತೆಗೆದುಕೊಂಡು ಹೋಗಿ ಅಲ್ಲಿಯೂ ಇಡಬಹುದು. ಸುಮಾರು 20 × 20 ಅಡಿಗಳ ವಿನ್ಯಾಸ ಇದರದು. ಅಂದರೆ ಸುಮಾರು 400 ಚದರ ಅಡಿ. ಒಳಗಡೆ ಸಾಮಾನ್ಯ ಅಪಾರ್ಟ್‌ಮೆಂಟ್‌ ಅನ್ನು ಹೋಲುತ್ತದೆ. ಬಾತ್ರೂಮ್, ಲಿವಿಂಗ್ ರೂಮ್, ಬೆಡ್ ರೂಂ ಮತ್ತು ಸಂಪೂರ್ಣ ಸುಸಜ್ಜಿತ ಅಡುಗೆಮನೆ ಹೊಂದಿದೆ. ನವೆಂಬರ್‌ನಲ್ಲಿ ಬಾಕ್ಸಾಬ್ಲ್ ತಯಾರಿಸಿದ ಒಂದು ಕಂಪನಿ ಪ್ರಚಾರದ ವೀಡಿಯೋದಲ್ಲಿ 'ಅತ್ಯಂತ ರಹಸ್ಯ ಗ್ರಾಹಕರಿಗಾಗಿ ಒಂದು ಮನೆಯನ್ನು ವಿನ್ಯಾಸಗೊಳಿಸಲಾಗುತ್ತಿದೆ,' ಎಂದು ಹೇಳಿತ್ತು. 2017ರಲ್ಲಿ ಸ್ಥಾಪನೆಯಾದ ಹೊಸ ಕಂಪನಿಯು ಅನೇಕ ದೊಡ್ಡ ಗ್ರಾಹಕರ ಗಮನ ಸೆಳೆದಿದೆ. ಸಣ್ಣ ಮಾಡ್ಯುಲರ್ ಪ್ರಿಫ್ಯಾಬ್ ಮನೆಗಳಿಗೆ ಈಗಾಗಲೇ 47,000 ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ.

ಮಿನಿ ಮನೆಗಳಲ್ಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಏಕೆಂದರೆ ಅಮೆರಿಕದಲ್ಲಿ ವಸತಿ ಬೆಲೆಗಳು ಗಗನಕ್ಕೇರಿವೆ. ಹಣಕಾಸು ಸಂಸ್ಥೆಗಳು, ವಿದೇಶಿ ಹೂಡಿಕೆದಾರರು ಮತ್ತು ಇತರ ಅನಿವಾಸಿಗಳು ಇಲ್ಲಿ ವಸತಿ ವಲಯವನ್ನು ಬೆಳೆಸಿದರು. ಇದು ದುಬಾರಿ ದರಗಳನ್ನು ಪ್ರಚೋದಿಸಿತು. ಲಾಸ್ ಏಂಜಲೀಸ್, ನ್ಯೂಯಾರ್ಕ್, ಚಿಕಾಗೊ, ಸ್ಯಾನ್ ಡೀಗೊ, ಮಿಯಾಮಿ ಮುಂತಾದ ನಗರಗಳಲ್ಲಿ ಮಧ್ಯಮ ವರ್ಗದವರು ಮನೆ ಕೊಳ್ಳುವಂತೆಯೇ ಇಲ್ಲ.


ಎಲನ್ ಮಸ್ಕ್ ಬದಲು ಮಸ್ಕ್ ಮೆಲನ್ ಉಚ್ಚರಿಸಿದ ಇಂಗ್ಲೀಷ್ ಟೀಚರ್; ವಿಡಿಯೋ ವೈರಲ್!

click me!